ರಾಜ್ಯದಲ್ಲಿ ಪ್ರಧಾನಿ ಮೋದಿ ಹಂಗಾಮ; ಐಐಟಿ ಗ್ರೀನ್ ಕ್ಯಾಂಪಸ್ ಉದ್ಘಾಟಿಸಿದ ಪ್ರಧಾನಿ ಮೋದಿ
IIT Dharwad Inauguration :ಧಾರವಾಡ: ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಸಿದ್ದು, ಚುನಾವಣೆ ರಣಕಹಳೆ ಮುಂದುವರೆದಿದೆ. ಧಾರವಾಡದಲ್ಲಿ ಪರಿಸರ ಸ್ನೇಹಿ ‘IIT’ ಗ್ರೀನ್ ಕ್ಯಾಂಪಸ್ ಉದ್ಘಾಟಿಸಿದ್ದಾರೆ (IIT Dharwad Inauguration). ಈ ಕ್ಯಾಂಪಸ್ ಧಾರವಾಡದಿಂದ 7 ಕಿಮೀ ದೂರದಲ್ಲಿರುವ ಮುಮ್ಮಿಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ 470 ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗಿದೆ. 852 ಕೋಟಿ ವೆಚ್ಚದಲ್ಲಿ ಈ ಐಐಟಿ ಕ್ಯಾಂಪಸ್ ನಿರ್ಮಿಸಲಾಗಿದೆ. ಜೊತೆಗೆ ಧಾರವಾಡದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ, 20.1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್ಫಾರ್ಮ್ ಗೆ ಚಾಲನೆ ನೀಡಿದ್ದಾರೆ.
ನಂತರ ಬೃಹತ್ ಸಮಾವೇಶ ನಡೆದಿದ್ದು, ಇದರಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಷಣ ಮಾಡಿದ್ದಾರೆ. ನನ್ನ ರಾಜಕೀಯ ಜೀವನದಲ್ಲೇ ಇಷ್ಟು ದೊಡ್ಡ ಕಾರ್ಯಕ್ರಮ ನೋಡಿಲ್ಲ. ಹುಬ್ಬಳ್ಳಿ ಮಹಾಲಕ್ಷ್ಮೀನಗರ, ಧಾರವಾಡ ಸರಸ್ವತಿನಗರವಾಗಿದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. 35 ವರ್ಷಗಳಲ್ಲಿ ಇಷ್ಟು ಜನರನ್ನ ನಾನು ನೋಡಿಲ್ಲ. ಪ್ರಧಾನಿ ಮೋದಿ ದೂರದೃಷ್ಟಿ ನಾಯಕರಾಗಿದ್ದಾರೆ. ಪ್ರಧಾನಿ ಮೋದಿ ಆಶೀರ್ವಾದದಿಂದ ರಾಜ್ಯದ ರೈಲ್ವೆ ಹಳಿಗಳ ಅಭಿವೃದ್ಧಿಯಾಗಿದೆ. ಬಜೆಟ್‌ನಲ್ಲಿ ಕರ್ನಾಟಕಕ್ಕೆ ಪ್ರಧಾನಿ ಮೋದಿ ಹೆಚ್ಚಿನ ಅನುದಾನ ನೀಡಿದ್ದಾರೆ. ಇದು ಡಬಲ್ ಇಂಜಿನ್ ಸರ್ಕಾರದ ಸಾಧನೆ, ಇದಕ್ಕೆ ಧಮ್ ಬೇಕಾಗುತ್ತೆ. ಮೋದಿ ಮುಂದಿನ ಜನಾಂಗಕ್ಕಾಗಿ ದೇಶ ಕಟ್ಟುತ್ತಿದ್ದಾರೆ. ಪ್ರಧಾನಿ ಮೋದಿ ಆಶಿರ್ವಾದದಿಂದ ರಾಜ್ಯದ ರೈಲ್ವೆ ಹಳಿಗಳ ಅಭಿವೃದ್ಧಿ ಪಡಿಸಿದ್ದಾರೆ. ರೈಲ್ವೇ ಉನ್ನತೀಕರಣಕ್ಕೆ ಮೋದಿ ಕೊಡುಗೆ ಅಪಾರವಾಗಿದೆ. ರೈಲ್ವೇ ಟ್ರ್ಯಾಕ್ ಗಳು ವಿದ್ಯುತೀಕರಣವಾಗುತ್ತಿದೆ. ಯುವಕರಿಗೆ ಉದ್ಯೋಗ ಕಲ್ಪಿಸಲು ಡಬಲ್ ಇಂಜಿನ್ ಸರ್ಕಾರ ಶ್ರಮಿಸುತ್ತಿದೆ ಎಂದರು.
ಇನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ ಆರಂಭಿಸಿದ್ದು, ಜಗದ್ಗುರು ಬಸವೇಶ್ವರರಿಗೆ ನನ್ನ ನಮಸ್ಕಾರಗಳು ಎಂದಿದ್ದಾರೆ. ಹುಬ್ಬಳ್ಳಿ ಜನರ ಪ್ರೀತಿಯನ್ನು ನಾನು ಎಂದೂ ಮರೆಯವುದಿಲ್ಲ. ಕನ್ನಡಿಗ ಸ್ನೇಹಿತರು ನನಗೆ ಅಪಾರ ಪ್ರೀತಿ ತೋರಿಸಿದ್ದಾರೆ. ನನ್ನ ಮೇಲೆ ಕನ್ನಡಿಗರ ಋಣ ತುಂಬಾ ಇದೆ. ನಿಮಗೆ ಸೇವೆ ಸಲ್ಲಿಸುವ ಮೂಲಕ ಋಣ ತೀರಿಸುತ್ತೇನೆ ಎಂದರು.
ಧಾರವಾಡ ಕರ್ನಾಟಕ ಅಷ್ಟೇ ಅಲ್ಲ ಭಾರತದ ಜೀವಂತ ಪ್ರತಿಬಿಂಬ ಎಂದ ಪ್ರಧಾನಿ ಮೋದಿ. ಪಂಡಿತ ಭೀಮಸೇನ್ ಜೋಶಿ, ದ.ರಾ.ಬೇಂದ್ರೆರನ್ನು ಸ್ಮರಿಸಿದ ಪ್ರಧಾನಿಯವರು. ಸಾಹಿತ್ಯ, ಸಂಗೀತ ಸೇರಿ ಎಲ್ಲ ಕ್ಷೇತ್ರಕ್ಕೂ ಧಾರವಾಡದ ಕೊಡುಗೆ ಸಾಕಷ್ಟಿದೆ. ಇಂದು ಜೋಶಿಯವರು ನನಗೆ ಧಾರವಾಡ ಪೇಡಾ ನೀಡಿದ್ದಾರೆ. ಬೆಂಗಳೂರು-ಮೈಸೂರು ಹೈವೇ ಉದ್ಘಾಟಿಸುವ ಸೌಭಾಗ್ಯ ನನಗೆ ಸಿಕ್ಕಿದೆ.ಡಬಲ್ ಇಂಜಿನ್ ಸರ್ಕಾರದಿಂದ ವೇಗದ ಗತಿಯಲ್ಲಿ ಅಭಿವೃದ್ಧಿ ಕಾರ್ಯ ಮಾಡುತ್ತಿದೆ ಎಂದರು.