7th Pay Commission: ಕೇಂದ್ರ ಸಂಚಿವ ಸಂಪುಟ ಸಭೆ ಇಂದು ! ಡಿಎ ಹೆಚ್ಚಳ ಬಗ್ಗೆ ತೀರ್ಮಾನ ಸಾಧ್ಯತೆ!

7th Pay Commission DA: ಕೇಂದ್ರ ನೌಕರರು ಮತ್ತು ಪಿಂಚಣಿದಾರಿಗೆ ಸರಕಾರದಿಂದ ಸಿಹಿ ಸುದ್ದಿಯೊಂದು(Good News) ಅತಿ ಶೀಘ್ರದಲ್ಲಿಯೆ ಬರಲಿದೆ. ಸುಮಾರು 62 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 48 ಲಕ್ಷ ಪಿಂಚಣಿದಾರರು ತುಟ್ಟಿ ಭತ್ಯೆ ಮತ್ತು ತುಟ್ಟಿಭತ್ಯೆ ಹೆಚ್ಚಳಕ್ಕಾಗಿ ಎದುರು ನೋಡುತ್ತಿದ್ದಾರೆ.

 

ಏಳನೇ ವೇತನ ಆಯೋಗದಡಿ (7th Pay Commission)ತುಟ್ಟಿ ಭತ್ಯೆ (DA) ಹೆಚ್ಚಳ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ ಬುಧವಾರ ಅಧಿಕೃತ ಮಾಹಿತಿ ಹೊರಬೀಳಲಿದೆ ಎನ್ನಲಾಗಿದೆ. ಪ್ರಧಾನಮಂತ್ರಿಗಳ ನೇತೃತ್ವದಲ್ಲಿ 7ನೇ ವೇತನ ಆಯೋಗದಡಿ(7th Pay Commission DA)ತುಟ್ಟಿ ಭತ್ಯೆ (ಡಿಎ) ಏರಿಕೆಯ ಜನವರಿ ತಿಂಗಳ ಪರಿಷ್ಕರಣೆ ಕುರಿತಂತೆ ಈ ಮಾರ್ಚ್ 15 ಬುಧವಾರದಂದು ಕೇಂದ್ರ ಸಚಿವ ಸಂಪುಟ ಸಭೆ(Official information out about DA increase after Union Cabinet meeting) ನಡೆಯಲಿದ್ದು, ಈ ಸಂದರ್ಭದಲ್ಲಿ ಈ ಕುರಿತ ತೀರ್ಮಾನ ಕೈಗೊಳ್ಳಲಾಗಲಿದ್ದು, ಆ ಬಳಿಕ ಅನೇಕ ಮಾಹಿತಿಗಳು ಹೊರ ಬೀಳಲಿದೆ.

ಸದ್ಯ, ಸರ್ಕಾರಿ ನೌಕರರು ಹಿಂದಿನಿಂದ ಬೇಡಿಕೆ ಇಡುತ್ತಿರುವ ಡಿಎ ಹೆಚ್ಚಳದ ಕುರಿತಂತೆ ಮೋದಿ ನೇತೃತ್ವದ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುತ್ತದೆ ಈ ನಡುವೆ,

ತುಟ್ಟಿಭತ್ಯೆ ಶೇ.3ರಷ್ಟು ಹೆಚ್ಚಳವಾಗುವ ಸಾಧ್ಯತೆ ದಟ್ಟವಾಗಿದೆ. ಹೀಗೆ ಹೆಚ್ಚಳವಾದರೆ, ಪ್ರಸ್ತುತ ತುಟ್ಟಿಭತ್ಯೆ ಶೇಕಡಾ 38 ರಿಂದ ಶೇಕಡಾ 41ಕ್ಕೆ ಏರಿಕೆಯಾಗಲಿದೆ. ಇದೇ ತಿಂಗಳ ಮಾರ್ಚ್ 31 ಫೆಬ್ರವರಿ ತಿಂಗಳಿಗೆ ಸರಿಹೊಂದುವಂತೆ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (AICPI)ದ ಸಂಖ್ಯೆ ಬಹಿರಂಗವಾಗಲಿದೆ ಎಂಡಿ ಬಲ್ಲ ಮೂಲಗಳು ತಿಳಿಸಿವೆ.

ಕೇಂದ್ರ ಸರ್ಕಾರವು( Central Government)ಡಿಎ(DA) ಅನ್ನು 3% ರಿಂದ 41% ರವರೆಗೆ ಹೆಚ್ಚಿಸಿದರೆ ಮೂಲ ಬೇಸಿಕ್ ವೇತನದ ಆಧಾರದಡಿ ತುಟ್ಟಿ ಭತ್ಯೆ ಏರಿಕೆಯಾಗಲಿದೆ. ಅಂದರೆ, ಉದಾಹರಣೆಗೆ ನೌಕರರೊಬ್ಬರ ಕನಿಷ್ಠ ವೇತನ ರೂ. 18,000 ತುಟ್ಟಿಭತ್ಯೆ (ಮಾಸಿಕ 7,380ರೂ.) ಏರಿಕೆಯಾಗಲಿದ್ದು, ಶೇಕಡಾ 38ರಷ್ಟು ಡಿಎ ಹೆಚ್ಚಳವಾದರೆ, ಮಾಸಿಕ 6,840 ರೂ, ಡಿಎಯಲ್ಲಿ 41% ಹೆಚ್ಚಳವಾದರೆ ಮಾಸಿಕ ವೇತನ 23,329 ರೂ. ಹೆಚ್ಚಳವಾಗಬಹುದು ಎಂದು ಅಂದಾಜಿಸಲಾಗಿದೆ. ಕಾರ್ಮಿಕ ಸಚಿವಾಲಯವು ಬಿಡುಗಡೆ ಮಾಡುವ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (ಎಐಸಿಪಿಐ) ಸಂಖ್ಯೆಗಳು ನಿರೀಕ್ಷಿತ ತುಟ್ಟಿಭತ್ಯೆ (ಡಿಎ) ಹೆಚ್ಚಳವನ್ನು ಪ್ರದರ್ಶಿಸುತ್ತದೆ.ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (AICPI)ದ ಸಂಖ್ಯೆ ಕಳೆದ ಜನವರಿಗೆ (2023) 132.8ಗೆ ಪಾಯಿಂಟ್ಸ್ ಹೆಚ್ಚಳ ವಾಗಿದೆ. ಒಂದು ತಿಂಗಳ ಅವಧಿಯಲ್ಲಿ ಆದ ಬದಲಾವಣೆಯ ಹಿನ್ನೆಲೆ ಎಐಸಿಪಿಐ 0.38 ಪ್ರತಿಶತದಷ್ಟು ಏರಿಕೆಯಾಗಿರುವುದು ಕಂಡು ಬಂದಿದೆ.

Leave A Reply

Your email address will not be published.