Tata Harrier SUV : ಗೇಮ್ ಚೇಂಜರ್ ಹ್ಯಾರಿಯರ್ ವಿತರಣೆ ಆರಂಭ ; ಬೆಲೆ ಎಷ್ಟು? ಸಂಪೂರ್ಣ ಮಾಹಿತಿ ಇಲ್ಲಿದೆ

Tata Harrier SUV : ಜನಪ್ರಿಯ ಟಾಟಾ ಮೋಟಾರ್ಸ್ (Tata Motors ) ಕಂಪನಿಯು ತನ್ನ ಹಲವು ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಈ ಹಿಂದೆ ಟಾಟಾ (Tata) ಮುಂದಿನ 2 ವರ್ಷಗಳಲ್ಲಿ ಸುಮಾರು ಐದು ಕಾರುಗಳನ್ನು ಬಿಡುಗಡೆ ಮಾಡಲಿದೆ ಎಂದು ತಿಳಿಸಿತ್ತು. ಹಾಗೆಯೇ ಇತ್ತೀಚೆಗೆ ಸ್ಟ್ರೈಡರ್ ಜೀಟಾ (TATA Stryder) ಹೆಸರಿನ ಹೊಸ ಇ-ಬೈಕ್ ಅನ್ನು ಬಿಡುಗಡೆ ಮಾಡಿದೆ. ಇದೀಗ ಕಂಪನಿಯು ತನ್ನ ಬಹುನೀರಿಕ್ಷಿತ ಹ್ಯಾರಿಯರ್ ಎಸ್‌ಯುವಿ (Tata Harrier SUV) ವಿತರಣೆಯನ್ನು ಪ್ರಾರಂಭಿಸಿದೆ.

 

ಈ ಎಸ್‌ಯುವಿ ಒಬೆರಾನ್ ಬ್ಲಾಕ್, ಡೇಟೋನಾ ಗ್ರೇ, ಆರ್ಕಸ್ ವೈಟ್, ಟ್ರಾಪಿಕಲ್ ಮಿಸ್ಟ್, ರಾಯಲ್ ಬ್ಲೂ ಮತ್ತು ಕ್ಯಾಲಿಪ್ಸೊ ರೆಡ್ ನಂತಹ ಆರು ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. ಸದ್ಯ ಈ ಕಾರಿನ ಆರಂಭಿಕ ಎಕ್ಸ್ ಶೋರೂಂ ಬೆಲೆ ರೂ.15 ಲಕ್ಷದ ಆಗಿದೆ.

ಕಂಪನಿ ಹ್ಯಾರಿಯರ್ 2022ರ ಮಾದರಿಗೆ ರೂ.65,000ವರೆಗೆ ರಿಯಾಯಾತಿ ನೀಡುತ್ತಿದೆ. ಅಲ್ಲದೆ, ದೇಶೀಯ ಮಾರುಕಟ್ಟೆಯಲ್ಲಿ ಈ ಹಿಂದೆ ಹ್ಯಾರಿಯರ್ ರೆಡ್ ಡಾರ್ಕ್ ಆವೃತ್ತಿಯನ್ನು ರೂ.21.77 ಲಕ್ಷದಿಂದ ರೂ.24.07 ಲಕ್ಷ ಬೆಲೆಯಲ್ಲಿ ಬಿಡುಗಡೆ ಮಾಡಿತ್ತು. ಅದಕ್ಕೂ ಮೊದಲು ಜನವರಿಯ ದೆಹಲಿಯ (Delhi) ಆಟೋ ಎಕ್ಸ್‌ಪೋದಲ್ಲಿ ಹ್ಯಾರಿಯರ್ ಇವಿಯನ್ನು ಅನಾವರಣ ಮಾಡಿತ್ತು. ಇದು 4WD (ಫೋರ್ ವೀಲ್ ಡ್ರೈವ್) ಆಯ್ಕೆ ಹೊಂದಿರಬಹುದು. ಸದ್ಯ ಹ್ಯಾರಿಯರ್ ಎಸ್‌ಯುವಿಯನ್ನು ಟಾಟಾದ ಗೇಮ್ ಚೇಂಜರ್ ಎಂದೇ ಹೇಳಲಾಗಿದೆ.

ಈ ಎಸ್‌ಯುವಿ ನವೀಕರಿಸಿದ 2.0-ಲೀಟರ್ Kryotec ಡೀಸೆಲ್ ಎಂಜಿನ್ ಹೊಂದಿದ್ದು, 168 bhp ಗರಿಷ್ಠ ಪವರ್ ಹಾಗೂ 350 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6-ಸ್ವೀಡ್ ಮ್ಯಾನುವಲ್ ಟ್ರಾಸ್ಮಿಷನ್ ಅಥವಾ 6-ಸ್ವೀಡ್ ಆಟೋಮೆಟಿಕ್ ಟ್ರಾಸ್ಮಿಷನ್ ಗೇರ್ ಬಾಕ್ಸ್ ಹೊಂದಿದೆ. ಹಾಗೆಮೇ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯೂನಿಟ್, ವೈರ್‌ಲೆಸ್ ಆಪಲ್ ಕಾರ್‌ಪ್ಲೇ, ಆಂಡ್ರಾಯ್ಡ್ ಆಟೋ, ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 360 ಡಿಗ್ರಿ ಸರೌಂಡ್ ವ್ಯೂ ಕ್ಯಾಮೆರಾ ಸಿಸ್ಟಮ್, 6-ವೇ ಪವರ್ ಅಡ್ಜಸ್ಟಬಲ್ ಡ್ರೈವರ್ ಸೀಟ್‌ ಒಳಗೊಂಡಂತೆ ಈ ಕಾರು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ನವೀಕರಿಸಿದ ಟಾಟಾ ಹ್ಯಾರಿಯರ್ ಎಸ್‌ಯುವಿ ಚಾಲಕರ ಸುರಕ್ಷತೆಯ ದೃಷ್ಟಿಯಿಂದ ADAS (ಅಡ್ವಾನ್ಸ್ಡ್ ಡೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ತಂತ್ರಜ್ಞಾನವನ್ನು ಪಡೆದಿದೆ. ಇದು ಟ್ರಾಫಿಕ್ ಸಿಗ್ನಲ್ ರೆಕಗ್ನಿಷನ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್, ಲೇನ್ ಡಿಪಾರ್ಚರ್ ವಾರ್ನಿಂಗ್, ಡೋರ್ ಓಪನ್ ಅಲರ್ಟ್, ರೇರ್ ಕ್ರಾಸ್ ಟ್ರಾಫಿಕ್ ಅಲರ್ಟ್, ಹೈ ಬೀಮ್ ಅಸಿಸ್ಟ್ ಅನ್ನು ಒಳಗೊಂಡಿದೆ. ಜೊತೆಗೆ AEB (ಆಟೋಮೆಟಿಕ್ ಎಮರ್ಜೆನ್ಸಿ ಬ್ರೇಕಿಂಗ್) ಅನ್ನು ಪಡೆದಿದೆ.

ಹಾಗೆಯೇ ಟಾಟಾ ಸಫಾರಿ ಎಸ್‌ಯುವಿ (tata safari suv) ವಿತರಣೆ ಕೂಡ ಆರಂಭವಾಗಿದೆ. ಇದರ ಆರಂಭಿಕ ಎಕ್ಸ್ ಶೋರೂಂ ಬೆಲೆ ರೂ.15.65 ಆಗಿದೆ. ಟಾಪ್ ಎಂಡ್ ಮಾದರಿ ರೂ.25.01 ಲಕ್ಷ ಬೆಲೆಗೆ ಲಭ್ಯವಿದೆ.

ಇದನ್ನೂ ಓದಿ :Honda : ಇನ್ಮುಂದೆ ದ್ವಿಚಕ್ರ ವಾಹನಗಳಿಗೆ ಬರಲಿದೆ ಏರ್‌ಬ್ಯಾಗ್ !!

Leave A Reply

Your email address will not be published.