Clean Gold : ಈ ಟ್ರಿಕ್ಸ್‌ ಯೂಸ್‌ ಮಾಡಿ ಚಿನ್ನ, ಬೆಳ್ಳಿ ಆಭರಣ ಕ್ಲೀನ್‌ ಮಾಡಿ! ಮಿಂಚುತ್ತೆ!!!

Clean gold: ನಮ್ಮಲ್ಲಿ ಮದುವೆ (marriage ) ಮತ್ತು ಪಾರ್ಟಿಗಳಿಂದ ಹಿಡಿದು ದೈನಂದಿನ ಜೀವನದಲ್ಲಿ ಚಿನ್ನದ ( gold ) ಆಭರಣಗಳನ್ನು ನಿರಂತರವಾಗಿ ಬಳಸಲಾಗುತ್ತದೆ. ಅದಲ್ಲದೆ ಭಾರತವು (India ) ವಿಶ್ವದ ಎರಡನೇ ಅತಿದೊಡ್ಡ ಚಿನ್ನದ ಗ್ರಾಹಕ ಆಗಿದೆ.

ಆದರೆ ಹಲವು ವರ್ಷಗಳ ಬಳಕೆಯ ನಂತರ, ಆಭರಣದ ಹೊಳಪು ಸ್ವಲ್ಪ ಮಸುಕಾಗಲು ಪ್ರಾರಂಭಿಸುತ್ತದೆ. ಈ ಸಂದರ್ಭದಲ್ಲಿ ಚಿನ್ನದ ಒಡವೆಗಳನ್ನು ಶುಚಿಗೊಳಿಸುವಂತೆ (clean gold ) ಮತ್ತೆ ಅಕ್ಕಸಾಲಿಗನ ಬಳಿಗೆ ಹೋಗಬೇಕಾಗುತ್ತದೆ. ಹಾಗಾಗಿ ಮನೆಯಲ್ಲಿ ಕಳೆಗಟ್ಟಿದ ಚಿನ್ನ ಬೆಳ್ಳಿ ಒಡವೆಗಳನ್ನು ಮತ್ತು ಪಾತ್ರೆಗಳನ್ನು ಸುಲಭವಾಗಿ ಮನೆಯಲ್ಲಿನ ವಸ್ತುಗಳಿಂದಲೇ ಸ್ವಚ್ಛ ಮಾಡಿಕೊಳ್ಳುವ ವಿಧಾನಗಳನ್ನು ಇಲ್ಲಿ ತಿಳಿಸಿಕೊಡಲಾಗಿದೆ.

ಮುಖ್ಯವಾಗಿ ಚಿನ್ನದ ಮೇಲ್ಭಾಗದ ಸರ್ಫೇಸ್ ಆಕ್ಸಿಡೇಶನ್ ಪ್ರಕ್ರಿಯೆಗೆ ಒಳಗಾಗಿರುತ್ತದೆ. ಆದ್ದರಿಂದ ಕೆಲವೊಂದು ವಿಧಾನಗಳ ಮೂಲಕ ಆಭರಣಗಳಿಗೆ ಹೊಳಪು ಭರಿಸಬಹುದು.

ವಿನೆಗರ್ :
ಒಂದು ಬೌಲ್ ತೆಗೆದುಕೊಂಡು ಅದರಲ್ಲಿ ವಿನೆಗರ್ ಮತ್ತು ಸ್ವಲ್ಪ ನೀರು ತೆಗೆದುಕೊಳ್ಳಿ.
ಜೊತೆಗೆ ಅಡಿಗೆ ಸೋಡಾ ಸಹ ಮಿಶ್ರಣ ಮಾಡಿ. ಎಲ್ಲವನ್ನು ಒಂದು ಹದ ಬರುವ ಹಾಗೆ ಪೇಸ್ಟ್ ತರಹ ತಯಾರಿಸಿ. ತೂತ್ ಬ್ರಷ್ ತೆಗೆದುಕೊಂಡು ಈ ಪೇಸ್ಟ್ ಅನ್ನು ಒಡವೆಗಳ ಮೇಲೆ ಉಜ್ಜಿ. ಕೆಲವು ನಿಮಿಷಗಳ ನಂತರದಲ್ಲಿ ನೀರು ಹಾಕಿ ತೊಳೆದು ಒಣ ಬಟ್ಟೆಯಲ್ಲಿ ಒರಸಿ .

ಡಿಟರ್ಜೆಂಟ್ ಸೋಪ್:
ಒಂದು ಬೌಲ್ ನಲ್ಲಿ ಡಿಟರ್ಜೆಂಟ್ ಸೋಪ್ ದ್ರವವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಹಾಕಿ ಮಿಶ್ರಣ ಮಾಡಿ. ಅದರಲ್ಲಿ ನಿಮ್ಮ ಚಿನ್ನದ ಒಡವೆ ನೆನೆ ಹಾಕಿ. ಆದರೆ ನೀವು ಇದನ್ನು ನಿಮ್ಮ ಬೆಳ್ಳಿ ಒಡವೆಗಳನ್ನು ಅಥವಾ ಪಾತ್ರೆಗಳನ್ನು ಕ್ಲೀನ್ ಮಾಡಲು ಯಾವುದೇ ಕಾರಣಕ್ಕೂ ಬಳಸಬಾರದು. 15 ನಿಮಿಷ ಕಳೆದ ನಂತರದಲ್ಲಿ ಇವುಗಳನ್ನು ನೆನೆಸಿ ಒಂದು ಮೃದುವಾದ ಟೂತ್ ಬ್ರಷ್ ತೆಗೆದುಕೊಂಡು ಕೊಳೆಯಾಗಿರುವ ಒಡವೆಗಳ ಭಾಗವನ್ನು ಚೆನ್ನಾಗಿ ಉಜ್ಜಿ. ನಂತರ ಒಂದು ಒಣಗಿರುವ ಕಾಟನ್ ಬಟ್ಟೆಯಲ್ಲಿ ಒಡವೆಗಳನ್ನು ಒರಸಿ.

ಬೇಕಿಂಗ್ ಸೋಡಾ:
ಕೇವಲ ಆಭರಣಗಳನ್ನು ಮಾತ್ರವಲ್ಲದೆ ಬೆಳ್ಳಿ ಪಾತ್ರೆ ಗಳನ್ನು ಸಹ ಬೇಕಿಂಗ್ ಸೋಡಾ ಬಳಸಿ ಸ್ವಚ್ಛ ಮಾಡ ಬಹುದು. ಇದಕ್ಕಾಗಿ ನೀವು ಒಂದು ಅಲುಮಿನಿಯಂ ಟ್ರೇ ತೆಗೆದುಕೊಂಡು ಅದರಲ್ಲಿ ನಿಮ್ಮ ಎಲ್ಲಾ ಬೆಳ್ಳಿ ಪಾತ್ರೆಗಳನ್ನು ಮತ್ತು ಒಡವೆಗಳನ್ನು ಹಾಕಿ. ಕುದಿಯುವ ನೀರನ್ನು ಇದರಲ್ಲಿ ಹಾಕಿ ಜೊತೆಗೆ ಬೇಕಿಂಗ್ ಸೋಡಾ ಹಾಕಿ ಕವರ್ ಮಾಡಿ.
ಇಲ್ಲಿ ರಾಸಾಯನಿಕ ಕ್ರಿಯೆ ನಡೆದು ಅಲ್ಯುಮಿನಿಯಂ ಮತ್ತು ಬೇಕಿಂಗ್ ಸೋಡಾ ಬೆಳ್ಳಿ ಪಾತ್ರೆಗಳಿಂದ ಮತ್ತು ಆಭರಣಗಳಿಂದ ಸಲ್ಫರ್ ಡೈ ಆಕ್ಸೈಡ್ ಪ್ರಮಾಣವನ್ನು ತೆಗೆದುಹಾಕುತ್ತದೆ. ಆನಂತರದಲ್ಲಿ ಸಾಧಾರಣ ನೀರಿನಿಂದ ಸ್ವಚ್ಛ ಮಾಡಿ ಕೊಂಡು ಒಣಗಿಸಿ.

ಟೂತ್ ಪೇಸ್ಟ್:
ಬೆಳ್ಳಿ ಒಡವೆಗಳು ಕಲೆಯಿಂದ ಮುಕ್ತವಾಗಲು ಟೂತ್ಪೇಸ್ಟ್ ನಿಂದ ಅವುಗಳನ್ನು ಉಜ್ಜಬೇಕು. ಇದಕ್ಕಾಗಿ ನೀವು ಟೂತ್ ಬ್ರಷ್ ಅಥವಾ ಹತ್ತಿ ತೆಗೆದುಕೊಳ್ಳಬೇಕು. ಟೂತ್ ಪೇಸ್ಟ್ ನಲ್ಲಿ ಇರುವ ಫ್ಲೂರೈಡ್ ನಿಮಗೆ ಒಡವೆ ಗಳನ್ನು ಸ್ವಚ್ಛ ಮಾಡುವಲ್ಲಿ ಮತ್ತು ಅವುಗಳ ಹೊಳ ಪನ್ನು ಮತ್ತೆ ತರುವಲ್ಲಿ ಸಹಾಯ ಮಾಡುತ್ತದೆ.
ನೆನೆದ ಟವೆಲ್ ತೆಗೆದುಕೊಂಡು ಬೇಕಿದ್ದರೆ ಆನಂತರದಲ್ಲಿ ಉಜ್ಜಿದರೆ ಆಭರಣಗಳು ಹೊಳಪು ಕಾಣುತ್ತವೆ.​

ನಿಂಬೆಹಣ್ಣಿನ ರಸ:
ಒಂದು ಬೌಲ್ ತೆಗೆದುಕೊಂಡು ಅದಕ್ಕೆ ನಿಂಬೆಹಣ್ಣಿನ ರಸ ಹಾಕಿ . ಇದಕ್ಕೆ ನಿಮ್ಮ ಒಡವೆ ಅಥವಾ ಬೆಳ್ಳಿ ಪಾತ್ರೆ ಗಳನ್ನು ಹಾಕಿ.
ಇಡೀ ರಾತ್ರಿ ಇದನ್ನು ಹಾಗೆ ಬಿಟ್ಟು ಮರು ದಿನ ಟೂತ್ ಬ್ರಷ್ ನಲ್ಲಿ ಅಥವಾ ಬಟ್ಟೆಯಲ್ಲಿ ಚೆನ್ನಾಗಿ ಕ್ಲೀನ್ ಮಾಡಿ. ಇದರಿಂದ ನಿಂಬೆ ಹಣ್ಣಿನಲ್ಲಿರುವ ಆಮ್ಲಿಯ ಅಂಶಗಳು ಒಡವೆಗಳ ಮೇಲಿನ ಕಲೆಯನ್ನು ಹೋಗಲಾಡಿಸುತ್ತವೆ ಮತ್ತು ಇವು ಗಳ ಬಣ್ಣ ಮೊದಲಿನಂತೆ ಹೊಳಪಾಗಿ ಕಾಣಲು ಸಹಾಯ ಮಾಡಿಕೊಡುತ್ತವೆ.​

ರಂಗೋಲಿ ಪೌಡರ್:
ನೀವು ಬೆಳ್ಳಿ ಪಾತ್ರೆಗಳನ್ನು ಅಥವಾ ಒಡವೆಗಳನ್ನು ಸಹ ರಂಗೋಲಿ ಪುಡಿಯಿಂದ ತೊಳೆಯಬಹುದು. ಆದರೆ ಇದರ ನಂತರದಲ್ಲಿ ನಿಮಗೆ ಬಿಸಿನೀರು ಮತ್ತು ಸ್ವಲ್ಪ ಸೋಪ್ ಅವಶ್ಯಕತೆ ಇರುತ್ತದೆ. ನಿಮ್ಮ ಮನೆಯ ಪೂಜಾ ಸಾಮಗ್ರಿ ಗಳನ್ನು ಮತ್ತು ಒಡವೆಗಳನ್ನು ಈ ರೀತಿ ಸ್ವಚ್ಛ ಮಾಡಿಕೊಳ್ಳ ಬಹುದು.

ಮುಖ್ಯವಾಗಿ ಚಿನ್ನದ ಆಭರಣಗಳನ್ನು ಸ್ವಚ್ಛಗೊಳಿಸಲು ತಪ್ಪಿಯೂ ಕೂಡಾ ಬ್ಲೀಚ್ ಬಳಸಬೇಡಿ. ಇದು ಆಭರಣಗಳನ್ನು ಕಪ್ಪಾಗಿಸುತ್ತದೆ. ಅದಲ್ಲದೆ ಎಲ್ಲಾ ಒಡವೆಗಳನ್ನು ಒಟ್ಟಿಗೆ ಹಾಕಿ ತೊಳೆಯಬೇಡಿ. ಒಂದೊಂದೇ ಒಡವೆಗಳನ್ನು ತೊಳೆಯಿರಿ. ಈ ರೀತಿಯಾಗಿ ಮೇಲೆ ತಿಳಿಸಿರುವಂತೆ ಮನೆಯಲ್ಲಿ ಚಿನ್ನದ ಒಡವೆಗಳನ್ನು ಕ್ಲೀನ್ ಮಾಡಲು ಸುಲಭ ವಿಧಾನವಾಗಿದೆ. ಇದರಿಂದ ನಿಮ್ಮ ಚಿನ್ನದ ಒಡವೆ ಗಳು ಅಥವಾ ಅಮೂಲ್ಯ ಪಾತ್ರೆಗಳನ್ನು ಪಳಪಳನೆ ಹೊಳೆಯುವಂತೆ ಮಾಡುತ್ತದೆ.

 

ಇದನ್ನೂ ಓದಿ : Post Office : ಅಂಚೆ ಕಚೇರಿಯಲ್ಲಿ ನಿಮ್ಮ ಖಾತೆಯ ಬ್ಯಾಲೆನ್ಸ್‌ ತಿಳಿಯಲು ಇಲ್ಲಿದೆ 7 ಸುಲಭ ಮಾರ್ಗ!!

Leave A Reply

Your email address will not be published.