Kichha Sudeep New Movie: ಕಿಚ್ಚ ಸುದೀಪ್ ನ ಮುಂದಿನ ಚಿತ್ರಗಳು ಇದೇ ನೋಡಿ; ಡೈರೆಕ್ಟರ್’ ಗಳು ಕೂಡಾ ರೆಡಿ, ಇಲ್ಲಿದೆ ಫುಲ್ ಡೀಟೆಲ್ಸ್ !

Kichha Sudeep New Movie :ಕನ್ನಡದಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ನಟರಲ್ಲಿ ಕಿಚ್ಚ ಸುದೀಪ್ (Kiccha Sudeep) ಕೂಡ ಒಬ್ಬರು. ಕಳೆದ ವರ್ಷ ಪ್ಯಾನ್ ಇಂಡಿಯಾ (Pan India) ಮೂವಿಯಾದ ವಿಕ್ರಾಂತ್ ರೋಣ (Vikranth Rona) ತೆರೆಕಂಡ ಬಳಿಕ ಸುದೀಪ್ ಅವರ ಕಡೆಯಿಂದ ಹೊಸ ಸಿನಿಮಾ ಬಗ್ಗೆ ಯಾವುದೇ ಸುಳಿವಿಲ್ಲ. ಇದಲ್ಲದೆ ಕಿಚ್ಚನ ಮುಂದಿನ ಚಿತ್ರ (Kichha Sudeep New Movie) ಯಾವುದು ಎನ್ನುವುದಕ್ಕೆ ಇನ್ನೂ ಸ್ಪಷ್ಟವಾದ ಉತ್ತರ ಯಾರಿಗೂ ಸಿಕ್ಕಿಲ್ಲ. ಆದ್ರೀಗ ಹೊಸ ಸುದ್ದಿ ಬರ್ತಿದೆ. ಸುದೀಪ್ ಅವರ ಮುಂದಿನ ಸಿನಿಮಾಗಳ ಕುರಿತು ಕೆಲವೊಂದು ವಿಚಾರಗಳು ಗರಿಗೆದರಿದ್ದು, ಅದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

 

ಹೌದು, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮುಂದಿನ ಸಿನಿಮಾ ಯಾವುದು? ಎಂಬ ಪ್ರಶ್ನೆ ಕನ್ನಡ ಸಿನಿಪ್ರೇಮಿಗಳು ಮತ್ತು ಸುದೀಪ್ ಅಭಿಮಾನಿಗಳಲ್ಲೂ ಮೂಡಿದೆ. ಆದರೀಗ ಈ ಕುರಿತು ಕೆಲವು ವಿಚಾರಗಳು ಮುನ್ನಲೆಗೆ ಬಂದಿದ್ದು, ಸ್ಯಾಂಡಲ್ ವುಡ್ (Sandalwood) ಅಕಾಡದಲ್ಲಿ ಗುಸು ಗುಸು ಶುರುವಾಗಿದೆ. ಯಾಕಂದ್ರೆ ಕಿಚ್ಚನಿಗಾಗಿ ಕನ್ನಡ ಮತ್ತು ತಮಿಳು ಡೈರೆಕ್ಟರ್ಸ್ ಗಳು ಕಾಂಪಿಟೇಶನ್ ರೀತಿ ಕಥೆಗಳನ್ನು ರೆಡಿಮಾಡಿಟ್ಟುಕೊಂಡಿದ್ದು, ಕಿಚ್ಚನ ಅನುಮತಿಗೆ ಕಾಯ್ತಿದ್ದಾರಂತೆ. ಹೀಗಾಗಿ ಸುದೀಪ್, ಯಾವ ಕಥೆಗೆ, ಯಾರ ಡೈರೆಕ್ಷನ್ ಗೆ ಓಕೆ ಅನ್ಬೋದು ಅನ್ನುವತ್ತ ಎಲ್ಲರ ಚಿತ್ತ ನೆಟ್ಟಿದೆ.

ಸದ್ಯ ಕನ್ನಡದಲ್ಲಿ ಮನೆಮಾತಾಗಿರುವ ಹಾಗೂ ಈಗಾಗಲೇ ಸುದೀಪ್ ಗೆ ವಿಕ್ರಾಂತ್ ರೋಣವನ್ನು ಡೈರೆಕ್ಟ್ ಮಾಡಿರೋ ನಿರ್ದೇಶಕ, ಅನೂಪ್ ಭಂಡಾರಿ (Anoop Bhandari) ಮತ್ತು ಕಿಚ್ಚ ಸುದೀಪ್ ಒಟ್ಟಿಗೆ ‘ಬಿಲ್ ರಂಗಾ ಬಾದಷಾ’ (Bil Ranga Badasha) ಚಿತ್ರ ಮಾಡ್ತಾರೆ ಅನ್ನುವ ಸುದ್ದಿ ಗಾಂಧಿನಗರದಲ್ಲಿ ಮೊದಲಿಂದಲೂ ಕೇಳಿ ಬರುತ್ತಿತ್ತು. ಈ ಅದ್ಭುತ ಕಥೆಯ ಚಿತ್ರ ಕಿಚ್ಚನ ಪ್ರೋಡಕ್ಷನ್ ಹೌಸ್‌ನಲ್ಲಿಯೇ ರೆಡಿ ಆಗುತ್ತಿದ್ದು, 100 ಕೋಟಿ ಬಜೆಟ್‌ನ ಸಿನಿಮಾ ನಿರ್ಮಾಣ ಆಗುತ್ತದೆ, ಇದಕ್ಕಾಗಿ ಈಗಿಂದಲೇ ಅನೂಪ್ ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ ಎಂಬ ವಿಚಾರ ಕೂಡ ಎಲ್ಲೆಡೆ ಸುದ್ಧಿಯಾಗಿತ್ತು. ಅಂತೆಯೇ ಅದೇ ಚಿತ್ರದ ಕೆಲಸದಲ್ಲಿ ಅನೂಪ್ ಭಂಡಾರಿ ಈಗ ಬ್ಯುಸಿ ಇದ್ದಾರೆ ಅನ್ನುವ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ.

ಇನ್ನು ಕನ್ನಡದ ಮತ್ತೊಬ್ಬ ಖ್ಯಾತ ನಿರ್ದೇಶಕ, ರನ್ನ (Ranna) ಚಿತ್ರದಲ್ಲಿ ಸುದೀಪ್ ಗೆ ಆಕ್ಷನ್ ಕಟ್ ಹೇಳಿದ ನಂದ್ ಕಿಶೋರ್ (Nanda Kishore), ಕಿಚ್ಚನಿಗಾಗಿಯೇ ಒಂದು ಹೊಚ್ಚ ಹೊಸ ಕಥೆಯನ್ನು ರೆಡಿ ಮಾಡಿಕೊಳ್ಳುತ್ತಿದ್ದಾರಂತೆ. ಈ ಮೂಲಕ ಕನ್ನಡಿಗರಿಗೆ ಹಾಗೂ ಸುದೀಪ್ ಕೆರಿಯರ್ ಗೆ ಮತ್ತೊಂದು ಒಳ್ಳೆ ಸಿನಿಮಾ ಕೊಡೋ ಹುಮ್ಮಸ್ಸಿನಲ್ಲಿ ಕಿಶೋರ್ ಭರ್ಜರಿ ತಯಾರಿ ನಡೆಸ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ನಡುವೆ ನಂದ್ ಕಿಶೋರ್ ಹೇಳಿದ ಒನ್‌ ಲೈನ್ ಸ್ಟೋರಿಯನ್ನ , ಕಿಚ್ಚ ಸುದೀಪ್ ಅವ್ರು ಈಗಾಗಲೇ ಕೇಳಿದ್ದು, ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರಂತೆ.

ಇದರ ನಡುವೆ ತಮಿಳು ನಿರ್ದೇಶಕ ವೆಂಕಟ್‌ ಪ್ರಭು (Venkat Prabhu) ಹಾಗೂ ಕಬಾಲಿ (Kabali) ಚಿತ್ರದ ಡೈರೆಕ್ಟರ್ ಕಲೈಪುಲಿ ಎಸ್.ತನು (Kalaipuli S Tanu) ಕೂಡ ಕಿಚ್ಚನಿಗಾಗಿ ಕಥೆಗಳನ್ನು ಸಿದ್ಧಪಡಿಸಿಟ್ಟುಕೊಂಡು, ಆಕ್ಷನ್ ಕಟ್ ಹೇಳಲು ಕಾತರರಾಗಿದ್ದಾರೆ! ಹೀಗಾಗಿ ಕಿಚ್ಟ, ವೆಂಕಟ್‌ ಪ್ರಭು ಅವರ ಚಿತ್ರವನ್ನ ಮೊದಲು ಮಾಡ್ತಾರಾ? ಇಲ್ಲ ಕಲೈಪುಲಿ ನಿರ್ದೇಶನದ ಚಿತ್ರವೇ ಮೊದಲು ಆರಂಭವಾಗುತ್ತದೆಯಾ? ಇದಲ್ಲದೆ ಅನೂಪ್ ಅಥವಾ ನಂದ ಕಿಶೋರ್ ಚಿತ್ರಗಳಿಗೆ ಬಣ್ಣ ಹಚ್ತಾರಾ? ಅನ್ನೋ ಕುತೂಹಲವೀಗ ಅಭಿಮಾನಿಗಳಲ್ಲಿ ಗರಿ ಕೆದರಿ ನಿಂತಿದೆ.

Leave A Reply

Your email address will not be published.