Auto Rikshaw : ಆಟೋ ರಿಕ್ಷಾ ಮಾಲೀಕರಿಗೆ ಸಿಹಿಸುದ್ದಿ;

Auto rikshaw driver  :ಆಟೋ ರಿಕ್ಷಾ (auto rikshaw driver) ಚಾಲಕರಿಗೆ ಗುಡ್ ನ್ಯೂಸ್ (good news) ಇಲ್ಲಿದೆ. ಬೆಂಗಳೂರು ನಗರದಲ್ಲಿ ಸಂಚರಿಸುತ್ತಿರುವ ಎಲ್ ಪಿಜಿ ಕಿಟ್ ಅಳವಡಿಸಿರುವ ಟು-ಸ್ಟ್ರೋಕ್ ಆಟೋ ರಿಕ್ಷಾಗಳ ಫಿಟ್ ನೆಸ್ ಸರ್ಟಿಫಿಕೇಟ್ ಅವಧಿಯನ್ನು ಮುಂದಿನ 6 ತಿಂಗಳವರೆಗೆ ವಿಸ್ತರಿಸುವಂತೆ ರಾಜ್ಯ ಸರ್ಕಾರ (state government) ಆದೇಶಿಸಿದೆ.

 

ಈ ಬಗ್ಗೆ ಸಾರಿಗೆ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ. ಈ ಹಿಂದೆ ಮಾರ್ಚ್ 31, 2022 ರವರೆಗೆ ಟು-ಸ್ಟ್ರೋಕ್ ಆಟೋ ರಿಕ್ಷಾಗಳ ಅರ್ಹತಾ ಪ್ರಮಾಣ ಪತ್ರ (ಫಿಟ್ ನೆಸ್ ಸರ್ಟಿಫಿಕೇಟ್ ) ಅವಧಿಯನ್ನು ನೀಡಲಾಗಿತ್ತು. ಆದರೆ ಇದೀಗ ರಾಜ್ಯ ಇದರ ಅವಧಿಯನ್ನು ವಿಸ್ತರಿಸುವಂತೆ ತಿಳಿಸಿದೆ.

ಇತ್ತೀಚೆಗೆ ಆಟೋರಿಕ್ಷಾ ಸಂಘಟನೆಗಳು ಮತ್ತು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳ ನಡುವೆ ಸಭೆ ನಡೆದಿದ್ದು, ಸಭೆಯಲ್ಲಿ ಎಲ್ ಪಿಜಿ ಕಿಟ್ ಅಳವಡಿಸಿರುವ ಟು-ಸ್ಟ್ರೋಕ್ ಆಟೋ ರಿಕ್ಷಾಗಳ ಅರ್ಹತಾ ಪ್ರಮಾಣ ಪತ್ರವನ್ನು ಆಗಸ್ಟ್ ವರೆಗೆ ವಿಸ್ತರಿಸಿದೆ ಎಂದು ಹೇಳಲಾಗಿದೆ.

ರಾಜ್ಯ ಸರ್ಕಾರದ ಈ ಆದೇಶದಿಂದ ನಗರದ ಆಟೋ ರಿಕ್ಷಾ ಮಾಲೀಕರಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ. ಮುಂದಿನ 6 ತಿಂಗಳವರೆಗೆ ಫಿಟ್ ನೆಸ್ ಸರ್ಟಿಫಿಕೇಟ್ ಅವಧಿಯ ವಿಸ್ತರಣೆಯು ಪ್ರಯೋಜನಕಾರಿಯಾಗಿದೆ.

Leave A Reply

Your email address will not be published.