Horticulture Training: ರೈತರಿಗೆ, ರೈತರ ಮಕ್ಕಳಿಗೆ ತೋಟಗಾರಿಕಾ ತರಬೇತಿಯ ಕುರಿತ ಮುಖ್ಯ ಮಾಹಿತಿ ಪ್ರಕಟ
Horticulture Training: ಇಂದಿನ ಕಾಲದಲ್ಲಿ ಉದ್ಯೋಗ ಅತ್ಯವಶ್ಯಕವಾಗಿದೆ. ಆದರೆ, ಬಯಸಿದ ಉದ್ಯೋಗ(Job) ಪಡೆಯುವುದು ಸುಲಭದ ಮಾತಲ್ಲ. ಪೈಪೋಟಿಯ ನಡುವೆ ನೆಚ್ಚಿನ ಕೆಲ್ಸ ಗಿಟ್ಟಿಸಿಕೊಳ್ಳೋದು ಯುವಜನತೆಯ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹಾಗೆಂದ ಮಾತ್ರಕ್ಕೆ ಉದ್ಯೋಗದ (employment) ವಿಷಯದಲ್ಲಿ ಅನೇಕ ಅವಕಾಶದ ಬಾಗಿಲುಗಳು ತೆರೆದಿದ್ದು ಇವುಗಳ ಕುರಿತಂತೆ ಮಾಹಿತಿ ಎಷ್ಟೋ ಮಂದಿಗೆ ತಿಳಿದಿಲ್ಲ ಎನ್ನುವುದು ಅಷ್ಟೆ ಸತ್ಯ. ಇದೀಗ ಉದ್ಯೋಗ ಅರಸುತ್ತಿರುವ ಆಕಾಂಕ್ಷಿಗಳಿಗೆ ಮುಖ್ಯ ಮಾಹಿತಿ ಇಲ್ಲಿದೆ ನೋಡಿ.
ತೋಟಗಾರಿಕೆ (Horticulture)ಕೇಂದ್ರ ಮೇ 2ರಿಂದ ಫೆಬ್ರವರಿ 29ರ 2024ರ ತನಕ ನಡೆಯಲಿರುವ 10 ತಿಂಗಳ ಕಾಲ ಬೆಂಗಳೂರಿನ ಲಾಲ್‍ಬಾಗ್‍ನ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ತೋಟಗಾರಿಕೆ ತರಬೇತಿ (Horticulture Training)ಪಡೆಯಲು ಬಯಸುವ ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನ ಮಾಡಿದೆ.
ಗಮನಿಸಬೇಕಾದ ದಿನಾಂಕಗಳು
ತೋಟಗಾರಿಕೆ ತರಬೇತಿ ಅವಧಿ 10 ತಿಂಗಳಾಗಿದ್ದು,
02.05.2023ರಿಂದ ಆರಂಭವಾಗಿ 29.02.2024 ಕೊನೆಗೊಳ್ಳಲಿದೆ. ಅರ್ಜಿ ಸಲ್ಲಿಸಲು 23.03.2023 ರಿಂದ 12.04.2023 ಅವಕಾಶ ಕಲ್ಪಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು (Interested Candidates) 12.04.2023ರ ಒಳಗೆ ಅರ್ಜಿ ಸಕ್ಕಿಸಬೇಕಾಗಿದ್ದು, ಇದು ಕೊನೆಯ( Last Date)ದಿನವಾಗಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿನ ಅರ್ಹ ಅಭ್ಯರ್ಥಿಗಳು ಈ ತರಬೇತಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 1,750 ರೂಪಾಯಿ ಶಿಷ್ಯ ವೇತನ (ಮಾಜಿ ಸೈನಿಕರನ್ನು ಹೊರತುಪಡಿಸಿ) ಲಭ್ಯವಾಗಲಿದೆ.
ಅರ್ಜಿ ಪಡೆಯುವ ವಿಧಾನ
ತೋಟಗಾರಿಕಾ ಇಲಾಖೆಯ ವೆಬ್‌ಸೈಟ್ https://horticulture dir.karnataka.gov.in ನಲ್ಲಿ ಮಾಚ್ 23ರಿಂದ ಏಪ್ರಿಲ್ 12 ರ ವರೆಗೆ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ. ಇಲ್ಲವೇ ಅರ್ಜಿಗಳನ್ನು ಆಯಾ ಜಿಲ್ಲೆಯ ತೋಟಗಾರಿಕೆ ಉಪ ನಿರ್ದೇಶಕರು (ಜಿಪಂ) / ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾಜ್ಯ ವಲಯ) ರವರ ಕಚೇರಿಯಲ್ಲಿ ಪಡೆಯಬಹುದು. ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಭರ್ತಿ ಮಾಡಿದ ಬಳಿಕ ಸಂಬಂಧಿಸಿದ ದಾಖಲಾತಿಗಳೊಂದಿಗೆ(Documents) ಏಪ್ರಿಲ್ 12 ಸಂಜೆ 5.00 ಗಂಟೆಯೊಳಗೆ ಆಯಾ ಜಿಲ್ಲೆಯ ತೋಟಗಾರಿಕೆ ಉಪ ನಿರ್ದೇಶಕರು (ಜಿಪಂ) / ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾವ) ರವರ ಕಚೇರಿಯಲ್ಲಿ ಸಲ್ಲಿಸಬೇಕಾಗುತ್ತದೆ.
ಸಾಮಾನ್ಯ ಅಭ್ಯರ್ಥಿಗಳಿಗೆ 30 ರೂಪಾಯಿ ಶುಲ್ಕ ಮತ್ತು ಮಾಜಿ ಸೈನಿಕರು/ಪರಿಶಿಷ್ಟ ಜಾತಿ / ಪಂಗಡದ ಅಭ್ಯರ್ಥಿಗಳಿಗೆ 15 ರೂಪಾಯಿ ಮೌಲ್ಯದ ಇಂಡಿಯನ್ ಪೋಸ್ಟಲ್ ಆರ್ಡರ್ (IPO) / ಡಿಮ್ಯಾಂಡ್ ಡ್ರಾಫ್ಟ್ (DD) ಅನ್ನು ಆಯಾ ಜಿಲ್ಲೆಗಳ ತೋಟಗಾರಿಕೆ ಉಪ ನಿರ್ದೇಶಕರು (ಜಿಲ್ಲಾ ಪಂಚಾಯತ್) ಇವರ ಹೆಸರಿನಲ್ಲಿ ಪಡೆದು, ಅರ್ಜಿಯ ಜೊತೆಗೆ ಲಗತ್ತಿಸಬೇಕು.
ಅರ್ಹತೆ (Eligibility Critiriea)
ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು ಕನ್ನಡ ವಿಷಯದೊಂದಿಗೆ ಎಸ್.ಎಸ್.ಎಲ್.ಸಿ.(SSLC Exam) ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕಾಗುತ್ತದೆ.ಈ ತರಬೇತಿಯು ಮುಖ್ಯವಾಗಿ ರೈತರ ಮಕ್ಕಳಿಗಾಗಿ ಇರುವ ಹಿನ್ನೆಲೆ ಅಭ್ಯರ್ಥಿಯ ತಂದೆ ಅಥವಾ ಪಾಲಕರು ಕಡ್ಡಾಯವಾಗಿ ಜಮೀನು(Land) ಹೊಂದಿರಬೇಕಾಗಿದ್ದು ಜೊತೆಗೆ ಸ್ವಂತ ಸಾಗುವಳಿ ಮಾಡುತ್ತಿರಬೇಕು.ಈ ಬಗ್ಗೆ ಪಹಣಿ ನೀಡುವುದು ಕಡ್ಡಾಯವಾಗಿದೆ. ಇದರ ಜೊತೆಗೆ ಅಭ್ಯರ್ಥಿಗಳು ತೋಟದ ಕೆಲಸಗಳನ್ನು ಮಾಡುವಷ್ಟು ದೃಢಕಾಯರಾಗಿರಬೇಕಾಗುತ್ತದೆ. ತರಬೇತಿಗೆ ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ 2 ಡೋಸ್ ಕೋವಿಡ್(Covid ) ಲಸಿಕೆಯನ್ನು ಪಡೆದಿರುವ ಬಗ್ಗೆ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
ಮಾಜಿ ಸೈನಿಕರು ಪ್ರವೇಶ ಪಡೆಯಲು ಬಯಸಿದಲ್ಲಿ ಮೇಲೆ ತಿಳಿಸಿದ ವಿವರಗಳ ಜೊತೆಗೆ ಇತರೆ ದಾಖಲೆಗಳಾದ ಡಿಸ್‌ಚಾರ್ಜ್ ಬುಕ್ ಕಾಪಿ, ಪರ್ಸನಲ್ ಪೆನ್ಶನ್ ಆರ್ಡರ್ ಕಾಪಿ(Personal Pension Order Copy), ಎಕ್ಸ್ ಸರ್ವೀಸ್‌ಮ್ಯಾನ್ ಐಡಿ ಕಾರ್ಡ್ ಕಾಪಿಗಳನ್ನು ಸಲ್ಲಿಸಬೇಕಾಗುತ್ತದೆ.
ವಯೋಮಿತಿ (Age Limit)
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಕನಿಷ್ಠ ವಯೋಮಿತಿ 18 ವರ್ಷಗಳಾಗಿದ್ದು, ಗರಿಷ್ಠ ವಯೋಮಿತಿ 33 ವರ್ಷ ಗಳಾಗಿವೆ. ಮಾಜಿ ಸೈನಿಕರಿಗೆ ಕನಿಷ್ಠ ವಯೋಮಿತಿ 18 ವರ್ಷ ಮತ್ತು ಗರಿಷ್ಠ 30 ವರ್ಷ ವಯೋಮಿತಿ ಮತ್ತು ಉಳಿದವರಿಗೆ ವಯೋಮಿತಿ 33 ರಿಂದ ಗರಿಷ್ಠ 65 ವರ್ಷಗಳಾಗಿವೆ.
ಆಯ್ಕೆ ವಿಧಾನ (Selection Procedures) ಹೇಗೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ಏಪ್ರಿಲ್ 15 ರಂದು ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಈ ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ತರಬೇತಿ ಕೇಂದ್ರ, ಲಾಲ್ ಬಾಗ್, ಬೆಂಗಳೂರು, ದೂರವಾಣಿ ಸಂಖ್ಯೆ 080-22240444 / 9741560256/8197792966 ಸಂಪರ್ಕಿಸಲು ಕೋರಲಾಗಿದೆ. ಇದಲ್ಲದೆ, ಆಯಾ ಜಿಲ್ಲೆಯ ತೋಟಗಾರಿಕೆ ಉಪ ನಿರ್ದೇಶಕರು (ಜಿಪಂ) / ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ಭೇಟಿಯಾಗಿ ಮಾಹಿತಿ ಪಡೆದುಕೊಳ್ಳಬಹುದು.