ಹೆಚ್ಚುತ್ತಿದೆ ಬೆಂಗಳೂರು – ಮೈಸೂರು ಎಕ್ಸ್​ಪ್ರೆಸ್​ ವೇಯಲ್ಲಿನ ಅಪಘಾತದ ಪ್ರಕರಣ ; ಇಲ್ಲಿವರೆಗೂ ಸಾವನ್ನಪ್ಪಿರುವವರ ಸಂಖ್ಯೆ ಎಷ್ಟು? ಬೆಚ್ಚಿಬೀಳಿಸುವಂತಿದೆ ವರದಿ!!

Bengaluru – Mysuru expressway: ಬೆಂಗಳೂರು – ಮೈಸೂರು ಎಕ್ಸ್ ಪ್ರೆಸ್​ ವೇ (bengaluru – Mysuru expressway) ಉದ್ಘಾಟನೆಗೆ ಹತ್ತಿರದಲ್ಲಿದೆ. ​ಇದರ ನಿರ್ಮಾಣಕ್ಕೆ ರೂ.8172 ಕೋಟಿ ವೆಚ್ಚವಾಗಿದೆ. ಬೆಂಗಳೂರು – ಮೈಸೂರು ನಡುವೆ ಈ ಹಿಂದೆ 150 ನಿಮಿಷಗಳ ಪ್ರಯಾಣದ ಅವಧಿ ಇದ್ದು, ಇದರ ನಿರ್ಮಾಣದಿಂದ 90 ನಿಮಿಷಗಳ ಅವಧಿಯ ಆಗಿದೆ.

 

ಈ ದಶಪಥದ ಹೆದ್ದಾರಿ ಒಟ್ಟು 118 ಕಿಲೋ ಮೀಟರ್ ಇದ್ದು, ಎರಡು ಕಡೆ ತಲಾ ಮೂರು ಪಥ ಒಳಗೊಂಡಿರುವ 6 ಪಥದ ಎಕ್ಸ್‌ಪ್ರೆಸ್‌ ವೇ ಇರಲಿದೆ. ಒಟ್ಟು ಎರಡು ಹಂತದಲ್ಲಿ ಕಾಮಗಾರಿ ನಡೆದಿದ್ದು, ಮಾರ್ಚ್ 12ರಂದು ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಲೋಕಾರ್ಪಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರು- ಮೈಸೂರು ಎಕ್ಸ್​ಪ್ರೆಸ್​ ವೇಯಲ್ಲಿ ಕಳೆದ ವರ್ಷದ ಸೆಪ್ಟೆಂಬರ್‌ನಿಂದ ವಾಹನಗಳ ಸಂಚಾರ ಆರಂಭವಾಗಿದೆ. ಆದರೆ, ಈ ವೇಯಲ್ಲಿ ಈಗಾಗಲೇ ಸಾಕಷ್ಟು ಜನರು ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ.‌ ಇದರ ಪರಿಣಾಮ ಅಲ್ಲಿ ಸಂಚರಿಸುವ ಜನರಲ್ಲಿ ಭೀತಿ ಉಂಟಾಗಿದೆ. ಇಲ್ಲಿವರೆಗೂ ಬೆಂಗಳೂರು- ಮೈಸೂರು ಎಕ್ಸ್​ಪ್ರೆಸ್​ ವೇಯಲ್ಲಿ ಎಷ್ಟು ಜನರು ಸಾವನ್ನಪ್ಪಿರಬಹುದು ಗೊತ್ತಾ? ತಿಳಿದರೆ, ನೀವು ಶಾಕ್ ಆಗೋದು ಖಂಡಿತ!!.

ಇಲ್ಲಿವರೆಗೆ ಈ ಹೆದ್ದಾರಿಯಲ್ಲಿ ಸುಮಾರು 335 ಅಪಘಾತಗಳು (accident) ಸಂಭವಿಸಿದ್ದು, ಅದರಲ್ಲಿ 80ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಎಂದು ವರದಿ ತಿಳಿಸಿದೆ. ರಾಮನಗರ ಜಿಲ್ಲೆಯಲ್ಲಿ 6 ತಿಂಗಳಲ್ಲಿ 110ಕ್ಕೂ ಹೆಚ್ಚಿನ ಜನರು ಅಪಘಾತಕ್ಕೀಡಾಗಿದ್ದು, ಸುಮಾರು 100 ಜನ ಗಾಯಗೊಂಡಿದ್ದು, 41ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಮಂಡ್ಯ ಜಿಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 225 ಅಪಘಾತವಾಗಿದ್ದು, 43 ಮಂದಿ ಮೃತಪಟ್ಟಿದ್ದಾರೆ.

ಮೈಸೂರು (Mysore) ಜಿಲ್ಲೆಯಲ್ಲಿ ಡಿಸೆಂಬರ್‌ನಲ್ಲಿ 40 ಅಪಘಾತದ ಪ್ರಕರಣ ವರದಿಯಾಗಿದೆ. ಅದರಲ್ಲಿ 9 ಮಂದಿ ಮೃತಪಟ್ಟಿದ್ದಾರೆ. ಮೂರು ದಿನಗಳ ಹಿಂದೆಯಷ್ಟೇ ರಾಮನಗರದ ಚನ್ನಪಟ್ಟಣ ತಾಲ್ಲೂಕಿನ ಮತ್ತಿಕೆರೆ ಸಮೀಪ 3 ಕಾರುಗಳ ನಡುವೆ ಸರಣಿ ಅಪಘಾತ ನಡೆದಿದ್ದು, ಮೂವರು ಗಂಭೀರ ಗಾಯಗೊಂಡಿದ್ದರು. ಡಿಸೆಂಬರ್, ಜನವರಿ ತಿಂಗಳಿನಲ್ಲಿಯೇ ಅತೀ ಹೆಚ್ಚು ಅಪಘಾತ ಸಂಭವಿಸಿವೆ ಎಂದು ತಿಳಿದುಬಂದಿದೆ.

ಮೈಸೂರು ಜಿಲ್ಲೆಯಲ್ಲಿ ಹಾದುಹೋಗುವ ಹೆದ್ದಾರಿಯಲ್ಲಿ ಸೇತುವೆಗಳು ಹೆಚ್ಚು ತಿರುವಿನಿಂದ ಕೂಡಿದ್ದು, ಇದು ಅಪಘಾತಕ್ಕೆ ಕಾರಣವಾಗಿದೆ. ಹಾಗೇ ಅತಿವೇಗದ ಕಾರಣವೂ ಅಪಘಾತಗಳು ಸಂಭವಿಸುತ್ತಿವೆ.

Leave A Reply

Your email address will not be published.