Viral Video: ಭಂಡಾರ ಏರುವ ಸಮಯದಲ್ಲಿ ನಡೆಯಿತು ದೈವಿಕ ದರ್ಶನ, ಬಸವನ ಮೇಲೆಯೇ ದೈವದ ಆವಾಹನೆ! ವೀಡಿಯೋ ಇಲ್ಲಿದೆ

Daivaradhane Viral Video: ಸೋಷಿಯಲ್ ಮೀಡಿಯಾದಲ್ಲಿ ಪ್ರತಿದಿನ ಸಾಕಷ್ಟು ವಿಚಾರಗಳು ಹರಿದಾಡುತ್ತಿರುತ್ತವೆ. ಕೆಲವೊಂದು ಸಖತ್ ವೈರಲ್ ಕೂಡ ಆಗುತ್ತೆ!!. ಇದೀಗ ಬಸವನ ಮೇಲೆ ದೈವದ ಆವಾಹನೆ ಆಗಿರುವ ವಿಡಿಯೋವೊಂದು ಭಾರೀ ವೈರಲ್ (Daivaradhane Viral Video) ಆಗಿದೆ.

ಕರಾವಳಿ ಭಾಗದಲ್ಲಿ ದೈವಾರಾಧನೆಗೆ ವಿಶೇಷವಾದ ಮಹತ್ವವಿದೆ. ಇಲ್ಲಿನ ಜನರು ದೇವರಷ್ಟೇ ದೈವಗಳನ್ನು ನಂಬಿಕೆಯಿಂದ ಆರಾಧನೆ ಮಾಡುತ್ತಾರೆ. ಇದು ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿಯೂ ಹೌದು.

ಕೆಲವೊಂದು ಭಾಗಗಳಲ್ಲಿ ದೈವಗಳಿಗೆ ಬಸವನನ್ನು (Basava) ಸಮರ್ಪಣೆ ಮಾಡುವ ಪದ್ಧತಿಯಿದೆ. ದೇವರಿಗೆ ಪ್ರಾಣಿಗಳನ್ನು ಸಮರ್ಪಿಸಿದ ಹಾಗೆ ಅವಿಭಜಿತ ಉಡುಪಿ (Udupi), ದಕ್ಷಿಣ ಕನ್ನಡ (dakshina Kannada) ಜಿಲ್ಲೆಯಲ್ಲಿ ದೈವಗಳಿಗೆ ಬಸವನನ್ನು ಸಮರ್ಪಣೆ ಮಾಡಲಾಗುತ್ತದೆ.

ಅಲ್ಲದೆ, ದೈವಗಳಿಗೆ (Daiva) ಸಮರ್ಪಣೆ ಮಾಡಲಾಗುವ ಬಸವನನ್ನು ಸಾಕಲು, ಅದನ್ನು ನೋಡಿಕೊಳ್ಳಲು ಅದಕ್ಕೆಂದೇ ಕೆಲವು ಮನೆತನಗಳಿರುತ್ತವೆ. ಇನ್ನೂ ಕೆಲವು ಕಡೆಗಳಲ್ಲಿ ದೈವಗಳಿಗೆ ಸಮರ್ಪಣೆ ಮಾಡಲಾಗುವ ಬಸವ ದೈವಸ್ಥಾನವಿರುವ ಊರಿನಲ್ಲಿ ಇರುತ್ತದೆ. ದೈವಸ್ಥಾನದ ಜಾತ್ರೆ ಅಥವಾ ದೈವಾರಾಧನೆಯ (dhaivaaraadhane) ಸಂದರ್ಭದಲ್ಲಿ ಬಸವ ಆ ಜಾಗಕ್ಕೆ ಬಂದುಬಿಡುತ್ತದೆ.

ಆ ಭಾಗದಲ್ಲಿ ಬಸವನನ್ನು ದೇವರು (god) ಎಂದು ಪೂಜಿಸಲಾಗುತ್ತದೆ. ಅಲ್ಲಿನ ಸಾಕಷ್ಟು ಮಹತ್ವ ನೀಡುತ್ತಾರೆ. ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಬಸವನ ಮೇಲೆ ದೈವದ ಆವಾಹನೆ ಆಗಿದ್ದು, ಜನಸ್ತೋಮ ಭಯ, ಭಕ್ತಿಯಿಂದ ಕೈಮುಗಿದಿದೆ.

ಪಜೀರು (Pajeeru ) ಶ್ರೀ ಅರಸು ಮುಂಡಿತ್ತಾಯ ದೈವಸ್ಥಾನದಲ್ಲಿ ನಡೆದಿರುವ ಘಟನೆಯಾಗಿದ್ದು, ದೈವದ ಭಂಡಾರ ಕೊಡಿಯಡಿ ಏರುತ್ತಿದ್ದಂತೆ ಅಲ್ಲಿಯ ಬಸವನಿಗೆ ದೈವದ ಆವೇಶವಾಗಿದೆ. ಈ ವೇಳೆ ದೈವದ ತೀರ್ಥವನ್ನು ಬಸವನ ಮೇಲೆ ಪ್ರೋಕ್ಷಣೆ ಮಾಡಿದ್ದಾರೆ. ನಂತರ ಬಸವ ಯಥಾಸ್ಥಿತಿಗೆ ಮರಳಿದೆ.

ಸದ್ಯ ಈ ವಿಡಿಯೋವನ್ನು ಫೇಸ್ಬುಕ್ ಪೇಜ್, “ದೈವರಾಜ ಬಬ್ಬುಸ್ವಾಮಿ ಹೊಸಬೆಟ್ಟು ” ಅಪ್ಲೋಡ್ ಮಾಡಿದ್ದು, ವಿಡಿಯೋ ಸಖತ್ ವೈರಲ್ ಆಗಿದೆ. ನೆಟ್ಟಿಗರು ಆಶ್ಚರ್ಯಚಕಿತರಾಗಿ, ಬಹು ಶ್ರದ್ಧೆಯಿಂದ ವಿಡಿಯೋ ನೋಡುತ್ತಿದ್ದು, ಕಾಮೆಂಟ್ ನ ಸುರಿಮಳೆಗೈದಿದ್ದಾರೆ.

 

Leave A Reply

Your email address will not be published.