Karnataka Weather Updates: ಏರುತ್ತಿರುವ ಉಷ್ಣಾಂಶದ ಮಧ್ಯೆ ಮಳೆಯ ವಾತಾವರಣ! ಕರಾವಳಿಗರಿಗೆ ತಟ್ಟಲಿದೆ ಬಿಸಿಗಾಳಿ!!! ಎಚ್ಚರಿಕೆಯ ಸಂದೇಶ

Karnataka Weather Updates: ಇತ್ತೀಚೆಗೆ ಬೆಳಗ್ಗೆ ಎದ್ದಾಗ ಚುಮು ಚುಮು ಚಳಿಯ ವಾತಾವರಣ , 10ಗಂಟೆ ದಾಟುತ್ತಿದ್ದಂತೆ ರಣ ಬಿಸಿಲಿನ ಬೇಗೆಗೆ ಜನರು ತತ್ತರಿಸಿ ಹೋಗುತ್ತಿದ್ದಾರೆ. ಅದರಲ್ಲಿಯೂ ಕರಾವಳಿಯ ಜನತೆಯ ಪಾಡು ಹೇಳುವುದೇ ಬೇಡ. ಆದರೆ, ಒಂದೆಡೆ ಕರಾವಳಿಯ ಜನತೆ ಬಿಸಿಲಿನ ಝಳಕ್ಕೆ ಹೈರಾಣಾಗಿದ್ದರೆ ಬೆಂಗಳೂರು ಮತ್ತೆ ಕೆಲ ಕಡೆಗಳಲ್ಲಿ ಕಳೆದ ಎರಡು ಮೂರು ದಿನಗಳಿಂದ ಬೆಳಗ್ಗೆ ಮತ್ತು ರಾತ್ರಿ ತಂಪು ವಾತಾವರಣದ ಮೋಡ ಕವಿದ ವಾತಾವರಣ (Weather)ಕಂಡುಬರುತ್ತಿದೆ.

 

ಹವಾಮಾನ ಇಲಾಖೆ( Karnataka Weather Updates)ಮುಂದಿನ 48 ಗಂಟೆಗಳಲ್ಲಿ ಕರಾವಳಿ ಕರ್ನಾಟಕ ಭಾಗಗಳಲ್ಲಿ ಉಷ್ಣಗಾಳಿ(Heatwave) ಬೀಸಲಿದೆ ಎಂದು ಎಚ್ಚರಿಕೆ ನೀಡಿದೆ. ಕರಾವಳಿ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 5.1ಡಿಗ್ರಿ ಸೆಲ್ಸಿಯಸ್​ಗಿಂತಲೂ ಹೆಚ್ಚಾಗಿದ್ದು, ಪಣಂಬೂರಿನಲ್ಲಿ 38.8 ಡಿಗ್ರಿ ಸೆಲ್ಸಿಯಸ್​ ಅತಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ.ದೇಶದಲ್ಲೇ ಮಂಗಳೂರು ನಗರದಲ್ಲಿ ಗರಿಷ್ಠ ತಾಪಮಾನ ಕಂಡುಬಂದಿದ್ದು, ಮಾರ್ಚ್ 8ರಂದು ಕರ್ನಾಟಕದ (Karnataka) ಕರಾವಳಿ ನಗರದಲ್ಲಿ ಬರೋಬ್ಬರಿ 38.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾದ ಬಗ್ಗೆ ವರದಿಯಾಗಿದೆ. ಇದರ ಜೊತೆಗೆ ಇನ್ನೂ ಮುಂದಿನ ದಿನಗಳಲ್ಲಿ ಸುಮಾರು ಎರಡರಿಂದ ಮೂರು ಡಿಗ್ರಿಗಳಷ್ಟು ಉಷ್ಣಾಂಶ ಹೆಚ್ಚಾಗುವ ಸಾಧ್ಯತೆಯಿದೆ ಎಂದು IMD ಎಚ್ಚರಿಕೆ ನೀಡಿದೆ

ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಅನುಸಾರ, ಎಲ್ಲೆಡೆ ಮೋಡ ಕವಿದ ವಾತಾವರಣ ಸೃಷ್ಟಿಯಾಗಲಿದೆ. ಇಂದಿನಿಂದ ಮಾರ್ಚ್ 9-12ರವರೆಗೆ ದೇಶದ ವಿವಿಧೆಡೆ ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ಶುಕ್ರವಾರ ಮಾರ್ಚ್ 10ರಂದು ದೆಹಲಿಯಲ್ಲಿ( Delhi) ಕೂಡ ಕೆಲವು ಕಡೆಗಳಲ್ಲಿ ಹಗುರು ಮಳೆಯಾಗುವ( Rain)ಸಾಧ್ಯತೆ ದಟ್ಟವಾಗಿದೆ. ಅಸ್ಸಾಂ(Assam), ಅರುಣಾಚಲ ಪ್ರದೇಶ, ಮೇಘಾಲಯ ರಾಜ್ಯಗಳಲ್ಲಿ ಲಘು ಮಳೆ ಇಲ್ಲವೇ ಗುಡುಗು ಸಹಿತ ಹಗುರ ಮಳೆಯಾಗುವ ಸಾಧ್ಯತೆ ಇದೆ. ಹಿಮಾಚಲ ಪ್ರದೇಶ, ಉತ್ತರಾಖಂಡ, ದಕ್ಷಿಣ ಹರ್ಯಾಣ, ರಾಜಸ್ಥಾನ, ಪಶ್ಚಿಮ ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಸಿಕ್ಕಿಂ ಇನ್ನಿತರ ರಾಜ್ಯಗಳಲ್ಲಿ ಮೋಡ ಮುಸುಕಿದ ಹವಾಮಾನ ಹಾಗೂ ಲಘು ಮಳೆಯಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Leave A Reply

Your email address will not be published.