Home Karnataka State Politics Updates ‘ವಾಷಿಂಗ್ ಪೌಡರ್ ನಿರ್ಮಾ’ ಪೋಸ್ಟರ್ ಹಾಕಿ ಅಮಿತ್ ಶಾ ಗೆ ಸ್ವಾಗತ! ಯಾಕಂದ್ರೇ…

‘ವಾಷಿಂಗ್ ಪೌಡರ್ ನಿರ್ಮಾ’ ಪೋಸ್ಟರ್ ಹಾಕಿ ಅಮಿತ್ ಶಾ ಗೆ ಸ್ವಾಗತ! ಯಾಕಂದ್ರೇ…

Home minister Amit Shah

Hindu neighbor gifts plot of land

Hindu neighbour gifts land to Muslim journalist

Home minister Amit Shah: ಕೇಂದ್ರ ಗೃಹ ಸಚಿವ ಅಮಿತ್ ಶಾ (Home minister Amit Shah) ಅವರು ಇಂದು (ಮಾರ್ಚ್ 12) ಹೈದರಾಬಾದ್‌ನ (Hyderabad) ಹಕೀಂಪೇಟ್‌ನಲ್ಲಿರುವ ರಾಷ್ಟ್ರೀಯ ಕೈಗಾರಿಕಾ ಭದ್ರತಾ ಅಕಾಡೆಮಿ (NISA) ಕ್ಯಾಂಪಸ್‌ನಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (CISF) 54 ನೇ ರೈಸಿಂಗ್ ಡೇ ಪರೇಡ್ ನ ( Raising Day Parade) ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಾರೆ.

ಗೃಹ ಸಚಿವ ಅಮಿತ್ ಶಾ ಹೈದರಾಬಾದ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತ್ ರಾಷ್ಟ್ರ ಸಮಿತಿ (ಬಿಆರ್ ಎಸ್ ) ಸಚಿವರನ್ನು ‘ವಾಷಿಂಗ್ ಪೌಡರ್ ನಿರ್ಮಾ’ ಪೋಸ್ಟರ್ (washing powder nirma poster) ಹಾಕಿ ಸ್ವಾಗತ ಮಾಡಿದೆ. ಅಷ್ಟೇ ಅಲ್ಲದೆ, ಪೋಸ್ಟರ್ ನಲ್ಲಿ ಗಮನಿಸಬೇಕಾದ ಇನ್ನೂ ಕೆಲವು ಅಂಶಗಳಿದ್ದವು.

ನಿರ್ಮಾ ಜಾಹಿರಾತಿನ ಪೋಸ್ಟರ್ ನಲ್ಲಿ, ಬಿಜೆಪಿ ನಾಯಕರಾದ ಈಶ್ವರಪ್ಪ (K. S. Eshwarappa), ನಾರಾಯಣ ರಾಣೆ (Narayan Rane), ಸುವೇಂದು ಅಧಿಕಾರಿ (Suvendu Adhikari), ಹಿಮಂತ ಬಿಸ್ವ ಶರ್ಮಾ (Himanta Biswa Sarma) ಸೇರಿದಂತೆ ಹಲವು ನಾಯಕರ ಫೋಟೋಗಳನ್ನು ಅಳವಡಿಸಲಾಗಿದೆ. ಪೋಸ್ಟರ್ ನೋಡುತ್ತಿದ್ದಂತೆ ನೀವು ಅಚ್ಚರಿಗೊಳಗಾಗೋದು ಖಂಡಿತ!!. ಸದ್ಯ ಬಿಜೆಪಿ ನಾಯಕರುಗಳ ಫೋಟೋ ಯಾಕೆ ಹಾಕಿದ್ದಾರೆ? ಬಿಆರ್ ಎಸ್ (BRS) ಈ ಮೂಲಕ ಏನು ಹೇಳುತ್ತಿದೆ? ಮಾಹಿತಿ ಇಲ್ಲಿದೆ.

ಜಾಹಿರಾತಿನಲ್ಲಿ ಬಾಲಕಿಯ ಫೋಟೋ ಇದೆ. ಅದರ ಕೆಳಗೆ ಕೆಲವು ಬಿಜೆಪಿ ನಾಯಕರ ಹೆಸರು ಹಾಕಲಾಗಿದೆ. ಹೀಗೆ ಹಾಕಿ ಗೃಹ ಸಚಿವರಿಗೆ ಸ್ವಾಗತ ಮಾಡಲಾಗಿದೆ. ಹಾಗೇ ಇನ್ನೊಂದು ಪೋಸ್ಟರ್ ನಲ್ಲಿ ಬಿಜೆಪಿ ನಾಯಕರ ಫೋಟೋ ಜೋಡಿಸಲಾಗಿದ್ದು, ಈ ನಾಯಕರೆಲ್ಲರೂ ಬಿಜೆಪಿ ಸೇರಿದ ಮೇಲೆ ಭ್ರಷ್ಟಾಚಾರ ಮುಕ್ತರಾಗಿದ್ದಾರೆ ಎಂದು ಬಿಆರ್ ಎಸ್ ವ್ಯಂಗ್ಯವಾಡಿದೆ.

ಇದನ್ನೂ ಓದಿ : Mohammed Shami : ಕ್ರಿಕೆಟ್‌ ಮೈದಾನದಲ್ಲಿ ʼಜೈ ಶ್ರೀರಾಮ್‌ʼ ಎಂದು ಘೋಷಣೆ ಕೂಗಿದ ಅಭಿಮಾನಿಗಳು!

ಬಿಆರ್ ಎಸ್ ಮತ್ತೊಂದು ಪೋಸ್ಟರ್ ನಲ್ಲಿ , ಟೈಡ್ ಡಿಟರ್ಜೆಂಟ್ ನ (tide detergent) ಮಾದರಿಯ ಜಾಹಿರಾತಿನಲ್ಲಿ ತನಿಖಾ ಸಂಸ್ಥೆಗಳ ರೈಡ್ ನ್ನು ವ್ಯಂಗ್ಯವಾಡಿತ್ತು. ಅದರಲ್ಲಿ ಹಿಮಂತ ಬಿಸ್ವ ಶರ್ಮಾ, ಜ್ಯೋತಿರಾದಿತ್ಯ ಸಿಂಧಿಯಾ ರೈಡ್ ಗಳ ಪರಿಣಾಮದಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಹಾಗೇ ಎಷ್ಟೇ ರೈಡ್ ಗಳಾದರೂ ತೆಲಂಗಾಣ ಸಿಎಂ ಪುತ್ರಿ ಕವಿತಾ ಅವರ ಬಣ್ಣ ಬದಲಾಗಿಲ್ಲ ಎಂದು ಪೊಸ್ಟರ್ ಮೂಲಕ ಬಿಆರ್ ಎಸ್ ಹೇಳಿದೆ. ಜೊತೆಗೆ ಪ್ರಧಾನಿಯನ್ನು ರಾವಣನಿಗೆ ಹೋಲಿಕೆ ಮಾಡಿ ಪ್ರಜಾಪ್ರಭುತ್ವ ನಾಶ ಮಾಡಿದ ವ್ಯಕ್ತಿ, ಬೂಟಾಟಿಕೆಯ ಪಿತಾಮಹ ಎಂದು ಬಿಆರ್ ಎಸ್ ಹೇಳಿದೆ.