Driving Course : ಫ್ರೀಯಾಗಿ ಡ್ರೈವಿಂಗ್‌ ಕೋರ್ಸ್‌ ಕಲಿಯಿರಿ! ಇಲ್ಲಿದೆ ಸಂಪೂರ್ಣ ವಿವರ

driving course : ವಾಹನ ಚಲಾವಣೆ ಮಾಡಬೇಕು ಎನ್ನುವುದು ಹಲವಾರು ಜನರ ಕನಸು. ಆ ಕನಸು ನಾನಾ ಕಾರಣಗಳಿಂದ ಹಾಗೇ ಉಳಿದಿದ್ದರೆ, ಇದೀಗ ನಿಮಗೆ ಸುವರ್ಣ ಅವಕಾಶ ಕಲ್ಪಿಸಲಾಗಿದೆ.

 

 

ಹೌದು, ಡ್ರೈವಿಂಗ್ ಕಲಿಯಬೇಕೆನ್ನುವ (Driving course) ಆಸಕ್ತಿ ಇದ್ದಲ್ಲಿ, ಉಚಿತವಾಗಿ ನಿಮ್ಮ ವಾಹನ ಚಾಲನೆಯ ಕನಸನ್ನ ಇದೀಗ ಉಚಿತವಾಗಿ ನನಸು ಮಾಡಿಕೊಳ್ಳಬಹುದಾಗಿದೆ. ಈ ಸುವರ್ಣಾವಕಾಶ ವಿಜಯಪುರ (Vijayapura News) ಹಾಗೂ ಬಾಗಲಕೋಟೆಯ (Bagalkote News) ಯುವಕರಿಗೆ ಕಲ್ಪಿಸಲಾಗಿದೆ.

 

ಉಚಿತವಾಗಿ ವಾಹನ ಚಲಾವಣೆ ಕಲಿಯಲು ಅರ್ಜಿ ಸಲ್ಲಿಸುವ ಮೂಲಕ ಲಘು ವಾಹನಗಳ ಚಾಲನಾ ತರಬೇತಿಯನ್ನು (Driving Licence) ಉಚಿತವಾಗಿ ಪಡೆದುಕೊಳ್ಳಬಹುದು. ಅಂದರೆ ದಾಂಡೇಲಿ ಕೆನರಾ ಬ್ಯಾಂಕ್, ದೇಶಪಾಂಡೆ ಆರ್ ಸೆಟ್ ಹಾಗೂ ಟಾಟಾ ಮೋಟರ್ಸ್ ಧಾರವಾಡ ಇವರ ಸಹಯೋಗದಲ್ಲಿ ಈ ತರಬೇತಿ ಸಂಪೂರ್ಣ ಉಚಿತವಾಗಿದ್ದು, ಒಂದು ತಿಂಗಳ ಅವಧಿಯದ್ದಾಗಿರುತ್ತವೆ.

 

ತರಬೇತಿಯ ಹೆಸರು: ಡ್ರೈವಿಂಗ್ ತರಬೇತಿ

ವಯೋಮಿತಿ: 20 ರಿಂದ 45 ವರ್ಷ ವಯೋಮಾನದ ಪುರುಷ ಅಭ್ಯರ್ಥಿಗಳು

ಕೊನೆಯ ದಿನಾಂಕ: ಏಪ್ರಿಲ್‌ 10

ಸಂಪರ್ಕಿಸಬೇಕಾದ ವಾಟ್ಸಾಪ್ ಸಂಖ್ಯೆ : 9632143217 ಹಾಗೂ 9449782425

ಅರ್ಜಿ ಸಲ್ಲಿಸಲು ಅರ್ಹ ಅಭ್ಯರ್ಥಿಗಳು ಏಪ್ರಿಲ್‌ 10ರ ಒಳಗಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.

 

ಪ್ರಸ್ತುತ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ಪುರುಷರು ಆಸಕ್ತಿ ಹೊಂದಿದ್ದರೆ ತಮ್ಮ ಹೆಸರು, ಹುಟ್ಟಿದ ದಿನಾಂಕ, ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ, ಸ್ವ ವಿವರವುಳ್ಳ ಅರ್ಜಿಯನ್ನು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ (ಆರ್) , ವಿಸ್ತರಣಾ ಕೇಂದ್ರ ಹಸನಮಾಳ ದಾಂಡೇಲಿ – 581325 ಈ ವಿಳಾಸಕ್ಕೆ ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನ ಸಲ್ಲಿಸಬಹುದಾಗಿದೆ.

 

ಹೆಚ್ಚಿನ ಮಾಹಿತಿಗಾಗಿ

ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 08284 – 298547, 9632143217 ಹಾಗೂ 9449782425 ಸಂಪರ್ಕಿಸಲು ಮಾಹಿತಿ ನೀಡಲಾಗಿದೆ.

 

ಉಚಿತ ಚಾಲನಾ ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿಯೊಂದಿಗೆ ಊಟೋಪಚಾರ ಹಾಗೂ ವಸತಿಯು ಕಲ್ಪಿಸಲಾಗುವುದು, ಸಂಪೂರ್ಣ ಉಚಿತವಾಗಿರುತ್ತವೆ ಎಂದು ಮಾಹಿತಿ ನೀಡಲಾಗಿದೆ.

 

ಸದ್ಯ ಡ್ರೈವಿಂಗ್ ಕಲಿಯಬೇಕೆನ್ನುವ (Learn Driving) ಆಸಕ್ತಿ ಇರುವ 20 ರಿಂದ 45 ವರ್ಷ ದ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ಅರ್ಹ ಪುರುಷ ಅಭ್ಯರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

Leave A Reply

Your email address will not be published.