Maruti Cars : ಮಾರುತಿ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್‌! ಈ ಆಫರ್‌ ಮಿಸ್‌ ಮಾಡ್ಕೋಬೇಡಿ!!!

Maruti cars : ಹೊಸ ವರ್ಷದಲ್ಲಿ ಆಟೊಮೊಬೈಲ್ (automobile )ಕ್ಷೇತ್ರವು ಸಾಕಷ್ಟು ಸುಧಾರಣೆ ಕಂಡಿದ್ದು, 2023ರ ಅಂಕಿ ಅಂಶ ಪ್ರಕಾರ ಕಾರು (car) ಉದ್ಯಮದ ಮಾರುಕಟ್ಟೆಯಲ್ಲಿ (market ) ಭಾರತದಲ್ಲಿ (india )ಅತಿ ಹೆಚ್ಚು ಮಾರಾಟವಾದ ಟಾಪ್ 5 ಕಾರುಗಳ ಪೈಕಿ ಮಾರುತಿ ಸುಜುಕಿ ಅಗ್ರಗಣ್ಯ ಸ್ಥಾನದಲ್ಲಿದ್ದು, ಇದರ ನಾಲ್ಕು ಮಾದರಿ ಕಾರುಗಳು ಮುಂಚೂಣಿ ಸ್ಥಾನವನ್ನು ಪಡೆದುಕೊಂಡಿದೆ. ಇದೀಗ ನೀವು ಹೊಸ ಕಾರು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಮಾರುತಿ ಸುಜುಕಿ ನಿಮಗಾಗಿ ಕೆಲವು ಆಕರ್ಷಕ ಕೊಡುಗೆಗಳನ್ನು ತಂದಿದೆ.

ಸದ್ಯ ಮಾರುತಿ ಸುಜುಕಿ (ಮಾರುತಿ Suzuki )ಬಂಪರ್ ಕೊಡುಗೆಗಳ ಪ್ರಯೋಜನವನ್ನು ಪಡೆಯುವ ಮೂಲಕ 64000 ರೂ.ವರೆಗೆ ರಿಯಾಯಿತಿ ದರದಲ್ಲಿ ಕಾರು ಖರೀದಿಸಬಹುದಾಗಿದೆ. ಆರ್ಥಿಕ ವರ್ಷದ ಕೊನೆಯ ತಿಂಗಳಿನಲ್ಲಿ ಮಾರುತಿ ಸುಜುಕಿ (Maruti cars) ತನ್ನ ಜನಪ್ರಿಯ ಕಾರುಗಳ ಮೇಲೆ ಬಂಪರ್ ಕೊಡುಗೆಗಳನ್ನು ನೀಡುತ್ತಿದೆ. ಅದರಲ್ಲೂ ಮಾರುತಿ ಕಂಪನಿಯ ವ್ಯಾಗನ್ಆರ್, ಮಾರುತಿ ಸ್ವಿಫ್ಟ್(Maruti Swift), ಮಾರುತಿ ಆಲ್ಟೊ ಕೆ 10(Maruti Alto K10), ಮಾರುತಿ ಎಸ್-ಪ್ರೆಸ್ಸೊ (Maruti S-Presso), ಮಾರುತಿ ಸೆಲೆರಿಯೊ(Maruti Celerio), ಮಾರುತಿ ಆಲ್ಟೊ 800 (maruti alto 800)ಮತ್ತು ಡಿಜೈರ್‌ಗಳ (Maruti Dzire) ಮೇಲೆ ಈ ಕೊಡುಗೆಗಳು ಲಭ್ಯವಾಗಲಿವೆ.

ಸದ್ಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ವ್ಯಾಗನ್‌ಆರ್‌ ಕಾರಿನ ಮೇಲೆ ಮಾರುತಿ ಸುಜುಕಿ ಕಂಪನಿಯು ಅತ್ಯಧಿಕ ಕೊಡುಗೆಯನ್ನು ನೀಡುತ್ತಿದೆ.

ವ್ಯಾಗನ್‌ಆರ್‌ನಲ್ಲಿ ನೀಡಲಾಗುವ ಆಫರ್ ಇಂತಿವೆ :
ಮಾರುತಿ ಕಂಪನಿಯು ಈ ಟಾಲ್ ಬಾಯ್ ಸ್ಟೈಲ್ ಹ್ಯಾಚ್‌ಬ್ಯಾಕ್ ಖರೀದಿ ಮೇಲೆ 64,000 ರೂ.ವರೆಗೆ ರಿಯಾಯಿತಿ ನೀಡುತ್ತಿದೆ. ವಿನಿಮಯ ಕೊಡುಗೆಯೊಂದಿಗೆ, ಈ ಕಾರಿನ ಮೇಲೆ 15,000ರೂ, ಹೆಚ್ಚುವರಿ ಕೊಡುಗೆ ಲಭ್ಯವಾಗಲಿದೆ. ಇದಲ್ಲದೆ, ಕಾರ್ಪೋರೇಟ್ ರಿಯಾಯಿತಿ ಸಹ ಸಿಗಲಿದೆ.

ಮಾರುತಿ (Maruti)ಕಂಪನಿಯ ಇತರ ಕಾರುಗಳ ಖರೀದಿಯಲ್ಲಿ ಕೂಡ ನಗದು ರಿಯಾಯಿತಿ ಮತ್ತು ವಿನಿಮಯ ಬೋನಸ್ ಜೊತೆಗೆ ಕಾರ್ಪೊರೇಟ್ ರಿಯಾಯಿತಿಗಳನ್ನು ನೀಡಲಾಗುತ್ತದೆ.

ಮಾರುತಿ ಸುಜುಕಿ ತನ್ನ ಇತರ ಕಾರುಗಳ ಮೇಲೆ ನೀಡುವ ಬಂಪರ್ ಆಫರ್ ಈ ಕೆಳಗಿನಂತಿದೆ:
>ಮಾರುತಿ ವ್ಯಾಗನ್ಆರ್ (Maruti WagonR) ಕಾರಿನ ಮೇಲೆ 64,000ರೂ.
>ಮಾರುತಿ ಸ್ವಿಫ್ಟ್ (Maruti Swift) ಕಾರಿನ ಮೇಲೆ 54,000 ರೂ.
>ಮಾರುತಿ ಎಸ್-ಪ್ರೆಸ್ಸೊ (Maruti S-Presso) ಖರೀದಿಯಲ್ಲಿ 49,000 ರೂ.
>ಮಾರುತಿ ಆಲ್ಟೊ ಕೆ10 (Maruti Alto K10)ಕಾರು ಖರೀದಿಯಲ್ಲಿ 49,000 ರೂ.
>ಮಾರುತಿ ಸೆಲೆರಿಯೊ (Maruti Celerio) ಕಾರು ಖರೀದಿಯಲ್ಲಿ 44,000ರೂ.
>ಮಾರುತಿ ಆಲ್ಟೊ 800 (Maruti Alto 800) ಕಾರು ಖರೀದಿ ಮೇಲೆ 38,000ರೂ.
>ಮಾರುತಿ ಡಿಜೈರ್ (Maruti Dzire) ಖರೀದಿಯಲ್ಲಿ 10,000ರೂ.ಗಳ ಕೊಡುಗೆ ಲಭ್ಯವಾಗಲಿದೆ.

ಈ ಮೇಲಿನ ರಿಯಾಯಿತಿಗಳು ಸ್ಥಳ ಮತ್ತು ಡೀಲರ್‌ಶಿಪ್‌ಗೆ ಅನುಗುಣವಾಗಿ ಬದಲಾವಣೆಗೆ ಒಳಪಟ್ಟಿರುತ್ತವೆ. ಅದಲ್ಲದೆ ಈ ಕೊಡುಗೆ 2023ರ ಮಾರ್ಚ್ 31ರವರೆಗೆ ಮಾತ್ರ ಲಭ್ಯವಿರಲಿದೆ ಎಂದು ಮಾಹಿತಿ ತಿಳಿಸಲಾಗಿದೆ.

Electric Scooter Offer : ಈ ಎಲೆಕ್ಟ್ರಿಕ್‌ ಸ್ಕೂಟರ್‌ ಮೇಲೆ ಭರ್ಜರಿ ರಿಯಾಯಿತಿ! ನಾಳೆಯವರೆಗೆ ಮಾತ್ರ, ತ್ವರೆ ಮಾಡಿ!

 

Leave A Reply

Your email address will not be published.