Home Entertainment Rakshith Shetty : ಮಿಥುನ್‌ ರೈ ಹೇಳಿಕೆಗೆ ನಟ, ನಿರ್ದೇಶಕ ರಕ್ಷಿತ್‌ ಶೆಟ್ಟಿ ಸ್ಟ್ರಾಂಗ್‌ ಆಗಿ...

Rakshith Shetty : ಮಿಥುನ್‌ ರೈ ಹೇಳಿಕೆಗೆ ನಟ, ನಿರ್ದೇಶಕ ರಕ್ಷಿತ್‌ ಶೆಟ್ಟಿ ಸ್ಟ್ರಾಂಗ್‌ ಆಗಿ ತಿರುಗೇಟು!!! ಬಕೆಟ್‌ ಅಲ್ಲ ಟ್ಯಾಂಕರ್‌ ಹಿಡಿಯುತ್ತೇನೆ- ಸಿಂಪಲ್‌ ಸ್ಟಾರ್‌ ಗರಂ ಆಗಿದ್ದೇಕೆ?

Hindu neighbor gifts plot of land

Hindu neighbour gifts land to Muslim journalist

Rakshith Shetty : ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ(Moodbidri) ತಾಲೂಕಿನ ಪುತ್ತಿಗೆಯಲ್ಲಿ ನಡೆದ ನಮ್ಮೂರ ಮಸೀದಿ ನೋಡ ಬನ್ನಿ’ ಕಾರ್ಯಕ್ರಮದಲ್ಲಿ ಉಡುಪಿ ಶ್ರೀ ಕೃಷ್ಣ ಮಠದ( Udupi Krishna Mutt) ಕುರಿತಂತೆ ಕ್ರಾಂಗ್ರೆಸ್ನ ಮಿಥುನ್ ರೈ (Mithun Rai) ನಾಲಿಗೆ ಹರಿಬಿಟ್ಟು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸದ್ಯ ಸಾಮಾಜಿಕ ತಾಣಗಳಲ್ಲಿ ಈ ಕುರಿತ ಬಿರುಸಿನ ಚರ್ಚೆ ನಡೆಯುತ್ತಿದ್ದು, ಮಿಥುನ್ ರೈ ವಿರುದ್ದ ನೆಟ್ಟಿಗರು ಕಿಡಿ ಕಾರಿದ್ದಾರೆ.

 

ಮೂಡುಬಿದಿರೆಯಲ್ಲಿ ಮಸೀದಿಯೊಂದರಲ್ಲಿ ಮಾತನಾಡಿದ್ದ ಮಿಥುನ್ ರೈ ಅವರು ಈ ವೇಳೆ, ಉಡುಪಿ ಮಠಕ್ಕೆ (Udupi Mutt)ಜಾಗ ಕೊಟ್ಟಿದ್ದು ಮುಸಲ್ಮಾನ ರಾಜರು ಎಂದು ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದು ವಿವಾದ ಭುಗಿಲೇಳಲು ಕಾರಣವಾಗಿದೆ. ಇದರ ಜೊತೆಗೆ ಕೋರೋನಾ ಮಹಾಮಾರಿಯ ಅಬ್ಬರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾವು ನೋವು ಉಂಟಾದಾಗ ಮುಸ್ಲಿಂ ಸಮುದಾಯಗಳು (Muslim) ಅಂತ್ಯಸಂಸ್ಕಾರ ಮಾಡಿರುವುದನ್ನು ಹೇಳಿದ್ದು, ವಿಹಿಂಪ ಮುಖಂಡ ಶರಣ್ ಪಂಪ್ವೆಲ್ ವಿರುದ್ಧ ಮಿಥುನ್ ರೈ ಕಿಡಿ ಕಾರಿದ್ದಾರೆ.

ಈ ನಡುವೆ ಉಡುಪಿ ಮಠದ ಕುರಿತಂತೆ ಮಿಥುನ್ ರೈ ಹೇಳಿಕೆಗೆ (Mithuna Rai) ನಟ (Rakshith Shetty)ರಕ್ಷಿತ್ ಶೆಟ್ಟಿ ಅವರು (Rakshith Shetty) ಈ ಬಗ್ಗೆ ಟ್ವಿಟ್ಟರ್ನಲ್ಲಿ (Twitter)ಪ್ರತಿಕ್ರಿಯೆ ನೀಡಿದ್ದು ಇದಕ್ಕೆ ಸಾಥ್, ನೀಡುವಂತೆ ಹಿಂದೂ ಸಂಘಟನೆಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ (Social Media)ಮಿಥುನ್ ರೈ ವಿರುದ್ದ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಇತಿಹಾಸದ ಪುಟಗಳ ತೆರೆದರೆ, ಉಡುಪಿ ಮಠದ ಇತಿಹಾಸದ ಕುರಿತು ಸಾವಿರ ವರ್ಷಗಳ ಹಳೆಯ ಇತಿಹಾಸದ ಕುರುಹನ್ನು ತಿಳಿಸುತ್ತದೆ. ನಿಮಗೆ ಐಡಿಯಾ ಇಲ್ಲ ಎಂದರೆ ನೀವು ಸಾರ್ವಜನಿಕ ವೇದಿಕೆಯಲ್ಲಿ ಅಸಂಬದ್ಧವಾಗಿ ಯಾಕೆ ಮಾತನಾಡುತ್ತಿರಿ” ಎಂದು ಪ್ರಶ್ನಿಸುವ ಮೂಲಕ ಮಿಥುನ್ ರೈ ವಿರುದ್ದ ಹೆಸರೆತ್ತದೆ ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟೀವ್ ಆಗಿರದ ರಕ್ಷಿತ್ ಶೆಟ್ಟಿ ಏಕಾಏಕಿ ಉಡುಪಿ ಮಠದ ಕುರಿತಂತೆ ಪ್ರತಿಕ್ರಿಯೆ ನೀಡಿದ್ದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದು, ಅದರಲ್ಲಿಯೂ ವಿವಾದಾತ್ಮಕ ಹೇಳಿಕೆಗಳಿಂದ ಸಾಕಷ್ಟು ಅಂತರ ಕಾಯ್ದುಕೊಳ್ಳುವ ನಟ ರಕ್ಷಿತ್ ತಮ್ಮ ಹುಟ್ಟೂರಿನ ಬಗ್ಗೆ ತಪ್ಪಾಗಿ ಮಾಡಿದಾಗ ಸುಮ್ಮನಿರಲು ಸಾಧ್ಯವೇ? ಖಂಡಿತ ಇಲ್ಲ!!

ಈ ನಡುವೆ ರಕ್ಷಿತ್ ಶೆಟ್ಟಿ ಟ್ವೀಟ್ ನೋಡಿದ ಕೆಲವರು, ” ಬಕೆಟ್ ಹಿಡಿಯಬೇಡಿ ಎಂದು ಹೇಳಿದ್ದು, ಇದಕ್ಕೆ ರಕ್ಷಿತ್ ಶೆಟ್ಟಿ ” ಉಡುಪಿ ನನ್ನ ಜನ್ಮಸ್ಥಳ. ಬಕೆಟ್ ಅಲ್ಲ, ಟ್ಯಾಂಕರ್ ಹಿಡಿತೀನಿ” ಎಂದು ತಿರುಗೇಟು ನೀಡಿದ್ದಾರೆ. ಈ ನಡುವೆ ನೆಟ್ಟಿಗರೊಬ್ಬರು, ” “ಒಳ್ಳೆಯವರಾಗಿ ಉಳ್ಕೊ ಬೇಕು ಅಂತ ಹೇಳಿ ತಪ್ಪನ್ನ ತಪ್ಪು ಅಂತ ಹೇಳೋದ್ರಿಂದ ದೂರ ಇರೋದು ಕೂಡ ಸಮಂಜಸವಲ್ಲ.”ಎಂದು ರಕ್ಷಿತ್ ಪರ ಕೆಲವರು ಬ್ಯಾಟ್ ಬೀಸಿದರೆ ಮತ್ತೆ ಕೆಲವರು ರಕ್ಷಿತ್ ವಿರುದ್ದ ಪ್ರತಿಕ್ರಿಯೆ ನೀಡಿದ್ದು, ಯಾರೇನೇ ಅಂದ್ರೂ ನಾವು ಇರೋದೇ ಹಿಂಗೆ ಅನ್ನುವಂತೆ ಸದ್ಯ ರಕ್ಷಿತ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲ ಗೌರವದ ಜೊತೆಯಲಿ, ಅವರು ಯಾವ ಭೂಮಿಯ ಬಗ್ಗೆ ಮಾತನಾಡುತ್ತಿದ್ದಾರೆ ಎಂಬ ಬಗ್ಗೆ ನಿಖರತೆ ಇಲ್ಲ ಆದರೆ ಕಾರ್ ಸ್ಟ್ರೀಟ್ನಲ್ಲಿರುವ ಜಮೀನು ಖಡಾಖಂಡಿತವಾಗಿಯು ಅಲ್ಲ. ಕೃಷ್ಣ ಮಠಕ್ಕಿಂತಲೂ ಅನಂತೇಶ್ವರ ದೇಗುಲ ಹಳೆಯದಾಗಿದ್ದು, ಇದಲ್ಲದೆ, ಚಂದ್ರಮೌಳೀಶ್ವರ ದೇಗುಲ ಇನ್ನೂ ಹಳೆಯದೆಂದು ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಮಿಥುನ್ ರೈ ತಮ್ಮ ಹೇಳಿಕೆಯನ್ನು ಸಮರ್ಥಿಸುವ ಹಾಗೆ ಈ ಹಿಂದೆ ಪೇಜಾವರ ಶ್ರೀಗಳೇ ಈ ಹೇಳಿಕೆ ನೀಡಿದ್ದು, ಶ್ರೀಗಳ ಹೇಳಿಕೆಯನ್ನೇ ಮಿಥುನ್ ರೈ ಹೇಳಿರುವುದಾಗಿ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧ ಹೇಳಿಕೆಗಳನ್ನು ನೀಡುತ್ತಿದ್ದು, ಸದ್ಯ ಮಿಥುನ್ ರೈ ಹೇಳಿಕೆಯು ಚುನಾವಣೆಯ ಕಾವು ಸಮೀಪಿಸುತ್ತಿದ್ದಂತೆ ಎರಡು ಬಣಗಳ ನಡುವೆ ಕಿತ್ತಾಟ ನಡೆಯಲು ವೇದಿಕೆ ಕಲ್ಪಿಸಿದಂತಾಗಿದೆ.