Second Puc: ದ್ವಿತೀಯ ಪಿಯುಸಿ ಬೋರ್ಡ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದೀರಾ? ಚಿಂತೆ ಬೇಡ, ಈ ಕೋರ್ಸ್ ಮಾಡಿ

courses: ಹೆಚ್ಚಿನ ಜನರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ (second puc exam) ಫೇಲ್ ಆದ್ರೆ ಮುಂದೆ ವಿದ್ಯಾಭ್ಯಾಸವೂ ಮುಂದುವರಿಸಲಾಗದೆ, ಕೆಲಸವೂ ಸಿಗದೇ ಮನೆಯಲ್ಲೇ ಕುಳಿತುಬಿಡುತ್ತಾರೆ. ಪಿಯುಸಿ ಫೇಲ್ ಆದ್ರೆ, ಮುಂದೆ ಓದೋದಿಕ್ಕೆ ಸಾಧ್ಯವೇ ಅಂದುಕೊಳ್ಳುತ್ತಾರೆ. ಆದರೆ, ದ್ವಿತೀಯ ಪಿಯುಸಿ ಬೋರ್ಡ್ ಪರೀಕ್ಷೆಯಲ್ಲಿ ಫೇಲ್ ಆದರೆ ಏನು ಮಾಡಬೇಕು? ಮುಂದೇನು? ಯಾವ ಕೋರ್ಸ್ (courses) ಮಾಡಬಹುದು? ಎಂಬ ಮಾಹಿತಿ ಇಲ್ಲಿದೆ.

ಡಿಪ್ಲೊಮಾ ಕೋರ್ಸ್ (diploma course) : ಈ ಕೋರ್ಸ್ ಕೂಡ ಉತ್ತಮ ಕೋರ್ಸ್ ಆಗಿದೆ. ಇದನ್ನು ಮಾಡಿದ ಬಳಿಕ ಉದ್ಯೋಗ ಸಿಗುವುದು ಖಂಡಿತ ಎಂದೇ ಹೇಳಬಹುದು. ಇತ್ತಿಚೆಗೆ ಹೆಚ್ಚಾಗಿ ಈ ಕೋರ್ಸ್ ಅನ್ನೇ ಮಾಡುತ್ತಾರೆ. ಡಿಪ್ಲೊಮಾ ಕೋರ್ಸ್‌ನಲ್ಲಿ ನೀವು ಕೇವಲ ಒಂದು ವಿಷಯವನ್ನು ಆಯ್ಕೆ ಮಾಡಬಹುದು.

ಡಿಪ್ಲೊಮಾದಲ್ಲಿ ಯಾವೆಲ್ಲಾ ಕೋರ್ಸ್‌ಗಳಿವೆ?
• ಕಂಪ್ಯೂಟರ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ (computer engineering)
• ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ (civil engineering)
• ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ( electrical engineering)
• ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ (mechanical engineering)
• ಬಿಟೆಕ್ ಕೃಷಿ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ

ಐಟಿಐ ಕೋರ್ಸ್‌ (ITI course): ಈ ಕೋರ್ಸ್ ಮಾಡಿದ್ರೆ ಉದ್ಯೋಗವು ಬೇಗನೆ ಸಿಗುತ್ತದೆ. ಹೆಚ್ಚಾಗಿ ಯುವಕರು ಈ ಕೋರ್ಸ್ ಆರಿಸುತ್ತಾರೆ. ಆದರೆ ಯುವತಿಯರೇನು ಕಮ್ಮಿಯಿಲ್ಲ!!. ಕಂಪ್ಯೂಟರ್ ಫೀಲ್ಡ್ ನ ಕೋರ್ಸ್ ಇದರಲ್ಲಿದ್ದು, ಈ ಮೂಲಕ ಅತಿ ಬೇಗನೆ ಕೆಲಸ ಗಿಟ್ಟಿಸಿಕೊಳ್ಳುತ್ತಾರೆ. ನೀವು 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಫೇಲ್ ಆಗಿದ್ದರೆ ಚಿಂತೆ ಬೇಡ, ITI ಕೋರ್ಸ್​ ಉತ್ತಮ ಆಯ್ಕೆಯಾಗಿದೆ.

8 ಅಥವಾ 10 ನೇ, 12 ನೇ ತರಗತಿಯ ನಂತರ ITI ಕೋರ್ಸ್ ಅನ್ನು ಮಾಡಬಹುದು. ಕೋರ್ಸ್ ಅವಧಿಯು 6 ತಿಂಗಳು, 1 ವರ್ಷ ಅಥವಾ 2 ವರ್ಷಗಳು ಈ ರೀತಿ ಇರುತ್ತದೆ. ಆದರೆ, ಈ ಅವಧಿಯು ನೀವು ಆಯ್ಕೆ ಮಾಡುವ ವಿಷಯದ ಮೇಲೆ ನಿರ್ಧರಿತವಾಗುತ್ತದೆ.
ಈ ಕೋರ್ಸ್‌ಗಳಿಗೆ ಕನಿಷ್ಠ 14 ವರ್ಷ ಮತ್ತು ಗರಿಷ್ಠ 40 ವರ್ಷ ವಯೋಮಿತಿ ಇರುತ್ತದೆ. ಸರ್ಕಾರಿ ಕಾಲೇಜಿನಲ್ಲಿ ಐಟಿಐ ಶುಲ್ಕ ಉಚಿತವಾಗಿರುತ್ತದೆ. ಆದರೆ, ಖಾಸಗಿ ಕಾಲೇಜುಗಳಲ್ಲಿ ಶುಲ್ಕ ಸುಮಾರು 30,000 ರಿಂದ 40,000 ರೂ. ಇರಬಹುದು.
ಈ ಕೋರ್ಸ್ ಪೂರ್ಣ‌ಗೊಳಿಸಿದ ನಂತರ, ಉದ್ಯೋಗದ ವೇತನ ರೂ. 10,000-15,000. ಆಗಿದೆ. ವಾರ್ಷಿಕ ವೇತನ ರೂ. 70000 ವರೆಗೂ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.

Leave A Reply

Your email address will not be published.