ಬಂದಿದೆ ನೋಡಿ ಸಂಗಾತಿಗಳಿಗೊಂದು ʼವೀಕೆಂಡ್‌ ವಿವಾಹʼ ! ಏನಿದರ ಸ್ಪೆಷಾಲಿಟಿ?

Weekend wedding :ಮದುವೆ ಅನ್ನೋ ವಿಷಯ ಕೆಲವರ ಪಾಲಿಗೆ ಸುಮಧುರ ಭಾವ ಆದರೆ ಕೆಲವರಿಗೆ ಮದ್ವೆ ಎಂದರೆ ಕಿರಿಕಿರಿ. ನೀವೇನಾದರೂ ಈ ಮದ್ವೆ, ಸಂಸಾರ ಅನ್ನೋ ವಿಷಯಗಳಿಂದ ಬೇಸತ್ತು ಹೋಗಿದ್ದರೆ ವೀಕೆಂಡ್ ದಾಂಪತ್ಯ (Weekend wedding) ಅನ್ನೋ ಕಾನ್ಸೆಪ್ಟ್ ಬಗ್ಗೆ ಗಮನ ಕೊಡಬಹುದು. ಹಾಗಿದ್ರೆ ಏನು ಈ ವೀಕೆಂಡ್ ದಾಂಪತ್ಯ ಅಂತೀರಾ? ಹಾಗಿದ್ರೆ ನೀವು ಇಂಟರೆಸ್ಟಿಂಗ್ ಕಹಾನಿ ಓದಲೇಬೇಕು.

 

ವಾರವಿಡೀ ದುಡಿದು ಮನೆ, ಹೆಂಡತಿ -ಮಕ್ಕಳು ಎಂದು ಸಮಯ ಕೊಡೋದಕ್ಕೆ ಟೈಮ್ ಇಲ್ಲ. ಇನ್ನು ಲವ್ ಮಾಡಿ ಮದುವೆಯಾಗಿ ಪಾರ್ಟ್ನರ್ ಕೈ ಕೊಟ್ಟರೆ ಅನ್ನೋ ಭೀತಿ ಕೂಡ ಇದೆ. ಈ ನಡುವೆ ನಮ್ಮ ಗೆಳೆಯ ಅಥವಾ ಗೆಳತಿ ಕೆಲ್ಸದಲ್ಲಿ ಇದ್ದರೆ ಇಬ್ಬರೂ ಬ್ಯುಸಿ ಆಗಿರುತ್ತೇವೆ. ಇಂದಿನ ಬ್ಯುಸಿ ಜೀವನಶೈಲಿಯಲ್ಲಿ(Busy Lifestyle) ಒಬ್ಬರಿಗೊಬ್ಬರು ಸಮಯ ನೀಡಲು ಪುರುಸೊತ್ತಿಲ್ಲ. ಹೀಗಿರುವಾಗ ಮದ್ವೆ ಆಗಿ ಮಾಡುವುದಾದರೂ ಏನು? ಅದರ ಬದಲಿಗೆ ವಾರಾಂತ್ಯದಲ್ಲಾದರೂ ಜೊತೆಯಾಗಿ ವೀಕೆಂಡ್‌ ವಿವಾಹ ಎಂಬ ಹೆಸರಿನಡಿ ಜೊತೆಯಾಗಿ ಕಳೆಯುವ ಟ್ರೆಂಡ್ ಸೃಷ್ಟಿಯಾಗಿದೆ.ಹೀಗಾಗಿ,ವಾರಾಂತ್ಯದಲ್ಲಿ ಗಂಡ ಹೆಂಡತಿ ಜೊತೆಯಾಗಿ ಒಂದು ಮನೆಯಲ್ಲೋ, ಅಪಾರ್ಟ್‌ಮೆಂಟ್‌ ಇಲ್ಲವೇ ಟೂರ್‌ ಹೋಗುವ ಟ್ರೆಂಡ್‌ ಸದ್ಯ ಜಪಾನ್‌ನಲ್ಲಿದೆ. ವಾರಾಂತ್ಯದಲ್ಲಿ ಮಾತ್ರ ದಂಪತಿಗಳಂತೆ ಇರುವ ಜೋಡಿಗಳು ವಾರದ ದಿನಗಳಲ್ಲಿ ದೂರವಾಗಿರುತ್ತಾರಂತೆ.

ಜಪಾನ್ ನಲ್ಲಿ ಮಿಲೇನಿಯಲ್‌ ಯುಗದ ಹುಡುಗ-ಹುಡುಗಿಯರಿಗೆ ಮದ್ವೆ ಎಂದರೆ ಏನೋ ಒಂದು ರೀತಿಯ ಅಲರ್ಜಿ. ಅದರಲ್ಲಿಯೂ ಕೆಲವರಿಗೆ ಮದುವೆಯಾಗಿ ಬಿಟ್ಟರೆ ಎಲ್ಲಿ ನಮ್ಮ ವಾಕ್ ಸ್ವಾತಂತ್ರ್ಯ ಕಳೆದು ಹೋಗುವುದೋ ಎಂಬ ಭೀತಿಯಾದರೆ, ಮತ್ತೆ ಕೆಲವರಿಗೆ ಅಧಿಕ ಕೆಲಸದ ಅವಧಿ, ಶಿಫ್ಟ್‌ ವರ್ಕ್‌(Shift work) ಮಾಡುವವರಿಗೆ ಕೆಲಸ ಹಾಗೂ ಕುಟುಂಬ ಎರಡನ್ನು ಸಂಭಾಳಿಸಲಾಗದೆ ಎಲ್ಲಿ ನಮ್ಮ ಇಷ್ಟ ಪಾತ್ರರು ದೂರವಾಗಿಬಿಡುತ್ತಾರೋ ಎಂಬ ಭಯ. ಇನ್ನು ಪ್ರೀತಿ ಬೇಕು ಆದರೆ ಮದ್ವೆ ಯಾಕೆ ಅನ್ನೋರು ಈ ಕಾನ್ಸೆಪ್ಟ್ (Concept) ಮೆಚ್ಚಿಕೊಳ್ಳಬಹುದು. ಹೀಗಾಗಿ ವಾರಾಂತ್ಯದ ಮದುವೆ ಎಂಬ ಒಪ್ಪಂದ ಮಾಡಿಕೊಂಡು ವೀಕೆಂಡ್‌ನ ಎರಡು ಅಥವಾ ಮೂರು ದಿನ ಮಾತ್ರ ಜೊತೆಗಿರುತ್ತಾರಂತೆ. ಇದನ್ನು ಪ್ರತ್ಯೇಕಗೊಳ್ಳುವ ವಿವಾಹ ಎನ್ನಲಾಗುತ್ತದೆ.

ಇನ್ನೂ ಇಲ್ಲಿನ ಹೆಚ್ಚಿನ ಜನರು ಈ ಟ್ರೆಂಡ್ ಗೆ ಒಗ್ಗಿಕೊಳ್ಳಲು ಕಾರಣವೇನು ಎಂದು ತಿಳಿಯ ಹೊರಟರೆ, ವಾರದ ದಿನಗಳ ಕೆಲಸದ ಒತ್ತಡ,ಕಿರಿಕಿರಿ ,ಟ್ರಾಫಿಕ್‌ ಸಮಸ್ಯೆ (Traffic Issue) ಇದರ ನಡುವೆ ಬಾಸ್‌ನ ಒತ್ತಡ (Corporate Pressure), ಕಚೇರಿ ಕೆಲಸಗಳಿದ್ದಾಗ ಸಂಗಾತಿ ಜೊತೆಗೆ ವಿರಸ,ಜಗಳ ಉಂಟಾಗುವ ಸಾಧ್ಯತೆಗಳಿವೆ. ಆದರೆ, ವೀಕೆಂಡ್ ದಾಂಪತ್ಯ ಅನುಸರಿಸಿದರೆ, ಯಾವುದೇ ಕಂಡೀಷನ್ ಗಳು ಇಲ್ಲಿ ಅನ್ವಯ ವಾಗುವುದಿಲ್ಲ. ಪ್ರತಿದಿನ ಸಂಗಾತಿಗೆ ನಿಗದಿತ ಸಮಯ ನೀಡಬೇಕು.ಕಾಲ ಕಳೆಯಬೇಕು ಎನ್ನುವ ಯಾವುದೇ ಕಟ್ಟುಪಾಡಿಲ್ಲ. ಜಗಳ, ಗಲಾಟೆಗಳು ಉಂಟಾಗುವ ಸಾಧ್ಯತೆಗಳೆ ವಿರಳ. ಕೇಳಲು ಪ್ರಾಕ್ಟಿಕಲ್ ಎನಿಸಿದರೂ ಭಾರತದಂಥ ದೇಶದಲ್ಲಿ ಈ ರೀತಿ ಆಚರಣೆಗೆ ಅವಕಾಶ ಇಲ್ಲದಿದ್ದರು ಕೂಡ ಮುಂದೊಂದು ದಿನ ಪಾಶ್ಚಿಮಾತ್ಯ ಸಂಸ್ಕೃತಿಯ ಸೊಡಗು ಇಲ್ಲಿಗೂ ಅನುಕರಣೆಯಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ವಾರಾಂತ್ಯದ ಮದುವೆ ಪರಿಕಲ್ಪನೆಯಲ್ಲಿ ಸಂಗಾತಿಯೊಂದಿಗೆ ಸಂತಸದಿಂದ ಸಮಯ ಕಳೆಯಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಜೊತೆಯಾಗಿ ಕುಳಿತು ಊಟ ಮಾಡುವ, ಪಿಕ್ನಿಕ್‌ (Picknic) ಹೋಗುವ, ಸಿನಿಮಾಗೆ ತೆರಳುವ ಒಟ್ಟಿನಲ್ಲಿ ಸಂಗಾತಿಯ ಜೊತೆಗೆ ಖುಷಿಯಾಗಿ ಸಮಯ ಕಳೆಯಲು ಅವಕಾಶ ಸಿಗುತ್ತದೆ. ಹೀಗಾಗಿ, ಇಬ್ಬರ ನಡುವೆ ಉತ್ತಮ ಬಾಂಧವ್ಯ ಬೆಳೆಯಲು ಕಾರಣವಾಗಬಹುದು. ಅಷ್ಟೆ ಅಲ್ಲದೇ, ಇದರ ಮತ್ತೊಂದು ಪ್ರಯೋಜನವೇನೆಂದರೆ ವೈಯಕ್ತಿಕವಾಗಿ ಹಣ ಉಳಿತಾಯ (Personal Savings) ಮಾಡುವ ಸಂಭವ ಹೆಚ್ಚಿದ್ದು,ಆರ್ಥಿಕ ಸ್ಥಿತಿ ಕೂಡ ಸುಧಾರಣೆಯಾಗುತ್ತದಂತೆ.

ಭಾರತ ದೇಶದಲ್ಲಿ (Nation)ಕುಟುಂಬ ವ್ಯವಸ್ಥೆಗೆ ಜೊತೆಗೆ ಆಚರಣೆ ಮದುವೆ ಸಂಪ್ರದಾಯಗಳಿಗೆ ಹೆಚ್ಚು ಮಹತ್ವ ನೀಡಲಾಗುವ ಹಿನ್ನೆಲೆ ಈ ಆಚರಣೆ ಇಲ್ಲಿಯು ಅನುಕರಣೆ ಆದರೆ ಸಂಪ್ರದಾಯವಾದಿಗಳು ಇದನ್ನು ವಿರೋಧಿಸುವುದು ಖಚಿತ. ಆದರೆ, ಇಂದಿನ ಯುವ ಜನತೆಗೆ ಮನೆ ಸಂಸಾರ ಎನ್ನುವುದು ಹೊರೆಯಂತೆ ಭಾಸವಾಗುವುದುಂಟು. ಹೀಗಾಗಿ, ವೈಯಕ್ತಿಕ ಬದುಕು (Personal Life) ಹಾಗೂ ಸ್ವತಂತ್ರ ಜೀವನದ (Independent Life) ಕುರಿತು ಚಿಂತನೆ ನಡೆಸುವವರು ಈ ಟ್ರೆಂಡ್ ಕಡೆ ಮೊಗ ಮಾಡಿದರು ಅಚ್ಚರಿಯಿಲ್ಲ.

Leave A Reply

Your email address will not be published.