Tecno Spark 10 Pro: ಈ ಸ್ಮಾರ್ಟ್‌ಫೋನ್‌ ಐಫೋನ್​ನಂತೆ ಕಾಣುತ್ತೆ ! ಬೆಲೆ 10,000 ಗಿಂತಲೂ ಕಡಿಮೆ

Tecno Spark 10 Pro :ನಮಗೆಲ್ಲರಿಗೂ ಆಪಲ್ (Apple) ನ ಐಫೋನ್ ಅಂದರೆ ಇಷ್ಟ. ಹಾಗೆಯೇ ಅದನ್ನು ಕೊಂಡುಕೊಳ್ಳಬೇಕೆಂಬ ಆಸೆಯು ಇದೆ. ಆದರೆ ಕೊಂಡುಕೊಳ್ಳಲು ದುಬಾರಿ ಆಗಿರುವ ಕಾರಣ ಕನಸು(dream ) ಹಾಗೆಯೇ ಉಳಿದಿರಬಹುದು. ಅದರ ಬದಲು ನೀವು ನಿಮ್ಮ ಬಜೆಟ್ ಗೆ ತಕ್ಕ ಫೋನನ್ನು ಕೊಂಡು ಕೊಳ್ಳುವುದು ಸಹಜ. ಇದೀಗ ನಿಮಗೆ ಐಫೋನ್ 14 ಪ್ರೊ ಫೋನ್(IPhone 14 Pro) ಗೆ ಹೋಲಿಕೆ ಆಗುವ ಟೆಕ್ನೋ ಸ್ಪಾರ್ಕ್ 10 ಪ್ರೊ (Tecno Spark 10 Pro) ಮಾದರಿ ಯನ್ನು ಬಿಡುಗಡೆ ಮಾಡಲಾಗಿದೆ.

ಮುಖ್ಯವಾಗಿ ಟೆಕ್ನೋ ಸ್ಪಾರ್ಕ್ 10 ಪ್ರೊ (Tecno Spark 10 Pro) ಇದರಲ್ಲಿರುವ ಹಿಂಭಾಗದ ಕ್ಯಾಮೆರಾದ ಡಿಸೈನ್ ಗಮನಿಸಿದರೆ ಐಫೋನ್ ರೀತಿಯಲ್ಲೇ ರೂಪಿಸಲಾಗಿದೆ.

Tecno Spark 10 Pro ಫೋನಿನ ವಿಶೇಷತೆ ಇಂತಿವೆ :

ಟೆಕ್ನೋ ಸ್ಪಾರ್ಕ್ 10 ಪ್ರೊ ಇದು 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.8 ಇಂಚಿನ ಹೆಚ್‌ಡಿ + ಡಾಟ್ ಡಿಸ್‌ಪ್ಲೇ ಹೊಂದಿದೆ. ಇದು 90Hz ರಿಫ್ರೆಶ್​ರೇಟ್​ನಿಂದ ಕೂಡಿದೆ. ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೊ G88 12nmಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 13ನ HiOS 12.6 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಈ ಫೋನಿನಲ್ಲಿ ಪ್ರಮುಖ ಹೈಲೇಟ್ ಕ್ಯಾಮೆರಾ (camera ) ಆಗಿದ್ದು, ಹಿಂಭಾಗ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಡ್ಯುಯೆಲ್ ಫ್ಲ್ಯಾಶ್​ನಿಂದ ಆವೃತ್ತವಾಗಿರುವುದು ಮತ್ತೊಂದು ವಿಶೇಷತೆ.

ಇನ್ನು ದ್ವಿತೀಯ ಕ್ಯಾಮೆರಾ 2 ಮೆಗಾಫಿಕ್ಸೆಲ್​ನ ಡೆಪ್ತ್ ಸೆನ್ಸಾರ್​ನಿಂದ ಕೂಡಿದೆ. ಮೂರನೇ ಕ್ಯಾಮೆರಾ AI ಬೆಂಬಲಿತದಿಂದ ಕೂಡಿದೆ. ಇದಲ್ಲದೆ 32 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದ್ದು ಇಲ್ಲೂ ಡ್ಯುಯೆಲ್ ಎಲ್​ಇಡಿ ಫ್ಲ್ಯಾಶ್ ಇದೆ. ಜೊತೆಗೆ ಫೋಟೋ ಎಡಿಟಿಂಗ್​ಗೆ ಕೂಡ ಆಯ್ಕೆಗಳು ಇರಲಿವೆ.

ಇನ್ನು ಟೆಕ್ನೋ ಸ್ಪಾರ್ಕ್ 10 ಪ್ರೊ ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿ ಒಳಗೊಂಡಿದೆ. ಇದಕ್ಕೆ ತಕ್ಕಂತೆ 18 ವೋಲ್ಟ್ ವೇಗದ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಬೆಂಬಲ ಪಡೆದುಕೊಂಡಿಲ್ಲ. 4ಜಿ ಎಲ್ ಟಿಇ, ವೈ-ಫೈ 802.11, ಬ್ಲೂಟೂತ್ 5, ಜಿಪಿಎಸ್, ಯುಎಸ್​ಬಿ ಟೈಪ್-ಸಿ, ಎನ್​ಎಫ್​ಸಿ ಅನ್ನು ಒಳಗೊಂಡಿದೆ. ಇದಲ್ಲದೆ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಒಳಗೊಂಡಿದೆ.

ಈ ಫೋನಿನ ಹಿಂಭಾಗದ ಪ್ಯಾನೆಲ್ ಗಾಜುಗಳಿಂದ ಆವೃತ್ತವಾಗಿರುವುದು ಮುಖ್ಯ ಹೈಲೇಟ್ ಆಗಿದ್ದು, ಇದು 6GB RAM ಮತ್ತು 128GB, 8GB RAM ಮತ್ತು 256GB ಸ್ಟೋರೇಜ್ ಸಾಮರ್ಥ್ಯದೊಂದಿಗೆ ಬರಬಹುದು. ಸದ್ಯ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಟೆಕ್ನೋ ಸ್ಪಾರ್ಕ್ 10 ಪ್ರೊ ಸ್ಮಾರ್ಟ್​ಫೋನ್ ಬಿಡುಗಡೆ ಆಗಿದ್ದು, ಈ ಹಿಂದಿನ ಟೆಕ್ನೋ ಫೋನ್​ಗಳಂತೆ ಇದು ಸಹ ಆಕರ್ಷಕ ಫೀಚರ್​ಗಳಿಂದ ಕೂಡಿದೆ ಎನ್ನಲಾಗಿದೆ.

ಭಾರತದಲ್ಲಿ ಈ ಫೋನಿನ ಹಾಗೂ ಲಭ್ಯತೆ ಬಗ್ಗೆ ಕಂಪನಿ ಇನ್ನಷ್ಟೆ ಬಹಿರಂಗ ಪಡಿಸಬೇಕಿದೆ. ಈ ತಿಂಗಳ ಅಂತ್ಯದ ಒಳಗೆ ಖರೀದಿಗೆ ಅವಕಾಶ ಮಾಡಿಕೊಡಲಿದೆ ಎನ್ನಲಾಗಿದೆ. ಆದರೆ ಈ ಫೋನಿನ ನಿಖರ ಬೆಲೆಯನ್ನು ಕಂಪನಿ ಇನ್ನೂ ಬಹಿರಂಗ ಪಡಿಸಿಲ್ಲ. ಆದರೆ, ಮೂಲಗಳ ಪ್ರಕಾರ 10,000 ರೂ. ಅಂದಾಜಿನಲ್ಲಿ ಇರಬಹುದು ಎನ್ನಲಾಗಿದೆ.

ಇದನ್ನೂ ಓದಿ :Hero Super Splendor XTEC : ಬಂತು ನೋಡಿ ಹೊಚ್ಚ ಹೊಸ ಹೀರೋ ಸ್ಪ್ಲೆಂಡರ್‌ ಬೈಕ್‌, ಅಬ್ಬಬ್ಬಾ ಏನೆಲ್ಲಾ ಫೀಚರ್ಸ್‌ ಇದೆ ಗುರು!!!

Leave A Reply

Your email address will not be published.