Top Ev Sales : ದಾಖಲೆಯ ಸೃಷ್ಟಿ ಮಾಡಿದ ಓಲಾ ಸ್ಕೂಟರ್‌!!!

Top Ev Sales : ಇತ್ತೀಚೆಗೆ ದ್ವಿಚಕ್ರ ವಾಹನಗಳ ಹವಾ ಮಾರುಕಟ್ಟೆಯಲ್ಲಿ ಜೋರಾಗಿದೆ. ಅದಲ್ಲದೆ ಹೊಸ ವಾಹನ ಖರೀದಿ ಮಾಡಲು ನಿಮಗೆ ಸಾಕಷ್ಟು ಆಯ್ಕೆಗಳಿವೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮಗೆ ಬೇಕು ಬೇಕಾದ ಆಯ್ಕೆಗಳು ಹಲವಾರು ರೀತಿಯಲ್ಲಿ, ಅನುಕೂಲ ದರದಲ್ಲಿ ಲಭ್ಯ ಇದೆ. ಇನ್ನು ಭಾರತದಲ್ಲಿ (india ) ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಬಹು ಬೇಡಿಕೆ ಸೃಷ್ಟಿಯಾಗಿದೆ. 2023 ಫೆಬ್ರವರಿ ತಿಂಗಳ ಮಾರಾಟ ಅಂಕಿ ಅಂಶ ಪ್ರಕಟವಾಗಿದ್ದು (Top Ev Sales) , ಸರ್ಕಾರಿ ಸ್ವಾಮ್ಯದ ‘ವಾಹನ್ ಪೋರ್ಟಲ್’ ಪ್ರಕಾರ, ಓಲಾ ಮೊದಲ ಸ್ಥಾನದಲ್ಲಿ (Top Ev Sales) ಮುಂದುವರಿದಿದ್ದು, ಟಿವಿಎಸ್ ಮೋಟಾರ್ ಎರಡನೇ ಸ್ಥಾನದಲ್ಲಿದೆ. ಇನ್ನು ಮುಂದಿನಂತೆ ವಿವರಗಳು ಇಲ್ಲಿ ಪಟ್ಟಿ ಮಾಡಲಾಗಿದೆ.

ಓಲಾ ಎಲೆಕ್ಟ್ರಿಕ್:
ಫೆಬ್ರವರಿ ತಿಂಗಳಲ್ಲಿ ಬರೋಬ್ಬರಿ 17,667 ಯುನಿಟ್ ಮಾರಾಟ(sale ) ಮಾಡಿದ್ದು, ಶೇಕಡ 27% ಮಾರುಕಟ್ಟೆ ಪಾಲು ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿ (Top Ev Sales) ಮುಂದುವರಿದಿದೆ. ಓಲಾ ಸ್ಕೂಟರ್‌ಗಳು (ola scooter ) ಸಂಪೂರ್ಣವಾಗಿ ಸಮತಟ್ಟಾದ ನೆಲದೊಂದಿಗೆ ಅಚ್ಚುಕಟ್ಟಾಗಿ, ಆಯತಾಕಾರದ ಸ್ಟೋರೇಜ್ ಅನ್ನು ಹೊಂದಿವೆ. ಈ ಉತ್ತಮವಾದ ನಿಯಮಿತವಾದ ಆಕಾರವು ಹೆಚ್ಚಿನ ವಸ್ತುಗಳನ್ನು ತುಂಬಲು ಪ್ರಯಾಣಿಕರಿಗೆ ಸಹಕರಿಸುತ್ತದೆ.

ಭಾರತದ ಮಾರುಕಟ್ಟೆಯಲ್ಲಿ (market )ಓಲಾದ ಕಡಿಮೆ ಬೆಲೆಯ ಸ್ಕೂಟರ್ ಎಸ್1 ಏರ್, ಬ್ಯಾಟರಿ ಪ್ಯಾಕ್ ಗೆ ಅನುಗುಣವಾಗಿ ರೂ.84,999, ರೂ.99,999 ಹಾಗೂ ರೂ.1,09,999 ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದೆ. ಓಲಾ ಎಸ್1 ರೂ.ರೂ.99,999 ದಿಂದ ರೂ.1,09,999 ಬೆಲೆಯನ್ನು ಪಡೆದಿದೆ. ಓಲಾದ ಟಾಪ್ ಎಂಡ್ ಸ್ಕೂಟರ್ ಎಸ್1 ಪ್ರೊ, ರೂ.1,29,999 ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಖರೀದಿಗೆ ಸಿಗಲಿದ್ದು, 181 km ರೇಂಜ್ ನೀಡಲಿದ್ದು, 116 kmph ಟಾಪ್ ಸ್ವೀಡ್ ಹೊಂದಿದೆ.

ಟಿವಿಎಸ್ (TVS ):
ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರಾಟದಲ್ಲಿ ಕಂಪನಿಯು ಎರಡನೇ ಸ್ಥಾನದಲ್ಲಿದೆ. ಮಾರುಕಟ್ಟೆಯಲ್ಲಿ ಶೇಕಡ 19% ಪಾಲನ್ನು ತನ್ನದಾಗಿಸಿಕೊಂಡಿದೆ. ಫೆಬ್ರವರಿಯಲ್ಲಿ 12,573 ಯುನಿಟ್ ಮಾರಾಟ ಮಾಡಿ, ದಾಖಲೆ ನಿರ್ಮಿಸಿದೆ. ಹೌದು ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬೇಡಿಕೆ ಹೆಚ್ಚಾಗಿದ್ದು, ಜನರು ಅತೀ ಕಡಿಮೆ ಬೆಲೆಯಲ್ಲಿ ಈ ಸ್ಕೂಟರನ್ನು ಖರೀದಿಸಬಹುದಾಗಿದ್ದು, ಜೊತೆಗೆ 3 ವರ್ಷಗಳ ವಾರಂಟಿ ಮತ್ತು ಒಂದು ವರ್ಷದ ರೋಡ್ ಸೈಡ್ ಅಪಘಾತ ಸೌಲಭ್ಯವೂ ಇದರಲ್ಲಿ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ.

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಟಿವಿಎಸ್ ಐಕ್ಯೂಬ್, ಬೆಂಗಳೂರಿನಲ್ಲಿ ರೂ. 1,12,231 ಆನ್-ರೋಡ್ ಬೆಲೆಯಲ್ಲಿ ಖರೀದಿಗೆ ಸಿಗಲಿದೆ. ಸಂಪೂರ್ಣ ಚಾರ್ಜಿನಲ್ಲಿ 100 Km ರೇಂಜ್ ನೀಡಲಿದ್ದು, 78 Kmph ಟಾಪ್ ಸ್ವೀಡ್ ಹೊಂದಿದೆ. ಎರಡು ರೂಪಾಂತರ ಹಾಗೂ ಏಳು ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಅದಲ್ಲದೆ ಮನೆಯ ವಿದ್ಯುತ್ ಬಳಕೆಯಲ್ಲಿ ಐದು ಗಂಟೆಯಲ್ಲಿ ಸಂಪೂರ್ಣ ಚಾರ್ಜ್ ಆಗಲಿದೆ.

ಎಥರ್ ಎನರ್ಜಿ:
ಬೆಂಗಳೂರು ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ (company )ಗುರುತಿಸಿಕೊಂಡಿರುವ ಎಥರ್, ಫೆಬ್ರವರಿಯಲ್ಲಿ 10,013 ಯುನಿಟ್ ಮಾರಾಟ ಮಾಡಿದೆ. ಎಥರ್ ದೇಶೀಯ ಮಾರುಕಟ್ಟೆಯಲ್ಲಿ ‘450X Gen 3’ ಸ್ಕೂಟರ್ ಮಾರಾಟ ಮಾಡುತ್ತಿದ್ದು, ಬೆಂಗಳೂರಿನಲ್ಲಿ ರೂ.1,41,375 ಆನ್-ರೋಡ್ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, 108 Km ರೇಂಜ್ ನೀಡಲಿದೆ.

ಎಥರ್ ಎನರ್ಜಿ ಕಂಪನಿಯು 450ಎಕ್ಸ್ ಮತ್ತು 450 ಪ್ಲಸ್ ಆವೃತ್ತಿಗಳೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪನಿಯು ಈಗಾಗಲೇ ಹೊಸ ಇವಿ ಸ್ಕೂಟರ್ ಮಾದರಿಗಳಿಗಾಗಿ 5.0 ನವೀಕರಣ ಪರಿಚಯಿಸಿದೆ.

ಆಂಪಿಯರ್:
ಭಾರತ ಎಲೆಕ್ಟ್ರಿಕ್ ದ್ವಿಚಕ್ರ ಮಾರಾಟ ವಿಭಾಗದಲ್ಲಿ ಆಂಪಿಯರ್ ನಾಲ್ಕನೇ ಸ್ಥಾನದಲ್ಲಿ ಮುಂದುವರಿದ್ದು, ಫೆಬ್ರವರಿಯಲ್ಲಿ 5,842 ಸೇಲ್ ಮಾಡಿದೆ. ಕಳೆದ 11 ತಿಂಗಳಲ್ಲಿ ಒಟ್ಟು 74,932 ಯುನಿಟ್ ಮಾರಾಟ ಮಾಡಿದೆ.

ಆಂಪಿಯರ್ ಕೆಲವೇ ದಿನಗಳ ಹಿಂದೆ ‘ಪ್ರೈಮಸ್’ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಮಾಡಿದ್ದು, ಬೆಂಗಳೂರಿನಲ್ಲಿ ರೂ.1,22,034 ಆನ್-ರೋಡ್ ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ. ಸಂಪೂರ್ಣ ಚಾರ್ಜಿನಲ್ಲಿ 107 Km ರೇಂಜ್ ನೀಡಲಿದ್ದು, 77 Kmph ಟಾಪ್ ಸ್ವೀಡ್ ಹೊಂದಿದೆ.

ಹೀರೋ ಎಲೆಕ್ಟ್ರಿಕ್:
ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಹೀರೋ, ಫೆಬ್ರವರಿಯಲ್ಲಿ 5,861 ಯುನಿಟ್ ಮಾರಾಟ ಮಾಡಿದೆ. ಅದೇ ಜನವರಿಯಲ್ಲಿ 6,393 ಯುನಿಟ್ ಸೇಲ್ ಮಾಡಿತ್ತು.

ಹೀರೋ ‘ವಿಡಾ ವಿ1’ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಎರಡು ರೂಪಾಂತರಗಳಲ್ಲಿ ಮಾರಾಟ ಮಾಡುತ್ತಿದೆ. ಅವುಗಳೆಂದರೆ, ವಿ1 ಪ್ರೊ ಹಾಗೂ ವಿ1 ಪ್ಲಸ್. ಕ್ರಮವಾಗಿ 3.94kWh, 3.44kWh ಬ್ಯಾಟರಿ ಪ್ಯಾಕ್ ಪಡೆದಿವೆ. ಅಲ್ಲದೆ, 80 kmph ಟಾಪ್ ಸ್ವೀಡ್ ಹೊಂದಿವೆ.

ಹೀರೋ ವಿಡಾ ಎಲೆಕ್ಟ್ರಿಕ್ ಸ್ಕೂಟರ್ V1 Plus ಮತ್ತು V1 Pro ಎಂಬ ಎರಡು ರೂಪಾಂತರಗಳು 6 kW ಗರಿಷ್ಠ ಪವರ್ ಮತ್ತು 25 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಗ್ರೇಡೆಬಿಲಿಟಿ 20° ಆಗಿದ್ದರೆ ಗರಿಷ್ಠ ವೇಗ ಗಂಟೆಗೆ 80 ಕಿಮೀ ಆಗಿದೆ. ಎರಡೂ ರೂಪಾಂತರಗಳು ಇಕೋ, ರೈಡ್ ಮತ್ತು ಸ್ಪೋರ್ಟ್‌ನ ರೈಡಿಂಗ್ ಮೋಡ್‌ಗಳನ್ನು ಹೊಂದಿವೆ. ಪ್ರೊ ರೂಪಾಂತರವು ಹೆಚ್ಚುವರಿ ಕಸ್ಟಮ್ ರೈಡಿಂಗ್ ಮೋಡ್ ಅನ್ನು ಪಡೆಯುತ್ತದೆ. ಇದು 100 ಕ್ಕೂ ಹೆಚ್ಚು ಸಂಯೋಜನೆಗಳನ್ನು ನೀಡುತ್ತದೆ

ಓಕಿನಾವಾ & ಬಜಾಜ್:
ಈಗಷ್ಟೇ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಮುನ್ನೆಲೆಗೆ ಬರುತ್ತಿರುವ ಓಕಿನಾವಾ, ಫೆಬ್ರವರಿ ತಿಂಗಳಲ್ಲಿ 3,842 ಯುನಿಟ್ ಮಾರಾಟ ಮಾಡಿದೆ. ಓಕಿನಾವಾ ಭಾರತದಲ್ಲಿ ಆರಕ್ಕೂ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಮಾಡುತ್ತಿದೆ.

ಇದೀಗ ‘OKHI-90’ ಟಾಪ್ ಎಂಡ್ ಮಾದರಿಯಾಗಿದ್ದು, ರೂ. 2,04,520 ಆನ್-ರೋಡ್ ಬೆಲೆಯಲ್ಲಿ ಖರೀದಿಗೆ ಸಿಗಲಿದೆ. ಬಜಾಜ್ ಫೆಬ್ರವರಿ ತಿಂಗಳಲ್ಲಿ ಅತಿಕಡಿಮೆ 1,314 ಯುನಿಟ್ ಸೇಲ್ ಮಾಡಿದೆ. ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ರೂ.1,29,405 ಬೆಲೆಯಲ್ಲಿ ಖರೀದಿಗೆ ಸಿಗಲಿದೆ.

ಒಟ್ಟಿನಲ್ಲಿ ದ್ವಿಚಕ್ರ ಕ್ರೇಜ್ ಎಲ್ಲರಿಗೂ ಇದ್ದೇ ಇದೆ. ಯಾಕೆಂದರೆ ದ್ವಿಚಕ್ರ ವಾಹನವನ್ನು ನ್ನು ಚಲಾವಣೆ ಮಾಡುವುದು ಅತೀ ಸುಲಭ. ಯುವಕ ಯುವತಿಯರಿಂದ ಹಿಡಿದು ವಯಸ್ಸಾದವರಿಗೂ ಒಂದು ಸ್ಕೂಟರ್(scooter ) ಇದ್ದರೆ ಒಳ್ಳೆಯದಿತ್ತು ಎಂಬ ಅಭಿಪ್ರಾಯ ಇದ್ದೇ ಇರುತ್ತೆ. ಸದ್ಯ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನದ ಹವಾ ಜೋರಾಗಿದ್ದು ಓಲಾ ಎಲಕ್ಟ್ರಿಕ್ ಮುಂಚೂಣಿಯಲ್ಲಿದೆ.

ಇತ್ತೀಚೆಗೆ ದ್ವಿಚಕ್ರ ವಾಹನಗಳ ಹವಾ ಮಾರುಕಟ್ಟೆಯಲ್ಲಿ ಜೋರಾಗಿದೆ. ಅದಲ್ಲದೆ ಹೊಸ ವಾಹನ ಖರೀದಿ ಮಾಡಲು ನಿಮಗೆ ಸಾಕಷ್ಟು ಆಯ್ಕೆಗಳಿವೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮಗೆ ಬೇಕು ಬೇಕಾದ ಆಯ್ಕೆಗಳು ಹಲವಾರು ರೀತಿಯಲ್ಲಿ, ಅನುಕೂಲ ದರದಲ್ಲಿ ಲಭ್ಯ ಇದೆ. ಇನ್ನು ಭಾರತದಲ್ಲಿ (india ) ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಬಹು ಬೇಡಿಕೆ ಸೃಷ್ಟಿಯಾಗಿದೆ. 2023 ಫೆಬ್ರವರಿ ತಿಂಗಳ ಮಾರಾಟ ಅಂಕಿ ಅಂಶ ಪ್ರಕಟವಾಗಿದ್ದು, ಸರ್ಕಾರಿ ಸ್ವಾಮ್ಯದ ‘ವಾಹನ್ ಪೋರ್ಟಲ್’ ಪ್ರಕಾರ, ಓಲಾ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದು, ಟಿವಿಎಸ್ ಮೋಟಾರ್ ಎರಡನೇ ಸ್ಥಾನದಲ್ಲಿದೆ. ಇನ್ನು ಮುಂದಿನಂತೆ ವಿವರಗಳು ಇಲ್ಲಿ ಪಟ್ಟಿ ಮಾಡಲಾಗಿದೆ.

ಓಲಾ ಎಲೆಕ್ಟ್ರಿಕ್:
ಫೆಬ್ರವರಿ ತಿಂಗಳಲ್ಲಿ ಬರೋಬ್ಬರಿ 17,667 ಯುನಿಟ್ ಮಾರಾಟ(sale ) ಮಾಡಿದ್ದು, ಶೇಕಡ 27% ಮಾರುಕಟ್ಟೆ ಪಾಲು ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಓಲಾ ಸ್ಕೂಟರ್‌ಗಳು (ola scooter ) ಸಂಪೂರ್ಣವಾಗಿ ಸಮತಟ್ಟಾದ ನೆಲದೊಂದಿಗೆ ಅಚ್ಚುಕಟ್ಟಾಗಿ, ಆಯತಾಕಾರದ ಸ್ಟೋರೇಜ್ ಅನ್ನು ಹೊಂದಿವೆ. ಈ ಉತ್ತಮವಾದ ನಿಯಮಿತವಾದ ಆಕಾರವು ಹೆಚ್ಚಿನ ವಸ್ತುಗಳನ್ನು ತುಂಬಲು ಪ್ರಯಾಣಿಕರಿಗೆ ಸಹಕರಿಸುತ್ತದೆ.

ಭಾರತದ ಮಾರುಕಟ್ಟೆಯಲ್ಲಿ (market )ಓಲಾದ ಕಡಿಮೆ ಬೆಲೆಯ ಸ್ಕೂಟರ್ ಎಸ್1 ಏರ್, ಬ್ಯಾಟರಿ ಪ್ಯಾಕ್ ಗೆ ಅನುಗುಣವಾಗಿ ರೂ.84,999, ರೂ.99,999 ಹಾಗೂ ರೂ.1,09,999 ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದೆ. ಓಲಾ ಎಸ್1 ರೂ.ರೂ.99,999 ದಿಂದ ರೂ.1,09,999 ಬೆಲೆಯನ್ನು ಪಡೆದಿದೆ. ಓಲಾದ ಟಾಪ್ ಎಂಡ್ ಸ್ಕೂಟರ್ ಎಸ್1 ಪ್ರೊ, ರೂ.1,29,999 ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಖರೀದಿಗೆ ಸಿಗಲಿದ್ದು, 181 km ರೇಂಜ್ ನೀಡಲಿದ್ದು, 116 kmph ಟಾಪ್ ಸ್ವೀಡ್ ಹೊಂದಿದೆ.

ಟಿವಿಎಸ್ (TVS ):
ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರಾಟದಲ್ಲಿ ಕಂಪನಿಯು ಎರಡನೇ ಸ್ಥಾನದಲ್ಲಿದೆ. ಮಾರುಕಟ್ಟೆಯಲ್ಲಿ ಶೇಕಡ 19% ಪಾಲನ್ನು ತನ್ನದಾಗಿಸಿಕೊಂಡಿದೆ. ಫೆಬ್ರವರಿಯಲ್ಲಿ 12,573 ಯುನಿಟ್ ಮಾರಾಟ ಮಾಡಿ, ದಾಖಲೆ ನಿರ್ಮಿಸಿದೆ. ಹೌದು ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬೇಡಿಕೆ ಹೆಚ್ಚಾಗಿದ್ದು, ಜನರು ಅತೀ ಕಡಿಮೆ ಬೆಲೆಯಲ್ಲಿ ಈ ಸ್ಕೂಟರನ್ನು ಖರೀದಿಸಬಹುದಾಗಿದ್ದು, ಜೊತೆಗೆ 3 ವರ್ಷಗಳ ವಾರಂಟಿ ಮತ್ತು ಒಂದು ವರ್ಷದ ರೋಡ್ ಸೈಡ್ ಅಪಘಾತ ಸೌಲಭ್ಯವೂ ಇದರಲ್ಲಿ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ.

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಟಿವಿಎಸ್ ಐಕ್ಯೂಬ್, ಬೆಂಗಳೂರಿನಲ್ಲಿ ರೂ. 1,12,231 ಆನ್-ರೋಡ್ ಬೆಲೆಯಲ್ಲಿ ಖರೀದಿಗೆ ಸಿಗಲಿದೆ. ಸಂಪೂರ್ಣ ಚಾರ್ಜಿನಲ್ಲಿ 100 Km ರೇಂಜ್ ನೀಡಲಿದ್ದು, 78 Kmph ಟಾಪ್ ಸ್ವೀಡ್ ಹೊಂದಿದೆ. ಎರಡು ರೂಪಾಂತರ ಹಾಗೂ ಏಳು ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಅದಲ್ಲದೆ ಮನೆಯ ವಿದ್ಯುತ್ ಬಳಕೆಯಲ್ಲಿ ಐದು ಗಂಟೆಯಲ್ಲಿ ಸಂಪೂರ್ಣ ಚಾರ್ಜ್ ಆಗಲಿದೆ.

ಎಥರ್ ಎನರ್ಜಿ:
ಬೆಂಗಳೂರು ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ (company )ಗುರುತಿಸಿಕೊಂಡಿರುವ ಎಥರ್, ಫೆಬ್ರವರಿಯಲ್ಲಿ 10,013 ಯುನಿಟ್ ಮಾರಾಟ ಮಾಡಿದೆ. ಎಥರ್ ದೇಶೀಯ ಮಾರುಕಟ್ಟೆಯಲ್ಲಿ ‘450X Gen 3’ ಸ್ಕೂಟರ್ ಮಾರಾಟ ಮಾಡುತ್ತಿದ್ದು, ಬೆಂಗಳೂರಿನಲ್ಲಿ ರೂ.1,41,375 ಆನ್-ರೋಡ್ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, 108 Km ರೇಂಜ್ ನೀಡಲಿದೆ.

ಎಥರ್ ಎನರ್ಜಿ ಕಂಪನಿಯು 450ಎಕ್ಸ್ ಮತ್ತು 450 ಪ್ಲಸ್ ಆವೃತ್ತಿಗಳೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪನಿಯು ಈಗಾಗಲೇ ಹೊಸ ಇವಿ ಸ್ಕೂಟರ್ ಮಾದರಿಗಳಿಗಾಗಿ 5.0 ನವೀಕರಣ ಪರಿಚಯಿಸಿದೆ.

ಆಂಪಿಯರ್:
ಭಾರತ ಎಲೆಕ್ಟ್ರಿಕ್ ದ್ವಿಚಕ್ರ ಮಾರಾಟ ವಿಭಾಗದಲ್ಲಿ ಆಂಪಿಯರ್ ನಾಲ್ಕನೇ ಸ್ಥಾನದಲ್ಲಿ ಮುಂದುವರಿದ್ದು, ಫೆಬ್ರವರಿಯಲ್ಲಿ 5,842 ಸೇಲ್ ಮಾಡಿದೆ. ಕಳೆದ 11 ತಿಂಗಳಲ್ಲಿ ಒಟ್ಟು 74,932 ಯುನಿಟ್ ಮಾರಾಟ ಮಾಡಿದೆ.

ಆಂಪಿಯರ್ ಕೆಲವೇ ದಿನಗಳ ಹಿಂದೆ ‘ಪ್ರೈಮಸ್’ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಮಾಡಿದ್ದು, ಬೆಂಗಳೂರಿನಲ್ಲಿ ರೂ.1,22,034 ಆನ್-ರೋಡ್ ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ. ಸಂಪೂರ್ಣ ಚಾರ್ಜಿನಲ್ಲಿ 107 Km ರೇಂಜ್ ನೀಡಲಿದ್ದು, 77 Kmph ಟಾಪ್ ಸ್ವೀಡ್ ಹೊಂದಿದೆ.

ಹೀರೋ ಎಲೆಕ್ಟ್ರಿಕ್:
ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಹೀರೋ, ಫೆಬ್ರವರಿಯಲ್ಲಿ 5,861 ಯುನಿಟ್ ಮಾರಾಟ ಮಾಡಿದೆ. ಅದೇ ಜನವರಿಯಲ್ಲಿ 6,393 ಯುನಿಟ್ ಸೇಲ್ ಮಾಡಿತ್ತು.

ಹೀರೋ ‘ವಿಡಾ ವಿ1’ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಎರಡು ರೂಪಾಂತರಗಳಲ್ಲಿ ಮಾರಾಟ ಮಾಡುತ್ತಿದೆ. ಅವುಗಳೆಂದರೆ, ವಿ1 ಪ್ರೊ ಹಾಗೂ ವಿ1 ಪ್ಲಸ್. ಕ್ರಮವಾಗಿ 3.94kWh, 3.44kWh ಬ್ಯಾಟರಿ ಪ್ಯಾಕ್ ಪಡೆದಿವೆ. ಅಲ್ಲದೆ, 80 kmph ಟಾಪ್ ಸ್ವೀಡ್ ಹೊಂದಿವೆ.

ಹೀರೋ ವಿಡಾ ಎಲೆಕ್ಟ್ರಿಕ್ ಸ್ಕೂಟರ್ V1 Plus ಮತ್ತು V1 Pro ಎಂಬ ಎರಡು ರೂಪಾಂತರಗಳು 6 kW ಗರಿಷ್ಠ ಪವರ್ ಮತ್ತು 25 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಗ್ರೇಡೆಬಿಲಿಟಿ 20° ಆಗಿದ್ದರೆ ಗರಿಷ್ಠ ವೇಗ ಗಂಟೆಗೆ 80 ಕಿಮೀ ಆಗಿದೆ. ಎರಡೂ ರೂಪಾಂತರಗಳು ಇಕೋ, ರೈಡ್ ಮತ್ತು ಸ್ಪೋರ್ಟ್‌ನ ರೈಡಿಂಗ್ ಮೋಡ್‌ಗಳನ್ನು ಹೊಂದಿವೆ. ಪ್ರೊ ರೂಪಾಂತರವು ಹೆಚ್ಚುವರಿ ಕಸ್ಟಮ್ ರೈಡಿಂಗ್ ಮೋಡ್ ಅನ್ನು ಪಡೆಯುತ್ತದೆ. ಇದು 100 ಕ್ಕೂ ಹೆಚ್ಚು ಸಂಯೋಜನೆಗಳನ್ನು ನೀಡುತ್ತದೆ

ಓಕಿನಾವಾ & ಬಜಾಜ್:
ಈಗಷ್ಟೇ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಮುನ್ನೆಲೆಗೆ ಬರುತ್ತಿರುವ ಓಕಿನಾವಾ, ಫೆಬ್ರವರಿ ತಿಂಗಳಲ್ಲಿ 3,842 ಯುನಿಟ್ ಮಾರಾಟ ಮಾಡಿದೆ. ಓಕಿನಾವಾ ಭಾರತದಲ್ಲಿ ಆರಕ್ಕೂ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಮಾಡುತ್ತಿದೆ.

ಇದೀಗ ‘OKHI-90’ ಟಾಪ್ ಎಂಡ್ ಮಾದರಿಯಾಗಿದ್ದು, ರೂ. 2,04,520 ಆನ್-ರೋಡ್ ಬೆಲೆಯಲ್ಲಿ ಖರೀದಿಗೆ ಸಿಗಲಿದೆ. ಬಜಾಜ್ ಫೆಬ್ರವರಿ ತಿಂಗಳಲ್ಲಿ ಅತಿಕಡಿಮೆ 1,314 ಯುನಿಟ್ ಸೇಲ್ ಮಾಡಿದೆ. ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ರೂ.1,29,405 ಬೆಲೆಯಲ್ಲಿ ಖರೀದಿಗೆ ಸಿಗಲಿದೆ.

ಒಟ್ಟಿನಲ್ಲಿ ದ್ವಿಚಕ್ರ ಕ್ರೇಜ್ ಎಲ್ಲರಿಗೂ ಇದ್ದೇ ಇದೆ. ಯಾಕೆಂದರೆ ದ್ವಿಚಕ್ರ ವಾಹನವನ್ನು ನ್ನು ಚಲಾವಣೆ ಮಾಡುವುದು ಅತೀ ಸುಲಭ. ಯುವಕ ಯುವತಿಯರಿಂದ ಹಿಡಿದು ವಯಸ್ಸಾದವರಿಗೂ ಒಂದು ಸ್ಕೂಟರ್(scooter ) ಇದ್ದರೆ ಒಳ್ಳೆಯದಿತ್ತು ಎಂಬ ಅಭಿಪ್ರಾಯ ಇದ್ದೇ ಇರುತ್ತೆ. ಸದ್ಯ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನದ ಹವಾ ಜೋರಾಗಿದ್ದು ಓಲಾ ಎಲಕ್ಟ್ರಿಕ್ ಮುಂಚೂಣಿಯಲ್ಲಿದೆ.

Leave A Reply

Your email address will not be published.