Mahindra Thar : ಮಹೀಂದ್ರಾ ಥಾರ್ ಬೇಸ್ ರೂಪಾಂತರಕ್ಕೆ ಭಾರೀ ಬೇಡಿಕೆ!
Mahindra Thar: ಇತ್ತೀಚೆಗೆ ಜನರು ಹೊಸ ಮಾದರಿ ಕಾರನ್ನು ಹೆಚ್ಚಾಗಿ ಆಯ್ಕೆ ಮಾಡುತ್ತಾರೆ. ಅದರಲ್ಲೂ ಈಗಾಗಲೇ ಮಹೀಂದ್ರಾ ಥಾರ್ (mahindra thar) ಬೇಸ್ ರೂಪಾಂತರಕ್ಕೆ ಭಾರೀ ಬೇಡಿಕೆ ಇದ್ದು, ಇದೀಗ ಸ್ವದೇಶಿ ವಾಹನ ತಯಾರಕ ಕಂಪನಿಯಾದ (company ) ಮಹೀಂದ್ರಾ ಎರಡನೇ ತಲೆಮಾರಿನ ಥಾರ್‌ನ 4×2 ಬೇಸ್ ರೂಪಾಂತರವನ್ನು ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಗೊಳಿಸಿದೆ. ಇದು ಹೆಚ್ಚಿನ ವೈಶಿಷ್ಯ ಒಳಗೊಂಡಿದ್ದು ಮಾರಾಟದಲ್ಲಿ ಹೆಚ್ಚಿನ ನಿರೀಕ್ಷೆ ಇಡಲಾಗಿದೆ.
ಮುಖ್ಯವಾಗಿ ಮಹೀಂದ್ರಾ ಥಾರ್ ಆರ್‌ಡಬ್ಲ್ಯೂಡಿ ಆವೃತ್ತಿಯ ಮೂಲ ಎಎಕ್ಸ್ ರೂಪಾಂತರವು ಒಳಭಾಗವನ್ನು ಪ್ರದರ್ಶಿಸುವ ವಿಡಿಯೋವನ್ನು (video ) Yash9w ತಮ್ಮ ಯೂಟ್ಯೂಬ್ (YouTube ) ಚಾನೆಲ್‌ನಲ್ಲಿ ಅಪ್‌ಲೋಡ್ (upload ) ಮಾಡಿದ್ದಾರೆ. ಈ ವೀಡಿಯೊದಲ್ಲಿ, LX ಆವೃತ್ತಿಗೆ ಹೋಲಿಸಿದರೆ ಬೇಸ್ AX ಮಾದರಿಯಲ್ಲಿ ಇರುವ ಎಲ್ಲಾ ಬದಲಾವಣೆಗಳ ಬಗ್ಗೆ ವ್ಲಾಗರ್ ತಿಳಿಸಿದ್ದಾರೆ. ಇಲ್ಲಿ ಕಂಡುಬರುವ ಎಸ್‍ಯುವಿ AX ಹಾರ್ಡ್ ಟಾಪ್ ರೂಪಾಂತರವಾಗಿದೆ. ಈ ಎಸ್‍ಯುವಿ ಹೊರಗಿನಿಂದ ಸಾಮಾನ್ಯ ಆವೃತ್ತಿಯಂತೆ ಕಾಣುತ್ತದೆ. ಹ್ಯಾಲೊಜೆನ್ ಹೆಡ್‌ಲ್ಯಾಂಪ್‌ಗಳು, ಬಾನೆಟ್ ಕ್ಲಿಪ್‌ಗಳು, ಸಿಗ್ನೇಚರ್ ಗ್ರಿಲ್ ಮತ್ತು ಒರಟಾದ ಮುಂಭಾಗದ ಬಂಪರ್ ಇವೆ.
ಈ ಮಾದರಿಯಲ್ಲಿ ಫಾಗ್ ಲ್ಯಾಂಪ್‌ಗಳು ಮತ್ತು ಫೆಂಡರ್‌ನಲ್ಲಿ LED DRL ಗಳಂತಹ ಫಿಚರ್ಸ್ ಗಳನ್ನು ಕಳೆದುಕೊಳ್ಳುತ್ತದೆ. ಟರ್ನ್ ಇಂಡಿಕೇಟರ್ಸ್ ಈ ಮಾದರಿಯಲ್ಲಿ ಕೂಡ ಕಾಣಬಹುದು.
ಈ ಎಸ್‍ಯುವಿಯ ಸೈಡ್ ಪ್ರೊಫೈಲ್, ಸ್ಟೀಲ್ ರಿಮ್‌ಗಳೊಂದಿಗೆ ಮಾತ್ರ ಲಭ್ಯವಿದೆ. ಇವು ಗಾತ್ರದಲ್ಲಿ ಚಿಕ್ಕದಾಗಿದೆ. ಮೂಲ ರೂಪಾಂತರವು 16 ಇಂಚಿನ ಸ್ಟೀಲ್ ರಿಮ್‌ಗಳನ್ನು AT ಟೈರ್‌ಗಳೊಂದಿಗೆ ಬರುತ್ತಿದೆ.
ಬಿಳಿ ಬಣ್ಣದ ವ್ಹೀಲ್ ಗಳು ಮೂಲ ರೂಪಾಂತರದಲ್ಲಿ ಚೆನ್ನಾಗಿ ಕಾಣುತ್ತವೆ ಮತ್ತು ಅವುಗಳು ಚಿಕ್ಕದಾಗಿ ಕಾಣುವುದಿಲ್ಲ.
ಫೆಂಡರ್‌ನಲ್ಲಿ ಯಾವುದೇ ಆಂಟೆನಾ ಇಲ್ಲ ಮತ್ತು RWD ಆವೃತ್ತಿಯಲ್ಲಿ ಎಂಜಿನ್ ಬ್ಯಾಡ್ಜ್ ಅನ್ನು ಸಹ ತೆಗೆದುಹಾಕಲಾಗಿದೆ. ಬೇಸ್ ವೇರಿಯಂಟ್‌ನ ಫೂಟ್ ರೆಸ್ಟ್‌ಗಳು ಎಲ್ಲಾ ಲೋಹವಾಗಿದೆ ಮತ್ತು ORVM ಗಳನ್ನು ಎಲೆಕ್ಟ್ರಿಕ್ ಆಗಿ ಹೊಂದಿಸಲಾಗುವುದಿಲ್ಲ. ಈ ಎಸ್‍ಯುವಿಯ ಲೋ-ಸ್ಪೆಕ್ ಮಾದರಿಯ ಹಿಂಭಾಗದಲ್ಲಿ ಸ್ಪೇರ್ ವೀಲ್ ಕೂಡ ಸ್ಟೀಲ್ ರಿಮ್ ಆಗಿದೆ.
ಇದು ರಿಯರ್ ವ್ಹೀಲ್ ಆವೃತ್ತಿಯಾಗಿರುವುದರಿಂದ, ಎಸ್‍ಯುವಿಯಲ್ಲಿ ನ 4×4 ಗೇರ್ ಲಿವರ್ ಅನ್ನು ಹೊಂದಿಲ್ಲ. ಆ ಜಾಗವನ್ನು ಸ್ಟೋರೇಜ್ ಸ್ಪೇಸ್ ಆಗಿ ಮಾರ್ಪಡಿಸಲಾಗಿದೆ.
ಈ ಹೊಸ ಮಹೀಂದ್ರಾ ಥಾರ್ RWD ತನ್ನ 4WD ಒಡಹುಟ್ಟಿದವರಂತೆಯೇ ಅದೇ ಪೆಟ್ರೋಲ್ ಎಂಜಿನ್ ಅನ್ನು 2.0-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್‌ನೊಂದಿಗೆ ಬರುತ್ತಿದೆ. ಈ ಎಂಜಿನ್ 150 ಬಿಹೆಚ್‍ಪಿ ಪವರ್ ಮತ್ತು 320 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ಪೆಟ್ರೋಲ್ ಎಂಜಿನ್ ಅನ್ನು 6-ಸೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ನೀಡಲಾಗುತ್ತದೆ. ಮಹೀಂದ್ರಾ ಥಾರ್ 2WD ಡೀಸೆಲ್ ಎಂಜಿನ್ ಮಹೀಂದ್ರಾದಿಂದ ಡಿ117 ಸಿಆರ್‌ಡಿಇ ಎಂದು ಕರೆಯಲಾದ ಹೊಸ ಯುನಿಟ್ ಆಗಿದೆ.
ಈ ಹೊಸ D117 CRDe ಎಂಜಿನ್ 1.5 ಲೀಟರ್ 117 ಬಿಹೆಚ್‍ಪಿ ಪವರ್ ಮತ್ತು 300 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ಎಸ್‍ಯುವಿಯ ಟೈಲ್ ಲ್ಯಾಂಪ್‌ಗಳು ಎಲ್ಲಾ ರೂಪಾಂತರಗಳಲ್ಲಿ ಒಂದೇ ಆಗಿರುತ್ತವೆ. ಈ ಎಸ್‍ಯುವಿಯ ಒಳಭಾಗದಲ್ಲಿ ಸೀಟುಗಳು ಫ್ಯಾಬ್ರಿಕ್ ಮತ್ತು ಇನ್ಸ್ ಟ್ರೂಮೆಮ್ಟ್ ಕ್ಲಸ್ಟರ್ ಕೂಡ ಒಂದೇ ಆಗಿರುತ್ತದೆ.
ಇಲ್ಲಿ ಪ್ರಮುಖ ವ್ಯತ್ಯಾಸವೆಂದರೆ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ರೂಫ್-ಮೌಂಟೆಡ್ ಸ್ಪೀಕರ್‌ಗಳು ಮತ್ತು ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್ ಅನ್ನು ಹೊಂದಿಲ್ಲ .
ಈ ಎಸ್‍ಯುವಿಯಲ್ಲಿ ಟ್ರ್ಯಾಕ್ಷನ್ ಕಂಟ್ರೋಲ್, ಐಡಲ್ ಸ್ಟಾರ್ಟ್-ಸ್ಟಾಪ್ ಸಿಸ್ಟಮ್, ಮ್ಯಾನುಯಲ್ ಎಸಿ, ಹಿಲ್ ಡಿಸೆಂಟ್ ಕಂಟ್ರೋಲ್ ಇತ್ಯಾದಿಗಳನ್ನು ನೀಡುತ್ತದೆ.