Indian Railways : ಭಾರತದ ಈ ರೈಲು ಮಾರ್ಗ ಇಂದಿಗೂ ಬ್ರಿಟಿಷರ ವಶದಲ್ಲಿದೆ! ಇದಕ್ಕಿದೆ ಬಹುಮುಖ್ಯ ಕಾರಣ!
Indian Railways : ಈ ಹಿಂದೆ ಹಲವಾರು ವರ್ಷಗಳ ಕಾಲ ಭಾರತವನ್ನು ಬ್ರಿಟಿಷರು ಆಳ್ವಿಕೆ ನಡೆಸಿದ್ದಾರೆ. ಆದರೆ ನಿಮಗೆ ಗೊತ್ತಾ? (Indian Railways)ಭಾರತದ ಈ ರೈಲು ಮಾರ್ಗ ಇಂದಿಗೂ ಬ್ರಿಟಿಷರ ವಶದಲ್ಲಿದೆ. ಹೌದು, ಬ್ರಿಟಿಷರು ದೇಶಬಿಟ್ಟು ತೊಲಗಿದರೂ, ಭಾರತದ ರೈಲು (Indian Railways) ಮಾರ್ಗ ಅವರ ವಶದಲ್ಲಿದೆ.
ರೈಲಿನ ಹೆಸರು ಶಕುಂತಲಾ ರೈಲ್ವೇ ಟ್ರ್ಯಾಕ್ (Shakuntala Railway Track). ಬ್ರಿಟಿಷರ ಕಾಲದಲ್ಲಿ, ಈ ಟ್ರ್ಯಾಕ್ನಲ್ಲಿ ರೈಲುಗಳನ್ನು ಗ್ರೇಟ್ ಇಂಡಿಯನ್ ಪೆನಿನ್ಸುಲರ್ ರೈಲ್ವೇ ನಿರ್ವಹಿಸುತ್ತಿತ್ತು. ಸ್ವಾತಂತ್ರ್ಯದ ಸುಮಾರು 5 ವರ್ಷಗಳ ನಂತರ ರೈಲ್ವೆಯನ್ನು ರಾಷ್ಟ್ರೀಕರಣಗೊಳಿಸಲಾಯಿತು. ಆದರೆ ಈ ಮಾರ್ಗವನ್ನು ನಿರ್ಲಕ್ಷಿಸಲಾಯಿತು. ಇದರಿಂದ ಈ ಟ್ರ್ಯಾಕ್ ಬ್ರಿಟನ್ನ (britan) ಖಾಸಗಿ ಕಂಪನಿಯಾದ ಸೆಂಟ್ರಲ್ ಪ್ರಾವಿನ್ಸ್ ರೈಲ್ವೆ ಕಂಪನಿಯ ಅಡಿಯಲ್ಲಿದೆ. ರೈಲು ಹಳಿಯ ಮೂಲಕ ಸಂಚರಿಸಲು ಪ್ರತಿ ವರ್ಷ( indian raiways)ಭಾರತೀಯ ರೈಲ್ವೇ ಬ್ರಿಟಿಷ್ ಕಂಪನಿಗೆ (British Company) ಕೋಟ್ಯಂತರ ರೂಪಾಯಿ ಪಾವತಿಸುತ್ತದೆ.
ಈ ರೈಲು ಹಳಿಯಲ್ಲಿ ಕೇವಲ ಒಂದು ಪ್ಯಾಸೆಂಜರ್ ರೈಲು ಮಾತ್ರ ಚಲಿಸುತ್ತದೆ. ಅಮರಾವತಿಯ ಪ್ರದೇಶವು ಹತ್ತಿಗೆ ಪ್ರಸಿದ್ಧ ಸ್ಥಳ. ಮುಂಬೈ ಬಂದರಿಗೆ ಹತ್ತಿಯನ್ನು ಸಾಗಿಸಲು ಬ್ರಿಟಿಷರು ಇದನ್ನು ನಿರ್ಮಿಸಿದರು ಎನ್ನಲಾಗಿದೆ. 1903 ರಲ್ಲಿ, ಬ್ರಿಟಿಷ್ ಕಂಪನಿ ಕ್ಲಿಕ್ ನಿಕ್ಸನ್ ಪ್ರಾರಂಭಿಸಿದ ರೈಲು ಹಳಿ ಹಾಕುವ ಕೆಲಸ 1916 ರಲ್ಲಿ ಪೂರ್ಣಗೊಂಡಿತು. ಈ ರೈಲನ್ನು 70 ವರ್ಷಗಳ ಕಾಲ ಸ್ಟೀಮ್ ಇಂಜಿನ್ ಮೂಲಕ ಎಳೆಯಲಾಗುತ್ತಿತ್ತು ಎನ್ನಲಾಗಿದೆ. ಈ ರೈಲು ಮಾರ್ಗಕ್ಕೆ ಬದಲಾಗಿ ಭಾರತ ಸರ್ಕಾರವು ಈ ಕಂಪನಿಗೆ ಪ್ರತಿ ವರ್ಷ 1 ಕೋಟಿ 20 ಲಕ್ಷಗಳ ಕಪ್ಪ ನೀಡುತ್ತದೆ.
15 ಏಪ್ರಿಲ್ 1994 ರಂದು, ಶಕುಂತಲಾ ಎಕ್ಸ್ಪ್ರೆಸ್ನ ಉಗಿ ಎಂಜಿನ್ ಅನ್ನು ಡೀಸೆಲ್ ಎಂಜಿನ್ಗೆ ಬದಲಾಯಿಸಲಾಯಿತು. ಇದು ಅಮರಾವತಿಯಿಂದ ಮುರ್ತಜಾಪುರಕ್ಕೆ 189 ಕಿಲೋಮೀಟರ್ಗಳ ಈ ಪ್ರಯಾಣವನ್ನು 6-7 ಗಂಟೆಗಳಲ್ಲಿ ಪೂರ್ಣಗೊಳಿಸುತ್ತದೆ.
ಈ ರೈಲು ಮಾರ್ಗದಲ್ಲಿ ಇಂದಿಗೂ ಬ್ರಿಟಿಷರ ಕಾಲದ ಸಿಗ್ನಲ್ಗಳೇ ಇವೆ. ಅವುಗಳನ್ನು 1895 ರಲ್ಲಿ ಇಂಗ್ಲೆಂಡ್ನ ಲಿವರ್ಪೂಲ್ನಲ್ಲಿ ನಿರ್ಮಿಸಲಾಯಿತು. 100 ವರ್ಷಗಳಷ್ಟು ಹಳೆಯದಾದ ಈ ರೈಲು 7 ಬೋಗಿಗಳನ್ನು ಹೊಂದಿದ್ದು, ಒಂದು ಸಾವಿರಕ್ಕೂ ಹೆಚ್ಚು ಮಂದಿ ಇದರಲ್ಲಿ ಪ್ರಯಾಣಿಸುತ್ತಾರೆ.
ಶಕುಂತಲಾ ಪ್ಯಾಸೆಂಜರ್ ಕೆಳವರ್ಗದ ಕುಟುಂಬಗಳಿಗೆ ಯವತ್ಮಾಲ್ ಮತ್ತು ಅಚಲಪುರ (ಅಮರಾವತಿ ಜಿಲ್ಲೆಯಲ್ಲಿ) ನಡುವೆ ಪ್ರಯಾಣಿಸಲು ಏಕೈಕ ಮಾರ್ಗವಾಗಿದೆ. ಈ ಕಾರಣದಿಂದ ರೈಲು ಸಂಚಾರ ಇವತ್ತಿಗೂ ಸ್ಥಗಿತಗೊಂಡಿಲ್ಲ. JDM ಸರಣಿಯ ಡೀಸೆಲ್ ಲೊಕೊ ಎಂಜಿನ್ನ ಗರಿಷ್ಠ ವೇಗವು 20 kmph ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಕೇಂದ್ರ ರೈಲ್ವೆಯ 150 ಉದ್ಯೋಗಿಗಳು ಈ ಮಾರ್ಗವನ್ನು ನಿರ್ವಹಿಸುವಲ್ಲಿ ಇನ್ನೂ ತೊಡಗಿಸಿಕೊಂಡಿದ್ದಾರೆ.
ಶಕುಂತಲಾ ಎಕ್ಸ್ಪ್ರೆಸ್ ಅನ್ನು ಮೊದಲ ಬಾರಿಗೆ 2014 ರಲ್ಲಿ ಮುಚ್ಚಲಾಯಿತು. ಹಾಗೂ ಮತ್ತೊಮ್ಮೆ ಏಪ್ರಿಲ್ 2016 ರಲ್ಲಿ ಮುಚ್ಚಲಾಯಿತು. ಇದರಿಂದ ಅಮರಾವತಿ ಜನರು ತೊಂದರೆ ಅನುಭವಿಸುತ್ತಿದ್ದರು. ಸ್ಥಳೀಯ ಜನರ ಬೇಡಿಕೆ ಹೆಚ್ಚಾಯಿತು. ಹಾಗಾಗಿ ಸಂಸದ ಆನಂದ್ ರಾವ್ (anand rao) ಅವರ ಒತ್ತಡದಿಂದ ಸರ್ಕಾರ ಮತ್ತೆ ಆರಂಭಿಸಿತು. ಭಾರತ ಸರ್ಕಾರವು ಹಲವಾರು ಬಾರಿ ಈ ಟ್ರ್ಯಾಕ್ ಅನ್ನು ಖರೀದಿಸಲು ಪ್ರಯತ್ನಿಸಿದೆ. ಆದರೆ ತಾಂತ್ರಿಕ ಕಾರಣಗಳಿಂದ ಅದು ಸಾಧ್ಯವಾಗಿಲ್ಲ. ಹಾಗಾಗಿ ಈ ಟ್ರ್ಯಾಕ್ ಇಂದಿಗೂ ಬ್ರಿಟಿಷರ ಬಳಿ ಇದೆ.
ಆಟೋ ರಿಕ್ಷಾ ಮಾಲೀಕರಿಗೆ ಸಿಹಿಸುದ್ದಿ; ಅರ್ಹತಾ ಪ್ರಮಾಣ ಪತ್ರ ಅವಧಿ ವಿಸ್ತರಣೆ!!