Grow Money : FD, Insurance ಗಿಂತ ರಿಸ್ಕ್ ಇಲ್ಲದ ಹೂಡಿಕೆಗಳು ಇವು!

Investment Ideas: ಪ್ರತಿಯೊಬ್ಬ ವ್ಯಕ್ತಿಯು ತನ್ನ ಭವಿಷ್ಯದ(Future) ಬಗ್ಗೆ ಚಿಂತಿಸುವುದಲ್ಲದೆ ಮುಂದೆ ಭವಿಷ್ಯದಲ್ಲಿ ಆರ್ಥಿಕವಾಗಿ ಯಾವುದೇ ಸಮಸ್ಯೆಯಾಗದಂತೆ ಹಾಗೂ ತಮ್ಮ ನಿವೃತ್ತಿ ಜೀವನವನ್ನು ಆರಾಮದಾಯಕವಾಗಿ ನಿಶ್ಚಿಂತೆಯಿಂದ ಕಳೆಯಲು ಬಯಸುವುದು ಸಹಜ. ಆದರೆ ಹೂಡಿಕೆ ಮಾಡಿದ ಮೊತ್ತಕ್ಕೆ ನಿಶ್ಚಿತ ಠೇವಣಿ ದೊರೆಯದೆ ಇದ್ದರೆ ಹೂಡಿಕೆ ಮಾಡಿದಕ್ಕೆ ಬೆಲೆಯೇ ಇಲ್ಲ ಎಂಬಂತೆ ಆಗುತ್ತದೆ.

 

ಹಣ ಕಂಡರೆ ಹೆಣವೂ ಬಾಯಿ ಬಿಡುತ್ತೆ ಅನ್ನೋ ಮಾತು ಹೆಚ್ಚು ಜನಪ್ರಿಯ. ಕುರುಡು ಕಾಂಚಾಣದ ಮಹಿಮೆ ಎಲ್ಲರಿಗೂ ತಿಳಿದಿದೆ. ಇಂದು ನೀವು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಕೂಡ ಮೊದಲು ಬೇಕಾಗುವುದು ಹಣ (Cash Fund). ಹಾಗಿದ್ದರೆ ಹಣ ನಮಗೆ ಸುಮ್ಮನೆ ಸಿಗುತ್ತದೆಯೇ ಖಂಡಿತ ಇಲ್ಲ. ಹಣ ಗಳಿಸಲು ಹಣ ಸಂಪಾದನೆ ಮಾಡಬೇಕಾಗಿದ್ದು, ಆ ಮೂಲಕ ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ಉಳಿತಾಯ ಒಂದು ಉತ್ತಮ ಹವ್ಯಾಸವಾಗಿದ್ದು, ಆದರೆ, ಹೂಡಿಕೆ(Investment) ಮಾಡಲು ಉಳಿತಾಯ (Savings) ಮಾಡಬೇಕಾಗುತ್ತದೆ. ಉಳಿತಾಯ ಭವಿಷ್ಯದಲ್ಲಿ ಎದುರಾಗುವ ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಲು ನೆರವಾಗುತ್ತದೆ. ಅಷ್ಟೇ ಅಲ್ಲದೆ, ವೃದ್ಧಾಪ್ಯದಲ್ಲಿ ಹಣಕಾಸಿನ(Finance) ಅಗತ್ಯತೆಯನ್ನು ಪೂರೈಸಲು ಕೂಡ ಉಳಿತಾಯ(Savings) ನೆರವಾಗುತ್ತದೆ.

ಇಲ್ಲಿ ಗಮನಿಸಬೇಕಾದ ವಿಚಾರ ಒಂದಿದೆ. ನೀವು ಹಣ ಸಂಪಾದನೆ (Earning Money) ಮಾಡಲು ಆರಂಭಿಸಿದಾಗ ಹಣ ಉಳಿಯುವ ಬದಲು ಖರ್ಚು (Spend) ಹೆಚ್ಚಾಗುವ ಸಾಧ್ಯತೆಗಳಿವೆ. ಆಗ ಉಳಿತಾಯಕ್ಕೆ ಅವಕಾಶವೇ ಸಿಗದ ಸ್ಥಿತಿ ನಿರ್ಮಾಣವಾಗಬಹುದು. ಹೀಗಾಗಿ, ಹಣವನ್ನು ಹಂಚಿಕೆ, ಉಳಿತಾಯ ಹೇಗೆ ಮಾಡಬೇಕು ಎನ್ನುವ ಸೂಕ್ಷ್ಮ ವಿಚಾರದ ಕುರಿತು ಕೂಡ ಗಮನ ಹರಿಸಬೇಕು. ಅಷ್ಟೆ ಅಲ್ಲದೇ, ಉಳಿತಾಯ ಇದೆ ಎಂದ ಮಾತ್ರಕ್ಕೆ ಸಿಕ್ಕಿದ್ದಲ್ಲಿ ಹೂಡಿಕೆ ಮಾಡಿದರೆ ಅಗತ್ಯ ಸಮಯದಲ್ಲಿ ನೀವು ಹೂಡಿಕೆ ಮಾಡಿದ ಮೊತ್ತಕ್ಕೆ ಬಡ್ಡಿದರ ಸೇರಿ ಹೂಡಿಕೆ ಮಾಡಿದ್ದಕ್ಕಿಂತ ಹೆಚ್ಚಿನ ಮೊತ್ತ ಪಡೆಯಬಹುದೇ ಎಂಬುದನ್ನು ನೋಡಿಕೊಂಡು ಆರ್ಥಿಕ ಭದ್ರತೆಯ ಅನುಸಾರ ಠೇವಣಿ ಇಡುವುದು ಒಳ್ಳೆಯದು.

ಹಾಗಿದ್ರೆ ಎಲ್ಲಿ ಹೂಡಿಕೆ ಮಾಡಬಹುದು( Investment Ideas)ಎಂದು ನೀವು ಪ್ರಶ್ನಿಸಿದರೆ ಉತ್ತರ ಇಲ್ಲಿದೆ ನೋಡಿ!!
ಸಹಜವಾಗಿ ಹೆಚ್ಚಿನವರು ಉಳಿತಾಯ ಮಾಡುವ ನಿಟ್ಟಿನಲ್ಲಿ ಬ್ಯಾಂಕ್(Bank), ಪೋಸ್ಟ್ ಆಫೀಸ್(Post Office), ಇನ್ಸೂರೆನ್ಸ್ ಕಂಪನಿಗಳಲ್ಲಿ ಇಲ್ಲವೇ ಇನ್ನಿತರ ಹಣಕಾಸಿನ ವ್ಯವಹಾರಗಳಲ್ಲಿ ಠೇವಣಿ(Deposit) ಇಟ್ಟು ನಿಶ್ಚಿತ ಲಾಭ ಪಡೆಯುವ ಜೊತೆಗೆ ನಮ್ಮ ಬೆಲೆಬಾಳುವ ವಸ್ತುಗಳನ್ನು, ಆಭರಣಗಳನ್ನು ಲಾಕರ್ (locker) ಮೂಲಕ ಸುಭದ್ರವಾಗಿ ಇಡುವುದು ಗೊತ್ತಿರುವ ವಿಚಾರವೇ. ಇದನ್ನು ಹೊರತು ಪಡಿಸಿ ಎಲ್ಲೆಲ್ಲ ಹೂಡಿಕೆ ಮಾಡಬಹುದು ಎಂದು ಅಲೋಚಿಸಿದ್ದೀರಾ?

ಚಿನ್ನ (Gold),ರಿಯಲ್ ಎಸ್ಟೇಟ್( Real Estate)ಎನ್​ಪಿಎಸ್ (NPS) ಮ್ಯೂಚುವಲ್ ಫಂಡ್ ಎಸ್​ಐಪಿಗಳು( Mutual Fund SIP)ಹೂಡಿಕೆ ಮಾಡಲು ಉತ್ತಮ ಮಾರ್ಗಗಳು.
” ಮನೆಯಲ್ಲಿದ್ದರೆ ಚಿನ್ನ .. ಚಿಂತೆಯೂ ಬೇಡವು ಇನ್ನಾ” ಎಂಬ ಜಾಹೀರಾತಿನ ಮಾತು ನಿಜಕ್ಕೂ ನಿಜ ಜೀವನಕ್ಕೆ ಹೆಚ್ಚು ಹೊಂದುತ್ತದೆ. ಕಷ್ಟ ಕಾಲದಲ್ಲಿ ಏನಾದರೂ ಸಮಸ್ಯೆ ತಲೆದೋರಿದರೆ ಚಿನ್ನವನ್ನು ಬಳಕೆ ಮಾಡಬಹುದು. ಚಿನ್ನಕ್ಕೆ ಯಾವತ್ತಿದ್ದರೂ ಗಗನಕುಸುಮದಂತೆ ಬೆಲೆ ಹೆಚ್ಚಳ ಇರುವುದಲ್ಲ ದೆ ಚಿನ್ನದ ಬೆಲೆಯೂ ವರ್ಷದಲ್ಲಿ ಶೇ. 10ಕ್ಕು ಹೆಚ್ಚು ಏರಿಕೆ ಕಾಣುತ್ತಲೇ ಹೋಗುತ್ತದೆ. ಹೀಗಾಗಿ, ಸಂಕಷ್ಟ ಬಂದಾಗ ಚಿನ್ನ ಬಳಕೆ ಮಾಡಬಹುದು.

ಎಸ್​ಐಪಿ ಅಥವಾ ಶಾರ್ಟ್ ಇನ್ವೆಸ್ಟ್​ಮೆಂಟ್ ಪ್ಲಾನ್​ಗಳು(Short Investment Plans) ಶೇ. 12ರ ದರದಲ್ಲಿ ಹಣ ಬೆಳೆಯಲು ಸಹಕಾರಿಯಾಗಿದ್ದು, ಎನ್​ಪಿಎಸ್​ನಲ್ಲಿ( NPS) ಹಣ ತೊಡಗಿಸುವ ಮುಖ್ಯ ಲಾಭ ತೆರಿಗೆ ವಿನಾಯಿತಿ ಅಷ್ಟೆ ಅಲ್ಲದೇ, ಹೆಚ್ಚಿನ ಬಡ್ಡಿ ಕೂಡ ಪಡೆಯಬಹುದು.ನೀವು ಹೂಡಿಕೆ ಮಾಡಿದ ಹಣ ವಾರ್ಷಿಕವಾಗಿ ಶೇ. 9ರಿಂದ 12ರಷ್ಟು ಬೆಳೆಯುವ ಸಂಭವ ಹೆಚ್ಚು ಇರುವ ಹಿನ್ನೆಲೆ ನೀವು ಇಲ್ಲಿ ಹೂಡಿಕೆ ಮಾಡಬಹುದು.

ನೀವು ಭೂಮಿ ( Land) ಹೂಡಿಕೆ ಮಾಡಿದರೆ ಇದರ ಬೆಲೆ ಕೂಡ ಚಿನ್ನದಂತೆ ರಿಯಲ್ ಎಸ್ಟೇಟ್ ( Real Estate)ಬೆಲೆ ದಿನಂಪ್ರತಿ ಏರಿಕೆ ಕಾಣಬಹುದು. ಇಲ್ಲಿ ಬೇಡಿಕೆ ಇರುವ ಸರಿಯಾದ ಜಾಗ ನೋಡಿ ಭೂಮಿಯನ್ನು ಖರೀದಿ ಮಾಡಿದಲ್ಲಿ ಜಾಗದ ಬೆಲೆ ಕೂಡ ವರ್ಷಕ್ಕೆ ಶೇ. 10ರಿಂದ 20ರಷ್ಟು ಏರಿಕೆಯಾಗುತ್ತಾ ಹೋಗುತ್ತದೆ. ಒಂದು ವೇಳೆ, ಅಷ್ಟೊಂದು ದೊಡ್ಡ ಮೊತ್ತ ನಮ್ಮಲ್ಲಿಲ್ಲ ಎಂದು ನೀವು ಹೇಳುವುದಾದರೆ, ​ ನ್ಯಾಷನಲ್ ಪೆನ್ಷನ್ ಸ್ಕೀಮ್ (National Pension Scheme), ಮ್ಯೂಚುವಲ್ ಫಂಡ್ ಎಸ್​ಐಪಿಗಳಲ್ಲಿ( Mutual Fund SIP)ಹೂಡಿಕೆ ಮಾಡಿ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಬಹುದು.

ಒಂದು ವೇಳೆ ಲಾಭ ಬಂದರೂ ನಷ್ಟ ಬಂದರೂ ಪರ್ವಾಗಿಲ್ಲ ಎನ್ನುವುದಾದರೆ ಷೇರು ಮಾರುಕಟ್ಟೆ (Share Market) ಹೂಡಿಕೆ ಮಾಡಬಹುದು. ಆದರೆ ಇಲ್ಲಿ ಹೂಡಿಕೆ ಮಾಡುವ ಮುನ್ನ ಈ ನೀವು ಹೂಡಿಕೆ ಮಾಡುವ ಶೇರ್ ನಿಂದ ಲಾಭ ಗಳಿಸಬಹುದಾ ಎಂಬುದನ್ನು ನಿರಂತರವಾಗಿ ಪರಾಮರ್ಶೆ ಮಾಡಬೇಕಾಗುತ್ತದೆ. ಶೇರ್ ಮಾರ್ಕೆಟ್ ಹೂಡಿಕೆ ಹಾವು ಏಣಿ ಆಟದ ರೀತಿಯಲ್ಲಿ ಒಮ್ಮೆ ಏರಿಕೆ ಕಂಡರೆ ಮತ್ತೊಮ್ಮೆ ಇಳಿಕೆ ಕಾಣುವುದರಿಂದ ನೀವು ಹೂಡಿಕೆ ಮಾಡಿದ್ದಕ್ಕಿಂತ ಹೆಚ್ಚು ಇಲ್ಲವೇ ಎಲ್ಲ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ, ರಿಸ್ಕ್(Risk) ತೆಗೆದುಕೊಳ್ಳಬಯಸುವವರು ಷೇರುಮಾರುಕಟ್ಟೆಯ ಇನ್​ಟ್ರಾ ಡೇ ವಹಿವಾಟು ನಡೆಸಬಹುದಾಗಿದೆ. ಅನುಭವ ಹಾಗೂ ಎಚ್ಚರಿಕೆ ವಹಿಸಿದರೆ ಈ ವ್ಯವಹಾರದಲ್ಲಿ ಬಹಳ ಲಾಭ ಗಳಿಸುವ ಸಾಧ್ಯತೆ ಕೂಡ ಇದೆ .

ಎಫ್​ಡಿ ಮತ್ತು ಎಸ್​ಐಪಿ ಹೋಲಿಕೆ ಮಾಡಿದರೆ, ಒಂದು ವೇಳೆ ಇನ್ಷೂರೆನ್ಸ್ ಸ್ಕೀಮ್​ನಲ್ಲಿ ತಿಂಗಳಿಗೆ 20 ಸಾವಿರ ರೂ. ನಂತೆ 30 ವರ್ಷ ಹೂಡಿಕೆ ಮಾಡಿದರೆ ಅದಕ್ಕೆ ವಾರ್ಷಿಕ ಬಡ್ಡಿ ದರ ಶೇ. 7 ರಷ್ಟು ಪಡೆಯಬಹುದು. 30 ವರ್ಷದ ಬಳಿಕ ನಿಮಗೆ 2.43 ಕೋಟಿ ರೂ ರಿಟರ್ನ್ ಲಭ್ಯವಾಗುತ್ತದೆ. ಅದೇ ನೀವು ಮ್ಯೂಚುವಲ್ ಫಂಡ್​ನ ಎಸ್​ಐಪಿಯಲ್ಲಿ ಅಷ್ಟೇ ಅವಧಿಗೆ ಅಷ್ಟೇ ಹಣ ತೊಡಗಿಸಿದರೆ 7 ಕೋಟಿ ರೂ ರಿಟರ್ನ್ ಪಡೆದುಕೊಳ್ಳಬಹುದು. ಹಣ ಗಳಿಸಬೇಕು ಎಂಬ ಹುಚ್ಚು ಆಸೆಗೆ ಬಿದ್ದು ಸಿಕ್ಕಿದಲ್ಲಿ ಹೂಡಿಕೆ ಮಾಡದಿರಿ. ಇದರಿಂದ ನೀವು ಸಂಪಾದನೆ ಮಾಡಿದ ಹೂಡಿಕೆಯ ಮೊತ್ತ ಲೂಟಿಕೋರರು ನಿಮಗೆ ಮೋಸ ಮಾಡಿ ಕಣ್ಣಿಗೆ ಮಣ್ಣೆರಚಿ ಪರಾರಿಯಾಗುವ ಸಂಭವ ಕೂಡ ಇದ್ದು, ಹೀಗಾಗಿ ಆರ್ಥಿಕವಾಗಿ ಭದ್ರತೆ ಜೊತೆಗೆ ಉತ್ತಮ ಬಡ್ಡಿ ಲಭ್ಯವಾಗುವ ಕಡೆಗಳಲ್ಲಿ ಹೂಡಿಕೆ ಮಾಡುವುದು ಉತ್ತಮ.

Leave A Reply

Your email address will not be published.