SBI ನಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್ ಇದ್ದರೆ, ಈ ಹೊಸ ಸೇವೆಗಳ ಬಗ್ಗೆ ಇಲ್ಲಿದೆ ಮಾಹಿತಿ!

SBI Account: SBI ಗ್ರಾಹಕರೇ, ನಿಮಗೊಂದು ಮಹತ್ವದ ಮಾಹಿತಿ ಇಲ್ಲಿದೆ. ಇನ್ಮುಂದೆ SBI ನಲ್ಲಿ ಬ್ಯಾಂಕ್ ಅಕೌಂಟ್ ಹೊಂದಿರುವವರು ತಮ್ಮ ಅಕೌಂಟ್​ನ ಸಂಪೂರ್ಣ​ ಮಾಹಿತಿಯನ್ನು ವಾಟ್ಸಾಪ್​​ನಲ್ಲೇ ನೋಡಬಹುದು. ಹೇಗೆ ಅಂತೀರಾ? ವಿಶ್ವಾದ್ಯಂತ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಪ್ಲಾಟ್‌ಫಾರ್ಮ್ (Messaging Platform) ವಾಟ್ಸಪ್ (WhatsApp) ಇದೀಗ ತನ್ನ ಬಳಕೆದಾರರಿಗೆ ಹೊಸ ಫೀಚರ್ (feature) ಅನ್ನು ಪರಿಚಯಿಸಿದೆ. ಈ ಫೀಚರ್ ನಿಂದಾಗಿ ಇನ್ಮುಂದೆ ಎಸ್​​ಬಿಐ ಅಕೌಂಟ್​ (SBI Account) ಹೊಂದಿರುವವರು ತಮ್ಮ ಅಕೌಂಟ್​ನ ​ಸಂಪೂರ್ಣ ಮಾಹಿತಿಯನ್ನು ವಾಟ್ಸಾಪ್​​ನಲ್ಲೇ ನೋಡಬಹುದು.

ಭಾರತೀಯ ಸ್ಟೇಟ್ ಬ್ಯಾಂಕ್ (SBI) ಹಾಗೂ ವಾಟ್ಸಾಪ್​ ಒಟ್ಟಾಗಿ ವಾಟ್ಸಾಪ್​ ಬ್ಯಾಂಕಿಂಗ್ ಸರ್ವೀಸ್​ ಅನ್ನು ಪ್ರಾರಂಭಿಸಿದೆ. ಈ ಹೊಸ ಫೀಚರ್ ಬಗ್ಗೆ ಎಸ್​ಬಿಐ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, “SBI ಗ್ರಾಹಕರು ಇನ್ಮುಂದೆ ವಾಟ್ಸ್​ಆ್ಯಪ್ ಮೂಲಕ ಖಾತೆಯ ಹಣ ಮತ್ತು ಮಿನಿ ಸ್ಟೇಟ್​ಮೆಂಟ್ ಅನ್ನು ಪಡೆಯಬಹುದು” ಎಂದು ಹೇಳಿದೆ.

ವಾಟ್ಸಪ್ ನಲ್ಲಿ ಅಕೌಂಟ್​ನಲ್ಲಿನ ಹಣ ಚೆಕ್ ಮಾಡೋದು ಹೇಗೆ? ​
• ವಾಟ್ಸಾಪ್​ನಲ್ಲಿ ಹಣ ಚೆಕ್ ಮಾಡಲು, ನೀವು ನಿಮ್ಮ ಖಾತೆಯನ್ನು ನೋಂದಾಯಿಸಿಕೊಳ್ಳಬೇಕು.
• ನೋಂದಾವಣೆಗೆ ನೀವು ಬ್ಯಾಂಕ್‌ಗೆ (bank) ಯಾವ ಮೊಬೈಲ್ (mobile) ನಂಬರ್ ನೀಡಿರುತ್ತೀರಾ ಆ ಮೊಬೈಲ್ ಸಂಖ್ಯೆಯಿಂದ 917208933148 ಗೆ “SMS WAREG A/c No” ಈ ರೀತಿ ಟೈಪ್ ಮಾಡಿ ಕಳುಹಿಸಬೇಕು.
• ನಂತರ ಅಲ್ಲಿ ಅಕೌಂಟ್ ಬ್ಯಾಲೆನ್ಸ್, ಮಿನಿ ಸ್ಟೇಟ್​ಮೆಂಟ್, ವಾಟ್ಸಾಪ್​​ ಬ್ಯಾಂಕಿಂಗ್‌ನಿಂದ ಡಿ–ರಿಜಿಸ್ಟರ್ ಮಾಡಿ ಎಂಬ ಆಯ್ಕೆಗಳು ಇರುತ್ತದೆ.
• ನಿಮಗೆ ಅಕೌಂಟ್ ಬ್ಯಾಲೆನ್ಸ್ ತಿಳಿದುಕೊಳ್ಳಬೇಕೆಂದಾದರೆ
ಒಂದನ್ನು ಟೈಪ್​ ಮಾಡಿ ಸೆಂಡ್ ಮಾಡಿ. ಆಗ ನಿಮ್ಮ ಖಾತೆಯಲ್ಲಿ ಎಷ್ಟು ಹಣವಿದೆ ಎಂಬುದರ ಮಾಹಿತಿ ಲಭ್ಯವಾಗುತ್ತದೆ.

ಇದನ್ನೂ ಓದಿ : ಆಂಟಿ ಪ್ರೀತ್ಸೇ! 19 ರ ಯುವಕನೊಂದಿಗೆ ಮಹಿಳೆಯೋರ್ವಳ ಲವ್

Leave A Reply

Your email address will not be published.