GDS Result Date: 40,889 ಪೋಸ್ಟ್‌ಮ್ಯಾನ್‌ಗಳ ನೇಮಕ ; ಆಯ್ಕೆಪಟ್ಟಿ ಬಿಡುಗಡೆ ಯಾವಾಗ? ಮೆರಿಟ್‌ ಲಿಸ್ಟ್‌ ಹೇಗೆ ಚೆಕ್‌ ಮಾಡೋದು? ಕಂಪ್ಲೀಟ್ ವಿವರ ಇಲ್ಲಿದೆ

Share the Article

GDS Result Date : ಭಾರತೀಯ ಅಂಚೆ ಇಲಾಖೆ(Indian post office)ಯು ಕಳೆದ ಜನವರಿಯಲ್ಲಿ 40,889 ಖಾಲಿಯಿರುವ ಗ್ರಾಮೀಣ ಡಾಕ್ ಸೇವಕ್ ಹುದ್ದೆ (GDS)ಗಳನ್ನು ಭರ್ತಿ ಮಾಡಲು ನೇಮಕ ಅಧಿಸೂಚನೆ ಹೊರಡಿಸಿದ್ದು, ಫೆಬ್ರವರಿ 16 ರವರೆಗೆ ಅರ್ಜಿ ಹಾಕಲು ಅವಕಾಶವಿತ್ತು. ಇದೀಗ ಸದರಿ ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಅದರ ಫಲಿತಾಂಶ ಹಾಗೂ ಮೆರಿಟ್ ಲಿಸ್ಟ್‌ ಬಿಡುಗಡೆ ದಿನಾಂಕ (GDS Result Date) ತಿಳಿಸಲಾಗಿದೆ.

ಅಂಚೆ ಗ್ರಾಮೀಣ ಡಾಕ್ ಸೇವಕ್ ಹುದ್ದೆಯ ಮೆರಿಟ್‌ ಲಿಸ್ಟ್ (merit list) ಮಾರ್ಚ್ ಅಂತ್ಯದೊಳಗೆ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಫಲಿತಾಂಶದ ತಾತ್ಕಾಲಿಕ ಆಯ್ಕೆಪಟ್ಟಿ ಅಂದ್ರೆ ಮೆರಿಟ್ ಲಿಸ್ಟ್‌ ಅನ್ನು ರಾಜ್ಯದ ಡಿವಿಷನ್‌ವಾರು ಬಿಡುಗಡೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಸದರಿ ಪಟ್ಟಿಗಳನ್ನು ಚೆಕ್‌ ಮಾಡಿ, ತಮ್ಮ ಹೆಸರು ಇದ್ದರೆ, ಇಲಾಖೆ ಪ್ರಕಟಣೆಯಲ್ಲಿ ತಿಳಿಸುವ ಸ್ಥಳಕ್ಕೆ ತಿಳಿಸಿದ ದಿನಾಂಕದಂದು, ಮೂಲ ದಾಖಲೆಗಳ ಪರಿಶೀಲನೆಗೆ ಹೋಗಬೇಕು.

ಕರ್ನಾಟಕ ಅಭ್ಯರ್ಥಿಗಳು ಗ್ರಾಮೀಣ ಡಾಕ್ ಸೇವಕ್ ಹುದ್ದೆಯ ಮೆರಿಟ್‌ ಲಿಸ್ಟ್‌ ಚೆಕ್‌ ಮಾಡಲು ವೆಬ್‌ಸೈಟ್‌ https://indiapostgdsonline.cept.gov.in/HomePageS/D11.aspx ಕ್ಕೆ ಭೇಟಿ ನೀಡಿ. ನಂತರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದ ಡಿವಿಷನ್ ಹೆಸರು ಸೆಲೆಕ್ಟ್‌ ಮಾಡಬೇಕು. ನಂತರ ಪಿಡಿಎಫ್‌ ಫೈಲ್ ನಲ್ಲಿ ನಿಮ್ಮ ಹೆಸರು, ರಿಜಿಸ್ಟರ್ ನಂಬರ್‌ ಪ್ರಕಾರ ಫಲಿತಾಂಶ ಇರಲಿದೆ.

ಸಾಕಷ್ಟು ಜನರು ಈ ಹುದ್ದೆಗೆ ಅರ್ಜಿ ಸಲ್ಲಿಸಿರುತ್ತಾರೆ. ಫಲಿತಾಂಶಕ್ಕಾಗಿ ಎದುರು ನೋಡುತ್ತಿರುತ್ತಾರೆ. ಇದೀಗ ಮೆರಿಟ್ ಲಿಸ್ಟ್‌ ಬಿಡುಗಡೆ ದಿನಾಂಕ ಯಾವಾಗ ಇರಲಿದೆ ಎಂಬುದಕ್ಕೆ ಉತ್ತರ ಲಭಿಸಿದೆ. ಇನ್ನು ಈ ಬಗ್ಗೆ ಮಾಹಿತಿ ತಿಳಿಯದೇ ಇದ್ದವರು ಬೇಗನೆ ತಿಳಿದುಕೊಳ್ಳಿ.

Leave A Reply