Dry chilly : ಒಣಮೆಣಸಿನ ಕೊರತೆ ಕಾಡಲಿದೆಯೇ? ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಸಂಭವ?!

Dry Chilly : ಮಾರುಕಟ್ಟೆಯಲ್ಲಿ ದಿನೇ ದಿನೇ ದಿನೋಪಯೋಗಿ ವಸ್ತುಗಳ‌ ಬೆಲೆಯಲ್ಲಿ ಏರಿಕೆ ಆಗುತ್ತಲೇ ಇದೆ. ಅಡಿಕೆ (arecanut) ಏಲಕ್ಕಿ (True cardamom), ಕಾಫಿ (coffee), ತರಕಾರಿ (vegetable) ಸೇರಿದಂತೆ ಹಲವು ವಸ್ತುಗಳ ಬೆಲೆಯಲ್ಲಿ ಏರಿಳಿತ ಆಗುತ್ತಿದೆ. ಹಾಗೆಯೇ ಇದೀಗ ಒಣಮೆಣಸಿನ (Dry chilly) ಬೆಲೆಯಲ್ಲೂ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಮಂಗಳೂರು (manglore) ನಗರಕ್ಕೆ ಹೊರ ಜಿಲ್ಲೆಗಳಿಂದ ಬರುವ ಒಣ ಮೆಣಸಿನ ಪ್ರಮಾಣ ಕಡಿಮೆಯಾಗಿದೆ. ಈ ಕಾರಣದಿಂದ ನಗರದ ಬಂದರಿನ ಸಗಟು ಮಾರುಕಟ್ಟೆಯಲ್ಲಿ ಒಣಮೆಣಸಿಗೆ ಕೊರತೆ ಉಂಟಾಗಿದೆ. ಹಾಗಾಗಿ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ.

ಬಳ್ಳಾರಿಯ (ballari) ಬ್ಯಾಡಗಿಯಿಂದ ಮಂಗಳೂರಿಗೆ ಪ್ರತಿದಿನ 2,000 ದಿಂದ 2,500 ಚೀಲ ಮೆಣಸು ಬರುತ್ತಿತ್ತು. ಆದರೆ ಬುಧವಾರ ಇದಕ್ಕಿಂತ ಕಡಿಮೆ ಚೀಲ ಬಂದಿದ್ದು, ಗುರುವಾರ 1,200 ಮೆಣಸಿನ ಚೀಲ ಬಂದಿದೆ. ಇದನ್ನು ಗಮನಿಸಿದರೆ, ಮೆಣಸಿನ ಕೊರತೆಯಿಂದ ಬೆಲೆಯಲ್ಲಿ ಏರಿಕೆ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸೋಮವಾರ ಏಲಂ ನಡೆದಿದ್ದು, ಅದರಲ್ಲಿ ಮೆಣಸಿನ ಬೆಲೆ ಕಿಲೋಗೆ 320 ರೂ. ನಿಂದ 450 ರೂ. ವರೆಗೆ ಏರಿಕೆಯಾಗಿದೆ. ಈ ಬಾರಿ ರೈತರು (farmers) ತಡವಾಗಿ ಮೆಣಸು (pepper) ಮಾರಾಟ ಮಾಡಿದ್ದು, ಎರಡು ವಾರದಲ್ಲಿ ಮಾರುಕಟ್ಟೆಗೆ ಹೊಸ ಬೆಳೆ ಬರುವ ನಿರೀಕ್ಷೆ ಇದ್ದು, ಇದರಿಂದ ಬೆಲೆ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಬಂದರು ಶ್ರಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಕೆ. ಇಮ್ತಿಯಾಝ್ ಹೇಳಿದ್ದಾರೆ.

Leave A Reply

Your email address will not be published.