PM KISAN: ರೈತರೇ ಆಧಾರ್ ನಲ್ಲಿರುವಂತೆ ಪಿಎಂ ಕಿಸಾನ್‌ನಲ್ಲಿ ನಿಮ್ಮ ಹೆಸರು ಬದಲಾಯಿಸಬೇಕೇ? ಈ ರೀತಿ ಮಾಡಿ
PM KISAN : ಸರ್ಕಾರದ ಯೋಜನೆಗಳಲ್ಲಿ ಒಂದಾದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು (PM KISAN) ರೈತರಿಗೆ ತುಂಬಾ ಸಹಕಾರಿಯಾಗಿದೆ. ರೈತರ ನೆರವಿಗೆ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿ, ಆರ್ಥಿಕ ನೆರವಿನ ಜೊತೆಗೆ ರಸಗೊಬ್ಬರ ಪೂರೈಕೆ ಮಾಡಿ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು(pm kisan yojana) ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಇದು ರೈತರ ಮೇಲೆ ಆರ್ಥಿಕವಾಗಿ ಸಕಾರಾತ್ಮಕ ಪರಿಣಾಮ ಬೀರುತ್ತದೆ. ರೈತರ(farmer) ಆರ್ಥಿಕ ಸಮಸ್ಯೆಗೆ ಪರಿಹಾರ ನೀಡುತ್ತದೆ.
ಈ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ರೈತರಿಗೆ ವಾರ್ಷಿಕ 6 ಸಾವಿರ ರೂಪಾಯಿಗಳನ್ನು ನೀಡುತ್ತದೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ ಖಾತೆಗೆ 2 ಸಾವಿರ ರೂ. ವರ್ಗಾವಣೆ ಮಾಡಲಾಗುತ್ತದೆ. ಇದರಿಂದ ರೈತರು ಆರ್ಥಿಕ ಸಮಸ್ಯೆಯ ಹೊರೆಯಿಂದ ಹೊರಬರುವಂತಾಗಿದೆ.
ಇನ್ನು ಈ ಯೋಜನೆಯ ಫಲಾನುಭವಿಗಳು ತಮ್ಮ ಹೆಸರನ್ನು ಆಧಾರ್‌ನಲ್ಲಿರುವಂತೆ ಪಿಎಂ ಕಿಸಾನ್‌ನಲ್ಲಿ ತಿದ್ದುಪಡಿ ಮಾಡಬಹುದಾಗಿದೆ. ಹೇಗೆ? ರೈತರು ಪಿಎಂ ಕಿಸಾನ್‌ನಲ್ಲಿ ಆಧಾರ್(aadhar) ಪ್ರಕಾರ ಹೆಸರನ್ನು ಬದಲಾಯಿಸಲು ಮಾಹಿತಿ ಇಲ್ಲಿದೆ.
ಆಧಾರ್ ನಲ್ಲಿ ಇರುವಂತೆ ಹೆಸರು ತಿದ್ದುಪಡಿಕೆ ಹೇಗೆ?
• ಮೊದಲು ಪಿಎಂ ಕಿಸಾನ್ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿರಿ
• ನಂತರ ರೈತರ ಕಾರ್ನರ್ ಆಪ್ಶನ್ ಮೇಲೆ ಕ್ಲಿಕ್ ಮಾಡಿ
• ಅಲ್ಲಿರುವ ಆಧಾರ್‌ನಂತೆ ಫಲಾನುಭವಿಗಳ ಹೆಸರು ಬದಲಾವಣೆ ಎಂಬುದರ ಮೇಲೆ ಕ್ಲಿಕ್ ಮಾಡಿ, ಆಧಾರ್ ಸಂಖ್ಯೆ ನಮೂದಿಸಿ.
• ಬಳಿಕ ಇ-ಕೆವೈಸಿ(E-KYC) ಲಿಂಕ್ ಮೇಲೆ ಕ್ಲಿಕ್ ಮಾಡಿ, ಕೆವೈಸಿಯನ್ನು ಪೂರ್ಣಗೊಳಿಸಿ.
• ನಿಮ್ಮ ಆಧಾರ್ ಕಾರ್ಡ್(aadhaar card) ನಲ್ಲಿ ಹೇಗೆ ಹೆಸರಿದೆಯೋ ಅದನ್ನು ನಮೂದಿಸಿ.