Post office : ಅಂಚೆ ಇಲಾಖೆಯಲ್ಲಿ 58 ಹುದ್ದೆಗಳಿಗೆ ಅರ್ಜಿ ಆಹ್ವಾನ ! 10th ಪಾಸಾದವರು ಈ ಕೂಡಲೇ ಅರ್ಜಿ ಸಲ್ಲಿಸಿ

Post office :ಅಂಚೆ ಇಲಾಖೆ (Post office) ವತಿಯಿಂದ ಉದ್ಯೋಗ ಹುಡುಕುವವರಿಗೆ ಸಿಹಿ ಸುದ್ದಿ ಒಂದನ್ನು ನೀಡಲಾಗಿದೆ. ಸದ್ಯ ಅಂಚೆ ಇಲಾಖೆಯು (Department of Post) ಖಾಲಿಯಿರುವ ಸಾಮಾನ್ಯ ಕೇಂದ್ರ ಸೇವೆ, ಗ್ರೂಪ್-ಸಿ, ನಾನ್-ಗೆಜೆಟೆಡ್, ನಾನ್ ಮಿನಿಸ್ಟ್ರಿಯಲ್ ವರ್ಗದಲ್ಲಿ ಸ್ಟಾಫ್ ಕಾರ್ ಡ್ರೈವರ್ ಹುದ್ದೆಗೆ ಅರ್ಹ ಭಾರತೀಯ ನಾಗರಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಈ ಹುದ್ದೆಯಲ್ಲಿ ಆಸಕ್ತ ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

 

ಹುದ್ದೆಯ ವಿವರ :
ಹುದ್ದೆ ಹೆಸರು : ನಾನ್ ಮಿನಿಸ್ಟ್ರಿಯಲ್ ವರ್ಗದಲ್ಲಿ ಸ್ಟಾಫ್ ಕಾರ್ ಡ್ರೈವರ್ ಹುದ್ದೆ
ಹುದ್ದೆಗಳ ಸಂಖ್ಯೆ: 58
ವಿಧಾಭ್ಯಾಸ : ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10 ನೇ ಪಾಸ್ ಅಥವಾ ತತ್ಸಮಾನವನ್ನು ಹೊಂದಿರಬೇಕು.
ವಯಸ್ಸಿನ ಮಿತಿ: 18 ವರ್ಷದಿಂದ 27 ವರ್ಷದೊಳಗಿರಬೇಕು.OBC ಅಭ್ಯರ್ಥಿ ವಯಸ್ಸಿನ ಮಿತಿ – 18 ರಿಂದ 29 ವರ್ಷ, SC/ST ಅಭ್ಯರ್ಥಿಗಳ ವಯಸ್ಸಿನ ಮಿತಿ- 18 ರಿಂದ 32 ವರ್ಷ ಆಗಿರಬೇಕು
ವಯೋಮಿತಿ ಸಡಿಲಿಕೆ: SC/ST/OBC ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮಾವಳಿಯ ಪ್ರಕಾರ ಸಡಿಲಿಕೆ ಮಾಡಲಾಗುತ್ತದೆ. SC/ST-05 ವರ್ಷ, OBC- 03 ವರ್ಷ ಆಗಿರುತ್ತದೆ.
ವೇತನ: ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ. 19,900/- ರೂ. 63200/- ವೇತನ ಸಿಗಲಿದೆ.
ಅರ್ಜಿ ಶುಲ್ಕ: ಯುಆರ್/ಸಾಮಾನ್ಯ/ಒಬಿಸಿ ಅಭ್ಯರ್ಥಿ ಅರ್ಜಿ ಶುಲ್ಕ- ರೂ. 100/-
ST/ST/ಮಹಿಳಾ ಅಭ್ಯರ್ಥಿ ಅರ್ಜಿ ಶುಲ್ಕ- ಉಚಿತ

ಪ್ರಸ್ತುತ ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್(credit card ) /ನೆಟ್ ಬ್ಯಾಂಕಿಂಗ್(net banking ) /ಬ್ಯಾಂಕ್ ಚಲನ್ ಮೂಲಕ ಪಾವತಿ ಮಾಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆಯು ಲಿಖಿತ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ಸಂದರ್ಶನ(interview ), ಅರ್ಹತಾ ಮಾನದಂಡಗಳಿಂದ ನಿರ್ಧರಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಅಂಚೆ ಇಲಾಖೆಯ ಅಧಿಕೃತ ವೆಬ್ ಸೈಟ್ (website )ಮೂಲಕ ತಿಳಿದುಕೊಳ್ಳಬಹುದು.

ಮೇಲಿನ ಹುದ್ದೆಯಲ್ಲಿ ಆಸಕ್ತಿ ಇದ್ದವರು ಅರ್ಹತೆಯ ಅನುಸಾರ ಈ ಮೇಲಿನ ದಿನಾಂಕವಾದ ಮಾರ್ಚ್ 31, 2023 ರೊಳಗೆ ಅರ್ಜಿ ಸಲ್ಲಿಸಲು ಮಾಹಿತಿ ಪ್ರಕಟಿಸಲಾಗಿದೆ.

Leave A Reply

Your email address will not be published.