95% ಹಾರ್ಟ್ ಬ್ಲಾಕ್ ಆಗಿ ಹೃದಯಾಘಾತ ಆದ್ರೂ ಸುಶ್ಮಿತಾ ಸೇನ್ ಬದುಕುಳಿದುದರ ಹಿಂದಿದೆ ಆ ಒಂದು ಕಾರಣ
Sushmita sen :ಬಾಲಿವುಡ್ ನಟಿ ಹಾಗೂ ಭಾರತದ ಮೊದಲ ಮಿಸ್ ಯೂನಿವರ್ಸ್ ಆಗಿದ್ದ ಸುಶ್ಮಿತಾ ಸೇನ್ ಅವರಿಗೆ ಕೆಲವು ದಿನಗಳ ಹಿಂದೆ ಹೃದಯಾಘಾತ ಸಂಭವಿಸಿತ್ತು. ತನಗೆ 95 ಪರ್ಸೆಂಟ್ ನಷ್ಟು ಆರ್ಟರಿ ಬ್ಲಾಕ್ ಆಗಿ ಹೃದಯಾಘಾತ ಆದ್ರೂ, ತಾನು ಬದುಕಿ ಬಂದದ್ದು ಹೇಗೆ ಅನ್ನುವ ವಿಷಯವನ್ನು ಸುಶ್ಮಿತಾ ಸೇನ್ (Sushmita sen) ಅವರು ವಿವರಿಸಿದ್ದಾರೆ.
ಹೃದಯಾಘಾತದಿಂದ ಚೇತರಿಸಿಕೊಂಡು ಮೊನ್ನೆ ಶನಿವಾರ ಸಾಮಾಜಿಕ ಜಾಲತಾಣದಲ್ಲಿ (social media) ಲೈವ್ ಆಗಿ ಬಂದ ಸುಶ್ಮಿತಾ ಸೇನ್ ಅವರು ತಮಗೆ ಅದ ಹೃದಯಾಘಾತ ಬಗ್ಗೆ ಹಾಗೂ ತಮ್ಮ ಅರೋಗ್ಯದ (health) ಬಗ್ಗೆ ಅಭಿಮಾನಿಗಳಿಗೆ ಲೈವ್ ಮೂಲಕ ತಿಳಿಸಿದ್ದಾರೆ. ಜತೆಗೆ ಅಭಿಮಾನಿಗಳಿಗೆ ತಮಗೆ ತಿಳಿದಷ್ಟು ಕೆಲವು ಆರೋಗ್ಯ ಸಲಹೆಗಳನ್ನು (health tips) ನೀಡಿದ್ದಾರೆ. ಈ ಸಲಹೆಯನ್ನು ಪ್ರತಿ ಒಬ್ಬರು ಕೂಡ ಪ್ರತಿನಿತ್ಯ ವ್ಯಾಯಾಮವನ್ನು ರೂಡಿಸಿಕೊಳ್ಳಬೇಕು ಹಾಗೂ ಉತ್ತಮ ಜೀವನಯನ್ನು ಬೆಳಸಿಕೊಳ್ಳಬೇಕು ಎಂದು ಆಕೆ ತಿಳಿಸಿದ್ದಾರೆ. ಅಲ್ಲದೇ ತನ್ನ 95 ಪರ್ಸೆಂಟ್ ಆರ್ಟರಿ ಬ್ಲಾಕ್ ಆದರೂ ಆಕೆ ಬದುಕುಳಿಯಲು ಕಾರಣ ಏನು ಎನ್ನುವುದನ್ನು ಆಕೆ ವಿವರಿಸಿದ್ದಾರೆ.
ಹೃದಯಾಘಾತ (Heart attack) ಕೇವಲ ಪುರುಷರಿಗೆ (Men’s) ಮಾತ್ರ ಅನ್ನುವ ಒಂದು ಸಾಮಾನ್ಯ ನಂಬಿಕೆ ಇದೆ. ಸ್ವಲ್ಪ ಮಟ್ಟಿಗೆ ಅದು ಸತ್ಯ ಕೂಡ. ಹೆಂಗಸರು ಮುಟ್ಟಾಗುತ್ತಿರುವ ಸಂದರ್ಭದಲ್ಲಿ ಅವರಿಗೆ ಹೃದಯಘಾತ ಉಂಟಾಗುವ ಸಾಧ್ಯತೆಗಳು ಕಮ್ಮಿ ಎನ್ನುವುದು ಸತ್ಯವೇಯಾದರು, ಈಗೀಗ ಸಣ್ಣಪ್ರಾಯದ ಮಹಿಳೆಯರಲ್ಲಿ ಕೂಡ ಹೃದಯಘಾತ ಆಗಾಗ ಕಂಡು ಬರುತ್ತಿದೆ. ಈಗಿನ ಪ್ರಕಾರ ಹೃದಯಾಘಾತ ಹೆಚ್ಚಾಗಿ ಮಹಿಳೆರಿಗೆ ಕಾಣಿಸಿಕೊಳ್ಳುತ್ತಿದ್ದು ಪ್ರತಿ ಒಬ್ಬರು ಕೂಡ ಆರೋಗ್ಯ ಹಾಗೂ ನಮ್ಮ ದೇಹದ ಮೇಲೆ ಕಾಳಜಿ ವಹಿಸುವುದು ಉತ್ತಮ ಎಂದು ಅವರು ತಿಳಿಸಿದ್ದಾರೆ. ತಾನು ನಿಯಮಿತವಾಗಿ ವ್ಯಾಯಾಮ ಮಾಡುತ್ತಿದ್ದುದೇ ತನ್ನನ್ನು ಉಳಿಸಿದೆ ಎಂದಿದ್ದಾಳೆ ಸುಶ್ಮಿತಾ !
ಸುಶ್ಮಿತಾ ಸೇನ್ ಉಲ್ಲೇಖಿಸಿದ ಮತ್ತು ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ನಾವು ಇಲ್ಲಿ ನೀದುತ್ತಿದ್ದೇವೆ. ಎದೆಯ ಮಧ್ಯದಲ್ಲಿ ನೋವು, ಉಸಿರಾಟದ ತೊಂದರೆ, ಆಯಾಸ ಆಗುವುದು, ತಲೆತಿರುಗುವುದು, ಬೆವರುವುದು, ದವಡೆ, ಕುತ್ತಿಗೆ ಅಥವಾ ಬೆನ್ನು ನೋವು ಇತ್ಯಾದಿಗಳು ಹೃದಯಾಘಾತದ ಲಕ್ಷಣಗಳು ಎಂದಿದ್ದಾರೆ ಸುಶ್ಮಿತಾ ಸೇನ್.
ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಟಿಪ್ಸ್:
1. ಕೊಬ್ಬಿನ ಅಂಶದ ಆಹಾರ ಹಾಗೂ ಹೆಚ್ಚು ಉಪ್ಪಿನ ಆಹಾರವನ್ನು ಸೇವಿಸಬೇಡಿ
2. ಹೆಚ್ಚಾಗಿ ಹಣ್ಣು ತರಕಾರಿಗಳಾದ ಸೇಬು, ಬೀಟ್ರೂಟ್ ಈ ರೀತಿಯ ಪೌಷ್ಟಿಕ ಆಹಾರವನ್ನು ಸೇವಿಸುವುದು
3. ಕೊಬ್ಬಿನ ಅಂಶವಾದ ಎಣ್ಣೆಯಲ್ಲಿ ಕರಿದಿರುವ ತಿಂಡಿ ತಿನಿಸು ಹಾಗೂ ಉಪ್ಪಿನ ಅಂಶ ಇರುವ ಆಹಾರವನ್ನು ಹೆಚ್ಚು ಸೇವಿಸಬಾರದು
4. ಮೊಸರನ್ನು ಸೇವಿಸುವುದು ಉತ್ತಮ
5. ಒಣ ಹಣ್ಣುಗಳಾದ ಬಾದಾಮಿ ವಾಲ್ನೆಟ್ ಇತ್ಯಾದಿ ರೀತಿಯ ಹಣ್ಣುಗಳನ್ನು ನಿಯಮಿತವಾಗಿ ಸೇವಿಸುವುದು
6. ಬೆಳಗ್ಗೆ ಎದ್ದು ಯೋಗ ಹಾಗೂ ವ್ಯಾಯಾಮಗಳನ್ನು ದಿನ ನಿತ್ಯ ಮಾಡುವುದು
7. ಪ್ರತಿ ದಿನ ಕನಿಷ್ಟ 2 ರಿಂದ 3 ಲೀಟರ್ ನೀರನ್ನು ಕುಡಿಯಬೇಕು
8. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ. ಉತ್ತಮ ಬಿಎಂಐ ( Body mass index) ಮೈಂಟೆನ್ ಮಾಡಿ.
9 ಕನಿಷ್ಟ 6 – 8 ಗಂಟೆಗಳ ಕಾಲ ನಿದ್ರೆ ಮಾಡುವುದು ಕಡ್ಡಾಯ
9. ರಕ್ತದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ (HDL) ಅನ್ನು ಹೆಚ್ಚಿಸಿಕೊಳ್ಳಿ, ಕೆಟ್ಟ ಕೊಲೆಸ್ಟ್ರಾಲ್ (LDL) ಬೆಳೆಯದಂತೆ ನೋಡಿಕೊಳ್ಳಿ
10.ಒತ್ತಡ ಹೃದಯಕ್ಕೆ ಬಹುದೊಡ್ಡ ಶತ್ರು. ಒತ್ತಡ ( Stress) ರಹಿತವಾಗಿ ಬದುಕುವುದನ್ನು ಕಲಿಯಿರಿ
ಕೊನೆಯಲ್ಲಿ, ನಿಮ್ಮ ಹೃದಯವನ್ನು ಸಂತೋಷ ಮತ್ತು ದೈರ್ಯದಿಂದ ಇಟ್ಟುಕೊಳ್ಳಿ. ಅದು ನಿಮ್ಮನ್ನು, ನಿಮ್ಮ ಜೀವನವನ್ನು ಸಮೃದ್ದಿಯಾಗಿರಿಸುತ್ತದೆ ಎನ್ನುವ ಹಿತ ನುಡಿಯನ್ನು ಸುಶ್ಮಿತಾ ಸೇನ್ ತನ್ನ ಅಭಿಮಾನಿಗಳಿಗೆ ತಿಳಿಸಿದ್ದಾರೆ.