Karnataka High Court Recruitment : ನೀವು ಎಸ್‌ಎಸ್‌ಎಲ್‌ಸಿ ಪಾಸಾಗಿದ್ರೆ ನಿಮಗಿದೋ ಕೆಲಸ ಖಾಲಿ ಇದೆ! ಮಾಸಿಕ ವೇತನ 81,000ರೂ ! ಈಗಲೇ ಅಪ್ಲೈ ಮಾಡಿ
Karnataka High Court Recruitment : ಸರ್ಕಾರಿ ಉದ್ಯೋಗ ಯಾರಿಗೆ ಬೇಡ ಹೇಳಿ. ಅದೆಷ್ಟೋ ಜನರು ಸರಕಾರಿ ಕೆಲಸಕ್ಕಾಗಿ ಹಗಲು-ರಾತ್ರಿ ಕಷ್ಟಪಡುವವರಿದ್ದಾರೆ. ಅಂತವರಿಗೆ ಉದ್ಯೋಗ ಅರಸಿ ಬಂದಿದೆ. ಹೌದು, ಇದೀಗ ಕರ್ನಾಟಕ ಉಚ್ಛ ನ್ಯಾಯಾಲಯ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಪ್ರಕ್ರಿಯೆ (Karnataka High Court Recruitment) ಆರಂಭಿಸಿದೆ. ಒಟ್ಟು 39 ಚಾಲಕ (Driver) ಹುದ್ದೆಗಳು ಖಾಲಿ ಇದ್ದು, ಆಸಕ್ತ, ಅರ್ಹ ಅಭ್ಯರ್ಥಿಗಳು ಆನ್ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿ ಇಲ್ಲಿದೆ.
ಹುದ್ದೆಯ ವಿವರ:
ಡ್ರೈವರ್ (ಕಲ್ಯಾಣ ಕರ್ನಾಟಕ ಪ್ರದೇಶ- ಸ್ಥಳೀಯ ಕೇಡರ್)- 2
ಡ್ರೈವರ್ (ಉಳಿದ ಪೋಷಕ ವರ್ಗ)- 37
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಆರಂಭ ದಿನಾಂಕ- 06/03/2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 6/4/2023
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ- 12/4/2023
ವಿದ್ಯಾರ್ಹತೆ : 10ನೇ ತರಗತಿ (SSLC pass)
ಮಾಸಿಕ ವೇತನ : ₹25,500-81,100
ಉದ್ಯೋಗದ ಸ್ಥಳ : ಬೆಂಗಳೂರು (Bengaluru)
ವಯೋಮಿತಿ: ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ.
ವಯೋಮಿತಿ ಸಡಿಲಿಕೆ: SC/ST/ ಪ್ರವರ್ಗ-1 ಅಭ್ಯರ್ಥಿಗಳು- 5 ವರ್ಷ
ಪ್ರವರ್ಗ- 2ಎ/2ಬಿ/3ಎ/3ಬಿ ಅಭ್ಯರ್ಥಿಗಳು- 3 ವರ್ಷ
ಅರ್ಜಿ ಶುಲ್ಕ: ಶುಲ್ಕವನ್ನು ಆನ್ಲೈನ್ ಅಥವಾ ಚಲನ್ ಮೂಲಕ ಪಾವತಿಸಬಹುದಾಗಿದ್ದು, SC/ST/ ಪ್ರವರ್ಗ-1 ಅಭ್ಯರ್ಥಿಗಳಿಗೆ 250 ರೂ. ಅರ್ಜಿ ಶುಲ್ಕ ಇರುತ್ತದೆ. OBC/ ಸಾಮಾನ್ಯ ಅಭ್ಯರ್ಥಿಗಳು 500 ರೂ ಪಾವತಿಸಬೇಕು.
ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಡ್ರೈವಿಂಗ್ ಟೆಸ್ಟ್(driving test) ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
ಡ್ರೈವರ್ (ಕಲ್ಯಾಣ ಕರ್ನಾಟಕ ಪ್ರದೇಶ- ಸ್ಥಳೀಯ ಕೇಡರ್)- ಇಲ್ಲಿ ಕ್ಲಿಕ್ ಮಾಡಿ.
ಡ್ರೈವರ್ (ಉಳಿದ ಪೋಷಕ ವರ್ಗ)- ಇಲ್ಲಿ ಕ್ಲಿಕ್ ಮಾಡಿ.