Oscar award 2023 : ಆಸ್ಕರ್ ಪಡೆದ ಭಾರತೀಯರ ಕಂಪ್ಲೀಟ್ ಲಿಸ್ಟ್ ಇಲ್ಲಿದೆ!
Oscar award 2023 : ಇಡೀ ಜಗತ್ತೇ ಕಾತುರದಿಂದ ಎದುರು ನೋಡುತ್ತಿದ್ದ ಪ್ರತಿಷ್ಠಿತ ಆಸ್ಕರ್ ( Oscar award 2023) ಪ್ರಶಸ್ತಿಗಳ ಪಟ್ಟಿ ಲಾಸ್ ಏಂಜಲಿಸ್ನ 95ನೇ ಸಾಲಿನ ಅಕಾಡೆಮಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಒಂದೊಂದಾಗಿ ಘೋಷಣೆಯಾಗುತ್ತಿವೆ. ತಮಿಳು(Tamilu) ಮೂಲದ ‘ದಿ ಎಲಿಫೆಂಟ್ ವಿಸ್ಪರರ್ಸ್’ ಕಿರು ಚಿತ್ರಕ್ಕೆ ಆಸ್ಕರ್ ಅವಾರ್ಡ್ ಲಭಿಸಿದ ಬೆನ್ನಲ್ಲೇ ಇದೀಗ ಬಹು ನಿರೀಕ್ಷಿತ ಆರ್.ಆರ್.ಆರ್(RRR) ಸಿನಿಮಾದ ‘ನಾಟು ನಾಟು’ (Natu Natu Song) ಹಾಡಿಗೆ ಆಸ್ಕರ್ ಪ್ರಶಸ್ತಿಯ ಗರಿಯನ್ನು ಬಾಚಿಕೊಂಡು ಗೆಲುವಿನ ನಗೆ ಬೀರಿದೆ.
2023ರ ಆಸ್ಕರ್ ಅವಾರ್ಡ್(Oscars 2023) ಯಾವ ಚಿತ್ರಗಳಿಗೆ ಈ ವರ್ಷದ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡು ಗೆಲುವಿನ ನಗೆ ಬೀರಲಿದೆ ಎಂಬ ಕೌತುಕ ಸಿನಿ ಪ್ರೇಕ್ಷಕದಲ್ಲಿ ಮನೆ ಮಾಡಿದ್ದು, ಸದ್ಯ, ಭಾರತಕ್ಕೆ ‘ದಿ ಎಲಿಫೆಂಟ್ ವಿಸ್ಪರರ್ಸ್’(The elephant Whisperers) ಕಿರುಚಿತ್ರಕ್ಕೆ ಆಸ್ಕರ್ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು, 95ನೇ ಪ್ರಶಸ್ತಿ ಪ್ರದಾನ ಸಮಾರಂಭಕ್ಕಾಗಿ ಸಿನಿ ಪ್ರಿಯರು ತುದಿಗಾಲಿನಲ್ಲಿ ಕಾಯುತ್ತಿದ್ದು, ಭಾರತ ಇನ್ನು ಹೆಚ್ಚಿನ ಪ್ರಶಸ್ತಿಯನ್ನು ಒಲಿಸಿಕೊಳ್ಳುವ ಆಶಾವಾದದಿಂದ ಎದುರು ನೋಡುತ್ತಿದೆ.
ಸದ್ಯ, ‘ನಾಟು ನಾಟು’, ‘ಲಿಫ್ಟ್ ಮಿ ಅಪ್’, ‘ದಿಸ್ ಈಸ್ ಲೈಫ್’, ಹೋಲ್ಡ್ ಮೈ ಹ್ಯಾಂಡ್, ಅಪ್ಲೌಸ್ ಹಾಡುಗಳು ಅವಾರ್ಡ್ ರೇಸ್ನಲ್ಲಿದ್ದವು. ಈ ಪೈಕಿ ‘ನಾಟು ನಾಟು’ ಹಾಡು ಆಸ್ಕರ್ ಗೆದ್ದಿದ್ದು ಭಾರತಕ್ಕೆ ಮತ್ತೊಂದು ಗರಿಮೆಯನ್ನು ತಂದುಕೊಟ್ಟಿದೆ. 95ನೇ ಸಾಲಿನ ಅಕಾಡೆಮಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಟ್ರಿಪಲ್(RRR) ಆರ್ ಚಿತ್ರದ ನಾಟು ನಾಟು ಹಾಡು ‘ಬೆಸ್ಟ್ ಒರಿಜಿನಲ್ ಸಾಂಗ್’( Best Original Song)ವಿಭಾಗದಲ್ಲಿ ಆಸ್ಕರ್ ಬಾಚಿಕೊಂಡಿದೆ. ಎಂ.ಎಂ. ಕೀರವಾಣಿ(MM Keeravani) ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ಹಾಡು ವಿಶ್ವಮಟ್ಟದಲ್ಲಿ ಸೌಂಡ್ ಮಾಡಿದ್ದು, ಇಂಗ್ಲಿಷ್ ಹಾಡುಗಳನ್ನು ಹಿಂದಿಕ್ಕಿ ಡೈರೆಕ್ಟರ್ ಎಸ್. ಎಸ್. ರಾಜಮೌಳಿ ಅವರ ‘ನಾಟು ನಾಟು’ ಪ್ರಶಸ್ತಿ ಗಳಿಸಿಕೊಂಡಿದೆ. ದಕ್ಷಿಣದ ಸಿನಿಮಾ ಆಸ್ಕರ್ ಅಂಗಳದಲ್ಲಿ ದೊಡ್ಡ ಮಟ್ಟದಲ್ಲಿ ಅಬ್ಬರಿಸಿದ್ದು, ಭಾರತೀಯರೇ ಮೆಚ್ಚಿಕೊಳ್ಳುವಂತಾಗಿದೆ.
ಆಸ್ಕರ್ ರೇಸ್ (Oscar Race) ನಲ್ಲಿ ಗೆಲ್ಲುವುದು ಸುಲಭದ ಮಾತಲ್ಲ. ಇದೊಂದು ರೀತಿ ಭಾರತೀಯರಿಗೆ ಕಬ್ಬಿಣದ ಕಡಲೆಯಂತೆ. ಈ ಪ್ರಶಸ್ತಿ ಪಡೆಯುವ ಪಟ್ಟಿಯಲ್ಲಿ ಅರ್ಹತೆ ಪಡೆಯೋದೆ ದೊಡ್ದ ಸಾಧನೆ! ಅದರಲ್ಲಿಯೂ ಅನೇಕ ಸಿನಿಮಾಗಳ ನಡುವೆ ಜಿದ್ದಾಜಿದ್ದಿಯ ಪೈಪೋಟಿ ಕೂಡ ನಡೆಯುತ್ತದೆ. ಹೀಗೆ ಈ ರೇಸ್ ನಲ್ಲಿ ಇನ್ನುಳಿದ ಸಿನಿಮಾಗಳನ್ನು ಹಿಂದಿಕ್ಕಿ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಳ್ಳುವುದಕ್ಕೆ ಘಟಾನುಘಟಿಗಳು, ಸಿನಿ ಕ್ಷೇತ್ರದಲ್ಲಿ ನೈಪುಣ್ಯತೆ ಹೊಂದಿ ಪ್ರಶಸ್ತಿ ಒಲಿಸಿಕೊಳ್ಳುವ ಪ್ರಯತ್ನ ಕೂಡ ನಡೆಸಿದ್ದಾರೆ. ಹಾಗಿದ್ದರೆ, ಈ ಮೊದಲು ಆಸ್ಕರ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡ ಭಾರತೀಯರು ಯಾರು ಗೊತ್ತಾ? ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.
1982 ರಲ್ಲಿ ಗಾಂಧಿ ಚಿತ್ರ ರಿಲೀಸ್ ಆಗಿ, ರಿಚರ್ಡ್ ಅಟೆನ್ಬರೋ ನಿರ್ದೇಶನದ ಗಾಂಧಿ ಚಿತ್ರದ ಕಾಸ್ಟೂಮ್ ಡಿಸೈನ್ (Costume Design) ಆಧಾರದಲ್ಲಿ ಆಸ್ಕರ್ ಪ್ರಶಸ್ತಿಗೆ ಭಾಜನವಾಗಿದ್ದು, ಮಾತ್ರ ಮಹಿಳಾ ಕಾಸ್ಟೂಮ್ ಡಿಸೈನರ್ ಭಾನು ಅಥಾಯ ಅವರಿಗೆ ಎನ್ನುವ ವಿಚಾರ ಗಮನಿಸಬೇಕು. ಈ ಬಳಿಕ ಬರೋಬ್ಬರಿ 10 ವರ್ಷದ ನಂತರ, 1992 ರಲ್ಲಿ ಭಾರತೀಯ ಚಿತ್ರರಂಗದಲ್ಲಿ ಹೊಸ ರೀತಿಯ ಚಿತ್ರ ಕೊಟ್ಟ ಸತ್ಯಜೀತ್ ರೇ ಅವರಿಗೆ ಜೀವಮಾನ ಸಾಧನೆಯ ಅನುಸಾರ ಆಸ್ಕರ್ ಪ್ರಶಸ್ತಿ ಲಭಿಸಿತ್ತು.
ಡ್ಯಾನಿ ಬೋಯಲ್ ನಿರ್ದೇಶನದ ಸ್ಲಮ್ ಡಾಗ್ ಮಿಲಿಯನೇರ್(Slumdog Millionaire) ಚಿತ್ರದ ಓರಿಜನಲ್ ಸ್ಕೋರ್ ವಿಭಾಗದಲ್ಲಿ ರೆಹಮಾನ್ ಪ್ರಶಸ್ತಿ ಗಳಿಸಿದ್ದರು. ಇದೊಂದು ಸಿನಿಮಾ ಅನೇಕ ವಿಚಾರಗಳಲ್ಲಿ ಆಸ್ಕರ್ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಸ್ಲಮ್ ಡಾಗ್ ಮಿಲಿಯನೇರ್ ಚಿತ್ರಕ್ಕೆ ಎರಡು ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಒಲಿಸಿಕೊಂಡಿತ್ತು. ಚಿತ್ರ ಸಾಹಿತಿ ಗುಲ್ಜಾರ್ ಮತ್ತು ರೆಹಮಾನ್ ಸೇರಿ ಅತ್ಯುತ್ತಮ ಹಾಡಿಗಾಗಿ ಆಸ್ಕರ್ ಪ್ರಶಸ್ತಿಗೆ ಭಾಜನವಾಗಿತ್ತು.
ದಕ್ಷಿಣದ ಸಂಗೀತ ಮಾಂತ್ರಿಕ ಎಂದೇ ಖ್ಯಾತಿ ಪಡೆದ ಎ. ಆರ್. ರೆಹಮಾನ್( A. R. Rahman) ಅವರು 2009 ಆಸ್ಕರ್ ಪ್ರಶಸ್ತಿಗೆ ಭಾಜನರಾಗಿದ್ದರು. ಅಷ್ಟೆ ಅಲ್ಲದೇ, ಸ್ಲಮ್ ಡಾಗ್ ಮಿಲಿಯೇನರ್ ಸಿನಿಮಾದಲ್ಲಿ ಅತ್ಯುತ್ತಮ ಸೌಂಡ್ ಮಿಕ್ಸಿಂಗ್ ವಿಭಾಗದಲ್ಲಿ ಕೂಡ ಪ್ರಶಸ್ತಿ ಲಭಿಸಿದ್ದು, ಆ ಒಂದು ಆಸ್ಕರ್ ಪ್ರಶಸ್ತಿಗೆ ಕೇರಳದ ರಸೂಲ್ ಪೂಕಟ್ಟಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.