KPSC : 242 ಲೆಕ್ಕ ಸಹಾಯಕರು ಪೋಸ್ಟ್ಗಳಿಗೆ ಅರ್ಜಿ ಆಹ್ವಾನ ! ಅರ್ಜಿ ಸಲ್ಲಿಸಲು ಎ.23 ಕೊನೆಯ ದಿನ!
KPSC recruitment : ಕೆಪಿಎಸ್ಸಿ (KPSC) ಇದೀಗ ಗ್ರೂಪ್ ಸಿ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ ಮಾಡಿದ್ದು, ಕರ್ನಾಟಕ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಲೆಕ್ಕ ಸಹಾಯಕರು ಪೋಸ್ಟ್ಗಳನ್ನು ಭರ್ತಿ ಮಾಡಲು ನೇಮಕಾತಿಗೆ(KSAAD Account Assistant Notification 2023) ಸಂಬಂಧಿಸಿದಂತೆ ಆನ್ಲೈನ್ ನಲ್ಲಿ ಅರ್ಜಿ ಆಹ್ವಾನ (KPSC recruitment) ಮಾಡಲಾಗಿದೆ.
ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಖಾಲಿ ಹುದ್ದೆಗಳು, ವೇತನ ಶ್ರೇಣಿ, ವಿದ್ಯಾರ್ಹತೆ, ಅರ್ಜಿ ಶುಲ್ಕ, ಆಯ್ಕೆ ವಿಧಾನ ಇನ್ನಿತರ ಮಾಹಿತಿ ತಿಳಿದುಕೊಂಡು ಅರ್ಜಿ ಸಲ್ಲಿಸುವುದು ಉತ್ತಮ. ಈ ಕುರಿತ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.
ನೇಮಕ ಪ್ರಾಧಿಕಾರ : ಕರ್ನಾಟಕ ಲೋಕಸೇವಾ ಆಯೋಗ(KPSC )
ಹುದ್ದೆಯ ಹೆಸರು : ಲೆಕ್ಕ ಸಹಾಯಕರು
ಹುದ್ದೆಯ ಇಲಾಖೆ ಹೆಸರು : ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ
ಹುದ್ದೆಗಳ ಸಂಖ್ಯೆ : 242 (ಉಳಿಕೆ ಮೂಲ ವೃಂದ)
ಉದ್ಯೋಗ ಸ್ಥಳ – ಬೆಂಗಳೂರು
ದೇಶ – IND
ಪ್ರದೇಶ – ಕರ್ನಾಟಕ
ಅಂಚೆ ಸಂಖ್ಯೆ – 560001
ವೇತನ ಶ್ರೇಣಿ : ರೂ.27,650-52,650.-( INR 27650 to 52650 /Month)
ಉದ್ಯೋಗ ವಿಧ – Full Time
ಕಾರ್ಯಾನುಭವ – 0 Years
ವೆಬ್ಸೈಟ್ (Website)- https://www.kpsc.kar.nic.in/index.html
ಪ್ರಮುಖ ದಿನಾಂಕಗಳು
ಅರ್ಹ ಅಭ್ಯರ್ಥಿಗಳಿಗೆ 23-03-2023 ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನವಾಗಿದ್ದು, 23-04-2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಇದರ ಜೊತೆಗೆ ಶುಲ್ಕವನ್ನು ಪಾವತಿಸಲು 24-04-2023 ಕೊನೆಯ ದಿನವಾಗಿದೆ.
ವಿದ್ಯಾರ್ಹತೆ (Education Qualification)
ಅರ್ಹ ಅಭ್ಯರ್ಥಿಗಳು ಬಿಕಾಂ / ಬಿಬಿಎಂ / ಬಿಬಿಎ ಡಿಗ್ರಿಯನ್ನು ಕಡ್ಡಾಯವಾಗಿ ಪಾಸ್ ಆಗಿರಬೇಕು ಇಲ್ಲವೇ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ವಯೋಮಿತಿ (Age Limit)
ಕನಿಷ್ಠ ವಯೋಮಿತಿ 21 ವರ್ಷವಾಗಿದ್ದು, ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷವಾಗಿದೆ.ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷವಾಗಿದ್ದು,ಎಸ್ಸಿ, ಎಸ್ಟಿ, ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷವಾಗಿದೆ.
ಆನ್ಲೈನ್ ಅಪ್ಲಿಕೇಶನ್ ಸಲ್ಲಿಸುವ ವಿಧಾನ ಹೀಗಿದೆ:.
ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಮುಖವಾಗಿ ಮೂರು ಹಂತಗಳಿದ್ದು, ಮೊದಲನೇ ಹಂತದಲ್ಲಿ: ಪ್ರೊಫೈಲ್ ಕ್ರಿಯೇಟ್ / ಅಪ್ಡೇಟ್ ಮಾಡಬೇಕು. ಆ ಬಳಿಕದ ಹಂತದಲ್ಲಿ ಅಪ್ಲಿಕೇಶನ್ ಸಬ್ಮಿಷನ್ ಮಾಡಬೇಕು. ಕೊನೆಯ ಹಂತದಲ್ಲಿ ಅಪ್ಲಿಕೇಶನ್ ಶುಲ್ಕ ಪಾವತಿ ಮಾಡಬೇಕು.
ಅರ್ಜಿ ಶುಲ್ಕ
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.600 ಆಗಿದ್ದು,ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ರೂ.50 ಆಗಿದ್ದು, ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.300.ಆಗಿದೆ. ಅರ್ಜಿ ಶುಲ್ಕದ ಜೊತೆಗೆ ಎಲ್ಲಾ ಅಭ್ಯರ್ಥಿಗಳು ಪ್ರೋಸೆಸಿಂಗ್ ಚಾರ್ಜ್ ರೂ.35 ಪಾವತಿ ಮಾಡಬೇಕಾಗುತ್ತದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಎಪ್ರಿಲ್ 23 ಕೊನೆ ದಿನಾಂಕವಾಗಿದ್ದು, ಸದರಿ ಹುದ್ದೆಯ ಪರೀಕ್ಷೆಯ ಕುರಿತಂತೆ ಸದ್ಯದಲ್ಲೇ ಮಾಹಿತಿ ನೀಡುವ ಸಾಧ್ಯತೆಗಳಿವೆ.