FD: ಎಫ್‌ಡಿ ಮೇಲಿನ ಬಡ್ಡಿದರ ಹೆಚ್ಚಿಸಿದ ಖಾಸಗಿ ಬ್ಯಾಂಕುಗಳು!

FD: ಪ್ರತಿಯೊಬ್ಬರು ಜೀವನಾಧಾರಕ್ಕೆ ಬ್ಯಾಂಕ್ ಗಳಲ್ಲಿ ಹೂಡಿಕೆ ಮಾಡುತ್ತಾರೆ. ಮುಂದೆ ಆರ್ಥಿಕ ಸಮಸ್ಯೆಯನ್ನು ನಿವಾರಿಸಲು ನೆರವಾಗುತ್ತವೆ ಎಂದು. ಸದ್ಯ ಕೆಲವು ಬ್ಯಾಂಕ್ ಗಳು FD ಬಡ್ಡಿದರ ಏರಿಸಿದೆ. ಹಾಗೆಯೇ ಇತ್ತೀಚೆಗೆ ದೇಶದ ಅತೀ ದೊಡ್ಡ ಖಾಸಗಿ ಬ್ಯಾಂಕ್ (bank) ಎಂದೆನೆಸಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ನಾಲ್ಕನೇ ಅತೀ ದೊಡ್ಡ ಖಾಸಗಿ ಬ್ಯಾಂಕ್ ಕೋಟಕ್ ಮಹೀಂದ್ರಾ (kotak mahindra bank) ಫಿಕ್ಸಿಡ್ ಡೆಪಾಸಿಟ್ (FD) ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ (intrest rate hike).

 

ಎಚ್‌ಡಿಎಫ್‌ಸಿ ಬ್ಯಾಂಕ್: HDFC bank 2ರಿಂದ 5 ಕೋಟಿ ರೂಪಾಯಿ ಎಫ್‌ಡಿ ಮೇಲಿನ ಬಡ್ಡಿದರ ಏರಿಸಿದ್ದು, ಸಾಮಾನ್ಯ ನಾಗರಿಕರಿಗೆ ವಾರ್ಷಿಕ ಎಫ್‌ಡಿ ಬಡ್ಡಿದರ ಶೇಕಡ 4.75ರಿಂದ ಶೇಕಡ 7.00ರ ನಡುವೆ ಇರಲಿದೆ. ಹಾಗೆಯೇ ಎಚ್‌ಡಿಎಫ್‌ಸಿ ಬ್ಯಾಂಕ್ ನಲ್ಲಿ ಹಿರಿಯ ನಾಗರಿಕರಿಗೆ ಶೇ.5.25ರಿಂದ ಶೇ. 7.75 ರಷ್ಟು ಬಡ್ಡಿದರ ಇದೆ.

ಕೋಟಕ್ ಮಹೀಂದ್ರಾ ಬ್ಯಾಂಕ್: ಈ ಬ್ಯಾಂಕ್ 180 ದಿನಗಳ ಸ್ಥಳೀಯ ಟರ್ಮ್ FD ಬಡ್ಡಿದರ 50 ಮೂಲಾಂಕ ಅಥವಾ ಶೇಕಡ 6ರಿಂದ ಶೇಕಡ 6.50ಕ್ಕೆ ಏರಿಕೆ ಮಾಡಿದೆ. ಹಿರಿಯ ನಾಗರಿಕರು ಹೆಚ್ಚುವರಿ 50 ಬಿಪಿಎಸ್ ಪಡೆಯಬಹುದಾಗಿದ್ದು, ಶೇ.7ರವರೆಗೆ ಬಡ್ಡಿದರ ಇರುತ್ತದೆ.

ಈ ಹಿಂದೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹಣದುಬ್ಬರವನ್ನು ಎದುರಿಸುವ ಸಲುವಾಗಿ ಹಲವಾರು ಬಾರಿ ರೆಪೋ ದರವನ್ನು (repo rate) ಹೆಚ್ಚಿಸಿದ್ದು, ಇದರ ಪರಿಣಾಮ ಹಲವು ಪ್ರಮುಖ ಬ್ಯಾಂಕ್ ಗಳು ಎಫ್‌ಡಿ ಮಾತ್ರವಲ್ಲದೆ ಸಾಲದ ಬಡ್ಡಿದರ ಏರಿಸಿದೆ. ಎಸ್‌ಬಿಐ (Sbi), ಐಸಿಐಸಿಐ ಬ್ಯಾಂಕ್ (ICICI bank), ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank),
ಹೀಗೆ ಹಲವು ಪ್ರಮುಖ ಬ್ಯಾಂಕ್ ಎಫ್‌ಡಿ ಬಡ್ಡಿದರ ಹೆಚ್ಚಿಸಿದೆ.

ಇನ್ನು ಈ ವರ್ಷದ ಅಂತ್ಯದ ವೇಳೆಗೆ ಎಫ್‌ಡಿ ಬಡ್ಡಿದರ ಭಾರೀ ಹೆಚ್ಚಳವಾಗುವ ನಿರೀಕ್ಷೆಯಿದೆ. ಆದರೆ ಮುಂದಿನ ವರ್ಷ ಎಫ್‌ಡಿ ಬಡ್ಡಿದರ ಇಳಿಕೆಯಾಗಬಹುದು. ಆದರೆ ಹೆಚ್ಚು ಕಾಲ ಇಳಿಕೆಯಾಗುವ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ.

ಇದನ್ನೂ ಓದಿ :Grow Money : FD, Insurance ಗಿಂತ ರಿಸ್ಕ್ ಇಲ್ಲದ ಹೂಡಿಕೆಗಳು ಇವು!

Leave A Reply

Your email address will not be published.