ʻಬೇಸಿಗೆ ತಾಪಮಾನʼಕ್ಕೆ ಕುಕ್ಕುಟೋದ್ಯಮಕ್ಕೆ ತಟ್ಟಿದ್ಯಾ ಎಫೆಕ್ಟ್ ..? ಕೋಳಿಗಳ ಸಾವು ಹೆಚ್ಚಳ, ಗಗನಕ್ಕೇರಿದ ದರ !
Summer Effect to Paultry : ದಿನದಿಂದ ದಿನಕ್ಕೆ ಬೇಸಿಗೆಯ ಬಿಸಿಗಾಳಿ ಹೆಚ್ಚಾಗುತ್ತಿದ್ದು, ಇದೀಗ ಬೇಸಿಗೆಯ ತಾಪಮಾನ ನಿಧನವಾಗಿ ಕುಕ್ಕುಟೋದ್ಯಮಕ್ಕೂ ಎಫೆಕ್ಟ್ ತಟ್ಟಿದ್ದಂತಾಗಿದೆ. ಕರ್ನಾಟಕದಲ್ಲಿ (Karnataka) ಅತೀ ಹೆಚ್ಚಿನ ತಾಪಮಾನ ದಾಖಲಾಗುತ್ತಿದ್ದಂತೆ, ಕೋಳಿಗಳು ಸಾವನ್ನಪ್ಪುವುದು (Death) ಹೆಚ್ಚಳಗೊಂಡಿದೆ. ಇದರಿಂದ ಕೋಳಿ ವ್ಯಾಪಾರಿಗಳಿಗೆ ಭಾರೀ ಹೊಡೆತ ಉಂಟಾಗಿದೆ. (Summer Effect to Paultry )
ಪ್ರತಿ ವರ್ಷದ ಉಷ್ಣಾಂಶಕ್ಕಿಂತ ಈ ಬಾರಿ ಮೂರು ಶೇಕಡಾದಷ್ಟು ಉಷ್ಣಾಂಶ ಎಲ್ಲೆಡೆ ಏರಿಕೆ ಕಂಡಿದೆ. ದೊಡ್ಡ ಪ್ರಮಾಣದಲ್ಲಿ ಕೋಳಿ ಮರಿಗಳನ್ನು ಸಾಕುವ ಜನರಿಗೆ ಸಮಸ್ಯೆ ಒಳಗಾಗುತ್ತಿದ್ದಾರೆ. ಬಿಸಿಲಿನ ತಾಪಕ್ಕೆ ದಿನಕ್ಕೆ 10 ರಿಂದ 20 ಮರಿಗಳು ಸಾವನ್ನಪ್ಪುತ್ತಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಸಾಕುವುದಕ್ಕೂ ಮುಂದಾಗುತ್ತಿಲ್ಲ. ಬೇಸಿಗೆಯಲ್ಲಿ ಕೋಳಿಗಳಿಗೂ ಕೆಲವೊಂದು ರೋಗಗಳು ಶುರುವಾಗುತ್ತದೆ. ಈ ಎಲ್ಲಾ ಸಮಸ್ಯೆಗಳಿಂದ ಕಷ್ಟ ಪಟ್ಟು ಕೋಳಿ ಸಾಕುತ್ತಿರೋ ಜನರ ಜೀವನಕ್ಕೆ ಸಂಕಷ್ಟ ಅನುಭವಿಸುತ್ತಿದ್ದಾರೆ.
ಅದರಲ್ಲೂ 35-37 ದಿನಗಳಲ್ಲಿ 2 ಕೆಜಿ ಬರಬೇಕಾದ ಕೋಳಿಯ ತೂಕ ಬೇಸಿಗೆಯಲ್ಲಿ 40 ರಿಂದ 50 ದಿನಗಳು ಆಗುತ್ತವೆ. ಸಾಕಾಣಿಕೆ ಮಾಡುವುದಕ್ಕೂ ಯಾರು ಮುಂದಾಗುವುದಿಲ್ಲ. ಕೋಳಿ ಉತ್ದಾದನೆ ಕಡಿಮೆಯಾಗುತ್ತಿದ್ದಂತೆ ಬೇಡಿಕೆಯೂ ಜಾಸ್ತಿಯಾಗುತ್ತಿದೆ. ಹಬ್ಬಗಳು ಆರಂಭವಾಗುವುದರಿಂದ ಕೋಳಿಗಳ ಖರೀದಿಯೂ ಹೆಚ್ಚಾಗುತ್ತಿದ್ದ ಕೋಳಿ ವ್ಯಾಪಾರಿಗಳಿಗೆ ತಾಪಮಾನ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ದಿಢೀರ್ ದರವೂ 200 ರೂ ದಾಟುವಂತೆಶರವೇಗದಲ್ಲಿ ಹೆಚ್ಚಳವಾಗುತ್ತಿದೆ. ಇದರಿಂದ ಕೋಳಿಗಳನ್ನು ಖರೀಸಲು ಮುಂದಾಗುವ ಗ್ಯಾಹಕರ ಬೇಬಿಗೂ ಕತ್ತರಿ ಬೀಳುವಂತಾಗಿದೆ. ಕೇವಲ ಹವಮಾನ ವೈಪರಿತ್ಯದಿಂದ ಭಾರೀ ಸಮಸ್ಯೆ ಎದುರಾಗಿದ್ದಂತೂ ನಿಜ.