Pensioners : ಪಿಂಚಣಿದಾರರಿಗೆ ಕೇಂದ್ರದಿಂದ ಗುಡ್‌ನ್ಯೂಸ್!
Pensioners : ಪಿಂಚಣಿ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುವ ಹಿರಿಯ ನಾಗರಿಕರಿಗೆ ಇಲ್ಲಿದೆ ಮಹತ್ವದ ಮಾಹಿತಿ. ಸದ್ಯ ಭಾರತದಲ್ಲಿ ನಿವೃತ್ತಿ ಪಡೆದು ಪಿಂಚಣಿ ಪಡೆಯುತ್ತಿರುವ (Pensioners) ಹಿರಿಯ ನಾಗರಿಕರಿಗೆ ಉತ್ತಮ ಸೇವೆ ಒದಗಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.
ಸದ್ಯ ಪಿಂಚಣಿ ಪಡೆಯಲು ಅಗತ್ಯವಾದ ಪ್ರಕ್ರಿಯೆಯನ್ನು ಸುಲಭಗೊಳಿಸಲು ಮತ್ತು ಹಿರಿಯ ನಾಗರಿಕರ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಗಮನಹರಿಸಲಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಬ್ಯಾಂಕರ್‌ಗಳ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು , ಪಿಂಚಣಿ ವಿತರಿಸುವ ಬ್ಯಾಂಕ್ ಪೋರ್ಟಲ್‌ಗಳು, ಅನುಭವ, ಸಿಪಿಇಎನ್‌ಗ್ರಾಮ್ಸ್, ಸಿಜಿಎಚ್‌ಎಸ್‌ನಂತಹ ಪಿಂಚಣಿ ಪೋರ್ಟಲ್‌ಗಳನ್ನು ಶೀಘ್ರದಲ್ಲೇ ಒಂದೇ ಪೋರ್ಟಲ್‌ನಲ್ಲಿ ತರಲಾಗುವುದು ಎಂದು ತಿಳಿಸಿದ್ದಾರೆ. ಅದಲ್ಲದೆ ಇಂಟಿಗ್ರೇಟೆಡ್ ಪೆನ್ಶನರ್ಸ್ ಪೋರ್ಟಲ್ ಎಂಬ ಈ ಹೊಸ ವೇದಿಕೆ ಹಿರಿಯ ನಾಗರಿಕರಿಗೆ ಅನುಕೂಲವಾಗಲಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.
ಇಂಟಿಗ್ರೇಟೆಡ್ ಪಿಂಚಣಿದಾರರ ಪೋರ್ಟಲ್ ನ ಉಪಯೋಗ ಇಂತಿವೆ :
ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ (DoPPW) ನಿವೃತ್ತ ನೌಕರರಿಗೆ ಸೇವೆ ಸಲ್ಲಿಸುವುದು ಮಾತ್ರವಲ್ಲದೆ ಅವರ ಜೀವನವನ್ನು ಸುಲಭಗೊಳಿಸುತ್ತದೆ. ಡಿಜಿಟಲೀಕರಣದ ಮೂಲಕ ಎಲ್ಲ ರೀತಿಯ ಕೆಲಸಗಳನ್ನು ಸುಲಭಗೊಳಿಸಲಾಗುತ್ತದೆ.
ಇನ್ನು ಹೊಸದಾಗಿ ಪರಿಚಯಿಸಲಾದ ಇಂಟಿಗ್ರೇಟೆಡ್ ಪಿಂಚಣಿದಾರರ ಪೋರ್ಟಲ್ https://ipension.nic.in ಪಿಂಚಣಿದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
ಪಿಂಚಣಿದಾರರು ಈಗ ಈ ಪೋರ್ಟಲ್‌ನಲ್ಲಿ ಬ್ಯಾಂಕ್ ಬದಲಾಯಿಸಬಹುದು. ಜೀವಿತ ಪ್ರಮಾಣ ಪತ್ರ ಸಲ್ಲಿಸಬಹುದು. ಅದೇ ರೀತಿ, ಪಿಂಚಣಿದಾರರ ಮರಣ ಪ್ರಮಾಣಪತ್ರ, ಪಿಂಚಣಿ ಚೀಟಿ, ಪಿಂಚಣಿ ಚೀಟಿ ಮರುಪಡೆಯುವಿಕೆ, ಆದಾಯ ತೆರಿಗೆ ಕಡಿತದ ಡೇಟಾ/ಫಾರ್ಮ್ 16, ಪಿಂಚಣಿ ರಸೀದಿ ಮಾಹಿತಿಯನ್ನು ಪಡೆಯಬಹುದು.
ಪಿಂಚಣಿದಾರರು ಈಗ ತಮ್ಮ ಪಿಂಚಣಿ ಚೀಟಿ, ಜೀವನ ಪ್ರಮಾಣಪತ್ರ ಸಲ್ಲಿಕೆ ಸ್ಥಿತಿ, ಫಾರ್ಮ್-16 ಅನ್ನು ಸಮಗ್ರ ಪಿಂಚಣಿದಾರರ ಪೋರ್ಟಲ್ ಮೂಲಕ ಪ್ರವೇಶಿಸಬಹುದು. ಎಲ್ಲಾ 18 ಪಿಂಚಣಿ ವಿತರಿಸುವ ಬ್ಯಾಂಕ್‌ಗಳನ್ನು ಸಮಗ್ರ ಪಿಂಚಣಿದಾರರ ಪೋರ್ಟಲ್‌ಗೆ ವಿಲೀನಗೊಳಿಸಲಾಗುವುದು ಎಂದು ತಿಳಿಸಲಾಗಿದೆ.
ಜೊತೆಗೆ ಪಿಂಚಣಿ ವಿತರಿಸುವ ಬ್ಯಾಂಕ್‌ಗಳ ವೆಬ್‌ಸೈಟ್‌ಗಳು ಮತ್ತು ಇತರ ಸೌಲಭ್ಯಗಳು ಪಿಂಚಣಿದಾರರಿಗೆ ಲಭ್ಯವಿದೆ.
ಇದನ್ನೂ ಓದಿ : ಪ್ರತಿದಿನ ಜ್ಯೂಸ್ ಕುಡಿಯೋದು ದೇಹಕ್ಕೆ ಒಳ್ಳೆಯದಾ ಕೆಟ್ಟದಾ?