Betting : ಶಾಲೆಯಲ್ಲಿ ಬೆಟ್ಟಿಂಗ್ ಕಟ್ಟಿ 45 ಮಾತ್ರೆ ಸೇವಿಸಿದ ಬಾಲಕಿ!! ಮುಂದೆ ನಡೆದದ್ದೆಲ್ಲ ಭಯಾನಕ!!

Betting : ಬೆಟ್ಟಿಂಗ್ ಎನ್ನುವುದು ಒಂದು ಕೆಟ್ಟ ನಶೆ ಆಗಿದೆ. ಒಂದು ಸಾರಿ ಕಮಿಟ್ ಆದರೆ ಕೆಲವರಿಗೆ ಅದರ ನಶೆ ಇಳಿಯುವ ವರೆಗೆ ಬೆಟ್ಟಿಂಗ್ ಗೆಲ್ಲಲು ಏನು ಬೇಕಾದರೂ ಮಾಡುತ್ತಾರೆ. ಆದರೆ ಮಕ್ಕಳು (children) ಸಹ ಬೆಟ್ಟಿಂಗ್ (betting ) ನೆಪದಲ್ಲಿ ಏನೇನೊ ಹುಚ್ಚು ಸಾಹಸ ಮಾಡಲು ಹೊರಟರೆ ಕೊನೆಗೆ ಅನಾಹುತ ಆಗುವುದು ಖಂಡಿತಾ. ಅಂತೆಯೇ ಇಲ್ಲೊಬ್ಬಳು ಅಪ್ರಾಪ್ತ ಬಾಲಕಿ 45 ಮಾತ್ರೆ ನುಂಗಿದ್ದಾಳೆ.

 

ತಮಿಳುನಾಡಿನ ನೀಲಗಿರಿಯ ಉದಗಮಂಡಲಂ ಪುರಸಭೆಯ ಉರ್ದು ಮಿಡಲ್ ಸ್ಕೂಲ್‌ನಲ್ಲಿ 13 ವರ್ಷದ ವಿದ್ಯಾರ್ಥಿನಿ ಜೈಬಾ ಫಾತಿಮಾ ಎಂಬಾಕೆ ಬೆಟ್ಟಿಂಗ್‌ ಗಾಗಿ ಹೆಚ್ಚು ಕಬ್ಬಿಣ ಮತ್ತು ಫೋಲಿಕ್ ಆಸಿಡ್ ಮಾತ್ರೆಗಳನ್ನು ಸೇವಿಸಿ ಸಾವನ್ನಪ್ಪಿದ್ದ ಘಟನೆ ಗುರುವಾರ ನಡೆದಿದೆ.

ಫಾತಿಮಾ ಮತ್ತು ಇತರ ಐದು ವಿದ್ಯಾರ್ಥಿಗಳು ತಮ್ಮ ಮುಖ್ಯೋಪಾಧ್ಯಾಯರ ಕಚೇರಿಗೆ ಹೋಗಿ ಅಲ್ಲಿದ್ದ ರಾಷ್ಟ್ರೀಯ ಆರೋಗ್ಯ ಮಿಷನ್‌ನ ಕಬ್ಬಿಣ ಮತ್ತು ಫೋಲಿಕ್ ಆಸಿಡ್ ಸಪ್ಲಿಮೆಂಟೇಶನ್(WIFS) ಕಾರ್ಯಕ್ರಮದ ಭಾಗವಾಗಿ ಮಕ್ಕಳಿಗೆ ನೀಡಬೇಕಾದ ಮಾತ್ರೆಗಳ ಪ್ಯಾಕೇಟ್ ತೆಗೆದುಕೊಂಡಿದ್ದಾರೆ. ನಂತರ ಸ್ನೇಹಿತರ ನಡುವೆ ಬೆಟ್ಟಿಂಗ್ ಕಟ್ಟಿದ ಪರಿಣಾಮ ಫಾತಿಮಾ ಸೇರಿದಂತೆ ಶಾಲೆಯ ನಾಲ್ವರು ವಿದ್ಯಾರ್ಥಿಗಳು ಸೋಮವಾರ ಮಾತ್ರೆ ಸೇವಿಸಿದ್ದು, ಫಾತಿಮಾ ಹೆಚ್ಚು ಮಾತ್ರೆ ತೆಗೆದುಕೊಂಡಿದ್ದಳು ಎನ್ನಲಾಗಿದೆ.

ಕೊನೆಗೆ ಯಾರು ಹೆಚ್ಚು ಮಾತ್ರೆ ತೆಗೆದುಕೊಳ್ಳುತ್ತಾರೆ ಎಂದು ವಿದ್ಯಾರ್ಥಿಗಳ ನಡುವೆ ಪೈಪೋಟಿ ನಡೆದು ಫಾತಿಮಾ ಸುಮಾರು 45 ಮಾತ್ರೆಗಳನ್ನು ಸೇವಿಸಿದರೆ, ಅವಳೊಂದಿಗೆ ಇದ್ದ ಇತರ ಮೂವರು ಹುಡುಗಿಯರು ಮತ್ತು ಇಬ್ಬರು ಹುಡುಗರು ತಲಾ ಕನಿಷ್ಠ 10 ಮಾತ್ರೆಗಳನ್ನು ಸೇವಿಸಿದ್ದಾರೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.

CMCH ಆಡಳಿತದ ಪ್ರಕಾರ, ಫಾತಿಮಾಗೆ ಗಂಭೀರವಾದ ಯಕೃತ್ತು ಹಾನಿಯಾಗಿದೆ ಮತ್ತು ತಕ್ಷಣವೇ ಯಕೃತ್ತಿನ ಕಸಿ ಅಗತ್ಯವಿದೆ ಎಂದು ನಿರ್ಧರಿಸಿದ ನಂತರ ಚೆನ್ನೈನ ಸ್ಟಾನ್ಲಿ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಯಿತು.
ಆಕೆಯನ್ನು ಸೇಲಂನ ಸರ್ಕಾರಿ ಮೋಹನ್ ಕುಮಾರಮಂಗಲಂ ವೈದ್ಯಕೀಯ ಕಾಲೇಜಿಗೆ ಸಾಗಿಸಲಾಯಿತು, ಆದರೆ ಅಲ್ಲಿ ಆಕೆಯ ಆರೋಗ್ಯ ಹದಗೆಟ್ಟಿದ್ದರಿಂದ, ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು.

ಇದೀಗ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಮಾತ್ರೆ ವಿತರಣೆಯ ಉಸ್ತುವಾರಿ ವಹಿಸಿರುವ ಶಿಕ್ಷಕರನ್ನು ಶಾಲಾ ಶಿಕ್ಷಣ ಇಲಾಖೆಯು ಅಮಾನತುಗೊಳಿಸಿದ್ದು, ಇದೊಂದು ಶಿಕ್ಷಕರ ಬೇಜವಾಬ್ದಾರಿಯಿಂದ ನಡೆದ ಘಟನೆ ಆಗಿದ್ದು, ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ : ಲೈವ್ ಕಾಮೆಂಟರಿಯಲ್ಲಿ ಕ್ರಿಕೆಟಿಗನ ಪತ್ನಿಯ ಮೇಲೊಂದು ರೊಮ್ಯಾಂಟಿಕ್ ಮಾತು ಆಡಿದ ಕಾಮೆಂಟೇಟರ್!!!

Leave A Reply

Your email address will not be published.