Protein Supplements Side Effects : ಪ್ರೊಟೀನ್ ಸಪ್ಲಿಮೆಂಟ್ ನಿಂದಾಗುವ ಅಡ್ಡಪರಿಣಾಮದ ಪಟ್ಟಿ ಇಲ್ಲಿದೆ!

Protein Supplements Side Effects :  ಹುಡುಗಿಯರು ಸುಂದರವಾಗಿರಲು ಹೇಗೆ ಸೌಂದರ್ಯ ವರ್ಧಕಗಳನ್ನು ಬಳಸುತ್ತಾರೋ ಹಾಗೇ ಪುರುಷರು ಫೀಟ್ ಆಗಿರಲು ಪ್ರೊಟೀನ್ ಸಪ್ಲಿಮೆಂಟ್ (Protein Supplements) ಬಳಸುತ್ತಾರೆ. ಇದನ್ನು ಹೆಚ್ಚಾಗಿ ಕ್ರೀಡಾಪಟುಗಳು, ಫಿಟ್ನೆಸ್ ಬಗ್ಗೆ ಉತ್ಸಾಹ ತುಂಬಿರುವವರು ಬಳಸುತ್ತಾರೆ. ಆದರೆ ಈ ಪ್ರೊಟೀನ್ ಸಪ್ಲಿಮೆಂಟ್ ನಿಂದಾಗುವ ಅಡ್ಡಪರಿಣಾಮದ (Protein Supplements Side Effects) ಬಗ್ಗೆ ನಿಮಗೆ ಗೊತ್ತಿದೆಯಾ? ಇಲ್ಲಿದೆ ನೋಡಿ ಅಡ್ಡಪರಿಣಾಮದ ಪಟ್ಟಿ.

 

ಜೀರ್ಣಕ್ರಿಯೆ ಸಮಸ್ಯೆ: ಯುನೈಟೆಡ್ ಸ್ಟೇಟ್ಸ್‌ನ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಾರ, ಪ್ರೊಟೀನ್ ಸಪ್ಲಿಮೆಂಟ್ ಅಂದ್ರೆ ಪ್ರೋಟೀನ್ ಪೂರಕಗಳನ್ನು ಸೇವನೆ ಮಾಡೋದ್ರಿಂದ ಗ್ಯಾಸ್, ಹೊಟ್ಟೆ ಉಬ್ಬರಿಸುವುದು ಮತ್ತು ಹೊಟ್ಟೆ ಸೆಳೆತದಂತಹ ಜೀರ್ಣಕಾರಿ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಇದರಿಂದ
ಅನಾರೋಗ್ಯ ಕಾಡಬಹುದು.

ತೂಕ ಹೆಚ್ಚಾಗುವುದು (weight gain): ಪ್ರೋಟೀನ್ ಪೂರಕಗಳು ಸ್ನಾಯುವಿನ ದ್ರವ್ಯರಾಶಿಯನ್ನು ನಿರ್ಮಿಸಲು ಸಹಕಾರಿಯಾಗಿವೆ. ಆದರೆ, ಅನಗತ್ಯ ಪ್ರೋಟೀನ್ ದೇಹದಲ್ಲಿ ಕೊಬ್ಬಿನಂತೆ ಅಂಶವನ್ನು ಶೇಖರಣೆ ಮಾಡುತ್ತದೆ. ಇದರಿಂದ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಕಿಡ್ನಿ ಹಾನಿ: ಹೆಚ್ಚು ಪ್ರೋಟೀನ್ ಸೇವಿಸಿದರೆ ವ್ಯಕ್ತಿಯ ಮೂತ್ರಪಿಂಡಕ್ಕೆ ಒತ್ತಡ ಉಂಟಾಗುತ್ತದೆ. ಇದರಿಂದ ಮೂತ್ರಪಿಂಡಕ್ಕೆ ಹಾನಿ ಉಂಟಾಗಬಹುದು. ಹಾಗಾಗಿ ಪ್ರೊಟೀನ್ ಸಪ್ಲಿಮೆಂಟ್ ಸೇವಿಸದೇ ಇರುವುದು ಉತ್ತಮ.

ಪೋಷಕಾಂಶಗಳ ಕೊರತೆ: ನೀವು ಆಹಾರ ಸೇವಿಸದೆ ಅದರ ಬದಲಿಗೆ ಪ್ರೋಟೀನ್ ಪೂರಕಗಳನ್ನು ಸೇವಿಸಿದರೆ ಅದರಿಂದಾಗಿ ಸಮಯ ಕಳೆದಂತೆ ದೇಹದಲ್ಲಿ ಪೋಷಕಾಂಶಗಳ ಕೊರತೆ ಉಂಟಾಗಬಹುದು ಎನ್ನಲಾಗಿದೆ.

ದುರ್ಬಲ ಮೂಳೆ: ಅಧಿಕ ಪ್ರೋಟೀನ್ ಸೇವನೆಯಿಂದ ಆಸ್ಟಿಯೊಪೊರೋಸಿಸ್ ಮತ್ತು ಮೂಳೆ ದುರ್ಬಲವಾಗಬಹುದು.
ಅಲ್ಲದೆ, ಮೂತ್ರದ ಕ್ಯಾಲ್ಸಿಯಂ ವಿಸರ್ಜನೆಯನ್ನು ಹೆಚ್ಚಿಸಬಹುದು. ಇದರಿಂದ ನಕಾರಾತ್ಮಕ ಕ್ಯಾಲ್ಸಿಯಂ (calcium) ಸಮತೋಲನವಾಗುತ್ತದೆ. ಆಗ ಮೂಳೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ನಿರ್ಜಲೀಕರಣ/ಡಿಹೈಡ್ರೇಷನ್: ಹೆಚ್ಚು ಪ್ರೋಟೀನ್ ಸೇವಿಸಿದರೆ ಅದು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಪ್ರೋಟೀನ್ ಅನ್ನು ಪ್ರಕ್ರಿಯೆಗೊಳಿಸಲು ದೇಹಕ್ಕೆ ಹೆಚ್ಚಿನ ನೀರು ಬೇಕಾಗುತ್ತದೆ. ವ್ಯಾಯಾಮದ ಸಮಯದಲ್ಲಿ ಹೆಚ್ಚು ಬೆವರುವ ಕ್ರೀಡಾಪಟುಗಳಿಗೆ ಇದು ಸಮಸ್ಯೆಯಾಗಬಹುದು. ಹಾಗಾಗಿ ಹೆಚ್ಚು ಇದನ್ನು ಸೇವಿಸಬೇಡಿ.

ಇದನ್ನೂ ಓದಿ : ಯುಗಾದಿ ದಿನದಂದು 5 ಗ್ರಹಗಳ ಮಹಾ ಸಂಯೋಗ! ಈ 5 ರಾಶಿಗಳಿಗೆ ಅದೃಷ್ಟ

 

Leave A Reply

Your email address will not be published.