Pavitra Lokesh : ನಟಿ ಪವಿತ್ರಾ ಲೋಕೇಶ್ ಜೊತೆ ಸಪ್ತಪದಿ ತುಳಿದ ನರೇಶ್‌! ಜೋಡಿ ಹಕ್ಕಿಗಳಿಗೆ ಸಖತ್‌ ವಿಶ್‌!!!

Pavitra Lokesh: ಹೊಸ ವರ್ಷದ ಹೊಸ್ತಿಲಲ್ಲಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದ ನಟಿ ಪವಿತ್ರಾ ಲೋಕೇಶ್( Pavitra Lokesh)ಹಾಗೂ ಹಿರಿಯ ನಟ ನರೇಶ್ ಲಿಪ್ ಲಾಕ್ ಮಾಡುವ ವೀಡಿಯೋ ಶೇರ್ ಮಾಡಿ ಸಪ್ತಪದಿ ತುಳಿಯುವ ಬಗ್ಗೆ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದರು. ಇದೀಗ ಈ ಲವ್ ಕಪಲ್ ಮದುವೆಯಾಗಿ ಹೊಸ ಜೀವನಕ್ಕೆ ಮುನ್ನುಡಿ ಬರೆದಿದ್ದಾರೆ.

 

ಇತ್ತೀಚಿನ ದಿನಗಳಲ್ಲಿ ಟ್ರೋಲಿಂಗ್ ವಿಷಯವಾಗಿ ಮಾರ್ಪಟ್ಟಿದ್ದ ಜೋಡಿ ನಟಿ ಪವಿತ್ರಾ ಲೋಕೇಶ್ ಹಾಗೂ ಹಿರಿಯ ನಟ ನರೇಶ್ ಅವರ ಸಂಬಂಧದ ಬಗ್ಗೆ ದಿನಕ್ಕೊಂದು ಕಥೆ ಕೇಳಿ ಬರುತ್ತಿದ್ದವು. ಇವರಿಬ್ಬರು ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿ( Live In Relationship) ಇದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದವು. ಮಾಧ್ಯಮಗಳಲ್ಲಿ ವಿಭಿನ್ನ ಕಥೆಗಳು ಹರಿದಾಡುತ್ತಿರುವ ಬೆನ್ನಲ್ಲೆ ಪವಿತ್ರಾ ಅವರನ್ನು ನಾಲ್ಕನೇ ಮದುವೆಯಾಗಲು(Naresh Babu And Pavitra Lokesh Marriage) ನರೇಶ್ ರೆಡಿಯಾಗಿದ್ದಾರೆ ಎಂಬ ಗಾಳಿ ಸುದ್ದಿ (gossips) ಎಲ್ಲೆಡೆ ಸಂಚಲನ ಮೂಡಿಸಿದ ಬಳಿಕ ಇಬ್ಬರು ಲಿಪ್ ಲಾಕ್ ಮಾಡುವ ವೀಡಿಯೋ ಶೇರ್ ಮಾಡಿ ಮದುವೆಯ ಬಗ್ಗೆ ಇದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದರು. ಈ ಜೋಡಿ ಇದೀಗ ಮದುವೆಯಾಗಿ ಹೊಸ ಜೀವನಕ್ಕೆ ನಾಂದಿ ಹಾಡಲೂ ಮುಂದಾಗಿದ್ದಾರೆ.

ಪವಿತ್ರಾ ಲೋಕೇಶ್ ಹಾಗೂ ನರೇಶ್ (Naresh Babu) ಮಧ್ಯೆ ಪ್ರೀತಿ (Love)ಚಿಗುರಿ ದೊಡ್ದ ಮಟ್ಟದ ಸುದ್ದಿಯಾಗಿ ಈ ವಿಚಾರದಲ್ಲಿ ನರೇಶ್ ಮತ್ತು ಅವರ ಪತ್ನಿ ರಮ್ಯಾ ನಡುವೆ ವಾಗ್ವಾದ ವಾಕ್ ಸಮರ ನಡೆದು ಇನ್ನೇನೂ ಕಥೆ ಅಂತ್ಯವಾಯಿತು ಅನ್ನುವಾಗ ನರೇಶ್ ಪವಿತ್ರಾಗೆ ಕಿಸ್ ಮಾಡುತ್ತಿರುವ( Naresh Pavitra Kissing Video) ವಿಡಿಯೋ ಹಂಚಿಕೊಂಡಿದ್ದರು. ಈಗ ಈ ಜೋಡಿ ಮದುವೆಯ( Marriage)ವಿಡಿಯೋ ಪೋಸ್ಟ್ ಮಾಡಿದ್ದು, ಪವಿತ್ರಾ ಲೋಕೇಶ್ ಜೊತೆ ಸಪ್ತಪದಿ ತುಳಿದ ವಿಡಿಯೋವನ್ನೂ( Naresh Babu And Pavitra Lokesh Marriage video)ನರೇಶ್ ಅವರೇ ಖುದ್ದಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಿನಿ ತಾರೆಯರು ನವ ದಂಪತಿಗಳಿಗೆ ಶುಭ ಕಾಮನೆಗಳನ್ನೂ ತಿಳಿಸುತ್ತಿದ್ದಾರೆ. ಸದ್ಯ ಈ ವೀಡಿಯೋ ವೈರಲ್ (Video Viral) ಆಗಿದ್ದು, ಅಭಿಮಾನಿಗಳು ತರಹೇವಾರಿ ಕಾಮೆಂಟ್ (Comments) ಮಾಡುತ್ತಿದ್ದು, ಕೆಲವು ಅಭಿಮಾನಿಗಳು ಈ ಲವ್ ಬರ್ಡ್ಸ್ ಗೆ ಶುಭ ವಾಗಲಿ ಎಂದು ಹಾರೈಸಿದರೆ ಮತ್ತೆ ಕೆಲವರು ಕಾಲೆಳೆಯುವ ಪ್ರಯತ್ನ ನಡೆಸಿದ್ದಾರೆ.

https://twitter.com/ItsActorNaresh/status/1634070240366850049?ref_src=twsrc%5Etfw%7Ctwcamp%5Etweetembed%7Ctwterm%5E1634070240366850049%7Ctwgr%5E16c39e96c6873071f68a40d14c1d1464de43de4c%7Ctwcon%5Es1_c10&ref_url=https%3A%2F%2Ftv9kannada.com%2Fentertainment%2Ftelugu-actor-naresh-babu-and-pavitra-lokesh-get-married-actor-shares-video-rmd-au34-533976.html

Leave A Reply

Your email address will not be published.