Home loan : ಮನೆ ಖರೀದಿಸಲು ಪ್ಲ್ಯಾನ್ ಹಾಕಿದ್ದೀರಾ? ಹಾಗಿದ್ದರೆ ಇಲ್ಲಿ ಕೇಳಿ, ಈ ಬ್ಯಾಂಕ್ ಗಳಲ್ಲಿ ಮಹಿಳೆಯರಿಗೆ ಸಿಗುತ್ತೆ ಕಡಿಮೆ ಬಡ್ಡಿದರದಲ್ಲಿ ಗೃಹಸಾಲ !!

Home loan: ಈಗಾಗಲೇ ಕೆಲವರು ಮನೆ ಕಟ್ಟಿರುತ್ತಾರೆ ಅಥವಾ ಖರೀದಿಸಿರುತ್ತಾರೆ. ಆದರೆ ಇನ್ನು ಕೆಲವರು ಮನೆ (home) ಖರೀದಿಸಲು ಯೋಜನೆ ರೂಪಿಸಿರುತ್ತಾರೆ. ಅಂತಹವರಿಗೆ ಸುವರ್ಣಾವಕಾಶ ಇಲ್ಲಿದೆ. ನೀವು ನಿಮ್ಮ ಕನಸಿನ ಮನೆ ಖರೀದಿಸಲು ಯೋಚಿಸಿದ್ದರೆ, ನಿಮಗೆ ಬ್ಯಾಂಕ್ (bank) ಸಹಾಯ ಮಾಡಲಿದೆ. ಹೇಗೆ ಅಂತೀರಾ? ಈ ಬ್ಯಾಂಕ್‌ಗಳಿಂದ ಮಹಿಳೆಯರಿಗೆ ಕಡಿಮೆ ಬಡ್ಡಿದರದಲ್ಲಿ ಹೋಮ್ ಲೋನ್ (home loan) ಸಿಗುತ್ತದೆ. ಅದರಿಂದ ನಿಮ್ಮ ಕನಸಿನ ಮನೆ ನಿಮ್ಮದಾಗಿಸಬಹುದು. ಅಷ್ಟಕ್ಕೂ ಆ ಬ್ಯಾಂಕ್ ಯಾವುದು? ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.

ಸ್ವಾತಂತ್ಯ್ರಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಬ್ಯಾಂಕುಗಳು, ಬ್ಯಾಂಕಿಂಗ್ ಅಲ್ಲದ ಹಣಕಾಸು ಸಂಸ್ಥೆಗಳು (NBFI ಗಳು), ಮತ್ತು ಅಡಮಾನ ಸಾಲದಾತರು ಮಹಿಳಾ ಅರ್ಜಿದಾರರಿಗೆ ವಿಶೇಷವಾಗಿ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ ನೀಡುತ್ತಿವೆ .

ಎಚ್‌ಡಿಎಫ್‌ಸಿ ಬ್ಯಾಂಕ್ (HDFC Bank): ಈ ಬ್ಯಾಂಕ್ ನಲ್ಲಿ ಗೃಹ ಸಾಲದ ಮೇಲೆ 5 ಬೇಸಿಸ್ ಪಾಯಿಂಟ್‌ಗಳ ರಿಯಾಯಿತಿ ಲಭ್ಯವಾಗಲಿದ್ದು, ಬಡ್ಡಿ ದರವು 8.95% ರಿಂದ ಪ್ರಾರಂಭವಾಗುತ್ತದೆ. ಈ ಬಡ್ಡಿದರ (intrest rate) ಅವರ ಕ್ರೆಡಿಟ್ ಸ್ಕೋರ್ (credit score) ಅನ್ನು ಅವಲಂಬಿಸಿರುತ್ತದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (state Bank of India)(SBI): ಈ ಬ್ಯಾಂಕ್ ನಲ್ಲಿ ಮಹಿಳೆಯರಿಗೆ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ ದೊರೆಯುತ್ತದೆ. ಗೃಹ ಸಾಲ ಪಡೆಯಲು ಅರ್ಜಿ ಸಲ್ಲಿಸುವ ಮಹಿಳೆಯರಿಗೆ 5 ಬೇಸಿಸ್ ಪಾಯಿಂಟ್‌ಗಳಷ್ಟು ಬಡ್ಡಿದರ ರಿಯಾಯಿತಿ ನೀಡಲಾಗುತ್ತದೆ. ಬಡ್ಡಿದರಗಳು 9.15% ನಿಂದ ಪ್ರಾರಂಭವಾಗಲಿದ್ದು, ಇದು ಅವರ ಕ್ರೆಡಿಟ್ ಸ್ಕೋರ್ ಅನ್ನು ಅವಲಂಬಿಸಿರುತ್ತದೆ ಎಂದು ಹೇಳಲಾಗಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್: ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿಯೂ (Punjab national bank) ಮಹಿಳೆಯರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ದೊರೆಯುತ್ತದೆ. ಈ ಬ್ಯಾಂಕ್‌ನಲ್ಲಿ ಸಂಬಳ ಪಡೆಯುವ ಮಹಿಳೆಯರು, ಮಹಿಳಾ ಉದ್ಯಮಿಗಳು ಅಥವಾ ಗೃಹಿಣಿಯರು ಕೆಲವು ವಿಶಿಷ್ಟ ಯೋಜನೆಗಳ ಅಡಿಯಲ್ಲಿ ಸಾಲ ಪಡೆಯಬಹುದಾಗಿದೆ.

ಕೆನರಾ ಬ್ಯಾಂಕ್: ಕೆನರಾ ಬ್ಯಾಂಕ್ (canara bank) ಕೂಡ ಮಹಿಳೆಯರಿಗೆ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ ನೀಡುತ್ತಿದೆ. ಬಡ್ಡಿ ದರ 8.85% ರಿಂದ ಪ್ರಾರಂಭವಾಗುತ್ತವೆ. ಇಲ್ಲಿಯೂ ಗೃಹ ಸಾಲದ ಮೇಲೆ 5 ಬೇಸಿಸ್ ಪಾಯಿಂಟ್‌ಗಳ ರಿಯಾಯಿತಿ ಇರಲಿದೆ. ಹಾಗೆಯೇ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‌ನಲ್ಲಿ (union Bank of India) ಗೃಹ ಸಾಲ 0.05% ರಿಯಾಯಿತಿಯಲ್ಲಿ ಲಭ್ಯವಾಗುತ್ತದೆ.

ಮಹಿಳೆಯರಿಗೆ (women) ಗೃಹ ಸಾಲ ಮರುಪಾವತಿಯಲ್ಲಿ ಪ್ರತ್ಯೇಕ ತೆರಿಗೆ ವಿನಾಯಿತಿಯಿಲ್ಲ. ಅಸಲು ಮರುಪಾವತಿ ಮತ್ತು ಬಡ್ಡಿ ಪಾವತಿಗೆ ಗರಿಷ್ಠ ತೆರಿಗೆ ವಿನಾಯಿತಿ ಕ್ರಮವಾಗಿ 1.5 ಲಕ್ಷ ಮತ್ತು 2 ಲಕ್ಷ ಇರಲಿದೆ.

Leave A Reply

Your email address will not be published.