Gram Suraksha: ದಿನವೊಂದಕ್ಕೆ 50 ರೂ. ಉಳಿಸಿ, 35,00,000ರೂ. ಪಡೆಯಿರಿ

Gram Suraksha :ಪ್ರತಿಯೊಬ್ಬರೂ ತಮ್ಮ ಅಗತ್ಯಗಳಿಗೆ ಅನುಗುಣವಾಗಿ ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಆದರೆ ಅಂಚೆ ಕಚೇರಿ (post office ) ಯೋಜನೆಗಳಲ್ಲಿ ಹೂಡಿಕೆ ಮಾಡಿದಲ್ಲಿ ನಿಮಗೆ ಹಲವಾರು ಪ್ರಯೋಜನಗಳಿವೆ. ಅಂಚೆ ಕಚೇರಿಯು ಸರ್ಕಾರದ (government )ಬೆಂಬಲವನ್ನು ಹೊಂದಿರುವುದರಿಂದ ಅವುಗಳು ವಿಶ್ವಾಸಾರ್ಹವಾಗಿದ್ದು, ನಿಮ್ಮ ಹಣವು ಸಂಪೂರ್ಣವಾಗಿ ಸುರಕ್ಷಿತವಾಗಿರಲು (safe)ಮತ್ತು ಯಾವುದೇ ಒತ್ತಡವಿಲ್ಲದೆ ನೀವು ಉತ್ತಮ ಲಾಭವನ್ನು ಪಡೆಯಲು ಅಂಚೆ ಕಚೇರಿಯಲ್ಲಿ ಹೂಡಿಕೆ(Investment) ಮಾಡುವುದು ಉತ್ತಮ.

ಇದೀಗ ಅಂಚೆ ಕಚೇರಿಯು ಪರಿಚಯಿಸಿರುವ ಹಲವಾರು ಗ್ರಾಮೀಣ ಅಂಚೆ ವಿಮಾ ಯೋಜನೆಗಳಲ್ಲಿ, ಗ್ರಾಮ ಸುರಕ್ಷಾ ಯೋಜನೆಯು (Gram suraksha yojana) ಒಂದಾಗಿದೆ. ಮುಖ್ಯವಾಗಿ 1995ರಲ್ಲಿ ಗ್ರಾಮೀಣ ಭಾರತೀಯರ ಅಗತ್ಯತೆಗಳನ್ನು ಪೂರೈಸಲು ಗ್ರಾಮೀಣ ಅಂಚೆ ಜೀವ ವಿಮೆ(RPLI) ಯೋಜನೆಯನ್ನು ಸ್ಥಾಪಿಸಲಾಯಿತು. ಈ ಯೋಜನೆಯ ಮೂಲ ಉದ್ದೇಶವೆಂದರೆ ಗ್ರಾಮೀಣ ಜನರಿಗೆ ವಿಮಾ ರಕ್ಷಣೆಯನ್ನು ಒದಗಿಸುವುದಾಗಿದೆ. ಅಲ್ಲದೆ, ಗ್ರಾಮೀಣ ಭಾಗದ ಮಹಿಳಾ ಉದ್ಯೋಗಿಗಳಿಗೆ ಸಹಾಯ ಮಾಡುವ ಮೂಲಕ ಗ್ರಾಮೀಣ ಜನತೆಯಲ್ಲಿ ವಿಮಾ ಜಾಗೃತಿಯನ್ನು ಮೂಡಿಸುವುದಾಗಿದೆ.

ಪ್ರಸ್ತುತ ಭಾರತದಲ್ಲಿ ಗ್ರಾಮ ಸುರಕ್ಷಾ ಯೋಜನೆಯು ದಿನಕ್ಕೆ ಕೇವಲ 50ರೂ. ಪ್ರೀಮಿಯಂಗೆ 35ಲಕ್ಷ ರೂ.ವರೆಗೆ ಪಾವತಿಯ ವಿಮಾ ಪಾಲಿಸಿಯನ್ನು ಒದಗಿಸುತ್ತದೆ. ಒಂದುವೇಳೆ ತಿಂಗಳಿಗೆ 1,515 ಅಥವಾ ದಿನಕ್ಕೆ 50ರೂ.ನಂತೆ ಹೂಡಿಕೆ ಮಾಡಿದರೆ ಪಾಲಿಸಿ ಮೆಚ್ಯುರ್‌ ಆದಾಗ ಪಾಲಿಸಿದಾರರು 34.60 ಲಕ್ಷ ರೂ. ಪಡೆಯುತ್ತಾರೆ. 55 ವರ್ಷಕ್ಕೆ ಮೆಚ್ಯುರಿಟಿ ಲಾಭ 31,60,000ರೂ. ಆಗಿದ್ದು, 58 ವರ್ಷಕ್ಕೆ 33,40,000ರೂ. ಹಾಗೂ 60 ವರ್ಷಕ್ಕೆ 34,60,000 ಲಕ್ಷ ರೂ. ಲಾಭ ಪಡೆದುಕೊಳ್ಳಬಹುದು.

ಗ್ರಾಮ ಸುರಕ್ಷಾ ಯೋಜನೆಯ ನಿಯಮಗಳು ಇಂತಿವೆ :
ಈ ಯೋಜನೆ ಆರಂಭಿಸಲು ಕನಿಷ್ಠ ಹಾಗೂ ಗರಿಷ್ಠ ನೋಂದಣಿ ವಯಸ್ಸು ಕ್ರಮವಾಗಿ 19 ಹಾಗೂ 55.
ಭರವಸೆ ನೀಡುವ ಕನಿಷ್ಠ ಹಾಗೂ ಗರಿಷ್ಠ ಮೊತ್ತ ಕ್ರಮವಾಗಿ 10,000 ರೂ. ಹಾಗೂ 10 ಲಕ್ಷ ರೂ. ಆಗಿರುತ್ತದೆ.
ನಾಲ್ಕು ವರ್ಷಗಳ ಬಳಿಕ ಸಾಲ ಪಡೆಯುವ ಸೌಲಭ್ಯ ದೊರೆಯುತ್ತದೆ. ಒಂದುವೇಳೆ ಯೋಜನೆಯನ್ನು ಐದು ವರ್ಷದ ಮೊದಲೇ ಮುಕ್ತಾಯಗೊಳಿಸಿದರೆ, ಅದು ಬೋನಸ್‌ ಪಡೆಯಲು ಅನರ್ಹವಾಗಿರುತ್ತದೆ.
ಪ್ರೀಮಿಯಂ ನಿಲುಗಡೆ ಅಥವಾ ಮುಕ್ತಾಯದ ದಿನಾಂಕದ ಬಳಿಕ ಪರಿವರ್ತನೆ ದಿನಾಂಕವು ಒಂದು ವರ್ಷದೊಳಗೆ ಇಲ್ಲದಿದ್ದರೆ 59 ವರ್ಷದವರೆಗೆ ಎಂಡೋಮೆಂಟ್‌ ಅಶ್ಯೂರೆನ್ಸ್‌ ಪಾಲಿಸಿಯಾಗಿ ಬದಲಿಸಬಹುದು. ಪ್ರೀಮಿಯಂ ಪಾವತಿ ವಯಸ್ಸು 55, 58 ಅಥವಾ 60 ವರ್ಷ ಆಗಿರುತ್ತದೆ. ಒಂದುವೇಳೆ ವಿಮೆಯನ್ನು ಬಿಟ್ಟುಬಿಟ್ಟರೆ ಆಗ ಕಡಿಮೆಯಾದ ಖಾತ್ರಿಯಿಲ್ಲದ ಒಟ್ಟು ಮೊತ್ತದ ಮೇಲೆ ಅನುಪಾತದ ಬೋನಸ್‌ನ್ನು ಪಾವತಿಸಬೇಕಾಗುತ್ತದೆ.
ಪ್ರಸ್ತುತ ಪ್ರತಿ ವರ್ಷವೂ 1000ರೂ. ಹಣಕ್ಕೆ 60ರೂ. ಪ್ರೋತ್ಸಾಹಧನದ ಭರವಸೆಯನ್ನು ನೀಡುತ್ತದೆ.

ಈ ಮೇಲಿನಂತೆ ನೀವು ಗ್ರಾಮ ಸುರಕ್ಷಾ ಯೋಜನೆಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.

Leave A Reply

Your email address will not be published.