KS Eshwarappa : ಪುತ್ತೂರಿನಲ್ಲಿ ತನ್ನ ಹರಕು ನಾಲಿಗೆ ಹರಿಬಿಟ್ಟ ಈಶ್ವರಪ್ಪ! ಪತ್ರಕರ್ತರೇ ಬರೀಬೇಡಿ…

KS Eshwarappa: ಪುತ್ತೂರಿನಲ್ಲಿ (puttur) ಶನಿವಾರ ಸಂಜೆ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ (vijaya sankalpa samavesha) ಪ್ರಧಾನ ಭಾಷಣ ಮಾಡಿದ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ವಿವಾದಕ್ಕೀಡಾಗಿದ್ದಾರೆ. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ತಮ್ಮ ಹರಕು ನಾಲಿಗೆ ಹರಿಬಿಟ್ಟು, ಎಲ್ಲರಿಗೂ ಆಶ್ಚರ್ಯ ಉಂಟುಮಾಡಿದ್ದಾರೆ. ಸಚಿವರು ಭಾಷಣ ಮಾಡುವಾಗ ಅಶ್ಲೀಲ ಪದ ಪ್ರಯೋಗಿಸಿದ್ದು, ಇಡೀ ಸಭೆಯೇ ದಂಗಾಗಿ ಬಿಟ್ಟಿದೆ. ಸಭೆ ಪೂರ್ತಿ ಮೌನ ಆವರಿಸಿದೆ.

 

ಸಭೆಯಲ್ಲಿ ಹೆಚ್ಚಿನ ಜನರು ಪಾಲ್ಗೊಂಡಿದ್ದರು, ಮಹಿಳೆಯರು, ಕಾರ್ಯಕರ್ತರು, ಪುರುಷರು ಸೇರಿದಂತೆ ಹಲವು ಜನರಿದ್ದರು, ಇವರೆಲ್ಲರ ಎದುರು ಈಶ್ವರಪ್ಪ ಅಶ್ಲೀಲ ಪದ (obscene words) ಬಳಸಿದ್ದಾರೆ. ಅಲ್ಲದೆ, ಪದ‌ ಬಳಸುವ ಮುನ್ನ ಪತ್ರಕರ್ತರ ಬಳಿ ನಾನು ಹೇಳಿದ ಪದಗಳನ್ನು ಬರೆಯಬೇಡಿ ಎಂದಿದ್ದಾರೆ. ಹೀಗೆ ಹೇಳುತ್ತಾ, ನಾಲಗೆ ಹರಿಯ ಬಿಟ್ಟಿದ್ದಾರೆ. ಎಲ್ಲಾ ಅನುಚಿತ ಪದಗಳನ್ನು ಮಾತನಾಡಿದ ನಂತರ ಪತ್ರಕರ್ತರೇ ಇದನ್ನು ಬರೆದರೂ ಚಿಂತೆಯಿಲ್ಲ ಎಂದಿದ್ದಾರೆ.

ಸಮಾವೇಶದಲ್ಲಿ ಪ್ರಧಾನ ಭಾಷಣ ಮಾಡಿದ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಆರಂಭದಿಂದ ಅಂತ್ಯದವರೆಗೂ ಸಿದ್ಧರಾಮಯ್ಯ (Siddaramaiah) ವಿರುದ್ಧ ಹರಿಹಾಯ್ದಿದ್ದಾರೆ. ಏಕವಚನ ಬಳಸಿ ಪ್ರತಿಪಕ್ಷ ನಾಯಕನನ್ನು ಅಣಕಿಸಿ, ಕೆಣಕಿದ್ದಾರೆ. “ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋಲಿಸಿದ್ದು ಪಕ್ಷದವರೇ. ಹಿಂದೆ ಕೊರಟಗೆರೆ ಕ್ಷೇತ್ರದಲ್ಲಿ ಪರಮೇಶ್ವರ್‌ ಸೋತಿದ್ದರು. ಇದಕ್ಕೆ ಕಾರಣ ಸಿದ್ಧರಾಮಯ್ಯ. ಪರಮೇಶ್ವರ್‌ (parameshwara) ಗೆದ್ದರೆ ಸಿಎಂ ಸ್ಥಾನಕ್ಕೆ ಪೈಪೋಟಿ ನೀಡುತ್ತಾರೆ ಎಂಬ ಭಯದಿಂದ ಸಿದ್ಧರಾಮಯ್ಯ, ಕುರುಬ ಸಮಾಜದ ಕೆಲವರನ್ನು ಅಲ್ಲಿಗೆ ಕಳಿಸಿ ಪರಮೇಶ್ವರ್‌ ಗೆಲ್ಲದಂತೆ ಮಾಡಿದರು ಎಂದು ಹೇಳಿದರು. ನಾನು ಒಂದು ಬಾರಿ ಪರಮೇಶ್ವರ್‌ ನನ್ನು ಭೇಟಿಯಾದಾಗ “ಯಾಕಪ್ಪಾ ಸೋತಿ ”ಎಂದು ಅವರನ್ನು ಕೇಳಿದೆ, ಅದಕ್ಕೆ “ಆ ನನ್‌ ಮಗ ಸೋಲಿಸಿದ ”ಎಂದರು. ಹೀಗೇ ಹೇಳುತ್ತಲೇ ಕೆ.ಎಸ್‌.ಈಶ್ವರಪ್ಪ ಪತ್ರಕರ್ತರು ದಯವಿಟ್ಟು ಇದನ್ನು ಬರೀಬೇಡಿ ಎಂದೂ ಹೇಳಿದರು.

ಕಳೆದ ಬಾರಿ ಚಾಮುಂಡೇಶ್ವರಿಯ ಚುಣಾವಣೆಯಲ್ಲಿ ಸಿದ್ದರಾಮಯ್ಯ
ಸೋತ ಬಳಿಕ, ಒಂದು ಬಾರಿ ಸಿದ್ದರಾಮಯ್ಯ ಎದುರಾಗಿದ್ದರು, ಆಗ ಯಾಕಪ್ಪಾ ಸೋತಿ ಎಂದು ನಾನು ಕೇಳಿದೆ. ಅದಕ್ಕೆ, ಆ ಸೂ… ಮಗ ಸೋಲಿಸಿದ ಎಂದು ಉತ್ತರಿಸಿದ್ರು. ಇಷ್ಟೆಲ್ಲಾ ಹೇಳಿದ ಬಳಿಕ, ಈಶ್ವರಪ್ಪ “ ಪತ್ರಕರ್ತರೇ ಇದನ್ನು ನೀವು ಬರೆದರೆ ನನಗೆ ಏನೂ ಚಿಂತೆಯಿಲ್ಲ” ಎಂದು ಹೇಳಿದರು. ಅಲ್ಲದೆ, ಈ ಹಿಂದೆ ಸಿದ್ದರಾಮಯ್ಯ ಇಂತಹ ಪದ ಪ್ರಯೋಗ ಮಾಡಿದ್ದರು ಎಂದರು. ಆದರೆ, ಈಶ್ವರಪ್ಪನ ಈ ಅಶ್ಲೀಲ ಪದಪ್ರಯೋಗಕ್ಕೆ ಇಡೀ ಸಭೆಯೇ ಒಂದು ಬಾರಿ ಅವಕ್ಕಾಯಿತು. ನೆರೆದಿದ್ದ ಜನ, ಕಾರ್ಯಕರ್ತರು ದಂಗಾಗಿ, ಮೌನವಾಗಿಬಿಟ್ಟರು.

ಆದರೆ, ಈಶ್ವರಪ್ಪ ತಮ್ಮ ಮಾತು ಮುಂದುವರೆಸುತ್ತಲೇ ಇದ್ದರು,
ಸಿದ್ಧರಾಮಯ್ಯ ಕುರುಬ ಸಮುದಾಯದ ಮೂಲಕ ಸಿಎಂ ಆಗಲು ನೋಡುತ್ತಿದ್ದಾರೆ. ಹಾಗೆಯೇ ಒಕ್ಕಲಿಗ ಸಮುದಾಯದ ಮೂಲಕ ಡಿ.ಕೆ. ಶಿವಕುಮಾರ್‌ (d k shivakumar) ಮುಖ್ಯಮಂತ್ರಿ ಆಗಲು ಕನಸು ಕಾಣುತ್ತಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಇಬ್ಬರನ್ನೂ ಸಿಎಂ ಮಾಡಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೇಳಲಿ, ಆನಂತರ ಇವರಿಬ್ಬರ ಅಸಲೀಯತ್ತು ಗೊತ್ತಾಗುತ್ತದೆ ಎಂದರು. ಹೀಗೆ ಭಾಷಣದುದ್ದಕ್ಕೂ ಸಿದ್ಧರಾಮಯ್ಯನನ್ನು ಕುಟುಕುತ್ತಲೇ ಇದ್ದ ಈಶ್ವರಪ್ಪ, ಮಧ್ಯದಲ್ಲಿ ಅಶ್ಲೀಲ ಪದವನ್ನು ಬಳಸಿ ಜನರಿಗೆ ಬೆರಗುಗೊಳಿಸಿದ್ದಾರೆ. ಒಂದು ಬಾರಿ ಸಭೆಯೇ ಮೌನವಾಗುವಂತೆ ಮಾಡಿದ್ದಾರೆ.

ಇದನ್ನೂ ಓದಿ: ಮೋದಿಯವರನ್ನು ಇನ್ನೊಂದು ಬಾರಿ ನರಹಂತಕ ಎಂದರೆ ಸಿದ್ದರಾಮಯ್ಯ ಅವರ ನಾಲಿಗೆ ಕಿತ್ತು ಬಿಸಾಡಬೇಕಾಗುತ್ತದೆ -ಈಶ್ವರಪ್ಪ

 

Leave A Reply

Your email address will not be published.