High Cholesterol: ಇವು ಹೈಕೊಲೆಸ್ಟ್ರಾಲ್‌ನ ಲಕ್ಷಣ! ನಿರ್ಲಕ್ಷ್ಯ ಮಾಡದಿರಿ, ಹಾರ್ಟ್‌ಅಟ್ಯಾಕ್‌ನಿಂದ ಬಚಾವಾಗಿರಿ!

High Cholesterol : ಇತ್ತೀಚಿಗೆ ಹೃದಯ (heart ) ಸಂಬಂಧಿ ತೊಂದರೆಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿದೆ. ಅದರಲ್ಲೂ ಹೃದಯಾಘಾತ ಎಂಬುದು ಊಹೆಗೂ ಮೀರಿದ ಸಮಸ್ಯೆಯಾಗಿ ತಲೆದೋರುತ್ತಿದೆ. ಹಿಂದೆ 60 ವರ್ಷ ಮೇಲ್ಪಟ್ಟವರಲ್ಲಿ ಹೃದಯಾಘಾತ ಹೆಚ್ಚಾಗಿ ಕಂಡು ಬರುತ್ತಿತ್ತು. ಆದರೆ ಈಗ ಹಸುಳೆಯಿಂದ ಹಿಡಿದು ವಯೋವೃದ್ಧರವರೆಗೆ ಯಾವುದೇ ವಯಸ್ಸಿನವರು, ಯಾವುದೇ ಸಮಯದಲ್ಲಿ ಹೃದಯಾಘಾತದ (heart attack ) ಅಪಾಯವನ್ನು ಎದುರಿಸುತ್ತಾರೆ. ಇದಕ್ಕೆಲ್ಲ ಪ್ರಸ್ತುತ ಬದಲಾಗುತ್ತಿರುವ ಜೀವನಶೈಲಿ, ವ್ಯಾಯಾಮ ಮತ್ತು ಪೌಷ್ಟಿಕ ಆಹಾರದ (food ) ಕೊರತೆ, ಬಿಡುವಿಲ್ಲದ ಜೀವನ, ಕಲಬೆರಕೆ ಆಹಾರ ಇವೆಲ್ಲವೂ ಹೃದಯಾಘಾತ ಆಗಲು ದಾರಿ ಮಾಡಿಕೊಡುತ್ತಿದೆ. ಹೃದಯಾಘಾತವನ್ನು ಜೀವಕ್ಕೆ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ.

ನಾವು ಯಾವುದೇ ಹೃದಯ ಸಂಬಂಧಿ ಸಮಸ್ಯೆಗೆ ಸಮಯಕ್ಕೆ ಸರಿ ಚಿಕಿತ್ಸೆ (treatment ) ನೀಡದಿದ್ದರೆ, ಹೃದಯಾಘಾತದ ಸಾಧ್ಯತೆಗಳು ಹೆಚ್ಚಾಗುತ್ತವೆ. ಅದಕ್ಕೂ ಮೊದಲು ನಾವು ಹೃದಯಾಘಾತದ ಲಕ್ಷಣಗಳು ಯಾವ ರೀತಿ ಇರುತ್ತವೆ ಎನ್ನುವುದು ತಿಳಿದು ಮುನ್ನೆಚ್ಚರಿಕೆ ವಹಿಸುವುದರಿಂದ ಜೀವಕ್ಕೆ ಆಗುವ ಅಪಾಯ ತಪ್ಪಿಸಬಹುದು. ಅಂತಹ ಲಕ್ಷಣಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.

ಸಾಮಾನ್ಯವಾಗಿ ಭುಜ ಅಥವಾ ಕುತ್ತಿಗೆ ನೋವು ಹೃದಯಾಘಾತದ ಮೊದಲು ಸಾಮಾನ್ಯ ಲಕ್ಷಣವಾಗಿದೆ. ಕುತ್ತಿಗೆ ಮತ್ತು ಭುಜದ ಸುತ್ತಲೂ ನೋವು ಹೆಚ್ಚಾಗಿ ಕಂಡುಬರುತ್ತದೆ ಆ ಕೂಡಲೇ ಜಾಗೃತಗೊಳ್ಳಿ.

ತೀವ್ರ ಆಯಾಸ ಮತ್ತು ಎದೆ ನೋವನ್ನು ನಿರ್ಲಕ್ಷಿಸಬೇಡಿ. ನಿಮಗೆ ಎದೆಯುರಿ ಅನಿಸಿದರೆ, ತಕ್ಷಣ ಆಸ್ಪತ್ರೆಗೆ ಹೋಗಿ. ಇದು ಹೃದಯಾಘಾತದ ಸಂಕೇತ ಎಂಬುದನ್ನು ಮರೆಯಬೇಡಿ. ಆಗಾಗ ಬರುವ ಜ್ವರ ಮತ್ತು ಕೆಮ್ಮನ್ನು ನಿರ್ಲಕ್ಷಿಸಬೇಡಿ. ಇದು ಕೂಡ ಹೃದಯಾಘಾತದ ಅಪಾಯವನ್ನು ತಂದೊಡ್ಡುತ್ತದೆ. ಹೃದಯವು ಭಾರವಾಗಿದ್ದರೂ ಸಹ ಹೃದ್ರೋಗ ತಜ್ಞರನ್ನು ಸಂಪರ್ಕಿಸಬೇಕು.

ಮುಖ್ಯವಾಗಿ ರಕ್ತದಲ್ಲಿನ ಹೆಚ್ಚಿನ ಮಟ್ಟದ (High Cholesterol Symptoms) ಎಲ್‌ಡಿಎಲ್ ಅಂದರೆ ಕೆಟ್ಟ ಕೊಲೆಸ್ಟ್ರಾಲ್ ದೇಹಕ್ಕೆ ಹಾನಿಕಾರಕವಾಗಿದೆ. ಅಧಿಕ ಕೊಲೆಸ್ಟ್ರಾಲ್ ದೇಹದ ಇತರ ಭಾಗಗಳಲ್ಲಿ ಬಹಳಷ್ಟು ಕೊಲೆಸ್ಟ್ರಾಲ್ ಶೇಖರಣೆಗೆ ಕಾರಣವಾಗುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ರಕ್ತದ ಹರಿವನ್ನು ಮಿತಿಗೊಳಿಸುತ್ತದೆ. ಹೃದಯಾಘಾತ ಅಥವಾ ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ.

ಅಧಿಕ ಕೊಲೆಸ್ಟ್ರಾಲ್ (High cholesterol) ಅನ್ನು ಸೈಲೆಂಟ್ ಕಿಲ್ಲರ್ ಎಂದು ಕರೆಯಲಾಗುತ್ತದೆ. ಇದು ಯಾವುದೇ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ಆದರೆ, ಇದು ಕೆಲವೊಂದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದಕ್ಕೆ ಪರಿಹಾರ ಕಂಡುಕೊಂಡಲ್ಲಿ ಹೃದಯಾಘಾತ ಅಥವಾ ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಬಹುದು.

ಪೆರಿಫೆರಲ್ ಆರ್ಟರಿ ಡಿಸೀಸ್ ಬಗ್ಗೆ ಎಚ್ಚರದಿಂದ ಇರಬೇಕು. ಯಾಕೆಂದರೆ ಪೆರಿಫೆರಲ್ ಆರ್ಟರಿ ಡಿಸೀಸ್ ಎಂಬುದು ಪ್ಲೇಕ್ ನಿರ್ಮಾಣದಿಂದಾಗಿ ರಕ್ತನಾಳಗಳ ಕಿರಿದಾಗುವಿಕೆ ಅಥವಾ ತಡೆಗಟ್ಟುವಿಕೆಗೆ ಸಂಬಂಧಿಸಿದ ಒಂದು ಸ್ಥಿತಿಯಾಗಿದೆ. ಇದು ಕಾಲುಗಳು ಮತ್ತು ಪಾದಗಳು ಸೇರಿದಂತೆ ದೇಹದ ಕೆಳಗಿನ ಭಾಗಗಳಿಗೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ಇದು ಕ್ಲಾಡಿಕೇಶನ್ ಎಂಬ ಸ್ಥಿತಿಯನ್ನು ಉಂಟುಮಾಡಬಹುದು. ದೇಹದ ಕೆಳಭಾಗದಲ್ಲಿರುವ ರಕ್ತನಾಳಗಳು ಕಿರಿದಾದಾಗ ಅಥವಾ ರಕ್ತ ಹರಿವು ಸರಿಯಾಗಿ ಆಗದೇ ಹೋದಾಗ ಈ ಸ್ಥಿತಿ ನಿರ್ಮಾಣವಾಗುತ್ತದೆ.

ಅಧಿಕ ಕೊಲೆಸ್ಟ್ರಾಲ್ ನ ಮತ್ತೊಂದು ಲಕ್ಷಣವೆಂದರೆ ಪಾದಗಳು ತಣ್ಣಗಾಗುವುದು. ಬೇಸಿಗೆಯ ದಿನಗಳಲ್ಲಿಯೂ ಪಾದಗಳು ತಣ್ಣಗಾಗುತ್ತಿದ್ದರೆ ಒಮ್ಮೆ ಪರೀಕ್ಷಿಸಿಕೊಳ್ಳಿ. ಇದು ಪೆರಿಫೆರಲ್ ಆರ್ಟರಿ ಡಿಸೀಸ್ ನ ಲಕ್ಷಣವಾಗಿರಬಹುದು. ಇದಲ್ಲದೆ, ಪಾದಗಳಿಗೆ ರಕ್ತದ ಹರಿವು ಕಡಿಮೆಯಾಗುವುದರಿಂದ ಚರ್ಮದ ಬಣ್ಣದಲ್ಲಿ ಸಹ ಬದಲಾವಣೆ ಕಂಡು ಬರಬಹುದು. ಇದು ಪಾದಗಳಿಗೆ ಪೋಷಕಾಂಶಗಳು ಮತ್ತು ಆಮ್ಲಜನಕದ ಪೂರೈಕೆ ಮೇಲೆ ಪರಿಣಾಮ ಬೀರುತ್ತದೆ.

ರಾತ್ರಿ ವೇಳೆ ಕಾಲಿನಲ್ಲಿ ಸೆಳೆತ ಕಂಡು ಬರುತ್ತಿದ್ದರೆ ಕೆಲವರು ವೀಕ್ ನೆಸ್ ಎಂದು ಸುಮ್ಮನಾಗುತ್ತಾರೆ. ವೀಕ್ ನೆಸ್ ನಿಂದ ಮಾತ್ರ ಹೀಗೆ ಕಾಲಿನ ಸೆಳೆತ ಬರುವುದಿಲ್ಲ. ಕಾಲಿಗೆ ರಕ್ತ ಸಂಚಾರ ಸರಿಯಾಗಿ ಆಗದೇ ಹೋದಾಗ ಹೀಗಾಗುತ್ತದೆ. ಆದ ಕಾರಣ ಕಾಲಿನಲ್ಲಿ ಕಾಣಿಸಿಕೊಳ್ಳುವ ಸೆಳೆತದ ಬಗ್ಗೆ ನಿರ್ಲಕ್ಷ ಮಾಡದಿರಿ. ಇನ್ನು ಕಾಲಿನ ಮೇಲೆ ಹುಣ್ಣು ಆಗಿ ಅದು ವಾಸಿಯಾಗದೇ ಹೋದರೆ ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಪರೀಕ್ಷಿಸಿಕೊಳ್ಳುವುದು ಉತ್ತಮ.

ವಾಕರಿಕೆ ಮತ್ತು ವಾಂತಿ ಕೂಡ ಸಾಮಾನ್ಯ ಸಮಸ್ಯೆಗಳು. ಈ ರೋಗಲಕ್ಷಣಗಳು ಸಾಮಾನ್ಯವಾಗಿ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಿಂದ ಉಂಟಾಗುತ್ತವೆ. ಆದರೆ ಕೆಲವೊಮ್ಮೆ ಹೃದ್ರೋಗದ ಲಕ್ಷಣಗಳು ಅಸ್ವಸ್ಥತೆ, ವಾಕರಿಕೆ ಅಥವಾ ವಾಂತಿಯನ್ನು ಒಳಗೊಂಡಿರುತ್ತದೆ. ಕೆಲವರಿಗೆ ಹೃದಯಾಘಾತವಾಗುವ ಮುನ್ನ ವಾಂತಿಯಂತಹ ಲಕ್ಷಣಗಳು ಕಂಡುಬರುತ್ತವೆ.

ಹೃದಯಾಘಾತದ ಮೊದಲು, ನೀವು ಎದೆ ನೋವು ಮತ್ತು ಉಸಿರಾಟದ ತೊಂದರೆಯಂತಹ ಸಮಸ್ಯೆಗಳನ್ನು ಅನುಭವಿಸಬಹುದು. ಹೃದಯವು ದೇಹದ ವಿವಿಧ ಅಂಗಗಳಿಗೆ ಸಾಕಷ್ಟು ರಕ್ತವನ್ನು ಪೂರೈಸಲು ಸಾಧ್ಯವಾಗದಿದ್ದಾಗ, ಅಂಗಗಳಲ್ಲಿನ ಆಮ್ಲಜನಕದ ಪ್ರಮಾಣವು ಕಡಿಮೆಯಾಗಲು ಪ್ರಾಯಾವುದಾದರೂ ಕಾಣಿಸಿಕೊಂಡರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ ಮತ್ತು ಚಿಕಿತ್ಸೆಯನ್ನು ಪ್ರಾರಂಭಿಸಿ.ರಂಭಿಸುತ್ತದೆ. ಈ ಸಮಯದಲ್ಲಿ ಜಾಗರುಕರಾಗುವುದು ಸೂಕ್ತ.

ಕೆಲವೊಮ್ಮೆ ತಲೆತಿರುಗುವಿಕೆ ಮತ್ತು ಮೂರ್ಛೆ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ
ಈ ರೀತಿಯಾಗಿ ಲಕ್ಷಣಗಳು ಯಾವುದಾದರೂ ಕಾಣಿಸಿಕೊಂಡರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ ಮತ್ತು ಚಿಕಿತ್ಸೆಯನ್ನು ಪ್ರಾರಂಭಿಸಿ. ಅಥವಾ ಆ ಕ್ಷಣಕ್ಕೆ ತಿಳಿದವರ ಸಹಾಯ ಪಡೆದುಕೊಳ್ಳಿ.

 

ಇದನ್ನೂ ಓದಿ  :Best Saving Schemes : ಬೆಸ್ಟ್‌ ಸೇವಿಂಗ್ಸ್‌ ಲಿಸ್ಟ್‌, ನಿಮಗೆ ಉತ್ತಮ ರಿಟರ್ನ್ಸ್‌ ಖಂಡಿತ!

 

Leave A Reply

Your email address will not be published.