7th pay commission: ಸರ್ಕಾರಿ ನೌಕರರಿಗೆ ಭರ್ಜರಿ ಹೋಳಿ ಉಡುಗೊರೆ
7th Pay Commission: ಕೇಂದ್ರ ನೌಕರರು ಮತ್ತು ಪಿಂಚಣಿದಾರಿಗೆ ಸರಕಾರದಿಂದ ಸಿಹಿ ಸುದ್ದಿಯೊಂದು ಅತಿ ಶೀಘ್ರದಲ್ಲಿಯೆ ಬರಲಿದೆ. ಸುಮಾರು 62 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 48 ಲಕ್ಷ ಪಿಂಚಣಿದಾರರು ತುಟ್ಟಿ ಭತ್ಯೆ ಮತ್ತು ತುಟ್ಟಿಭತ್ಯೆ ಹೆಚ್ಚಳಕ್ಕಾಗಿ ಎದುರು ನೋಡುತ್ತಿದ್ದಾರೆ.
7ನೇ ವೇತನ ಆಯೋಗದಡಿಯಲ್ಲಿ ( 7th pay commission)ಕೇಂದ್ರ ಸರ್ಕಾರದ ನೌಕರರ ತುಟ್ಟಿಭತ್ಯೆ(ಡಿಎ)ಯು ಜನವರಿ 1ರಿಂದ 2023 ಅನ್ವಯವಾಗುವ ಹಾಗೆ ಮಾರ್ಚ್ ನಲ್ಲಿ ಹೆಚ್ಚಳವಾಗುವ ಬಗ್ಗೆ ಈ ಹಿಂದೆಯೇ ಹೇಳಲಾಗಿದೆ. ಇದರ ಜೊತೆಗೆ ಕೇಂದ್ರ ಸರ್ಕಾರವು ಪಿಂಚಣಿದಾರರ ತುಟ್ಟಿಭತ್ಯೆ (ಡಿಆರ್) ಅನ್ನು ಕೂಡಾ ಹೆಚ್ಚಳ ಮಾಡುವ ನಿರೀಕ್ಷೆಯಿದೆ. ಕೇಂದ್ರ ಸರ್ಕಾರ ಡಿಎ ಹೆಚ್ಚಳ, ಫಿಟ್ಮೆಂಟ್ ಅಂಶ ಹೆಚ್ಚಳ ಮತ್ತು ಡಿಎ ಬಾಕಿ ಬಿಡುಗಡೆಗೆ ಸಂಬಂಧ ಪಟ್ಟಂತೆ ಯಾವಾಗ ಕ್ರಮ ಕೈಗೊಳ್ಳಲಿದ್ದಾರೆ ಎಂದು ಕೇಂದ್ರ ನೌಕರರು (Central Government workers) ವೇತನ ಹೆಚ್ಚಳಕ್ಕೆ ಕಾಯುತ್ತಿದ್ದಾರೆ. ಕೇಂದ್ರ ಸರ್ಕಾರ ವಾರದೊಳಗೆ ನಿರ್ಧಾರ ಕೈಗೊಳ್ಳಲಿದೆ ಎನ್ನಲಾಗಿದೆ. ಈ ನಡುವೆ, ರಾಜ್ಯ ಸರ್ಕಾರಿ ನೌಕರರ ವೇತನವನ್ನು 2 ರಾಜ್ಯ ಸರ್ಕಾರ ಹೆಚ್ಚಳ ಮಾಡಿದೆ.
7ನೇ ವೇತನ ಆಯೋಗದಡಿಯಲ್ಲಿ ಕೇಂದ್ರ ಸರ್ಕಾರದ ನೌಕರರ ತುಟ್ಟಿಭತ್ಯೆ(DA)ಯು ಜನವರಿ 1ರಿಂದ 2023 ಅನ್ವಯವಾಗುವಂತೆ ಮಾರ್ಚ್ ನಲ್ಲಿ ಹೆಚ್ಚಳವಾಗಲಿದೆ ಎಂದು ಈ ಹಿಂದೆ ವರದಿಯಾಗಿತ್ತು. ಇದಲ್ಲದೆ ಕೇಂದ್ರ ಸರ್ಕಾರವು ಪಿಂಚಣಿದಾರರ ತುಟ್ಟಿಭತ್ಯೆ (DR) ಅನ್ನು ಕೂಡಾ ಹೆಚ್ಚಳ ಮಾಡಲು ಚಿಂತನೆ ನಡೆಸಿದ್ದು, ಕೇಂದ್ರ ನೌಕರರು 18 ತಿಂಗಳ ಡಿಎ ಬಾಕಿ ಮೊತ್ತ ಪಡೆಯಲಿದ್ದಾರೆ ಎಂದು ಕೆಲವು ವರದಿಗಳು ತಿಳಿಸಿವೆ. ಪ್ರಸ್ತುತ ಫಿಟ್ಮೆಂಟ್ ಅಂಶವು ಶೇಕಡಾ 2.57 ರಷ್ಟಿದೆ. ಈ ಫಿಟ್ಮೆಂಟ್ ಅಂಶವನ್ನು ಶೇ.3.68ಕ್ಕೆ ಏರಿಸಬೇಕೆಂದು ಕೇಂದ್ರ ಸರ್ಕಾರಿ ನೌಕರರು ಒತ್ತಾಯ ಮಾಡುತ್ತಿದ್ದಾರೆ.
ಇತ್ತೀಚೆಗಷ್ಟೇ ಕರ್ನಾಟಕ ಸರ್ಕಾರಿ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದ ಹಿನ್ನೆಲೆ ತುಟ್ಟಿ ಭತ್ಯೆಯನ್ನು ಹೆಚ್ಚಳ ಮಾಡಲಾಗಿದೆ. ಹೋಳಿ ಹಬ್ಬದ (Holi Festival) ಸಂಭ್ರಮದಲ್ಲಿ ಪಶ್ಚಿಮ ಬಂಗಾಳ ಸರ್ಕಾರವು ರಾಜ್ಯ ಬಜೆಟ್ ಮಂಡನೆ ಸಂದರ್ಭದಲ್ಲಿ ನೌಕರರ ತುಟ್ಟಿ ಭತ್ಯೆ ಹೆಚ್ಚಳವನ್ನು ಘೋಷಿಸಿದೆ. ಫೆಬ್ರವರಿ 15 ರಂದು ರಾಜ್ಯ ಬಜೆಟ್ ಮಂಡನೆ ವೇಳೆ, ಪಶ್ಚಿಮ ಬಂಗಾಳ ಸರ್ಕಾರವು ಎಲ್ಲಾ ರಾಜ್ಯ ಸರ್ಕಾರಿ ನೌಕರರು ಮತ್ತು ನಿವೃತ್ತ ವ್ಯಕ್ತಿಗಳಿಗೆ ತುಟ್ಟಿಭತ್ಯೆ (DA) ನಲ್ಲಿ 3 ಶೇಕಡಾ ಹೆಚ್ಚಳವನ್ನು ಘೋಷಿಸಿತು.ಹೀಗಾಗಿ, ಎರಡು ರಾಜ್ಯದ ನೌಕರರು ಹೋಳಿ ಉಡುಗೊರೆ ಪಡೆದುಕೊಂಡಂತಾಗಿದೆ.