Sunny Leone-Mia Khalifa : ಕೇವಲ 200ರೂ. ನೀಡಿ ಅಷ್ಟೇ, ನಿಮಗೆ ಸನ್ನಿ, ಮಿಯಾ ಇಬ್ಬರೂ ಸಿಗ್ತಾರೆ!
Sunny Leone-Mia Khalifa :ಸನ್ನಿ ಲಿಯೋನ್ (sunny leone) , ಮಿಯಾ ಖಲೀಫಾ (Mia Khalifa) ಇವರಿಬ್ಬರ ಅಭಿಮಾನಿಗಳು ವಿಶ್ವದೆಲ್ಲೆಡೆ ಇರುವುದು ನಮಗೆ ತಿಳಿದಿರುವ ವಿಚಾರ. ಹಾಗೆಯೇ ನಾವು ತಿನ್ನುವ ಆಹಾರದಲ್ಲೂ ಕೆಲವೊಂದು ಡಿಶ್ ನಮಗೆ ಫೇವರೇಟ್ ಆಗಿರುತ್ತದೆ. ಆದರೆ ಒಂದೊಂದು ಪ್ರದೇಶಗಳಲ್ಲಿ ಒಂದೊಂದು ರೀತಿಯ ಸ್ಪೆಷಲ್ (special ) ಇರುತ್ತೆ. ಏನೇ ಆಗಲಿ ವಸ್ತುವೇ ಆಗಲಿ, ವ್ಯಕ್ತಿಯೇ ಆಗಲಿ ಇಷ್ಟವಾದ ಕಡೆ ವಾಲುವುದು ಗುರುತ್ವಾಕರ್ಶಣ ಬಲ ಇದ್ದಂತೆ ತಾನೇ .
ಹೌದು ಸದ್ಯ ನೀವು ಸನ್ನಿ ಲಿಯೋನ್ ಮತ್ತು ಮಿಯಾನ್ ಖಲೀಫಾ ಅವರಂತಹ ನಟಿಯರನ್ನು ಕೇಳಿದ್ದಿರಬಹುದು ಆದರೆ ದೆಹಲಿಯ(dehali )ಮುಜಾಫರ್‌ಪುರದಲ್ಲಿ (Muzaffarpur) ಈ ಇಬ್ಬರು ನಟಿಯರ ಹೆಸರಿನಲ್ಲಿ ( Sunny Leone-Mia Khalifa) ಸೋಯಾ ಚಾಪ್ಸ್‌ನ ಮೆನುವನ್ನು ಸವಿಯಬಹುದು.
ಅಘೋರಿಯಾ ಬಜಾರ್ ಚೌಕ್‌ನಲ್ಲಿರುವ ದೆಹಲಿ ಚಾಪ್ ಅಂಗಡಿಯ ಮಾಲೀಕ ರವಿಶಂಕರ್ ಕುಮಾರ್ ಅಲಿಯಾಸ್ ಗುಡ್ಡು ಅವರು, ದೆಹಲಿಗೆ ಪ್ರಯಾಣಿಸುತ್ತಿದ್ದಾಗ ಈ ವೇಳೆ ರವಿಶಂಕರ್ ದೆಹಲಿಯಲ್ಲಿ ಸೋಯಾ ಚಾಪ್ಸ್ ತಿನ್ನುತ್ತಿದ್ದರು. ಮುಜಾಫರ್ ಪುರದಲ್ಲೂ ಇದಕ್ಕೇಕೆ ಮಳಿಗೆ ಹಾಕಬಾರದು ಎಂದು ಯೋಚಿಸಿದರು. ಈ ಯೋಚನೆಯಂತೆ ರವಿಶಂಕರ್ ಅವರು ದೆಹಲಿ ಚೋಪ್ವಾಲಾ ಎಂಬ ಹೆಸರಿನಲ್ಲಿ ಮುಜಾಫರ್‌ಪುರದಲ್ಲಿ ಸೋಯಾ ಚಾಪ್ ಅಂಗಡಿಯನ್ನು ತೆರೆದಿದ್ದಾರೆ.
ಸದ್ಯ ಆಹಾರ ಪ್ರಿಯರು ಅಘೋರಿಯಾ ಬಜಾರ್ ಚೌಕ್‌ನಲ್ಲಿರುವ ದೆಹಲಿ ಚೋಪ್‌ವಾಲಾ ಹೆಸರಿನ ಅಂಗಡಿಯ ಆಹಾರವನ್ನು ಜನರು ಸಖತ್ ಇಷ್ಟ ಪಡುತ್ತಿದ್ದು, ಸೋಯಾ ಚಾಪ್‌ನ ರುಚಿಕರವಾದ ರುಚಿಯ ಜೊತೆಗೆ, ಸನ್ನಿ ಲಿಯೋನ್ ಮತ್ತು ಮಿಯಾನ್ ಖಲೀಫಾ ಚಾಪ್ಸ್ ಮೆನುವಿನಲ್ಲಿ ಇರುವುದು ಡಿಫರೆಂಟ್ ಫೀಲ್ ನಿಮಗೆ ನೀಡುತ್ತದೆ ಖಂಡಿತಾ. ನೀವು ಸಹ ಒಮ್ಮೆ ಭೇಟಿ ನೀಡಿ.
ಯಾಕೆಂದರೆ ನಮ್ಮ ಇಷ್ಟಗಳು ಯಾವತ್ತೂ ಬದಲಾಗುವುದಿಲ್ಲ, ಹಾಗೆಯೇ ಮುಜಾಫರ್ಪುರ್ನ ದೆಹಲಿಯ ಪ್ರಸಿದ್ಧ ಸೋಯಾ ಚಾಪ್‌ನ ಕ್ರೇಜ್ ಹೆಚ್ಚುತ್ತಿದೆ. ಈಗ ಅಘೋರಿಯಾ ಬಜಾರ್ ಚೌಕ್‌ನಲ್ಲಿರುವ ಈ ಅಂಗಡಿಯಲ್ಲಿ 15 ಬಗೆಯ ಸೋಯಾ ಚಾಪ್‌ಗಳನ್ನು ತಯಾರಿಸಲಾಗುತ್ತಿದ್ದು, ಫುಲ್ ಪ್ಲೇಟ್ ದರ 200 ಮತ್ತು ಹಾಫ್ ಪ್ಲೇಟ್ ದರ 100 ರೂಪಾಯಿ ಆಗಿದೆ. ಅಷ್ಟೇ ಅಲ್ಲ ಈ ಸೋಯಾ ಚಾಪ್ ಬೇಡಿಕೆ ಅಂತೂ ಸಖತ್ ಆಗಿದೆ ಎಂದು ಸಂತೋಷದಿಂದ ಮಾಲೀಕ ರವಿಶಂಕರ್ ಹೇಳಿಕೊಂಡಿದ್ದಾರೆ.