Karnataka Second Puc : ಕರ್ನಾಟಕ ಸೆಕೆಂಡ್ ಪಿಯುಸಿ ರಿಸಲ್ಟ್ ದಿನಾಂಕ ಘೋಷಿಸಿದ ಶಿಕ್ಷಣ ಸಚಿವರು!
Karnataka Second Puc: ಈಗಾಗಲೇ ಕರ್ನಾಟಕ (Karnataka )ಪದವಿ ಪೂರ್ವ ಶಿಕ್ಷಣ ಇಲಾಖೆಯು 2023 ಮಾರ್ಚ್ 9ರಿಂದ ದ್ವಿತೀಯ ಪಿಯುಸಿ ಪರೀಕ್ಷೆ (2nd PUC Exam) ಆರಂಭಿಸಿದ್ದು, ಮಾರ್ಚ್ 29 ರವರೆಗೆ ಪರೀಕ್ಷೆಗಳು ನಡೆಯಲಿದೆ.
ಸದ್ಯ ಮೊದಲ ದಿನದ ಪರೀಕ್ಷೆಗೆ 23,771 ಅಭ್ಯರ್ಥಿಗಳು ಗೈರಾಗಿದ್ದು, ನಕಲು ಮಾಡಲು ಯತ್ನಿಸಿದ ಇಬ್ಬರು ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿದೆ. ಮೊದಲ ದಿನದಂದು ಕನ್ನಡ ಮತ್ತು ಅರೇಬಿಕ್ ವಿಷಯದ ಪರೀಕ್ಷೆಗಳಿದ್ದವು. ಈ ಪರೀಕ್ಷೆಗೆ ಒಟ್ಟು 5,33,797 ವಿದ್ಯಾರ್ಥಿಗಳು ರಿಜಿಸ್ಟ್ರೇಷನ್ ಪಡೆದಿದ್ದರು ಎಂಬ ಮಾಹಿತಿ ದೊರೆತಿದೆ.
ಅಂತೆಯೇ, ಮಾರ್ಚ್ 09 ರಿಂದ ರಾಜ್ಯದಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗುತ್ತಿದ್ದಂತೆ ಫಲಿತಾಂಶ ದಿನಾಂಕದ ( Karnataka 2nd PUC Result Date) ಬಗ್ಗೆಯೂ ಪ್ರಶ್ನೆಗಳು ಹುಟ್ಟಿಕೊಂಡಿದ್ದು, ಈ ಕುರಿತು ಶಿಕ್ಷಣ ಸಚಿವರು ಉತ್ತರ ನೀಡಿದ್ದಾರೆ.
ಪ್ರಸ್ತುತ ಪರೀಕ್ಷೆ ಆರಂಭವಾದ ಬೆನ್ನಲ್ಲೇ ಈಗ ಫಲಿತಾಂಶ ದಿನಾಂಕದ ಬಗ್ಗೆ ಪೋಷಕರು, ವಿದ್ಯಾರ್ಥಿಗಳಲ್ಲಿ ಕುತೂಹಲ ಹೆಚ್ಚಿದ್ದು, ಈ ಹಿನ್ನೆಲೆಯಲ್ಲಿ ‘ಕರ್ನಾಟಕದ ಎಲ್ಲ ಭಾಗಗಳಲ್ಲೂ ಪೊಲೀಸ್ (Police) ಬಿಗಿ ಬಂದೋಬಸ್ತ್ ಜತೆಗೆ ದ್ವಿತೀಯ ಪಿಯುಸಿ ಪರೀಕ್ಷೆ (Second Puc Exam) ಸುಸೂತ್ರವಾಗಿ ನಡೆಯುತ್ತಿದೆ. ಇನ್ನು ಪರೀಕ್ಷೆಯ ಫಲಿತಾಂಶವನ್ನು ಮೇ (May) ಮೊದಲವಾರ ಪ್ರಕಟಿಸಲಾಗುವುದು’ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ (B.C.Nagesh) ಮಾಧ್ಯಮಕ್ಕೆ ತಿಳಿಸಿದ್ದಾರೆ.
ಸದ್ಯ ಮೇ ತಿಂಗಳ ಮೊದಲ ವಾರ ದ್ವಿತೀಯ ಪಿಯುಸಿ (Karnataka Second Puc) ಫಲಿತಾಂಶ ಬಿಡುಗಡೆ ಆಗಲಿದೆ ಎಂದಿರುವ ಸಚಿವರು ನಿರ್ಧಿಷ್ಟ ದಿನಾಂಕವನ್ನು ತಿಳಿಸಿಲ್ಲ. ಆದರೆ ಇಲಾಖೆಯು ಫಲಿತಾಂಶವನ್ನು ಈ ವೇಳೆಗೆ ಬಿಡುಗಡೆ ಮಾಡಲು ಎಲ್ಲ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಿದೆ. ಒಂದು ವೇಳೆ ಫಲಿತಾಂಶ (Result) ದಿನಾಂಕದಲ್ಲಿ ಆಡಳಿತ ಕಾರಣಗಳಿಂದ ಏರುಪೇರಾಗಬಹುದು ಎನ್ನಲಾಗಿದೆ.
ಅದಲ್ಲದೆ ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ (Second Puc Exam) ಹೊಸದಾಗಿ ಪರಿಚಯಿಸಲಾಗಿರುವ ಎಂಸಿಕ್ಯೂ (20 ಅಂಕಗಳ ಬಹು ಆಯ್ಕೆ ಪ್ರಶ್ನೆಗಳು) ನಿಂದಾಗಿ ವಿದ್ಯಾರ್ಥಿಗಳು ಧೈರ್ಯವಾಗಿ ಪರೀಕ್ಷೆ ಎದುರಿಸಲು ಸಹಕಾರಿಯಾಗಿದೆ.ಇನ್ನು ವಿದ್ಯಾರ್ಥಿಗಳ ಸಮಯ ಅಭಾವದ ಕೊರತೆ ನೀಗಿಸಲು ಇದರಿಂದ ಸಾಧ್ಯವಾಗಿದೆ.
ಅದಲ್ಲದೆ ಪ್ರತೀ ಕೇಂದ್ರದಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಸೀಲ್ ಕವರಿನಲ್ಲಿ ಪ್ರಶ್ನೆ ಪತ್ರಿಕೆ (question paper ) ಸರಬರಾಜು ಮಾಡಿದ್ದು ಮಕ್ಕಳ ಸಹಿ ಪಡೆದು ಕವರ್ ತೆರೆಯಲಾಗಿದೆ ಎಂದು ಸಚಿವರು ಈ ಮೂಲಕ ತಿಳಿಸಿದ್ದಾರೆ.