Saif Ali Khan : ʼಸಣ್ಣ ಹುಡುಗಿಯರನ್ನ ಮದುವೆ ಮಾಡ್ಕೊಳ್ಳಿ, ಲೈಫ್‌ ಮಜ ಇರುತ್ತೆʼ ಸೈಫ್‌ ಆಲಿಖಾನ್‌ ಹೇಳಿಕೆ!!!

Saif Ali Khan: ಬಾಲಿವುಡ್’ನ  ಹಾಟೆಸ್ಟ್ ಜೋಡಿ ಎಂದೇ ಪ್ರಖ್ಯಾತಿ ಪಡೆದಿರುವ ಸೈಫ್ ಅಲಿ ಖಾನ್( Saif Ali Khan ) ಮತ್ತು ಕರೀನಾ ಕಪೂರ್ (Kareena Kapoor)ತಮ್ಮ ಮದುವೆಯಿಂದ ಹಿಡಿದು ಇಲ್ಲಿಯವರೆಗೂ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿರೋದು ಕಾಮನ್ ಸಂಗತಿ. ಸೆಲೆಬ್ರಿಟಿ ಎಂದ ಮೇಲೆ ಕೇಳಬೇಕಾ? ಮನೆಯಿಂದ ಹೊರ ಕಾಲಿಡುತ್ತಿದ್ದಂತೆ ನೂರಾರು ಕ್ಯಾಮರಾ ಕಣ್ಣುಗಳು ಇವರನ್ನ ಫೋಕಸ್ ಮಾಡುತ್ತಾ ಇರುತ್ತದೆ. ಅದರಲ್ಲಿಯೂ ಸೈಫ್ ಅಲಿ ಖಾನ್ ತಮ್ಮ ಮೊದಲನೇ ಮದುವೆ ವೇಳೆ” ಮಗಳೇ”ಎಂದು ಸಂಭೋದಿಸಿದ ಹುಡುಗಿಯನ್ನೇ ಎರಡನೇ ಮದುವೆಯಾಗಿದ್ದು ಎಂಬ ವಿಚಾರ ಹೆಚ್ಚಿನವರಿಗೆ ತಿಳಿದಿಲ್ಲ.

 

1991 ರಲ್ಲಿ ಸೈಫ್ ಮತ್ತು ಅಮೃತಾ ಯಾರಿಗೂ ತಿಳಿಸದೆ ಗುಪ್ತ್ ಗುಪ್ತ್ ಮೀಟಿಂಗ್ ಮಾಡುತ್ತಿದ್ದವರು ಕದ್ದು ಮುಚ್ಚಿ ಮದುವೆ ಕೂಡ ಆಗಿ, ಈ ಮದ್ವೆಗೆ ಮನೆಯವರು ವಿರೋಧ ವ್ಯಕ್ತಪಡಿಸಿ ಕೊನೆಗೂ ಗ್ರೀನ್ ಸಿಗ್ನಲ್ ಸಿಕ್ಕ ಬಳಿಕ ಗ್ರಾಂಡ್ ಆಗಿ ಮದುವೆ ಫಂಕ್ಷನ್ ಮಾಡಲಾಗಿತ್ತಂತೆ. ಸೈಫ್ ಅಮೃತಾ ಅವರನ್ನು ಮದುವೆಯಾದಾಗ( Marriage)ಅಮೃತಾಗೆ 32 ವರ್ಷವಾಗಿದ್ದರೆ ಸೈಫ್ ಕೇವಲ 20 ವರ್ಷ ಹರೆಯದವರಾಗಿದ್ದರು. ಈ ಮದುವೆಗೆ ಕರೀನಾ ಕೂಡ ಆಗಮಿಸಿದ್ದರಂತೆ. ಮದುವೆಗೆ ಬಂದಿದ್ದ ಕರೀನಾ ಅವರನ್ನು ಕಂಡು ಮಗಳೇ ಎಂದು ಕರೆದಿದ್ದ ಸೈಫ್ ಮುಂದೊಂದು ದಿನ ಆಕೆಯನ್ನೆ ಕೈ ಹಿಡಿಯುವ ದಿನ ಬರುವುದೆಂದು ಊಹಿಸಿದ್ದರೋ ತಿಳಿಯದು.

ಅಮೃತಾ ಸಿಂಗ್ ಜೊತೆ ಮದುವೆಯಾಗಿ 13 ವರ್ಷಗಳ ದಾಂಪತ್ಯ ಜೀವನ ನಡೆಸಿ ಇಬ್ಬರು ಮುದ್ದಾದ ಮಕ್ಕಳಿದ್ದರೂ ಕೂಡ ಸೈಫ್ ಅಮೃತಾ ಸಿಂಗ್ ಅವ್ರಿಗೆ ವಿಚ್ಛೇದನ(Divorce) ನೀಡಿ 2012ರಲ್ಲಿ ಕರೀನಾ ಕಪೂರ್ ಅವರ ಜೊತೆಗೆ ಸಪ್ತಪದಿ ತುಳಿಯುತ್ತಾರೆ. ಇನ್ನು ಸೈಫ್ ಅಲಿ ಖಾನ್(Saif Ali Khan) ಕರೀನಾ ಕಪೂರ್ (Kareena Kapoor) ಮದುವೆಯಾದ ಸಂದರ್ಭದಲ್ಲಿ ಎಲ್ಲರ ಟೀಕೆಗೆ ಗುರಿಯಾಗಿದ್ದರು.

ಈ ನಡುವೆ ಕರೀನಾ ಮತ್ತು ಸೈಫ್ ಡೇಟಿಂಗ್ ಬಗ್ಗೆ ಗುಸು ಗುಸು ಕೇಳಿ ಬರುತ್ತಿತ್ತು. ಸೈಫ್ ಅಲಿ ಖಾನ್ ಕರೀನಾ ಅವರಿಗೆ ಎರಡು ಬಾರಿ ಪ್ರೊಪೋಸ್ ಕೂಡ ಮಾಡಿದ್ದಾರಂತೆ. ಆಗ ಇದನ್ನು ಕರೀನಾ ಕಪೂರ್ ರಿಜೆಕ್ಟ್ (Reject) ಮಾಡಿದ್ದು, ಆದರೆ ಸೈಫ್ ಅಲಿ ಖಾನ್ ಕೊನೆಗೂ ಕರೀನಾ ಅವರ ಮನವೊಲಿಸಿ ತಮ್ಮ ಪ್ರೇಮಕಥೆ (Love Story) ಗ್ರೀನ್ ಸಿಗ್ನಲ್ ಪಡೆದುಕೊಂಡೇ ಬಿಟ್ಟರು. ಲ್ಯಾಕ್ಮೆ ಫ್ಯಾಷನ್ ವೀಕ್ನಲ್ಲಿ ಕರೀನಾ ಮತ್ತು ಸೈಫ್ ಜೊತೆ ಜೊತೆಯಲಿ ಜೊತೆಯಾಗಿ ಕಾಣಿಸಿಕೊಂಡು ತಮ್ಮ ಬಗ್ಗೆ ಹರಿದಾಡುತ್ತಿದ್ದ ಸುದ್ದಿಗೆ ಇಂಬು ನೀಡಲು ಅವಕಾಶ ಕಲ್ಪಿಸಿಕೊಟ್ಟರು.

ಈ ಬಳಿಕ ಇಬ್ಬರ ನಡುವಿನ ಸಂಬಂಧದ ಸುದ್ದಿ ಅಧಿಕೃತವಾಯಿತು.ಕರೀನಾ ಮತ್ತು ಸೈಫ್ ಲಿವ್-ಇನ್-ರಿಲೇಶನ್’ಶಿಪ್ ನಲ್ಲಿ ವಾಸಿಸುತ್ತಿದ್ದರು ಅಂತ ಕೂಡ ಸುದ್ದಿಯಾಗಿತ್ತು. ಜನರು ಮಾತ್ರ ಈ ಜೋಡಿಯ ಕಾಲೆಳೆಯಲು ದೊರೆತ ಅವಕಾಶವನ್ನು ಯಾವತ್ತೂ ಮಿಸ್ ಮಾಡಿಕೊಳ್ಳುತ್ತಿರಲಿಲ್ಲ. ಎಷ್ಟರಮಟ್ಟಿಗೆ ಜನರು ಈ ಜೋಡಿಯ ಕಾಲೆಳೆಯಿತ್ತಿದ್ದರೆಂದರೆ ಈ ಲವ್ ಬರ್ಡ್ಸ್ ಗಳನ್ನೂ ಅಂಕಲ್- ಹುಡುಗಿ ಲವ್ ಸ್ಟೋರಿ ಎಂಬ ನೇಮ್ ಕೊಟ್ಟು ಬಿಟ್ಟಿದ್ದರು ಪಡ್ಡೆ ಹೈಕಳು. ಇನ್ನೂ ಸೈಫ್ ಅಲಿ ಖಾನ್ 1970ರಲ್ಲಿ ಜನಿಸಿದರೆ, ಕರೀನಾ ಕಪೂರ್ ಅವರ ನಡುವೆ 10 ವರ್ಷಗಳ (Age Gap) ಅಂತರವಿತ್ತು. ಕರೀನಾ ಜನಿಸಿದ್ದು 1980ರಲ್ಲಿ. ಹೀಗಾಗಿ ಟೀಕೆ, ಟ್ರೊಲ್ ಗಳು ಈ ಜೋಡಿಗೆ ಸಾಮಾನ್ಯವಾಗಿತ್ತು. ಅಷ್ಟೆ ಅಲ್ಲದೇ, ಸೈಫ್ ಎಲ್ಲರಿಗೂ ಚಿಕ್ಕ ವಯಸ್ಸಿನ ಹುಡುಗಿಯರನ್ನು ಮದುವೆ ಮಾಡಿಕೊಳ್ಳಿ ಎಂಬ ಟಿಪ್ಸ್ (Tips) ಕೂಡ ನೀಡಿದ್ದರಂತೆ. ಸೈಫ್ ಅಲಿ ಖಾನ್ ಈ ರೀತಿ ಸಲಹೆ ನೀಡಿದ್ದಕ್ಕೆ ಇಂಟರೆಸ್ಟಿಂಗ್ (Intresting) ಕಾರಣ ಕೂಡ ಇದೆ.

ಕೆಲ ವರ್ಷಗಳ ಹಿಂದಿನ ಕಥೆಯಿದು. ಸೈಫ್ ‘ ಮಹಿಳೆಯರು ಬೇಗ ಮೆಚ್ಯುರ್ ಆಗುತ್ತಾರೆ ಎಂದಿದ್ದು, ಜೊತೆಗೆ ಪುರುಷರು ತಡವಾಗಿ ಮೆಚ್ಯೂರ್ ಆಗುತ್ತಾರೆ. ಪ್ರತಿಯೊಬ್ಬ ಗಂಡಸಿಗೂ ಕೂಡ ನಾನೊಂದು ಸಲಹೆ ನೀಡುವೆ. ಚಿಕ್ಕ ವಯಸ್ಸಿನ ಹುಡುಗಿಯರನ್ನು ಮದುವೆ ಮಾಡಿಕೊಳ್ಳಿ ಯಾಕಂದ್ರೆ, ಅವರು ನೋಡಲು ಸುಂದರವಾಗಿ (Beautiful) ಆಗಿರುವುದು ಮಾತ್ರವಲ್ಲ ವಿಶೇಷವಾಗಿ ಹೆಚ್ಚು ಬುದ್ದಿವಂತರಾಗಿರುತ್ತಾರೆ (Brilliant) ಎಂದು ಸಂದರ್ಶನ( Interview)ಒಂದರಲ್ಲಿ ಸೈಫ್ ಹೇಳಿಕೊಂಡಿದ್ದರಂತೆ. ಇದೆ ವೇಳೆ, ಸೈಫ್ ‘ಕರೀನಾಳಿಂದ ನನ್ನ ಲೈಫ್(Life) ಬ್ಯೂಟಿಫುಲ್ (Beautiful) ಆಗಿದೆ’. ಕರೀನಾಳನ್ನು ಮದುವೆ ಮಾಡಿಕೊಂಡು ಜೀವನದ ಅಮೂಲ್ಯ ಕ್ಷಣಗಳನ್ನು (Best Moments) ಎಂಜಾಯ್ ಮಾಡುತ್ತಿರುವ ಬಗ್ಗೆ ಮೆಚ್ಚುಗೆಯ ಜೊತೆಗೆ ಸೈಫ್ ಕರೀನಾ ಬಗ್ಗೆ ಹೆಮ್ಮೆಯ ನುಡಿಗಳನ್ನು ಆಡಿದ್ದರು. ಆದರೆ, ಇದಕ್ಕೆ ಕರೀನಾ ತದ್ವಿರುದ್ದ ಪ್ರತಿಕ್ರಿಯೆ ನೀಡಿದ್ದರಂತೆ.

ಹೌದು!!!ಸೈಫ್ ಅಲಿ ಖಾನ್ ನನಗಿಂತ 10 ವರ್ಷ ದೊಡ್ಡವರು ಹೀಗಾಗಿ ಪರ್ವಾಗಿಲ್ಲ. ಆದರೆ , ಅದೇ 10ಕ್ಕೂ ಹೆಚ್ಚು ವರ್ಷದ ಬಾಳ ಸಂಗಾತಿಯ ಕೈ ಹಿಡಿದರೆ ಜೀವನದಲ್ಲಿ ಇಂಟ್ರೆಸ್ಟ್ ಇರುವುದಿಲ್ಲ ಎಂಬ ಹೇಳಿಕೆ ನೀಡಿದ್ದರು. ಅಷ್ಟೆ ಅಲ್ಲದೇ, ಹಲವು ವರ್ಷಗಳ ಓಲ್ಡರ್ ಮೆನ್ ಜೊತೆ ಸಿನಿಮಾ ಮಾಡುವುದಿಲ್ಲ ಅವರನ್ನು ಪ್ರೀತಿಸುವುದಿಲ್ಲ ಎಂದು ಹೇಳಿಕೊಂಡೆ ಸೈಫ್ ಅವರ ಜೊತೆ ಸಪ್ತಪದಿ ತುಳಿದಿದ್ದಾರೆ. ಏನೇ ಆದರೂ ಈ ಜೋಡಿ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಸಾಕಷ್ಟು ಟ್ರೋಲ್ಗಳು ಅವಮಾನಗಳನ್ನು ಎದುರಿಸಿದಂತು ಸುಳ್ಳಲ್ಲ.

 

ಇದನ್ನೂ ಓದಿ  :H3N2 Virus : ಕರ್ನಾಟಕದಲ್ಲಿ ಮತ್ತೊಂದು ವೈರಸ್‌ ಹೆಚ್‌3ಎನ್‌2 ಗೆ ಮೊದಲ ಸಾವು!

Leave A Reply

Your email address will not be published.