Oscars 2023: ಆಸ್ಕರ್ ವೇದಿಕೆಯಲ್ಲಿ ಭಾರತಕ್ಕೆ ಮೊದಲ ಗೆಲುವು! ಆಸ್ಕರ್ ಅಕಾಡೆಮಿ ಅವಾರ್ಡ್ ಮುಡಿಗೇರಿಸಿತು ಭಾರತದ ಈ ಚಿತ್ರ

Oscars 2023 :ಇಡೀ ಸಿನಿ ಜಗತ್ತೇ ಇದೀಗ ಆಸ್ಕರ್, ಆಸ್ಕರ್(Oscars 2023) ಎನ್ನುತ್ತಿದೆ. ಯಾವ ಚಿತ್ರಗಳಿಗೆ ಈ ವರ್ಷದ ಪ್ರಶಸ್ತಿ ಮುಡಿಗೇರಲಿದೆ ಎಂದು ಕಾತರದಿಂದ ಕಾದು ಕುಳಿತಿದೆ. ಸದ್ಯ ಈ ವಿಚಾರವಾಗಿ 2023ರ ಅವಾರ್ಡ್ ಸಂಬಂಧ ಭಾರತಕ್ಕೆ ಮೊದಲ ಗೆಲುವು ಸಿಕ್ಕಿದೆ. ‘ದಿ ಎಲಿಫೆಂಟ್​ ವಿಸ್ಪರರ್ಸ್​’(The elephant Whisperers) ಕಿರುಚಿತ್ರಕ್ಕೆ ಆಸ್ಕರ್ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

 

ಹೌದು, ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ ಪ್ರಶಸ್ತಿ ಭಾರತದ ಪಾಲಾಗಿದೆ. ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶಿಸಿದ ಮತ್ತು ಗುನೀತ್ ಮೊಂಗಾ ನಿರ್ಮಿಸಿದ ‘ದಿ ಎಲಿಫೆಂಟ್ ವಿಸ್ಪರರ್ಸ್’ 95 ನೇ ಅಕಾಡೆಮಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಇದರಿಂದ ಭಾರತದ ಜನಪ್ರಿಯತೆ ವಿಶ್ವಮಟ್ಟಕ್ಕೆ ಹಬ್ಬಿದೆ. ಈ ವರ್ಗದಲ್ಲಿ ನಾಮನಿರ್ದೇಶನಗೊಂಡಿದ್ದ ‘ಹಾಲೌಟ್’, ‘ದಿ ಮಾರ್ಥಾ ಮಿಚೆಲ್ ಎಫೆಕ್ಟ್’, ‘ಸ್ಟ್ರೇಂಜರ್ ಅಟ್ ದಿ ಗೇಟ್’, ಮತ್ತು ‘ಹೌ ಡು ಯು ಮೆಷರ್ ಎ ಇಯರ್’ ಚಿತ್ರಗಳನ್ನು ಸೋಲಿಸಿ ಈ ವಿಭಾಗದಲ್ಲಿ ಭಾರತದ ಚಿತ್ರ ಗೆದ್ದಿದೆ.

ದಿ ಎಲಿಫೆಂಟ್ ವಿಸ್ಪರರ್ಸ್’ ಈ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಚಲನಚಿತ್ರವಾಗಿದೆ ಮತ್ತು 1969 ಹಾಗೂ 1979 ರಲ್ಲಿ ಕ್ರಮವಾಗಿ ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರಕ್ಕಾಗಿ ಸ್ಪರ್ಧಿಸಿದ ‘ದಿ ಹೌಸ್‌ ದಟ್‌ ಆನಂದ ಬಿಲ್ಟ್’ ಮತ್ತು ‘ಆನ್ ಎನ್‌ಕೌಂಟರ್ ವಿತ್ ಫೇಸ್‌ಗಳ’ ನಂತರ ನಾಮನಿರ್ದೇಶನಗೊಂಡ ಮೂರನೇ ಚಲನಚಿತ್ರ ಇದಾಗಿದೆ.

ಮನುಷ್ಯ ಹಾಗೂ ಪ್ರಾಣಿಗಳ ಮಧ್ಯೆ ಒಂದು ಭಾಂದವ್ಯ ಬೆಳೆದರೆ ಅದು ಹಾಗೆಯೇ ಉಳಿಯುತ್ತದೆ. ಇದನ್ನೇ ‘ದಿ ಎಲಿಫೆಂಟ್​ ವಿಸ್ಪರರ್ಸ್​’ ಕಿರುಚಿತ್ರ ಹೇಳುತ್ತಿದೆ. ತಮಿಳುನಾಡಿನ(Tamilnadu) ಮುದುಮಲೈ ರಾಷ್ಟ್ರೀಯ ಉದ್ಯಾನವನದಲ್ಲಿರುವ ಬೊಮ್ಮನ್ ಮತ್ತು ಬೆಳ್ಳಿ ದಂಪತಿಗಳು, ಅನಾಥ ಆನೆ ಮರಿಗಳಾದ ರಘು ಮತ್ತು ಅಮ್ಮುಗಳ ಆರೈಕೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಡುತ್ತಾರೆ. ಇವರಿಂದ ಅವರಿಗೆ ಒಂದು ಕುಟುಂಬ ಸಿಗುತ್ತದೆ. ಈ ಕಿರುಚಿತ್ರ ಸಾಕಷ್ಟು ಭಾವನಾತ್ಮಕವಾಗಿದೆ. ಸಾಕ್ಷ್ಯಚಿತ್ರವು ಅವರ ನಡುವೆ ಬೆಳೆಯುವ ಬಾಂಧವ್ಯವನ್ನು ಮಾತ್ರವಲ್ಲದೆ ಅವರ ಸುತ್ತಮುತ್ತಲಿನ ನೈಸರ್ಗಿಕ ಸೌಂದರ್ಯವನ್ನು ತೋರಿಸುತ್ತದೆ. ಎಲಿಫೆಂಟ್ ವಿಸ್ಪರರ್ಸ್ ಡಿಸೆಂಬರ್ 2022 ರಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿತ್ತು.

ಇದನ್ನೂ ಓದಿ : ಪ್ರತಿಷ್ಟಿತ ಆಸ್ಕರ್ ಗೆದ್ದು ಬೀಗಿದ RRR ಚಿತ್ರದ ‘ನಾಟು ನಾಟು’ ಹಾಡು

Leave A Reply

Your email address will not be published.