ಗ್ರಾಹಕರಿಗೆ ಸಿಲಿಂಡರ್ ಪೂರೈಕೆ ವೇಳೆ ಹೆಚ್ಚುವರಿ ಶುಲ್ಕ ಪಡೆದರೆ ಲೈಸೆನ್ಸ್ ರದ್ದು! ಡಿಸಿ ಯಿಂದ ಖಡಕ್ ಎಚ್ಚರಿಕೆ
Cylinder supply : ದಿನಂಪ್ರತಿ ಪ್ರತಿ ವಸ್ತುಗಳ ಬೆಲೆ ಏರಿಕೆ ಬಿಸಿ ಜನರನ್ನು ಹೈರಾಣಾಗಿಸಿದೆ. ತೈಲ . ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) 2023ರ ಮಾರ್ಚ್ ನಲ್ಲಿ ಕೂಡ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಏರಿಕೆ ಮಾಡಿದ್ದು, ಸಾಮಾನ್ಯ ಜನತೆಗೆ ಬಿಸಿ ತುಪ್ಪದಂತೆ ಪರಿಣಮಿಸಿದೆ. ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು 350.50 ರೂಪಾಯಿಗೆ ಹೆಚ್ಚಳ ಮಾಡಲಾಗಿದ್ದು, ಇದು ವಾಣಿಜ್ಯೋದ್ದೇಶದ ಗ್ರಾಹಕರ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಇನ್ನು ಗೃಹಬಳಕೆಯ ಸಿಲಿಂಡರ್( LPG GAS)ದರ 50 ರೂಪಾಯಿ ಹೆಚ್ಚಳ ಕಂಡಿದೆ.ಈ ನಡುವೆ,ಒಂದು ಕಡೆ ಬೆಲೆ ಏರಿಕೆಯ ಬಿಸಿ ತಾಗಿದರೆ, ಇನ್ನೊಂದು ಕಡೆ ಸಿಲಿಂಡರ್ ಬೆಲೆಯ ಜೊತೆಗೆ ಎಕ್ಸ್ಟ್ರಾ ಹಣ ನೀಡುವುದು ಮತ್ತೊಂದು ತಲೆನೋವಾಗಿ ಪರಿಣಮಿಸಿದೆ. ಸಿಲಿಂಡರ್ ವಿತರಣಾ (Cylinder supply) ಶುಲ್ಕ ನಿಜಕ್ಕೂ ಬಡ ಜನರ ಹೊಟ್ಟೆಗೆ ಹೊಡೆಯೋ ಕೆಲಸ ಎಂದೇ ಹೇಳಬಹುದು. ಈ ನಡುವೆ ಬಿಲ್‌ನಲ್ಲಿ ನಮೂದಿಸಲಾದ ಮೊತ್ತವನ್ನು ಹೊರತುಪಡಿಸಿ ಯಾವುದೇ ಹೆಚ್ಚುವರಿ ಶುಲ್ಕವನ್ನು ಸಂಗ್ರಹಿಸದೆಯೇ ಕಟ್ಟಡ/ಫ್ಲಾಟ್‌ಗಳಲ್ಲಿ ನೆಲದ ಸ್ಥಳವನ್ನು ಲೆಕ್ಕಿಸದೆ ಗ್ಯಾಸ್ ಸಿಲಿಂಡರ್ ಅನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವುದು ಗ್ಯಾಸ್ ವಿತರಕರ ಜವಾಬ್ದಾರಿಯಾಗಿದೆ. ಎಲ್‌ಪಿಜಿ ಸಿಲಿಂಡರ್‌ನ (LPG CYLINDER)ವಿತರಣೆಯ ಮೇಲೆ ಯಾವುದೇ ವಿತರಣಾ ಶುಲ್ಕಗಳನ್ನು ಪಾವತಿಸುವ ಅಗತ್ಯವಿಲ್ಲ.ಇನ್‌ವಾಯ್ಸನಲ್ಲಿ ನಮೂದಿಸಲಾದ ಮೊತ್ತವನ್ನು ಮಾತ್ರ ಪಾವತಿಸಬೇಕಾಗುತ್ತದೆ. ಒಂದು ವೇಳೆ ಹೆಚ್ಚಿನ ಹಣವನ್ನು ಕೇಳಿದ್ರೆ ಸಂಬಂಧಪಟ್ಟ ವಿತರಣೆ ಎಜೆನ್ಸಿಗೆ(Agency) ದೂರು(Complaint) ನೀಡಬಹುದಾಗಿದೆ.
ಮೈಸೂರು ಜಿಲ್ಲೆಯಲ್ಲಿರುವ ಕೆಲ ಅಡುಗೆ ಅನಿಲ ವಿತರಕರು ಗ್ರಾಹಕರಿಂದ ವಿತರಣೆ ಶುಲ್ಕವನ್ನು (Delivery Charges) ಬಿಲ್‌ನಲ್ಲಿ ನಮೂದಿಸಿರುವುದಕ್ಕಿಂತ ಹೆಚ್ಚಿನ ಮೊತ್ತವನ್ನು ಅನಧಿಕೃತವಾಗಿ ಪಡೆಯುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆ ಹೆಚ್ಚುವರಿ ಹಣ ವಸೂಲಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮುಂದಾಗಿದ್ದಾರೆ. ಮೈಸೂರಿನಲ್ಲಿ ಅಡುಗೆ ಅನಿಲ ವಿತರಣೆ ವೇಳೆಯಲ್ಲಿ ನಿಗದಿತ ಶುಲ್ಕಕ್ಕಿಂತ(BILL Amount) ಹೆಚ್ಚು ಚಾರ್ಜ್ ಮಾಡಿದರೆ ಅದಕ್ಕೆ ಸಂಬಂಧಿಸಿದ ವಿತರಕರ ಲೈಸೆನ್ಸ್ ರದ್ದು ಮಾಡುವ ಕುರಿತು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಎಚ್ಚರಿಕೆ ನೀಡಿದ್ದಾರೆ.
ಮೈಸೂರು ಜಿಲ್ಲೆಯ ಎಲ್ಲ ಅಡುಗೆ ಅನಿಲ ವಿತರಕರು ಲೈಸೆನ್ಸ್ ನಲ್ಲಿರುವ ತಮ್ಮ ವ್ಯಾಪಾರ ಪ್ರದೇಶದ ವ್ಯಾಪ್ತಿಯಲ್ಲಿ ಕಚೇರಿ ಅಥವಾ ಮಳಿಗೆಯಿಂದ 15 ಕಿ.ಮೀ.ವರೆಗೆ ಯಾವುದೇ ಹೆಚ್ಚುವರಿ ವಿತರಣೆ ಶುಲ್ಕವನ್ನು(ಡೆಲಿವರಿ ಚಾರ್ಜಸ್)ಪಡೆದುಕೊಳ್ಳದೇ ಅಡುಗೆ ಅನಿಲ ವಿತರಣೆ ಮಾಡಬೇಕಾಗಿದೆ. ಇದರ ಜೊತೆಗೆ ಒಂದು ವೇಳೆ, 15 ಕಿಲೋ ಮೀಟರ್ ನಂತರದ ಅಂತರಕ್ಕೆ ನಿಯಾಮಾನುಸಾರ ದರವನ್ನು ಬಿಲ್‌ನಲ್ಲಿ ನಮೂದಿಸಿ, ಬಿಲ್ ನಲ್ಲಿ ನಮೂದಿಸಿರುವ ಮೊತ್ತವನ್ನು ಮಾತ್ರ ಪಡೆಯಲು ಆದೇಶ ಹೊರಡಿಸಲಾಗಿದೆ.
ಗ್ರಾಹಕರಿಂದ ಅಡುಗೆ ಅನಿಲ ವಿತರಣೆಗೆ ಅನಧಿಕೃತವಾಗಿ ಹೆಚ್ಚುವರಿ ಹಣ ಪಡೆಯುವುದು ಕಾನೂನು ಬಾಹಿರವಾಗಿದ್ದು, ಇದು ಲಿಕ್ವಿಫಿಡಿ ಪೆಟ್ರೋಲಿಯಂ ಗ್ಯಾಸ್ ಆರ್ಡರ್ 2000 ಉಲ್ಲಂಘಿಸಿದಂತಾಗುತ್ತದೆ ಎಂದು ಡಾ.ಕೆ.ವಿ. ರಾಜೇಂದ್ರ ರವರು ಮಾಹಿತಿ ನೀಡಿದ್ದಾರೆ. ಒಂದು ವೇಳೆ, ಅಡುಗೆ ಅನಿಲ ವಿತರಕರು ತಮ್ಮ ವ್ಯಾಪಾರದ ವ್ಯಾಪ್ತಿಯಲ್ಲಿ ಕಚೇರಿ ಅಥವಾ ಮಳಿಗೆಯಿಂದ 15 ಕಿ.ಮೀ. ವರೆಗೆ ಗ್ರಾಹಕರಿಂದ ಯಾವುದೇ ರೀತಿಯ ಹೆಚ್ಚುವರಿ ವಿತರಣೆ ಶುಲ್ಕ(ಡೆಲಿವರಿ ಚಾರ್ಜಸ್) ಪಡೆದುಕೊಂಡಲ್ಲಿ ಜೊತೆಗೆ ನಿಯಮಬಾಹಿರವಾಗಿ ಹೆಚ್ಚುವರಿ ವಿತರಣೆ ಶುಲ್ಕ ಪಡೆದಿರುವ ಬಗೆಗಿನ ದೂರು ನಿಜವೆಂದು ಸಾಬೀತು ಆದರೆ ಆ ವಿತರಕರಿಗೆ ನೀಡಿರುವ ಲೈಸೆನ್ಸ್ ರದ್ದು ಮಾಡುವ ಕುರಿತು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದು, ಈ ಕುರಿತು ಜಿಲ್ಲೆಯ ಎಲ್ಲ ತಾಲೂಕಿನ ತಹಶೀಲ್ದಾರರು, ಆಹಾರ ಶಿರಸ್ತೇದಾರರು, ಆಹಾರ ನಿರೀಕ್ಷಕರು ಆಗಿಂದಾಗ್ಗೆ ಮೇಲ್ವಿಚಾರಣೆ, ಪರಿಶೀಲನೆ ಮಾಡಿ ವರದಿ ಮಾಡಲು ಪ್ರಕಟಣೆಯ ಮುಖಾಂತರ ಸೂಚನೆ ನೀಡಿದ್ದಾರೆ.