Cars: ಜನಪ್ರಿಯ ಕಂಪನಿಯ ಈ ಕಾರುಗಳಿಗೆ ವರ್ಷಗಟ್ಟಲೇ ಕಾಯಬೇಕು ; ಸಂಪೂರ್ಣ ಮಾಹಿತಿ ಇಲ್ಲಿದೆ

Cars: ಸದ್ಯ ಭಾರತದ ಮಾರುಕಟ್ಟೆಗೆ ನೂತನ ಕಾರುಗಳು (cars) ಲಗ್ಗೆ ಇಡುತ್ತಿವೆ. ಆದರೆ ಟೊಯೊಟಾ ಇನ್ನೋವಾ ಹೈಕ್ರಾಸ್ (Toyota Innova hycross), ಸ್ಕಾರ್ಪಿಯೊ (scorpio) ಸೇರಿದಂತೆ ಕೆಲವು ಕಾರುಗಳಿಗೆ ಬೇಡಿಕೆ ಮಾತ್ರ ತಗ್ಗಿಲ್ಲ. ದೇಶೀಯ ಮಾರುಕಟ್ಟೆಯಲ್ಲಿ ಟೊಯೊಟಾ ಹಾಗೂ ಮಹೀಂದ್ರಾ (Mahindra) ಸಂಸ್ಥೆಯ ಕಾರುಗಳು ಭಾರೀ ಬೇಡಿಕೆಯಲ್ಲಿದೆ. ದೇಶೀಯ ಮಾರುಕಟ್ಟೆಯಲ್ಲಿ ಟೊಯೊಟಾ ಕಿರ್ಲೋಸ್ಕರ್ ಮೋಟರ್‌ (Toyota kirloskar motor), ಇನ್ನೋವಾ ಹೈಕ್ರಾಸ್ ಆಯ್ದ ರೂಪಾಂತರಗಳ ವಿತರಣೆ ಪಡೆಯಲು ಗ್ರಾಹಕರು ಕನಿಷ್ಠ 18 ತಿಂಗಳು ಅಂದ್ರೆ ವರ್ಷಗಟ್ಟಲೇ ಕಾಯಬೇಕು. ಆನಂತರವೇ ಗ್ರಾಹಕರಿಗೆ ಲಭ್ಯವಾಗುತ್ತದೆ. ಯಾವೆಲ್ಲಾ ಕಾರುಗಳಿಗೆ ವರ್ಷಗಟ್ಟಲೆ ಕಾಯಬೇಕು. ಕಾರುಗಳು ಸಂಪೂರ್ಣ ವಿವರ ತಿಳಿಯೋಣ.

ಇನ್ನೋವಾ ಹೈಕ್ರಾಸ್ ಎಂಪಿವಿ (Innova hycross mpv): ಇದು TNGA-C ಪ್ಲಾಟ್‌ಫಾರ್ಮ್ ಆಧರಿಸಿದ್ದಾಗಿದೆ. ಈ ಕಾರು 2.0 ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ 186 PS ಪವರ್ ಹಾಗೂ 206 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, e-CVT ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದುಕೊಂಡಿದೆ. 21 kmpl ಮೈಲೇಜ್, 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಇರಲಿದೆ. ಇದು ಫ್ರಂಟ್ ವೀಲ್ ಡ್ರೈವ್ ತಂತ್ರಜ್ಞಾನವನ್ನು ಪಡೆದಿದ್ದು, ಏಳು, ಎಂಟು ಆಸನ ಆಯ್ಕೆ ಹೊಂದಿದ್ದು, ಇದು 2.0 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 174 PS ಪವರ್, 205 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಕಾರು ಗ್ರಾಹಕರಿಗೆ ಎಕ್ಸ್ ಶೋರೂಂ ಬೆಲೆ ರೂ.18.30 ಲಕ್ಷದಿಂದ ರೂ.28.97 ಲಕ್ಷಕ್ಕೆ ಲಭ್ಯವಾಗಲಿದೆ.

ಮಹೀಂದ್ರಾ ಥಾರ್ 3 ಡೋರ್ (Mahindra Thar 3 door) : ಇದರ ವಿತರಣೆ ಪಡೆಯಲು ಗ್ರಾಹಕರು ಸುಮಾರು 17 ತಿಂಗಳು ಕಾಯಬೇಕಿದೆ. ಇತ್ತೀಚೆಗೆ ಕಂಪನಿಯು RWD (ರೇರ್ ವೀಲ್ ಡ್ರೈವ್) ಥಾರ್ ಆವೃತ್ತಿಯ ಡೆಲಿವರಿಯನ್ನು ಪ್ರಾರಂಭಿಸಿದೆ. ಇದರ ಬೆಲೆ ರೂ.9.99 ಲಕ್ಷದಿಂದ ರೂ.13.49 ಲಕ್ಷ ಆಗಿದೆ. ಥಾರ್ 3 ಡೋರ್, 1.5 ಲೀಟರ್ ಡಿಸೇಲ್, 2.0 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. 15.2 kmpl ಮೈಲೇಜ್ , 4 ಆಸನ, 7 ಇಂಚಿನ ಟಚ್‌ ಸ್ಕ್ರೀನ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಕ್ರೂಸ್ ಕಂಟ್ರೋಲ್, ಇನ್ಫೋಟೈನ್‌ಮೆಂಟ್ ಸಿಸ್ಟಂ, ಎಲ್‌ಇಡಿ ಡಿಆರ್‌ಎಲ್ಸ್, ಹ್ಯಾಲೊಜೆನ್ ಹೆಡ್‌ಲೈಟ್ಸ್ ಸೇರಿದಂತೆ ಹಲವು ವೈಶಿಷ್ಪ್ಯಗಳ ಜೊತೆಗೆ ಬರಲಿದೆ.

ಅರ್ಬನ್ ಕ್ರೂಸರ್ ಹೈರಿಡರ್ (urban cruiser hyryder) : ಟೊಯೊಟಾ ಕಂಪನಿಯ ಈ ಎಸ್‌ಯುವಿ ವಿತರಣೆ ಪಡೆಯಲು 15 ತಿಂಗಳು ಕಾಯಬೇಕು. ರೂ.10.48 – 19.49 ಲಕ್ಷ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಈ ಕಾರು 1.5-ಲೀಟರ್ ಮೈಲ್ಡ್ ಹೈಬ್ರಿಡ್, 1.5 ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಎಂಜಿನ್ ಹೊಂದಿದ್ದು, 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, ಆಕರ್ಷಕ ಸನ್ ರೂಫ್, ಆರು ಏರ್ ಬಾಗ್ಸ್ ಹೊಂದಿದೆ.

ಮಹೀಂದ್ರಾ ಸ್ಕಾರ್ಪಿಯೊ ಎನ್, ಕ್ಲಾಸಿಕ್ ಎಸ್‌ಯುವಿ : ದೇಶೀಯ ಮಾರುಕಟ್ಟೆಯಲ್ಲಿ ಈ ಎಸ್‌ಯುವಿ ಮಾರಾಟವಾಗುತ್ತಿದ್ದು, ಇದರ
ರೂಪಾಂತರಗಳನ್ನು ವಿತರಣೆ ಪಡೆಯಲು 15 ತಿಂಗಳು ಸಮಯ ಹಿಡಿಯುತ್ತದೆ. ಮಹೀಂದ್ರಾ ಸ್ಕಾರ್ಪಿಯೊ ಎನ್ (Mahindra Scorpio n), ರೂ.12.74 ಲಕ್ಷದಿಂದ ರೂ.24.05 ಲಕ್ಷ ಬೆಲೆಯಲ್ಲಿ ಲಭ್ಯವಾಗಲಿದೆ. ಹಾಗೇ ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ (mahindra scorpio classic) ಬೆಲೆ ರೂ.12.64 -16.14 ಲಕ್ಷ ಆಗಿದೆ.

ಮಹೀಂದ್ರಾ XUV700 ಎಸ್‌ಯುವಿ (mahindra XUV700 suv) : ಈ ಕಾರಿನ ವಿವಿಧ ಮಾದರಿಗಳನ್ನು ಪಡೆಯಲು 11 ತಿಂಗಳು ಕಾಯಬೇಕು. ಈ ಕಾರು 2-ಲೀಟರ್ ಟರ್ಬೊ ಪೆಟ್ರೋಲ್ ಹಾಗೂ 2.2-ಲೀಟರ್ ಡಿಸೇಲ್ ಎಂಜಿನ್ ಎಂಬ ಎರಡು ಎಂಜಿನ್ ಆಯ್ಕೆಗಳನ್ನು ಪಡೆದಿದೆ. ಸುರಕ್ಷತೆಗೆ, ಗೋಬಲ್-NCAPಯಿಂದ 5 ಸ್ಟಾರ್ ರೇಟಿಂಗ್ ಪಡೆದಿದೆ. ಸದ್ಯ ಇದರ ಲಕ್ಷ ಎಕ್ಸ್ ಶೋರೂಂ ಬೆಲೆ 13.95 ಲಕ್ಷದಿಂದ ರೂ.23.59 ಆಗಿದೆ.

ಇದನ್ನೂ ಓದಿ: ಈ ದೇಶದಲ್ಲಿ ಮಹಿಳೆಯರು ಗಂಡಸರಂತೆ ಪಬ್ಲಿಕ್​ ಪ್ಲೇಸ್​ನಲ್ಲಿ ಸ್ನಾನ ಮಾಡ್ಬೋದಂತೆ!

Leave A Reply

Your email address will not be published.