Mangalore Jobs : NMPTಯಲ್ಲಿ ಉದ್ಯೋಗವಕಾಶ! ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ
NMPT Recruitment 2023: ನವ ಮಂಗಳೂರು ಬಂದರು ಟ್ರಸ್ಟ್ (New Mangalore Port Trust )ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಿ. ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿ ಇಲ್ಲಿ ನೀಡಲಾಗಿದೆ.
ಮಂಗಳೂರಿನಲ್ಲಿ (Mangalore) ಉದ್ಯೋಗ ಹುಡುಕುತ್ತಿರುವವರಿಗೆ ಇದೊಂದು ಒಳ್ಳೆಯ ಉದ್ಯೋಗವಕಾಶ (Job Opportunity) ಎಂದೇ ಹೇಳಬಹುದು. ಅಭ್ಯರ್ಥಿಗಳು ತಡಮಾಡದೇ ಈ ಕೂಡಲೇ ಅರ್ಜಿ ಹಾಕಿ. ಸೆಪ್ಟೆಂಬರ್ 8, 2023 ರಂದು ಸಂದರ್ಶನ ನಡೆಯಲಿದೆ. ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಇದೊಂದು ಉತ್ತಮ ಅವಕಾಶವಾಗಿ ಇದನ್ನು ಉಪಯೋಗಿಸಿ ಕೊಳ್ಳುವುದು ಉತ್ತಮ. ಎನ್‌ಎಂಪಿಟಿ ಉದ್ಯೋಗವಕಾಶ (NMPT Recruitment 2023) ದ ಬಗ್ಗೆ ಇಲ್ಲಿದೆ ಮಾಹಿತಿ.
ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 07/03/2023
ಸಂದರ್ಶನ ನಡೆಯುವ ದಿನಾಂಕ: ಸೆಪ್ಟೆಂಬರ್ 8, 2023
ಹುದ್ದೆ : ಪೈಲೆಟ್ (Pilot)
ಹುದ್ದೆ ಸಂಖ್ಯೆ : 2
ವಿದ್ಯಾರ್ಹತೆ (Education) : ನೇಮಕಾತಿ ಅಧಿಸೂಚನೆಯಲ್ಲಿ ವಿದ್ಯಾರ್ಹತೆಯ ಬಗ್ಗೆ ವಿವರವಾಗಿ ತಿಳಿಸಲಾಗಿದೆ.
ಅರ್ಹತೆ : ಅಭ್ಯರ್ಥಿಗಳು ಬಂದರುಗಳು, ಶಿಪ್ಪಿಂಗ್ ಮತ್ತು ಜಲಮಾರ್ಗಗಳ ಸಚಿವಾಲಯವು ನೀಡಿದ ಫಾರಿನ್-ಗೋಯಿಂಗ್ ಶಿಪ್ನ ಮಾಸ್ಟರ್ ಆಗಿ ಸಾಮರ್ಥ್ಯದ ಪ್ರಮಾಣಪತ್ರವನ್ನು ಹೊಂದಿರಬೇಕು.
ವಯೋಮಿತಿ (Age): ನವ ಮಂಗಳೂರು ಬಂದರು ಟ್ರಸ್ಟ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 55 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ (Selection): ಈ ಹುದ್ದೆಗೆ ಅರ್ಜಿ ಸಲ್ಲಿಸಿದವರಿಗೆ ಲಿಖಿತ ಪರೀಕ್ಷೆ, ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ವೇತನ (Salary) : ಈ ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹ 75,000 ಸಂಬಳ ನೀಡಲಾಗುವುದು.
ಉದ್ಯೋಗದ ಸ್ಥಳ: ಮಂಗಳೂರು (Mangalore)
ಸಂದರ್ಶನ ನಡೆಯುವ ಸ್ಥಳ: ಚೇಂಬರ್ ಆಫ್ ಚೇರ್‌ಪರ್ಸನ್
ನವ ಮಂಗಳೂರು ಬಂದರು ಪ್ರಾಧಿಕಾರ
ಪಣಂಬೂರು
ಮಂಗಳೂರು
ಕರ್ನಾಟಕ – 575010
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ. ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ 0824-2887250 ಗೆ ಕರೆ ಮಾಡಿ.