7th CPC : ಕೇಂದ್ರ ಸರಕಾರಿ ನೌಕರರೇ ನಿಮಗೊಂದು ಮೋದಿ ಸರಕಾರದಿಂದ ಸಿಹಿ ಸುದ್ದಿ!

Special Festival Advance : 7ನೇ ವೇತನ ಆಯೋಗದ (7th Pay Commission) ಅಡಿಯಲ್ಲಿ, ನೌಕರರ ಮತ್ತು ಪಿಂಚಣಿದಾರರ ತುಟ್ಟಿಭತ್ಯೆ ಲೆಕ್ಕಾಚಾರವನ್ನು ಮೂಲ ವೇತನದ ಆಧಾರದ ಮೇಲೆ ಮಾಡಲಾಗುತ್ತದೆ ಎಂದು ತಿಳಿಸಲಾಗಿತ್ತು. ಇದೀಗ ಕೇಂದ್ರದ ಸರ್ಕಾರಿ ನೌಕರರಿಗೆ ವಿಶೇಷ ಹಬ್ಬದ ಮುಂಗಡ ಯೋಜನೆಯನ್ನು ನೀಡುವುದಾಗಿ ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಘೋಷಿಸಿದೆ.

 

ಪ್ರಸ್ತುತ ಈ ಬಾರಿ ಕೇಂದ್ರ ಸರ್ಕಾರ ತನ್ನ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ (ಡಿಎ) ಘೋಷಣೆ ಮಾಡಿಲ್ಲ. ಆದರೆ ಹೋಳಿ ಹಬ್ಬದಂದು ಮೋದಿ ಸರ್ಕಾರ ಎಲ್ಲಾ ಕೇಂದ್ರ ನೌಕರರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ.

ಸದ್ಯ ನೌಕರರಿಗೆ ವಿಶೇಷ ಹಬ್ಬದ ಮುಂಗಡ ( Special Festival Advance)ಯೋಜನೆ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಈ ಯೋಜನೆಯಡಿ ಪ್ರತಿ ಕೇಂದ್ರ ನೌಕರರು ಸರಕಾರದಿಂದ 10,000 ರೂ. ಪಡೆಯಲಿದ್ದಾರೆ. ಅಂದರೆ ಹಬ್ಬದ ಸಂದರ್ಭದಲ್ಲಿ ಸರ್ಕಾರಿ ನೌಕರರು ಈ ಯೋಜನೆಯನ್ನು ಬಳಸಿ ಮುಂಗಡವಾಗಿ 10,000 ರೂಪಾಯಿ ತೆಗೆದುಕೊಳ್ಳಬಹುದಾಗಿದೆ.

ಹಣದ ಮರುಪಾವತಿಗೆ ಅತ್ಯಂತ ಸುಲಭ ನಿಯಮಗಳು ಇಂತಿವೆ :
ಈ ಮುಂಗಡ ಹಣಕ್ಕೆ ಸರ್ಕಾರಿ ನೌಕರರು ಯಾವುದೇ ರೀತಿಯ ಬಡ್ಡಿ ಕಟ್ಟಬೇಕಾಗಿಲ್ಲ.
ನೀವು 10000 ಸಾವಿರ ರೂಪಾಯಿಗಳನ್ನು 1000 ರೂಪಾಯಿಗಳ ಸುಲಭ ಕಂತುಗಳಲ್ಲಿ ಹಿಂತಿರುಗಿಸಬಹುದು, ಅದು ಕೂಡ ಬಡ್ಡಿಯಿಲ್ಲದೆ. ಪ್ರತಿ ವರ್ಷ ಸರ್ಕಾರದಿಂದ ಉತ್ಸವ ಮುಂಗಡ ಯೋಜನೆಯಡಿ ನೌಕರರಿಗೆ ಹಣ ನೀಡಲಾಗುತ್ತದೆ.

ಪ್ರತಿ ವರ್ಷ ಲಕ್ಷಾಂತರ ಉದ್ಯೋಗಿಗಳಿಗೆ ಹಣಕಾಸು ಸಚಿವಾಲಯ ಈ ಉಡುಗೊರೆಯನ್ನು ನೀಡುತ್ತದೆ. ಉದ್ಯೋಗಿಗಳಿಗೆ ನೀಡಲಾಗುತ್ತಿರುವ ಈ ಹಣವು ಅಡ್ವಾನ್ಸ್ ಪ್ರಿಲೋಡ್ ಆಗಿದೆ. ಅಂದರೆ, ಈ ಹಣವನ್ನು ಈಗಾಗಲೇ ಕೇಂದ್ರ ಸರ್ಕಾರಿ ನೌಕರರ ವೇತನ ಖಾತೆಯಲ್ಲಿ ನೋಂದಣಿಗೊಂಡಿದೆ.

ಸದ್ಯ ಕೇಂದ್ರ ಸರ್ಕಾರದ ಈ ಯೋಜನೆಯಡಿ ನಾಲ್ಕರಿಂದ ಐದು ಸಾವಿರ ಕೋಟಿ ಮೀಸಲಿಡಲಾಗಿದ್ದು, ಮುಂಗಡ ಯೋಜನೆಯ ಬ್ಯಾಂಕ್ ಶುಲ್ಕವನ್ನೂ ಸರ್ಕಾರವೇ ಭರಿಸುತ್ತಿದೆ ಎಂದು ಮೂಲಗಳು ಹೇಳಿವೆ.

ಮುಂಗಡವಾಗಿ ಪಡೆದ ಈ ಹಣವನ್ನು ಉದ್ಯೋಗಿಗಳು ಡಿಜಿಟಲ್ ಆಗಿ ಖರ್ಚು ಮಾಡಬಹುದು. ಈ ಹಿಂದೆ ಕೇಂದ್ರ ನೌಕರರು ಎಲ್ ಟಿಸಿ ಕ್ಯಾಶ್ ವೋಚರ್ ಯೋಜನೆಯಂತಹ ಸೌಲಭ್ಯಗಳನ್ನು ಪಡೆಯುತ್ತಿದ್ದರು. ಈ ಯೋಜನೆಯಡಿ, ಪ್ರಯಾಣ ಭತ್ಯೆಯ ಬದಲಾಗಿ ನೌಕರರು ಪಡೆದ ನಗದು ಮೊತ್ತವನ್ನು ಮಾರುಕಟ್ಟೆಯಲ್ಲಿ ಚಲಾವಣೆ ಮಾಡಲಾಗುತ್ತದೆ.

ಸದ್ಯ ಲಕ್ಷಾಂತರ ಉದ್ಯೋಗಿಗಳು ಈ ಉಡುಗೊರೆಯನ್ನು ಪಡೆಯುತ್ತಾರೆ. ಈ ಯೋಜನೆಯ ವಿಶೇಷತೆ ಎಂದರೆ ಸರ್ಕಾರದಿಂದ ಪಡೆದ ಈ ಹಣಕ್ಕೆ ನೌಕರರು ಯಾವುದೇ ಬಡ್ಡಿಯನ್ನು ಪಾವತಿಸಬೇಕಾಗಿಲ್ಲ. ಈ ಹಣ ಖರ್ಚು ಮಾಡಲು ಮಾರ್ಚ್ 31ರವರೆಗೆ ಕಾಲಾವಕಾಶ ನೀಡಲಾಗಿದ್ದು, ಸರ್ಕಾರಿ ನೌಕರರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.3

Leave A Reply

Your email address will not be published.