Home Breaking Entertainment News Kannada Kirik Keerthi : ಕಿರಿಕ್ ಕೀರ್ತಿ ಸಂಸಾರದಲ್ಲಿ ಬಿರುಕು?! ಕಾರಣವೇನು?

Kirik Keerthi : ಕಿರಿಕ್ ಕೀರ್ತಿ ಸಂಸಾರದಲ್ಲಿ ಬಿರುಕು?! ಕಾರಣವೇನು?

Kirik keerthi

Hindu neighbor gifts plot of land

Hindu neighbour gifts land to Muslim journalist

Kirik Keerthi: ಸೋಷಿಯಲ್ ಮೀಡಿಯಾದಲ್ಲಿ ಪ್ರತಿದಿನ ಏನಾದರೂ ಒಂದು ವಿಚಾರಗಳು ವೈರಲ್ ಆಗುತ್ತಲೇ ಇರುತ್ತದೆ. ಇತ್ತಿಚೆಗಂತೂ ಸಿನಿಮಾ, ಸಿರಿಯಲ್ (serial) ಸೆಲೆಬ್ರಿಟಿಗಳ ವಿವಾಹ ಸಾಲು ಸಾಲಾಗಿ ನಡೆಯುತ್ತಿದೆ. ನಿಮಗೆ ಈಗಾಗಲೇ ಗೊತ್ತಿರಬಹುದು. ಹಾಗೆಯೇ ಮದುವೆಯಾದ ಜೋಡಿಗಳು ದೂರವಾಗುವ ಪ್ರಕರಣವೂ ಹೆಚ್ಚಿದೆ. ಇದೀಗ ಕನ್ನಡ ಪರ ಹೋರಾಟಗಾರನಾಗಿ ಜನರಿಗೆ ಪರಿಚಿತರಾದ ಕಿರಿಕ್ ಕೀರ್ತಿಯ (Kirik Keerthi) ಬದುಕಿನಲ್ಲಿ ಬಿರುಗಾಳಿ ಎದ್ದಿದೆ.

ಹೌದು, ಕಿರಿಕ್ ಕೀರ್ತಿ ಮತ್ತು ಅರ್ಪಿತ (Arpitha Keerthi) ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂದು ಹೇಳಲಾಗಿದೆ. ಇವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಮನೆಯವರು ವಿರೋಧಿಸಿದರೂ ಅದನ್ನೆಲ್ಲಾ ಎದುರಿಸಿ ವಿವಾಹವಾಗಿದ್ದರು. ಆದರೆ ಇದೀಗ ಇವರಿಬ್ಬರೂ ದೂರಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದ್ದು, ನಿಜಕ್ಕೂ ವಿಷಾದನೀಯ ಸಂಗತಿ.

ಬಿಗ್ ಬಾಸ್ (Biggboss) ನಂತರ ಕಿರಿಕ್ ಕೀರ್ತಿಗೆ ಅದೃಷ್ಟದ ಬಾಗಿಲು ತೆರೆಯಿತು. ಪತಿ, ಪತ್ನಿ ಇಬ್ಬರೂ ವೃತ್ತಿ ಜೀವನದಲ್ಲಿ ಮುನ್ನಡೆ ಸಾಧಿಸಿದರು. ಕಿರಿಕ್ ಕೀರ್ತಿ ಅವರಿಗೆ ಹಲವಾರು ಕಾರ್ಯಕ್ರಮಗಳ ನಿರೂಪಕರಾಗಿ (anchor) ಹಾಗೂ ಸಿನಿಮಾಗಳಲ್ಲಿ (film) ಅವಕಾಶ ಬಂದೊದಗಿತು. ಹಾಗೆಯೇ ಅರ್ಪಿತ ಅವರಿಗೂ ಧಾರವಾಹಿಗಳಲ್ಲಿ ನಟಿಸುವಂತಹ ಅವಕಾಶ ಸಿಕ್ಕಿತು.

ಆದರೆ ಇದೀಗ ದಾಂಪತ್ಯದಲ್ಲಿ ಬಿರುಕು ಮೂಡಿರುವ ಸುದ್ದಿ ವೈರಲ್ ಆಗಿದೆ. ಈ ಬಗ್ಗೆ ಕಿರಿಕ್ ಕೀರ್ತಿ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದು, ಕಳೆದ ಕೆಲವು ತಿಂಗಳುಗಳಿಂದ ವ್ಯಯಕ್ತಿಕ ಕಾರಣಗಳಿಂದ ಕುಸಿದಿದ್ದೇನೆ. ಸಿನಿಮಾ ಕೆಲಸಗಳು ಮುಂದೆ ಸಾಗಲಿಲ್ಲ. ಸೋಷಿಯಲ್ ಮೀಡಿಯಾ, ಸ್ನೇಹಿತರನ್ನು ಭೇಟಿ ಮಾಡಿಲ್ಲ. ಆಗಿದ್ದನ್ನು ಆಗೋದನ್ನು ನೆನೆದು ಕುಗ್ಗಿದ್ದೆ. ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೊಂದಿದ್ದೇನೆ. ಈಗ ಅದರಿಂದ ಹೊರಬರುವ ಪ್ರಯತ್ನವನ್ನು ಮಾಡುತ್ತಿದ್ದೇನೆ ಎಂದು ಹೇಳಿದ್ದು, ಈ ಮೂಲಕ ಸಂಸಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಹಾಗೆಯೇ ಅರ್ಪಿತ ಕೂಡ ತಮ್ಮ instagram ಖಾತೆಯಲ್ಲಿ ಇರುವಂತಹ ಕೀರ್ತಿ ಎನ್ನುವ ಹೆಸರನ್ನು ತೆಗೆದು ಕೇವಲ ಅರ್ಪಿತ ಎನ್ನುವ ಹೆಸರನ್ನು ಮಾತ್ರ ಇಟ್ಟಿದ್ದಾರೆ. ಅರ್ಪಿತ ಕೂಡ ಈ ಬಗ್ಗೆ ಪೋಸ್ಟ್ ಮಾಡಿದ್ದು, “ನಮ್ಮನ್ನು ಕುಗ್ಗಿಸಲು ಪ್ರಯತ್ನ ಮಾಡುವ ವ್ಯಕ್ತಿಗಳನ್ನು ನಾವು ಪದೇ ಪದೇ ತಡೆದುಕೊಳ್ಳುವ ಅಗತ್ಯ ಇಲ್ಲ. ಅವರು ಎಷ್ಟೇ ಗೊತ್ತಿರುವ ವ್ಯಕ್ತಿ ಆಗಿರಲಿ. ನಾವು ಏನೆಂಬುದರ ಬಗ್ಗೆ ನಾವು ಒಂದು ಗೆರೆ ಹಾಕಿಕೊಳ್ಳಬೇಕೇ ಹೊರತು.ಮತ್ತೊಬ್ಬರನ್ನು ಸಹಿಸಿಕೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ.

ಸದ್ಯ ಈ ಜೋಡಿಯ ದಾಂಪತ್ಯ ‌ಜೀವನ ಕೊನೆಯಾಗಲಿದೆ ಎಂದು ಸೋಷಿಯಲ್ಸ್ ಅಂದುಕೊಂಡಿದ್ದಾರೆ. ಆದರೆ ಸಣ್ಣಪುಟ್ಟ ಜಗಳ, ತಪ್ಪು ಕಲ್ಪನೆಗಳನ್ನು ತಾಳ್ಮೆಯಿಂದ ಪರಿಹರಿಸಿದರೆ ಜೀವನ ಸುಖಮಯವಾಗಿರುತ್ತದೆ. ಇಷ್ಟಪಟ್ಟು ವಿವಾಹವಾದವರನ್ನು, ಏನೇ ಕಷ್ಟ ಬಂದರೂ ಜೊತೆಯಾಗಿ ಎದುರಿಸಿ, ಜೀವನ ನಡೆಸಬೇಕು. ಹೀಗೆ
ತಾಳ್ಮೆಯಿಂದ ಯೋಚಿಸಿ, ನಿರ್ಧಾರ ತೆಗೆದುಕೊಂಡರೆ ಈ ಜೋಡಿ ಒಂದಾಗಬಹುದು.